ಟೈಗನ್ ಮತ್ತು ವರ್ಟಸ್ ನಲ್ಲಿ 6 ಏರ್ ಬ್ಯಾಗ್ಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ ಫೋಕ್ಸ್ ವ್ಯಾಗನ್
ಫೋಕ್ಸ್ ವ್ಯಾಗನ್ ಕಂಪನಿಯು ತನ್ನ ಹೊಸ ಟೈಗನ್ ಮತ್ತು ವರ್ಟಸ್ ಕಾರುಗಳಲ್ಲಿ ಗರಿಷ್ಠ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಿದೆ.
ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮೂಲಕ ಗಮನಸೆಳೆಯುತ್ತಿರುವ ಫೋಕ್ಸ್ ವ್ಯಾಗನ್ (Volkswagen) ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಟೈಗನ್ (Taigun) ಕಂಪ್ಯಾಕ್ಟ್ ಎಸ್ ಯುವಿ ಮತ್ತು ವರ್ಟಸ್ (Virtus) ಸೆಡಾನ್ ಕಾರುಗಳಲ್ಲಿ ಸುರಕ್ಷಾ ಫೀಚರ್ಸ್ ಗಳನ್ನು ಉನ್ನತೀಕರಿಸಿದೆ. ಎರಡು ಕಾರುಗಳಲ್ಲೂ ಆರಂಭಿಕ ಮಾದರಿಗೂ ಅನ್ವಯಿಸುವಂತೆ 6 ಏರ್ ಬ್ಯಾಗ್ ಗಳ ಸೌಲಭ್ಯವನ್ನು ಜೋಡಣೆ ಮಾಡಿದ್ದು, ಹೊಸ ಸುರಕ್ಷಾ ಸೌಲಭ್ಯಕ್ಕಾಗಿ ಯಾವುದೇ ರೀತಿಯ ಬೆಲೆ ಹೆಚ್ಚಳ ಮಾಡದಿರುವುದು ಗಮನಾರ್ಹವಾಗಿದೆ.
ಸುರಕ್ಷಿತ ಕಾರುಗಳ ಬಳಕೆಗಾಗಿ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಕಾರು ಉತ್ಪಾದನಾ ಕಂಪನಿಗಳು ತನ್ನ ಕಾರು ಉತ್ಪನ್ನಗಳನ್ನು ಹೊಸ ಸುರಕ್ಷಾ ಮಾನದಂಡಗಳೊಂದಿಗೆ ಉನ್ನತೀಕರಿಸುತ್ತಿದ್ದು, ಇದೀಗ ಫೋಕ್ಸ್ ವ್ಯಾಗನ್ ಕಂಪನಿಯು ತನ್ನ ಹೊಸ ಟೈಗನ್ ಮತ್ತು ವರ್ಟಸ್ ಕಾರುಗಳಲ್ಲಿ ಏರ್ ಬ್ಯಾಗ್ ಸೌಲಭ್ಯವನ್ನು ಹೆಚ್ಚಿಸಿದೆ.
ಟೈಗನ್ ಮತ್ತು ವರ್ಟಸ್ ಕಾರುಗಳ ಆರಂಭಿಕ ಮಾದರಿಗಳಲ್ಲಿ ಈ ಹಿಂದೆ 4 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುತ್ತಿದ್ದ ಫೋಕ್ಸ್ ವ್ಯಾಗನ್ ಕಂಪನಿ ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರವೇ 6 ಏರ್ ಬ್ಯಾಗ್ ಗಳನ್ನು ಜೋಡಣೆ ಮಾಡುತ್ತಿತ್ತು. ಆದರೆ ಹೊಸ ಸುರಕ್ಷಾ ಮಾನದಂಡ ಜಾರಿಯಾಗಿರುವುದರಿಂದ ಎಲ್ಲಾ ವೆರಿಯೆಂಟ್ ಗಳಿಗೂ 6 ಏರ್ ಬ್ಯಾಗ್ ಗಳನ್ನು ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇದು ಆಟೋಮೊಬೈಲ್ ವಲಯದಲ್ಲಿ ಹೊಸ ಕ್ರಾಂತಿಕಾರಿ ಬೆಳವಣಿಗೆಗೆ ಮುನ್ನಡಿಯಾಗಿದೆ.
ಇದನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!
ಇತ್ತೀಚೆಗೆ ಬಿಡುಗಡೆಯಾದ ಹಲವು ಹೊಸ ಕಾರುಗಳಲ್ಲಿ ಉತ್ಪಾದನಾ ಕಂಪನಿಗಳು 6 ಏರ್ ಬ್ಯಾಗ್ ಗಳ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹಲವು ಎಂಟ್ರಿ ಲೆವಲ್ ಕಾರುಗಳು ಸಹ ಹೊಸ ಸುರಕ್ಷಾ ಮಾನದಂಡಗಳೊಂದಿಗೆ ಉನ್ನತೀಕರಣಗೊಳ್ಳಲಿದ್ದು, ಇವು ಅಪಘಾತದ ಸಂದರ್ಭದಲ್ಲಿ ಪ್ರಾಣಹಾನಿ ತಗ್ಗಿಸಲು ಸಾಕಷ್ಟು ಸಹಕಾರಿಯಾಗಿವೆ.
ಇನ್ನು ಗುಣಮಟ್ಟದ ಉತ್ಪಾದನೆ ಮತ್ತು ಗರಿಷ್ಠ ಸುರಕ್ಷಾ ಸೌಲಭ್ಯಗಳ ಮೂಲಕ ಈಗಾಗಲೇ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ಹೊಂದಿರುವ ಟೈಗನ್ ಮತ್ತು ವರ್ಟಸ್ ಕಾರುಗಳು ಹಲವಾರು ಸುಧಾರಿತ ಫೀಚರ್ಸ್ ನೊಂದಿಗೆ ಖರೀದಿಗೆ ಲಭ್ಯವಿವೆ. ಜೊತೆಗೆ ಮುಂಬರುವ ದಿನಗಳಲ್ಲಿ 360 ಡಿಗ್ರಿ ಕ್ಯಾಮೆರಾ ಸೌಲಭ್ಯವನ್ನು ಒಳಗೊಂಡ ಲೆವಲ್ 2 ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೌಲಭ್ಯದೊಂದಿಗೆ ಎಂಟ್ರಿ ನೀಡಲು ಸಜ್ಜಾಗುತ್ತಿದ್ದು, ಸಂಭಾವ್ಯ ಅಪಘಾತಗಳನ್ನು ತಗ್ಗಿಸುವಲ್ಲಿ ಅಡ್ವಾನ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸಾಕಷ್ಟು ಸಹಕಾರಿಯಾಗಲಿದೆ.
ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!
ಅಡ್ವಾನ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸೌಲಭ್ಯವುಕಾರು ಚಾಲನೆಯಲ್ಲಿರುವಾಗ ಚಾಲಕನ ಅರಿವಿಗೆ ಬಾರದೇ ಆಗಬಹುದಾದಂತಹ ಅಪಘಾತಗಳನ್ನು ತಪ್ಪಿಸಲು ನೆರವಾಗಲಿದೆ. ರಡಾರ್ ನೆರವಿನೊಂದಿಗೆ ಕಾರ್ಯನಿರ್ವಹಿಸುವ ಎಡಿಎಎಸ್ ಸೌಲಭ್ಯವು ತುರ್ತು ಸಂದರ್ಭಗಳಲ್ಲಿ ಕಾರಿನ ವೇಗ ನಿಯಂತ್ರಣ ಮಾಡುವುದು, ಪಾದಾಚಾರಿಗಳಿಗೆ ಡಿಕ್ಕಿಯಾಗುವುದು ತಪ್ಪಿಸಲು ಮತ್ತು ಸಂಚಾರಿ ನಿಯಮಗಳ ಪಾಲನೆಯ ಅವಶ್ಯಕತೆಗಳನ್ನು ಚಾಲಕನಿಗೆ ಎಚ್ಚರಿಸುತ್ತದೆ.
Published On - 7:34 pm, Mon, 3 June 24