AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೋಕ್ಸ್​ವ್ಯಾಗನ್​ನಿಂದ ಬರೋಬ್ಬರಿ 50,000 ಉದ್ಯೋಗಿಗಳ ಲೇ ಆಫ್; ಕೆಲವೇ ವರ್ಷಗಳಲ್ಲಿ ಲಕ್ಷ ಮಂದಿಗೆ ಹೋಗಲಿದೆ ಕೆಲಸ

ವೋಕ್ಸ್​ವ್ಯಾಗನ್ ಕಂಪನಿಯು 50,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. 2030ರಷ್ಟರಲ್ಲಿ ಈ ಸಂಸ್ಥೆ ಲೇ ಆಫ್ ಮಾಡುವ ಉದ್ಯೋಗಿಗಳ ಸಂಖ್ಯೆ ಒಂದು ಲಕ್ಷ ಆಗಲಿದೆ. ವೆಚ್ಚ ಕಡಿತಗೊಳಿಸಲು ಕಂಪನಿ ಈ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ಕಂಪನಿಯು ತನ್ನ ವಾಹನಗಳ ಮಾಡಲ್ ಪೋರ್ಟ್​ಫೋಲಿಯೋ ಅನ್ನು ಅರ್ಧದಷ್ಟು ಕಡಿಮೆ ಮಾಡಲಿದೆ.

ವೋಕ್ಸ್​ವ್ಯಾಗನ್​ನಿಂದ ಬರೋಬ್ಬರಿ 50,000 ಉದ್ಯೋಗಿಗಳ ಲೇ ಆಫ್; ಕೆಲವೇ ವರ್ಷಗಳಲ್ಲಿ ಲಕ್ಷ ಮಂದಿಗೆ ಹೋಗಲಿದೆ ಕೆಲಸ
ವೋಕ್ಸ್‌ವ್ಯಾಗನ್Image Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 04, 2026 | 2:23 PM

Share

ನವದೆಹಲಿ, ಸೆಪ್ಟೆಂಬರ್ 4: ಜರ್ಮನಿಯ ವಿಶ್ವ ಪ್ರಸಿದ್ಧ ವಾಹನ ತಯಾರಕರಾದ ವೋಕ್ಸ್‌ವ್ಯಾಗನ್ (Volkswagen) ಸಂಸ್ಥೆಯು ಸಿಕ್ಕಾಪಟ್ಟೆ ಸಂಖ್ಯೆಯಲ್ಲಿ ಲೇ ಆಫ್ ಮಾಡಲು ಹೊರಟಿದೆ. ಈಗಾಗಲೇ 50,000 ಉದ್ಯೋಗಿಗಳನ್ನು ಕೆಲಸ ತೆಗೆಯುತ್ತಿರುವ ಈ ಸಂಸ್ಥೆ 2030ರಷ್ಟರಲ್ಲಿ ಮತ್ತಷ್ಟು 50,000 ಉದ್ಯೋಗಿಗಳಿಗೆ ಗೇಟ್​ಪಾಸ್ ಕೊಡಲಿದೆ ಎನ್ನುವಂತಹ ಸುದ್ದಿ ಇದೆ. ಇದು ನಿಜವಾದಲ್ಲಿ ಮುಂದಿನ ಮೂರ್ನಾಲ್ಕು ವರ್ಷದಲ್ಲಿ ವೋಕ್ಸ್​ವ್ಯಾಗನ್​ನ ಒಂದು ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

ತನ್ನ ವೆಚ್ಚಗಳನ್ನು ಕಡಿತಗೊಳಿಸುವ ಮತ್ತು ಕಾರ್ಯಾಚರಣೆಯನ್ನು ಸರಳೀಕರಣಗೊಳಿಸುವ ಜಾಗತಿಕ ಯೋಜನೆಯ ಭಾಗವಾಗಿ ವೋಕ್ಸ್​ವ್ಯಾಗನ್ ಈ ಕ್ರಮ ತೆಗೆದುಕೊಂಡಿದೆ. ತನ್ನ ವಾಹನಗಳ ಪೋರ್ಟ್‌ಫೋಲಿಯೋ (Model Portfolio) ಅನ್ನೂ ಶೇ. 50 ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ.

ಉದ್ಯೋಗ ಕಡಿತ: ವರದಿಗಳ ಪ್ರಕಾರ, ಜರ್ಮನಿಯ ಈ ಕಾರು ತಯಾರಿಕಾ ದೈತ್ಯ ಸಂಸ್ಥೆಯು ತನ್ನ ವೆಚ್ಚವನ್ನು ಕಡಿಮೆ ಮಾಡಲು ಸುಮಾರು 50,000 ಉದ್ಯೋಗಿಗಳನ್ನು ಹಂತ ಹಂತವಾಗಿ ವಜಾಗೊಳಿಸಲು ಯೋಜಿಸುತ್ತಿದೆ.

ಇದನ್ನೂ ಓದಿ: ಭಾರತಕ್ಕೆ ಹೆಮ್ಮೆ ತಂದಿತ್ತ ‘ನಾಟಿ ಬಾಯ್’; ಈ ಜಿಎಸ್​ಎಲ್​ವಿ ರಾಕೆಟ್​ನ ಯಶಸ್ವಿ ಉಡ್ಡಯನಕ್ಕೆ ಇಸ್ರೋ ಇಷ್ಟು ಗರ್ವ ಪಡುತ್ತಿರುವುದು ಯಾಕೆ?

ಮಾಡೆಲ್ ಪೋರ್ಟ್‌ಫೋಲಿಯೋ ಅರ್ಧದಷ್ಟು ಕಡಿತ

ಸಂಸ್ಥೆಯು ಪ್ರಸ್ತುತ ಉತ್ಪಾದಿಸುತ್ತಿರುವ ವಾಹನ ಮಾಡೆಲ್‌ಗಳ ಸಂಖ್ಯೆಯನ್ನು ಶೇ. 50 ರಷ್ಟು ಕಡಿಮೆ ಮಾಡಲಿದೆ. ಕಡಿಮೆ ಮಾರಾಟ ಮತ್ತು ಕಡಿಮೆ ಲಾಭ ತರುವ ಮಾಡೆಲ್‌ಗಳನ್ನು ಸ್ಥಗಿತಗೊಳಿಸಿ, ಹೆಚ್ಚು ಬೇಡಿಕೆ ಇರುವ ಹಾಗೂ ವಿದ್ಯುತ್ ಚಾಲಿತ (EV) ವಾಹನಗಳ ಮೇಲೆ ಗಮನ ಹರಿಸಲಿದೆ.

ವೋಕ್ಸ್​ವ್ಯಾಗನ್ ಉದ್ಯೋಗ ಕಡಿತಕ್ಕೆ ಮುಖ್ಯ ಕಾರಣಗಳು

  • ಜಾಗತಿಕ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎದುರಾಗಿರುವ ತೀವ್ರ ಪೈಪೋಟಿ.
  • ವಿದ್ಯುತ್ ವಾಹನಗಳ (EVs) ಕಡೆಗೆ ಬದಲಾಗುತ್ತಿರುವ ಮಾರುಕಟ್ಟೆ ಸ್ಥಿತ್ಯಂತರ ಮತ್ತು ಅದಕ್ಕೆ ತಗುಲುವ ಹೆಚ್ಚಿನ ತಂತ್ರಜ್ಞಾನ ವೆಚ್ಚ.
  • ಉತ್ಪಾದನಾ ವೆಚ್ಚ ಹಾಗೂ ನೌಕರರ ವೇತನ ವೆಚ್ಚವನ್ನು ತಗ್ಗಿಸುವ ಒತ್ತಡ.

ಇದನ್ನೂ ಓದಿ: ಅಡೋಬ್​ಗೆ ನೂತನ ಸಾರಥಿ; ಸಿಇಒ ಆಗಿ ಶಂತನು ನಾರಾಯಣ್ ಸ್ಥಾನಕ್ಕೆ ಅನಿಲ್ ಚಕ್ರವರ್ತಿ ನೇಮಕ

ಭವಿಷ್ಯದ ಯೋಜನೆ: ಕಂಪನಿಯು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ನವೀಕರಣ, ಡಿಜಿಟಲೀಕರಣ ಮತ್ತು ಬ್ಯಾಟರಿ ಚಾಲಿತ ವಾಹನಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಲಾಭದಾಯಕವಲ್ಲದ ಘಟಕಗಳನ್ನು ಮತ್ತು ಪೋರ್ಟ್‌ಫೋಲಿಯೋವನ್ನು ಮರುಸಂಘಟಿಸುತ್ತಿದೆ. ಜರ್ಮನಿಯಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ವೋಕ್ಸ್​ವ್ಯಾಗನ್ ಕಂಪನಿಯು ಜರ್ಮನಿಯಲ್ಲಿ ಒಟ್ಟು ಹೊಂದಿರುವ ಉದ್ಯೋಗಿಗಳ ಸಂಖ್ಯೆ ಸುಮಾರು ಎರಡೂವರೆ ಲಕ್ಷದಷ್ಟಿದೆ.

ವಿಶ್ವದಲ್ಲಿ ಅತಿಹೆಚ್ಚು ವಾಹನ ಮಾರುವ ಆಟೊಮೊಬೈಲ್ ಕಂಪನಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವೋಕ್ಸ್​ವ್ಯಾಗನ್, ತನ್ನ ದೇಶದಲ್ಲಿ ಲೇಬರ್ ಯೂನಿಯನ್​ಗಳ ಸಮಸ್ಯೆ ಎದುರಿಸುತ್ತಿದೆ. ಲಂಬೋರ್ಗಿನಿ, ಆಡಿ, ಪೋರ್ಷೆ ಇತ್ಯಾದಿ ಪ್ರಬಲ ಬ್ರ್ಯಾಂಡ್​ಗಳನ್ನು ಅದು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ