ಕತೆಡಬ್ಬಿ : ಕನ್ನಡತಿಯನ್ನು ಕಥೆಗಾತಿಯಾಗಿ ಮೆಚ್ಚಿಕೊಂಡಾಗ..!

ರಂಜನಿ ರಾಘವನ್ ಅವರು ಕತೆ ಹೇಳುವ ರೀತಿಯೆ ಚಂದ ಅನ್ನಿಸ್ತು. ಬೇರೆಲ್ಲೂ ಓದಿದ ರೀತಿ ಅನ್ನಿಸದೆ ತನ್ನದೆ ಸ್ವಂತ ರೀತಿಯಲ್ಲಿ ಕತೆಯನ್ನು ಕಟ್ಟಿಕೊಡುತ್ತಾರೆ. ತನ್ನ ನೈಜ ಅಭಿನಯದಂತೆ ಕತೆಯನ್ನು ನೈಜವಾಗಿ, ಸರಳವಾಗಿ, ಚಂದವಾಗಿ ಹೇಳಿ ಮುಗಿಸಿದ್ದಾರೆ.

ಕತೆಡಬ್ಬಿ : ಕನ್ನಡತಿಯನ್ನು ಕಥೆಗಾತಿಯಾಗಿ ಮೆಚ್ಚಿಕೊಂಡಾಗ..!
ರಂಜನಿ ರಾಘವನ್ ಅವರ ಪುಸ್ತಕ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 17, 2022 | 9:19 AM

ಅರೆ! ಈಕೆ ಇನ್ನಷ್ಟು ಬರೆಯಬಲ್ಲಳು ಅಂತ ನಿಮಗನಿಸಿದರೆ ಅದೇ ನನ್ನ ಗೆಲುವು ಎಂದು ಪುಸ್ತಕದ ಕೊನೆಯಲ್ಲಿ ಬರೆದಿದ್ದ ಸಾಲುಗಳ ಮೇಲೆ ಮೊದಲು ಕಣ್ಣಾಡಿಸಿದ ನನಗೆ ರಂಜನಿ ರಾಘವನ್ ಅವರ ಕತೆಡಬ್ಬಿಯ ಮುಚ್ಚಳ ತೆಗೆಯವ ತವಕ ಇನ್ನಷ್ಟು ಹೆಚ್ಚಿತು. ರಂಜನಿ ರಾಘವನ್ ಅವರ ನೈಜ ಅಭಿನಯಕ್ಕೆ ನಾನು ಮೊದಲಿನಿಂದಲೇ ಅಭಿಮಾನಿ. ಆದರೆ ಕತೆಡಬ್ಬಿ ಪುಸ್ತಕವನ್ನು ಓದಿದ ಮೇಲೆ ಅವರ ಬರವಣಿಗೆಗೂ ಅಭಿಮಾನಿಯಾದದ್ದು ಮಾತ್ರ ಸುಳ್ಳಲ್ಲ!

ಒಳಗೇನಿದೆ ಅನ್ನೋ ಕುತೂಹಲದಿಂದ ಕತೆಡಬ್ಬಿಯ ಮುಚ್ಚಳವನ್ನು ತೆಗೆದರೆ ‘ನನ್ನೊಳಗೊಂದು ಕನಸಿತ್ತು’ ಎಂಬ ಪ್ರೀತಿಯ ಬರವಣಿಗೆ ಸ್ಪೂರ್ತಿದಾಯಕವಾಗಿ ನನ್ನ ಕನಸಿನ ಕದವನ್ನೊಮ್ಮೆ ಬಡಿದೆಚ್ಚರಿಸಿತು. ‘ಅಪ್ಪನ ಮನೆ ಮಾರಾಟಕ್ಕಿದೆ’ ಎಂಬ ಶೀರ್ಷಿಕೆಯೆ ಓದುಗರನ್ನು ಅದರತ್ತ ಒಯ್ಯುತ್ತದೆ. ರಂಜನಿ ರಾಘವನ್ ಅವರು ಕತೆ ಹೇಳುವ ರೀತಿಯೆ ಚಂದ ಅನ್ನಿಸ್ತು. ಬೇರೆಲ್ಲೂ ಓದಿದ ರೀತಿ ಅನ್ನಿಸದೆ ತನ್ನದೆ ಸ್ವಂತ ರೀತಿಯಲ್ಲಿ ಕತೆಯನ್ನು ಕಟ್ಟಿಕೊಡುತ್ತಾರೆ. ತನ್ನ ನೈಜ ಅಭಿನಯದಂತೆ ಕತೆಯನ್ನು ನೈಜವಾಗಿ, ಸರಳವಾಗಿ, ಚಂದವಾಗಿ ಹೇಳಿ ಮುಗಿಸಿದ್ದಾರೆ. ಕತೆಡಬ್ಬಿಯ ಪ್ರತಿ ಪುಟ ತಿರುವಿದಂತೆ ಕುತೂಹಲ ಹೆಚ್ಚುತ್ತಿತ್ತು. ಮುಂದೇನಿದೆ ಎಂಬ ಕುತೂಹಲ, ಅರೆ ಮನೋಜ್ ಇನ್ನೇನು ಅಪ್ಪನ ಮನೆ ಮಾರೆ ಬಿಡ್ತನೋ ಏನೊ ಎಂಬ ಆತಂಕ. ಅಮ್ಮ ಕೋತಿ ತನ್ನ ಕರುಳಬಳ್ಳಿಯನ್ನು ಓಮ್ಮೆ ಸೇರಲಿ ಎಂಬ ಕೋರಿಕೆ.

ರಂಜನಿ ರಾಘವನ್ ಪರಿಚಯಿಸಿದ ‘English ಕೃಷ್ಣನನ್ನು’ ಒಮ್ಮೆ ನನಗೂ ನೊಡಬೇಕಾನಿಸಿದ್ದು ಅವರ ಕತೆಗಿರುವ ಶಕ್ತಿ.’ಚುಚ್ಚುಮದ್ದಿನ ಸೈಡ್ ಎಫೆಕ್ಟ್’, ‘ಯಾರು?’,’ ಕಾಣೆಯಾದವರ ಬಗ್ಗೆ ಪ್ರಕಟಣೆ’,’ಉಪ್ಪಿಲ್ಲದ ಸತ್ಯಾಗ್ರಹ’, ‘ದೇವರು ಕಾಣೆಯಾಗಿದ್ದಾರೆ’ ನಂಜನಗೂಡು to ನ್ಯೂಜರ್ಸಿ, ಹೀಗೆ ೧೪ ಕತೆಗಳಿರುವ ಅವರ ಕತೆಡಬ್ಬಿಯ ಮುಚ್ಚಳ ಮುಚ್ಚಲು ಮನಸಾಗದು. ಪ್ರತಿ ಕತೆಯಲ್ಲು ಮೌಲ್ಯಗಳನ್ನು ತುಂಬಿ, ಅರ್ಥಪೂರ್ಣವಾದ ಸಂಬಂಧಗಳ ಮಹತ್ವವನ್ನ ಓದುಗರ ಮುಂದಿಟ್ಟು ಮತ್ತೆ ಮತ್ತೇ ಒದಬೇಕಾನಿಸಿದ್ದು ಇವರ ಚೊಚ್ಚಲ ಪುಸ್ತಕಕ್ಕೆ ಸಿಕ್ಕ ದೊಡ್ಡ ಗೆಲುವು. ಕನ್ನಡ ಸಾಹಿತ್ಯ ಲೋಕಕ್ಕೆ ಮೊದಲ ಹೆಜ್ಜೆ ಇಟ್ಟಿರುವ ಇವರು ಇನ್ನಷ್ಟು ಬರೆಯಲಿ ಎಂಬುದೇ ಸಾಹಿತ್ಯ ಪ್ರಿಯರೆಲ್ಲರ ಆಶಯ.

ಕೃತಿಕಾ ಸದಾಶಿವ

ವಿವೇಕಾನಂದ ಕಾಲೇಜು ಪುತ್ತೂರು.