AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays: ಈ ನಗರಗಳಲ್ಲಿ ಈ ವಾರ 5 ದಿನಗಳ ಕಾಲ ಬ್ಯಾಂಕ್​ಗಳಿಗೆ ರಜಾ

ಈ ನಗರಗಳಲ್ಲಿ ಈ ವಾರ 5 ದಿನಗಳ ಕಾಲ ಬ್ಯಾಂಕ್​ಗಳಿಗೆ ರಜಾ ಇರುತ್ತದೆ. ಯಾವುವು ಆ ನಗರಗಳು ಮತ್ತು ಯಾವ ಕಾರಣಕ್ಕೆ ರಜಾ ಎಂಬ ವಿವರ ಇಲ್ಲಿದೆ.

Bank Holidays: ಈ ನಗರಗಳಲ್ಲಿ ಈ ವಾರ 5 ದಿನಗಳ ಕಾಲ ಬ್ಯಾಂಕ್​ಗಳಿಗೆ ರಜಾ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 06, 2021 | 2:21 PM

Share

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಬ್ಯಾಂಕ್ ರಜಾ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 12 ರಜಾ ದಿನಗಳಿವೆ. ಅದರಲ್ಲೂ ಈ ವಾರವೇ ವಿವಿಧ ಹಬ್ಬಗಳಿಗೂ ಸೇರಿ 5 ದಿನ ರಜಾ ಇರುತ್ತದೆ ಎಂಬುದನ್ನು ಬ್ಯಾಂಕ್ ಗ್ರಾಹಕರು ತಿಳಿದಿರಬೇಕು. ಇವುಗಳಲ್ಲಿ ಎರಡನೇ ಶನಿವಾರ ಮತ್ತು ಭಾನುವಾರವೂ ಸೇರಿವೆ. ಕೆಲವು ನಗರಗಳಲ್ಲಿ ಬ್ಯಾಂಕ್​ಗಳು ಸತತವಾಗಿ ಐದು ದಿನಗಳವರೆಗೆ ಮುಚ್ಚಿರುತ್ತವೆ. ಆದ್ದರಿಂದ ನೀವು ಯಾವುದೇ ನಗರಗಳಲ್ಲಿ ವಾಸಿಸುತ್ತಿದ್ದರೂ ಬ್ಯಾಂಕ್ ಶಾಖೆಗೆ ಭೇಟಿ ನೀಡಲು ಬಯಸಿದರೆ ದಯವಿಟ್ಟು ಎಲ್ಲ ರಜಾ ದಿನಗಳನ್ನು ಗಮನಿಸಿ ಮತ್ತು ಅದಕ್ಕೆ ತಕ್ಕಂತೆ ನಿಮ್ಮ ಬ್ಯಾಂಕಿಂಗ್ ವಹಿವಾಟನ್ನು ಮಾಡಿ.

8 ಸೆಪ್ಟೆಂಬರ್ 2021- ಶ್ರೀಮಂತ ಸಂಕರದೇವರ ತಿಥಿ: ಗುವಾಹತಿಯಲ್ಲಿ ಬ್ಯಾಂಕ್ ಅನ್ನು ಮುಚ್ಚಲಾಗುವುದು. 9 ಸೆಪ್ಟೆಂಬರ್ 2021 – ತೀಜ್ (ಹರಿತಾಳಿಕ): ಗ್ಯಾಂಗ್ಟಕ್‌ನಲ್ಲಿ ಸೆಪ್ಟೆಂಬರ್ 9 ಮತ್ತು ಸೆಪ್ಟೆಂಬರ್ 10 ರಂದು ಕ್ರಮವಾಗಿ ತೀಜ್ (ಹರಿತಾಳಿಕಾ) ಮತ್ತು ಇಂದ್ರಜಾತ್ರಾದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುವುದು. 10 ಸೆಪ್ಟೆಂಬರ್ 2021- ಈ ತಿಂಗಳ ಪ್ರಮುಖ ರಜಾದಿನವೆಂದರೆ ಗಣೇಶ ಚತುರ್ಥಿ (ಸೆಪ್ಟೆಂಬರ್ 10). ಈ ದಿನ ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ ಮತ್ತು ಪಣಜಿಯಲ್ಲಿ ಬ್ಯಾಂಕ್​ಗಳು ಕಾರ್ಯ ನಿರ್ವಹಿಸಲ್ಲ. 11 ಸೆಪ್ಟೆಂಬರ್ 2021- ಗಣೇಶ್ ಚತುರ್ಥಿ (2ನೇ ದಿನ) (ಎರಡನೇ ಶನಿವಾರ): ಗಣೇಶ ಚತುರ್ಥಿಯ ಎರಡನೇ ದಿನವಾದ ಶನಿವಾರದಂದು ಬ್ಯಾಂಕ್​ಗಳು ಮುಚ್ಚಿರುತ್ತವೆ. 12 ಸೆಪ್ಟೆಂಬರ್ 2021- ಭಾನುವಾರ ರಜೆ

ಎಲ್ಲ ಬ್ಯಾಂಕ್​ಗಳು ಸಾರ್ವಜನಿಕ ರಜಾ ದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಆದರೆ ಬ್ಯಾಂಕ್​ಗಳು ರಜಾ ಇದ್ದರೂ ಎಟಿಎಂಗಳು, ಇಂಟರ್​ನೆಟ್ ಬ್ಯಾಂಕಿಂಗ್ ಮತ್ತಿತರ ಡಿಜಿಟಲ್ ವ್ಯವಹಾರಗಳು ನಡೆಯುವುದಕ್ಕೆ ಏನೂ ಸಮಸ್ಯೆ ಆಗಲ್ಲ.

ಇದನ್ನೂ ಓದಿ: Bank Holidays: ನಿಮ್ಮ ವ್ಯವಹಾರ ಮಾಡುವಾಗ ಈ ದಿನಗಳನ್ನು ಗಮನಿಸಿ; ಸೆಪ್ಟೆಂಬರ್​ ತಿಂಗಳಲ್ಲಿ 12 ದಿನ ಬ್ಯಾಂಕ್ ರಜಾ

(Banking Holidays Banks In These Cities Will Shut For 5 Days This Week)

Follow Us
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ