ಡಿಮಾರ್ಟ್‌ಗೆ ಈ ದಿನಗಳಲ್ಲಿ ಹೋದ್ರೆ ನಿಮ್ಮ ದುಡ್ಡು, ಟೈಮ್ ಉಳಿಯುತ್ತೆ
ಡಿಮಾರ್ಟ್‌ಗೆ ಹೋದರೆ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ ಅನ್ನೋದು ಇದೆ. ಆದರೆ, ಡಿಜಿಟಲ್ ಕೂಪನ್, ವಿಶೇಷ ಆಫರ್‌ಗಳನ್ನು ಪರಿಶೀಲಿಸಿಕೊಂಡು ಇಲ್ಲಿಗೆ ಹೋಗೋದು ಉತ್ತಮ. ವಾರಾಂತ್ಯದ ಬದಲು ವಾರದ ಮಧ್ಯದ ದಿನಗಳನ್ನು ಆಯ್ಕೆ ಮಾಡಿಕೊಂಡರೆ ಜನಸಂದಣಿ ಕಡಿಮೆ ಇರುತ್ತದೆ. ಖರೀದಿ ಹಾಗೂ ಬಿಲ್ಲಿಂಗ್ ಪ್ರಕ್ರಿಯೆಗಳು ಬೇಗನೇ ಮುಗಿಯುತ್ತವೆ.

ಸಾಂದರ್ಭಿಕ ಚಿತ್ರImage Credit source: lovepik.com
ಮುಖ್ಯಾಂಶಗಳು
- ಹೆಚ್ಚಿನವರು ವಾರಾಂತ್ಯಗಳಲ್ಲಿ ಡಿಮಾರ್ಟ್‌ಗೆ ಶಾಪಿಂಗ್‌ಗೆ ತೆರಳುತ್ತಾರೆ
- ಡಿಮಾರ್ಟ್‌ನಲ್ಲಿ ಈ ದಿನಗಳಲ್ಲಿ ಶಾಪಿಂಗ್ ಮಾಡುವುದು ಬೆಸ್ಟ್
- ಡಿಮಾರ್ಟ್‌ನಲ್ಲಿ ಡಿಸ್ಕೌಂಟ್ ಹಾಗೂ ವಿಶೇಷ ಕೊಡುಗೆಗಳು ಇರುತ್ತವೆ
ಡಿಮಾರ್ಟ್ (DMart) ನೀವು ಈ ಹೆಸರು ಕೇಳಿಯೇ ಇರುತ್ತೀರಿ. ದಿನಸಿ ಸಾಮಾನುಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳು, ಬಟ್ಟೆ, ಕಿಚನ್ ಉಪಕರಣ ಹೀಗೆ ಎಲ್ಲಾ ವಸ್ತುಗಳನ್ನು ಇಲ್ಲಿ ಸಿಗುತ್ತದೆ. ಹಬ್ಬದ ಸೀಸನ್ ಸೇರಿದಂತೆ ಇನ್ನಿತ್ತರ ಸಂದರ್ಭದಲ್ಲಿ ಡಿಸ್ಕೌಂಟ್ ಹಾಗೂ ವಿಶೇಷ ಕೊಡುಗೆಗಳು ಇರುತ್ತವೆ. ಆದರೆ ಡಿಮಾರ್ಟ್‌ನಲ್ಲಿ ಯಾವ ದಿನ ಶಾಪಿಂಗ್ ಮಾಡಿದರೆ ಬೆಸ್ಟ್. ನೀವು ಡಿಮಾರ್ಟ್‌ಗೆ ಶಾಪಿಂಗ್‌ಗೆಂದು ಬರುತ್ತೀರಿ ಅಂತಾದ್ರೆ ಈ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳೋದು ಉತ್ತಮ. ಇದು ನಿಮ್ಮ ಸಮಯವನ್ನು ಉಳಿಸುತ್ತದೆ.
ಡಿಮಾರ್ಟ್ ಹೋಗಲು ಸರಿಯಾದ ಸಮಯ ಯಾವುದು?
- ರಿಯಾಯಿತಿಗಿಂತ ಶಾಂತಿಯುತವಾಗಿ ಶಾಪಿಂಗ್ ಮಾಡುವುದು ನಿಮ್ಮ ಮುಖ್ಯ ಗುರಿಯಾಗಿದ್ದರೆ, ಸೋಮವಾರ ಮತ್ತು ಗುರುವಾರದ ನಡುವೆ ಹೋಗುವುದು ಉತ್ತಮ. ನೀವು ಬೆಳಿಗ್ಗೆ ಅಂಗಡಿ ಅಥವಾ ಮಾಲ್ ತೆರೆದ ತಕ್ಷಣ ಹೋದರೆ, ವಾರಾಂತ್ಯದ ಜನಸಂದಣಿ ಮತ್ತು ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ.
- ತಿಂಗಳ ಆರಂಭ ಹಾಗೂ ಕೊನೆಯ ದಿನಗಳಲ್ಲಿ ವೇತನ ಹಾಗೂ ಗೃಹ ಬಳಕೆಯ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಜನರು ಬರುತ್ತಾರೆ. ಹೀಗಾಗಿ 10 ರಿಂದ 25 ನೇ ತಾರೀಕಿನ ಒಳಗೆ ಶಾಪಿಂಗ್ ಮಾಡುವುದು ಉತ್ತಮ.
- ವಿಶೇಷ ಆಫರ್‌ಗಳು ಇದೆಯೇ ಎಂದು ನೋಡಿಕೊಂಡು ಡಿಮಾರ್ಟ್ ಗೆ ಹೋಗುವುದು ಉತ್ತಮ. ಇದರಿಂದ ಡಿಸ್ಕೌಂಟ್‌ನಲ್ಲಿ ವಸ್ತುಗಳನ್ನು ಖರೀದಿ ಮಾಡಬಹುದು.
ಇದನ್ನೂ ಓದಿ: ರೀಟೇಲ್ ಹೂಡಿಕೆದಾರರಿಗೆ ಫೇವರಿಟ್ ಆಗಿರುವ ಇಂಡೆಕ್ಸ್ ಫಂಡ್ಗಳು; ಐದು ವರ್ಷದಲ್ಲಿ ಹೂಡಿಕೆಯಲ್ಲಿ ಗಣನೀಯ ಏರಿಕೆ
- ಡಿಮಾರ್ಟ್ ಅಂಗಡಿಗೆ ಹೋಗುವ ಮೊದಲು ಡಿಮಾರ್ಟ್ ರೆಡಿಯಲ್ಲಿ ಅದೇ ಉತ್ಪನ್ನದ ಬೆಲೆಯನ್ನು ಪರಿಶೀಲಿಸುವುದು ಉಪಯುಕ್ತವಾಗಿದೆ. ದಿನಸಿ, ಗೃಹೋಪಯೋಗಿ ವಸ್ತುಗಳು, ವೈಯಕ್ತಿಕ ಉತ್ಪನ್ನಗಳು ಮತ್ತು ಪ್ಯಾಕೇಜ್ ಮಾಡಿದ ಆಹಾರಗಳಂತಹ ವಿಭಾಗಗಳಲ್ಲಿ ವಿವಿಧ ಕೊಡುಗೆಗಳು ಲಭ್ಯವಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Thu, 27 August 26
Follow Us




