Gold Rate Today Bangalore: ಚಿನ್ನದ ಬೆಲೆ ಗ್ರಾಮ್ಗೆ 195 ರೂ ಇಳಿಕೆ; ಇಲ್ಲಿದೆ ದರಪಟ್ಟಿ
Bullion Market 2025 May 15th: ಚಿನ್ನದ ಬೆಲೆ ಇವತ್ತು ಗುರುವಾರ ಭರ್ಜರಿ ಇಳಿಕೆ ಕಂಡಿದೆ. ಗ್ರಾಮ್ಗೆ 195 ರೂಗಳಷ್ಟು ಬೆಲೆ ತಗ್ಗಿದೆ. 8,805 ರೂ ಇದ್ದ ಆಭರಣ ಚಿನ್ನದ ಬೆಲೆ 8,610 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 9,606 ರೂನಿಂದ 9,393 ರೂಗೆ ಕುಸಿದಿದೆ. ಬೆಳ್ಳಿ ಬೆಲೆ 97.90 ರೂ ಇದ್ದದ್ದು 97 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ 109 ರೂ ಇದ್ದ ಬೆಲೆ 108 ರೂಗೆ ಇಳಿದಿದೆ.

ಬೆಂಗಳೂರು, ಮೇ 15: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ (Gold and Silver rates) ಇಂದು ಗುರುವಾರ ಇಳಿಕೆ ಕಂಡಿವೆ. ಚಿನ್ನದ ಬೆಲೆ ಭರ್ಜರಿ ಕುಸಿತ ಕಂಡಿದೆ. ಅಮೆರಿಕ ಮತ್ತು ಚೀನಾ ನಡುವೆ ಟ್ಯಾರಿಫ್ ಸಂಧಾನ ನೆರವೇರಿರುವ ಹಿನ್ನೆಲೆಯಲ್ಲಿ ಜಾಗತಿಕ ಆತಂಕ ತಗ್ಗಿದೆ. ಇದರಿಂದ ಚಿನ್ನದ ಮೇಲಿನ ಹೂಡಿಕೆಗಳು ಹೊರಬರತೊಡಗಿವೆ. ಹಾಗೆಯೇ, ಅಮೆರಿಕದಲ್ಲಿ ಹಣದುಬ್ಬರ ಕಡಿಮೆ ಆಗಿರುವುದೂ ಕೂಡ ಹೊಸ ಭರವಸೆ ಮೂಡಿಸಿದೆ. ಇದರಿಂದ ಚಿನ್ನದ ಬೆಲೆ ಇಳಿಕೆ ಆಗಿರಬಹುದು ಎನ್ನಲಾಗುತ್ತಿದೆ. ಇಂದು ಗುರುವಾರ ಸ್ವರ್ಣ ದರ ಗ್ರಾಮ್ಗೆ 195 ರೂಗಳಷ್ಟು ಕುಸಿತ ಕಂಡಿದೆ. ಬೆಳ್ಳಿ ಬೆಲೆಯೂ ಗ್ರಾಮ್ಗೆ ಒಂದು ರೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 86,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 93,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 86,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,700 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 15ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 86,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,930 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 70,450 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 86,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,930 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 86,100 ರೂ
- ಚೆನ್ನೈ: 86,100 ರೂ
- ಮುಂಬೈ: 86,100 ರೂ
- ದೆಹಲಿ: 86,250 ರೂ
- ಕೋಲ್ಕತಾ: 86,100 ರೂ
- ಕೇರಳ: 86,100 ರೂ
- ಅಹ್ಮದಾಬಾದ್: 86,150 ರೂ
- ಜೈಪುರ್: 86,250 ರೂ
- ಲಕ್ನೋ: 86,250 ರೂ
- ಭುವನೇಶ್ವರ್: 86,100 ರೂ
ಇದನ್ನೂ ಓದಿ: ಬೆಂಗಳೂರಲ್ಲಿ 3nm ಚಿಪ್ ಡಿಸೈನ್ ಸೆಂಟರ್ ಆಯ್ತು, ಈಗ 6ನೇ ಸೆಮಿಕಂಡಕ್ಟರ್ ಘಟಕಕ್ಕೆ ಸಂಪುಟ ಒಪ್ಪಿಗೆ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 4,300 ರಿಂಗಿಟ್ (85,980 ರುಪಾಯಿ)
- ದುಬೈ: 3,565 ಡಿರಾಮ್ (83,110 ರುಪಾಯಿ)
- ಅಮೆರಿಕ: 980 ಡಾಲರ್ (83,910 ರುಪಾಯಿ)
- ಸಿಂಗಾಪುರ: 1,283 ಸಿಂಗಾಪುರ್ ಡಾಲರ್ (84,590 ರುಪಾಯಿ)
- ಕತಾರ್: 3,580 ಕತಾರಿ ರಿಯಾಲ್ (84,080 ರೂ)
- ಸೌದಿ ಅರೇಬಿಯಾ: 3,630 ಸೌದಿ ರಿಯಾಲ್ (82,860 ರುಪಾಯಿ)
- ಓಮನ್: 377 ಒಮಾನಿ ರಿಯಾಲ್ (83,850 ರುಪಾಯಿ)
- ಕುವೇತ್: 293.30 ಕುವೇತಿ ದಿನಾರ್ (81,650 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 9,700 ರೂ
- ಚೆನ್ನೈ: 10,800 ರೂ
- ಮುಂಬೈ: 9,700 ರೂ
- ದೆಹಲಿ: 9,700 ರೂ
- ಕೋಲ್ಕತಾ: 9,700 ರೂ
- ಕೇರಳ: 10,800 ರೂ
- ಅಹ್ಮದಾಬಾದ್: 9,700 ರೂ
- ಜೈಪುರ್: 9,700 ರೂ
- ಲಕ್ನೋ: 9,700 ರೂ
- ಭುವನೇಶ್ವರ್: 10,800 ರೂ
- ಪುಣೆ: 9,700
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








