ಜಿಡಿಪಿ ದತ್ತಾಂಶ ಬಿಡುಗಡೆ ಘಳಿಗೆ ಹಿಂದೂಡಿದ ಸರ್ಕಾರ; ಬದಲಾದ ಸಮಯ, ಕಾರಣ ಇತ್ಯಾದಿ ವಿವರ

Govt prepones GDP data release time: ಸರ್ಕಾರವು ಡಿಜಿಡಿ, ಹಣದುಬ್ಬರ ಇತ್ಯಾದಿ ಮಹತ್ವದ ದತ್ತಾಂಶಗಳ ಬಿಡುಗಡೆ ಸಮಯವನ್ನು ಬದಲಿಸಿದೆ. ಸಾಮಾನ್ಯವಾಗಿ ಸಂಜೆ 5:30ಕ್ಕೆ ಬಿಡುಗಡೆ ಆಗುವ ಇವುಗಳ ಡಾಟಾ ಇನ್ಮುಂದೆ ಸಂಜೆ 4ಕ್ಕೆಯೇ ರಿಲೀಸ್ ಆಗಲಿದೆ. ಬಿಡುಗಡೆಯ ದಿನದಂದು ದತ್ತಾಂಶವನ್ನು ಗ್ರಹಿಸಲು ಮತ್ತು ವಿಶ್ಲೇಷಿಸಲು ಮಾಧ್ಯಮ ಹಾಗು ಸಾರ್ವಜನಿಕರಿಗೆ ಹೆಚ್ಚು ಸಮಯಾವಕಾಶ ಕೊಡಲು ಈ ತೀರ್ಮಾನ ಕೈಗೊಂಡಿರಬಹುದು.

ಜಿಡಿಪಿ ದತ್ತಾಂಶ ಬಿಡುಗಡೆ ಘಳಿಗೆ ಹಿಂದೂಡಿದ ಸರ್ಕಾರ; ಬದಲಾದ ಸಮಯ, ಕಾರಣ ಇತ್ಯಾದಿ ವಿವರ
ಜಿಡಿಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 08, 2024 | 2:08 PM

ನವದೆಹಲಿ, ನವೆಂಬರ್ 8: ಸರ್ಕಾರ ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ ಜಿಡಿಪಿ ದತ್ತಾಂಶವನ್ನು ಪ್ರಕಟಿಸುತ್ತದೆ. ಬಿಡುಗಡೆ ದಿನದಂದು ಸಂಜೆ 5:30ಕ್ಕೆ ದತ್ತಾಂಶ ಬಿಡುಗಡೆ ಆಗುತ್ತದೆ. ಇದೀಗ ಸರ್ಕಾರವು ಬಿಡುಗಡೆಯ ಸಮಯವನ್ನು ಒಂದೂವರೆ ಗಂಟೆಗಳಷ್ಟು ಕಾಲ ಹಿಂದೂಡಿದೆ. ಸಂಜೆ 5:30ರ ಬದಲು ಸಂಜೆ 4ಕ್ಕೆಯೇ ಜಿಡಿಪಿ ದತ್ತಾಂಶವು ಪ್ರಕಟವಾಗಲಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ (Ministry of Statistics and Planning Implementation) ಹೇಳಿಕೆ ನೀಡಿದ್ದು, ಜಿಡಿಪಿ ದತ್ತಾಂಶ ಬಿಡುಗಡೆಯ ಕಾಲವನ್ನು ಹಿಂದೂಡುವ ನಿರ್ಧಾರದ ಬಗ್ಗೆ ಮಾಹಿತಿ ನೀಡಿದೆ.

ಜಿಡಿಪಿ ಡಾಟಾ ಬಿಡುಗಡೆ ಸಮಯ ಬದಲು ಮಾಡಿದ್ದು ಯಾಕೆ?

ಜಿಡಿಪಿ ದತ್ತಾಂಶವನ್ನು ಸಂಜೆ 5:30ಕ್ಕೆ ಬಿಡುಗಡೆ ಮಾಡಿದರೆ ಆ ದಿನವೇ ಅದರನ್ನು ಗ್ರಹಿಸಲು, ವಿಶ್ಲೇಷಿಸಲು ಮಾಧ್ಯಮಗಳಿಗೆ, ಸಾರ್ವಜನಿಕರಿಗೆ ಹಾಗೂ ಇತರರಿಗೆ ಹೆಚ್ಚು ಸಮಯಾವಕಾಶ ಇರುವುದಿಲ್ಲ. ಹೀಗಾಗಿ, ಬಿಡುಗಡೆ ಸಮಯವನ್ನು ಹಿಂದೂಡಲು ಸರ್ಕಾರ ನಿರ್ಧರಿಸಿದೆಯಂತೆ.

ಇದನ್ನೂ ಓದಿ: ಉದ್ಯಮ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿರೋದನ್ನು ವಿರೋಧಿಸುತ್ತೇನೆ: ರಾಹುಲ್ ಗಾಂಧಿ ಸ್ಪಷ್ಟನೆ

ಹಾಗಿದ್ದ ಮೇಲೆ ಬೆಳಗ್ಗೆಯೆ ಜಿಡಿಪಿ ಡಾಟಾ ಬಿಡುಗಡೆ ಮಾಡಬಹುದಲ್ಲ ಎನ್ನುವ ಪ್ರಶ್ನೆ ಉದ್ಭವಿಸಬಹುದು. ಬೆಳಗ್ಗೆ ಡಾಟಾ ಬಿಡುಗಡೆ ಮಾಡಿದರೆ ಹಣಕಾಸು ಮಾರುಕಟ್ಟೆಗಳಲ್ಲಿ ಟ್ರೇಡಿಂಗ್ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ, ಮಾರುಕಟ್ಟೆ ಮುಕ್ತಾಯ ಘಳಿಗೆಯಲ್ಲಿ ಜಿಡಿಪಿ ದತ್ತಾಂಶವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಅವಧಿ ಮಧ್ಯಾಹ್ನ 3:30ಕ್ಕೆಲ್ಲಾ ಮುಗಿದುಹೋಗುತ್ತದೆ. ಹೀಗಾಗಿ, ಸಂಜೆ 4 ಗಂಟೆಯನ್ನು ಜಿಡಿಪಿ ಡಾಟಾ ಬಿಡುಗಡೆಯ ಸಮಯವಾಗಿ ಸರ್ಕಾರ ನಿರ್ಧರಿಸಿರಬಹುದು.

ಜಿಡಿಪಿ ಡಾಟಾ ಮಾತ್ರವಲ್ಲ ಔದ್ಯಮಿಕ ಉತ್ಪಾದನಾ ಅನುಸೂಚಿ (ಐಐಪಿ) ಮತ್ತು ಗ್ರಾಹಕ ಬೆಲೆ ಅನುಸೂಚಿ ಹಣದುಬ್ಬರದ (ಸಿಪಿಐ) ದತ್ತಾಂಶದ ಬಿಡುಗಡೆ ವೇಳೆಯನ್ನೂ ಸರ್ಕಾರ ಸಂಜೆ 5:30ರಿಂದ 4 ಗಂಟೆಗೆ ಬದಲಾಯಿಸಿದೆ. ದತ್ತಾಂಶ ಗ್ರಹಿಸಲು ಹೆಚ್ಚು ಸಮಯಾವಕಾಶ ಕೊಡಲು ಉದ್ದೇಶದಿಂದಲೇ ಈ ಬದಲಾವಣೆ ಮಾಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಜೆಟ್ ಏರ್ವೇಸ್ ಮುಚ್ಚಿದರೆ ಅದರ ಷೇರುದಾರರಿಗೆ ಸಿಗೋದೇನು? ಷೇರಿನ ಫೇಸ್​ವ್ಯಾಲ್ಯೂ ಕೂಡ ಸಿಗಲ್ವಾ?

ಸರ್ಕಾರದ ವತಿಯಿಂದ ಸಾಂಖ್ಯಿಕ ಮತ್ತು ಯೋಜನಾ ಜಾರಿ ಸಚಿವಾಲಯಕ್ಕೆ ಸೇರಿದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ನಿಯಮಿತವಾಗಿ ಜಿಡಿಪಿ ಡಾಟಾ ಬಿಡುಗಡೆ ಮಾಡುತ್ತದೆ. ತ್ರೈಮಾಸಿಕ ಡಾಟಾ ಮತ್ತು ವಾರ್ಷಿಕ ಡಾಟಾವನ್ನು ನೀಡುತ್ತದೆ. ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿಯ ಅಂದಾಜು ಜಿಡಿಪಿಯ ದತ್ತಾಂಶವನ್ನು 2024ರ ನವೆಂಬರ್ 29ರಂದು ಬಿಡುಗಡೆ ಮಾಡಲಾಗುತ್ತದೆ. ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಹಾಗೂ ಪಿಐಬಿ ಇಲಾಖೆಯ ವೆಬ್​ಸೈಟ್​ಗಳಲ್ಲಿ ಅಂದು ಸಂಜೆ 4ಗಂಟೆಗೆ ಜಿಡಿಪಿ ಡಾಟಾ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್