AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್​ನಲ್ಲಿ ಗುಡ್​ಫ್ರೈಡೆ, ಬಸವಜಯಂತಿ, ಅಂಬೇಡ್ಕರ್ ಜಯಂತಿ; ಬ್ಯಾಂಕುಗಳಿಗೆ ಒಟ್ಟು 11 ದಿನ ರಜೆ

April 2026, banks have 11 days holidays: 2026ರ ಏಪ್ರಿಲ್ ತಿಂಗಳಲ್ಲಿ ದೇಶದ ವಿವಿಧೆಡೆ ಒಟ್ಟು 11 ದಿನ ಬ್ಯಾಂಕುಗಳಿಗೆ ರಜೆ ಇರುತ್ತದೆ. ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳು ಇವೆ. ಗುಡ್ ಫ್ರೈಡೆ, ಬಸವ ಜಯಂತಿ, ಅಂಬೇಡ್ಕರ್ ಜಯಂತಿ, ಬಿಹು, ವಿಶು ಇತ್ಯಾದಿ ಹಬ್ಬ ಹರಿದಿನಗಳಿವೆ. ಕರ್ನಾಟಕದಲ್ಲಿ ಏಪ್ರಿಲ್​ನಲ್ಲಿ ಒಟ್ಟು 10 ದಿನ ಬ್ಯಾಂಕುಗಳು ಬಂದ್ ಆಗಿರುತ್ತವೆ.

ಏಪ್ರಿಲ್​ನಲ್ಲಿ ಗುಡ್​ಫ್ರೈಡೆ, ಬಸವಜಯಂತಿ, ಅಂಬೇಡ್ಕರ್ ಜಯಂತಿ; ಬ್ಯಾಂಕುಗಳಿಗೆ ಒಟ್ಟು 11 ದಿನ ರಜೆ
ಬ್ಯಾಂಕ್ ರಜಾದಿನImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 27, 2026 | 4:29 PM

Share

ಬೆಂಗಳೂರು, ಮಾರ್ಚ್ 27: ಆರ್​ಬಿಐ ಕ್ಯಾಲೆಂಡರ್ ಪ್ರಕಾರ 2026ರ ಏಪ್ರಿಲ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 11 ದಿನ ರಜೆ (Bank Holidays) ಇದೆ. ಕೆಲ ರಜೆಗಳು ಪ್ರಾದೇಶಿಕವಾಗಿದ್ದು, ಆಯಾ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್​ನಲ್ಲಿ ಹಬ್ಬ ಹರಿದಿನಗಳು ಕಡಿಮೆ. ಕ್ರೈಸ್ತರ ಗುಡ್ ಫ್ರೈಡೆ, ಈಸ್ಟರ್ ಹಬ್ಬಗಳು ಎಪ್ರಿಲ್​ನಲ್ಲಿ ಇವೆ. ಈಸ್ಟರ್ ಹಬ್ಬ ಭಾನುವಾರ ಬಂದಿರುವುದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಹೆಚ್ಚುವರಿ ರಜೆ ಸಿಗುವುದಿಲ್ಲ. ಅಂಬೇಡ್ಕರ್ ಜಯಂತಿ, ಬಸವ ಜಯಂತಿ ಕೂಡ ಏಪ್ರಿಲ್​ನಲ್ಲೇ ಇವೆ. ನಾಲ್ಕು ಭಾನುವಾರ ಮತ್ತು ಎರಡು ಶನಿವಾರಗಳ ರಜೆಗಳೂ ಏಪ್ರಿಲ್ ತಿಂಗಳಲ್ಲಿವೆ.

ಏಪ್ರಿಲ್ 2026 ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು

  • ಏಪ್ರಿಲ್ 1, ಬುಧವಾರ: ಆ್ಯನುಯಲ್ ಅಕೌಂಟ್ ಕ್ಲೋಸಿಂಗ್ ಪ್ರಯುಕ್ತ ರಜೆ
  • ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ ಪ್ರಯುಕ್ತ ಹೆಚ್ಚಿನ ಕಡೆ ರಜೆ
  • ಏಪ್ರಿಲ್ 5: ಭಾನುವಾರದ ರಜೆ
  • ಏಪ್ರಿಲ್ 11: ಎರಡನೇ ಶನಿವಾರದ ರಜೆ
  • ಏಪ್ರಿಲ್ 12: ಭಾನುವಾರದ ರಜೆ
  • ಏಪ್ರಿಲ್ 14, ಮಂಗಳವಾರ: ವೈಶಾಖಿ / ಬೋಹಾಗ್ ಬಿಹು / ವಿಶು / ತಮಿಳು ಹೊಸ ವರ್ಷ / ಅಂಬೇಡ್ಕರ್ ಜಯಂತಿ (ಹಲವು ರಾಜ್ಯಗಳಲ್ಲಿ ರಜೆ)
  • ಏಪ್ರಿಲ್ 15, ಬುಧವಾರ: ಬೋಹಗ್ ಬಿಹು / ಹಿಮಾಚಲ ದಿನ / ಬಂಗಾಳ ದಿನ (ಅರುಣಾಚಲ, ಹಿಮಾಚಲ, ಬಂಗಾಳ ಮುಂತಾದೆಡೆ ರಜೆ)
  • ಏಪ್ರಿಲ್ 19: ಭಾನುವಾರದ ರಜೆ
  • ಏಪ್ರಿಲ್ 20, ಸೋಮವಾರ: ಬಸವ ಜಯಂತಿ
  • ಏಪ್ರಿಲ್ 25: ನಾಲ್ಕನೇ ಶನಿವಾರದ ರಜೆ
  • ಏಪ್ರಿಲ್ 26: ಭಾನುವಾರದ ರಜೆ

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಆಪರೇಷನ್ ಊರ್ಜಾ ಸುರಕ್ಷಾ; ಏನಿದು ವಿಶೇಷ ಕಾರ್ಯಾಚರಣೆ?

ಕರ್ನಾಟಕದಲ್ಲಿ ಗುಡ್ ಫ್ರೈಡೆಗೆ ರಜೆ ಇರುತ್ತದೆ. ಅಂಬೇಡ್ಕರ್ ಜಯಂತಿ ಮತ್ತು ಬಸವ ಜಯಂತಿಗೂ ರಾಜ್ಯದಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ. ಶನಿವಾರ ಮತ್ತು ಭಾನುವಾರದ ರಜೆಗಳನ್ನು ಒಳಗೊಂಡರೆ ಏಪ್ರಿಲ್​ನಲ್ಲಿ ಒಟ್ಟು 10 ದಿನ ಬ್ಯಾಂಕುಗಳು ರಾಜ್ಯದಲ್ಲಿ ಬಾಗಿಲು ಮುಚ್ಚಿರುತ್ತವೆ.

ಕರ್ನಾಟಕದಲ್ಲಿ ಏಪ್ರಿಲ್​ನಲ್ಲಿ ಬ್ಯಾಂಕ್ ರಜಾದಿನಗಳು

  • ಏಪ್ರಿಲ್ 1, ಬುಧವಾರ: ಆ್ಯನುಯಲ್ ಅಕೌಂಟ್ ಕ್ಲೋಸಿಂಗ್
  • ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ ಪ್ರಯುಕ್ತ ರಜೆ
  • ಏಪ್ರಿಲ್ 5: ಭಾನುವಾರದ ರಜೆ
  • ಏಪ್ರಿಲ್ 11: ಎರಡನೇ ಶನಿವಾರದ ರಜೆ
  • ಏಪ್ರಿಲ್ 12: ಭಾನುವಾರದ ರಜೆ
  • ಏಪ್ರಿಲ್ 14, ಮಂಗಳವಾರ: ಅಂಬೇಡ್ಕರ್ ಜಯಂತಿ
  • ಏಪ್ರಿಲ್ 19: ಭಾನುವಾರದ ರಜೆ
  • ಏಪ್ರಿಲ್ 20, ಸೋಮವಾರ: ಬಸವ ಜಯಂತಿ
  • ಏಪ್ರಿಲ್ 25: ನಾಲ್ಕನೇ ಶನಿವಾರದ ರಜೆ
  • ಏಪ್ರಿಲ್ 26: ಭಾನುವಾರದ ರಜೆ

ಇದನ್ನೂ ಓದಿ: ಅಬಕಾರಿ ಸುಂಕ ಕಡಿಮೆಗೊಂಡರೂ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಆಗಲ್ಲ ಇಳಿಕೆ; ಏನು ಕಾರಣ?

ಬ್ಯಾಂಕ್ ಕಚೇರಿಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್​ಲೈನ್​ನಲ್ಲಿ ಅವಿಘ್ನವಾಗಿ ನಡೆಯುತ್ತಿರುತ್ತವೆ. ಎಟಿಎಂಗಳು ದಿನದ 24 ಗಂಟೆಯೂ ತೆರೆದಿರುತ್ತವೆ. ಆನ್​ಲೈನ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಚಾಲನೆಯಲ್ಲಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಹಿಳಾ ಮೀಸಲಾತಿಗೆ ಬಹುಮತ ಸಿಗದಿದ್ದಕ್ಕೆ ಸಂಸತ್​​ನಲ್ಲಿ ಎನ್​ಡಿಎ ಪ್ರತಿಭಟನೆ
ಮಹಿಳಾ ಮೀಸಲಾತಿಗೆ ಬಹುಮತ ಸಿಗದಿದ್ದಕ್ಕೆ ಸಂಸತ್​​ನಲ್ಲಿ ಎನ್​ಡಿಎ ಪ್ರತಿಭಟನೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್