ನಿಮ್ಮ ಪಿಎಫ್ ಹಣದಿಂದ ಮಾಸಿಕ ಆದಾಯ ಸೃಷ್ಟಿಸಲು ದಾರಿ; ಇಪಿಎಫ್​ಒದ ಹೊಸ ಪ್ಲಾನ್ ಬಗ್ಗೆ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್​ಗೆ ಅನುಮೋದನೆ ನೀಡುವ ಮೂಲಕ ಮಹತ್ವದ ಕ್ರಮ ಕೈಗೊಂಡಿದೆ. ಇಪಿಎಫ್ ಖಾತೆದಾರ ನಿವೃತ್ತರಾದ ಬಳಿಕ ಎರಡು ಆಯ್ಕೆ ಪಡೆಯಬಹುದು. ಲಂಪ್ಸಮ್ ಆಗಿ ಹಣ ಹಿಂಪಡೆಯಬಹುದು. ಅಥವಾ ಎಸ್​ಡಬ್ಲ್ಯುಪಿ ಆಯ್ದುಕೊಳ್ಳಬಹುದು. ಎಸ್​ಡಬ್ಲ್ಯುಪಿಯಲ್ಲಿ 20 ವರ್ಷಗಳವರೆಗೆ ನಿಯಮಿತವಾಗಿ ಹಣ ಹಿಂಪಡೆಯಲು ಅವಕಾಶ ಇರುತ್ತದೆ.

ನಿಮ್ಮ ಪಿಎಫ್ ಹಣದಿಂದ ಮಾಸಿಕ ಆದಾಯ ಸೃಷ್ಟಿಸಲು ದಾರಿ; ಇಪಿಎಫ್​ಒದ ಹೊಸ ಪ್ಲಾನ್ ಬಗ್ಗೆ ಮಾಹಿತಿ
ಹಣ
Image Credit source: Getty Images

Updated on: Nov 23, 2026 | 7:33 PM

ಮ್ಯೂಚುವಲ್ ಫಂಡ್​ಗಳಲ್ಲಿ ಇರುವಂತೆ ಇಪಿಎಫ್​ನಲ್ಲೂ ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್ (SWP) ರೂಪಿಸಲಾಗಿದೆ. ಇಪಿಎಫ್​ಒ ಈ ಯೋಜನೆಗೆ ಅನುಮೋದನೆ ನೀಡಿದೆ. ಇದು ಕೋಟ್ಯಂತರ ಉದ್ಯೋಗಿಗಳಿಗೆ ರಿಟೈರ್ಮೆಂಟ್ ಪ್ಲಾನ್​ಗೆ ಹೆಚ್ಚುವರಿ ಆಯ್ಕೆ ಸಿಗಲಿದೆ. ಇಪಿಎಸ್ ಜೊತೆಗೆ ಇಪಿಎಫ್ ಮೂಲಕವೂ ಉದ್ಯೋಗಿಗಳು ನಿವೃತ್ತಿ ಬಳಿಕ ಮಾಸಿಕ ಆದಾಯ ಸೃಷ್ಟಿಸಲು ಅವಕಾಶ ಸಿಕ್ಕಿದೆ.

ಏನಿದು ಇಪಿಎಫ್ ಎಸ್​ಡಬ್ಲ್ಯುಪಿ ಪ್ಲಾನ್?

ಇಪಿಎಫ್ ಅಕೌಂಟ್ ಹೊಂದಿರುವ ಉದ್ಯೋಗಿ ನಿವೃತ್ತರಾದ ಬಳಿಕ ಎರಡು ಆಯ್ಕೆಗಳು ಸಿಗುತ್ತವೆ. ತನ್ನ ಅಕೌಂಟ್​ನಲ್ಲಿರುವ ಎಲ್ಲಾ ಹಣವನ್ನೂ ಲಂಪ್ಸಮ್ ಆಗಿ ವಿತ್​ಡ್ರಾ ಮಾಡಬಹುದು. ಅಥವಾ ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್ ಆಯ್ದುಕೊಳ್ಳಬಹುದು. ಎಸ್​ಡಬ್ಲ್ಯುಪಿಯಲ್ಲಿ ಉದ್ಯೋಗಿ 20 ವರ್ಷಗಳವರೆಗೆ ನಿಯಮಿತವಾಗಿ ಹಣ ವಿತ್​ಡ್ರಾ ಮಾಡಿಕೊಳ್ಳಬಹುದು.

Loading...

ಇದನ್ನೂ ಓದಿ: ಇಪಿಎಫ್ ನಿಯಮ ಇನ್ನಷ್ಟು ಸರಳ; ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್​ಗೆ ಅನುಮೋದನೆ; 55 ವರ್ಷ ನಿರ್ಬಂಧ, ನಿರುದ್ಯೋಗ ನಿಯಮ ಸಡಿಲ

ಇಪಿಎಫ್ ಅಕೌಂಟ್​ಗೆ ಕೊನೆಯವರೆಗೂ ಬಡ್ಡಿ ಸಿಗುತ್ತಿರುತ್ತದೆ…

ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್​ನಲ್ಲಿ ಉದ್ಯೋಗಿಯು ಮಾಸಿಕವಾಗಿ ಹಣ ಪಡೆಯಲು ಅವಕಾಶ ಇರುತ್ತದೆ. ಅಕೌಂಟ್​ನಲ್ಲಿ ಉಳಿದಿರುವ ಹಣಕ್ಕೆ ಬಡ್ಡಿ ಜಮೆ ಆಗುವುದು ಮುಂದುವರಿಯುತ್ತದೆ. ಖಾತೆದಾರನು ಕೇವಲ ಬಡ್ಡಿಯನ್ನಷ್ಟೇ ವಿತ್​ಡ್ರಾ ಮಾಡಿದರೆ, 20 ವರ್ಷದ ನಂತರ ಅಕೌಂಟ್​ನಲ್ಲಿ ಮೊದಲಿನದಷ್ಟೇ ಹಣ ಇರುತ್ತದೆ.

ಉದಾಹರಣೆಗೆ, ನೀವು ನಿವೃತ್ತರಾದಾಗ ಇಪಿಎಫ್ ಅಕೌಂಟ್​ನಲ್ಲಿ 50 ಲಕ್ಷ ರೂ ಕಾರ್ಪಸ್ ಇದೆ ಎಂದಿಟ್ಟುಕೊಳ್ಳಿ. ಆಗ ನಿಮಗೆ ತಿಂಗಳಿಗೆ ಸಿಗುವ ಬಡ್ಡಿ 34,375 ರೂ. ಈ ಬಡ್ಡಿಹಣವನ್ನು ಪ್ರತೀ ತಿಂಗಳು ನೀವು ವಿತ್​ಡ್ರಾ ಮಾಡಿದರೂ ನಿಮ್ಮ ಖಾತೆಯಲ್ಲಿ 50 ಲಕ್ಷ ರೂ ಉಳಿದಿರುತ್ತದೆ. ಈ ರೀತಿ ನೀವು ವಿತ್​ಡ್ರಾಯಲ್ ಪ್ಲಾನ್ ಮಾಡಬಹುದು.

ಇದನ್ನೂ ಓದಿ: ಒಂದು ತಿಂಗಳ ಆರ್ ಡಿ ಮೊತ್ತ ಬಾಕಿ ಇಟ್ಟುಕೊಂಡರೆ ಈ ಸಮಸ್ಯೆ ಆಗೋದು ಗ್ಯಾರಂಟಿ

ಇಪಿಎಸ್ ಪಿಂಚಣಿ ಪ್ರತ್ಯೇಕ

ಇನ್ನು, ಇಪಿಎಫ್ ಜೊತೆಗೆ ಸೇರ್ಪಡೆಯಾಗುವ ಇಪಿಎಸ್ ಕೂಡ ಪ್ರತ್ಯೇಕ ಮಾಸಿಕ ಆದಾಯ ನೀಡುತ್ತದೆ. ಇಪಿಎಸ್ ಅನ್ನು ಕಡ್ಡಾಯವಾಗಿ ಪಿಂಚಣಿಗೆಯೇ ರೂಪಿಸಲಾಗಿರುವುದು. ನಿವೃತ್ತರಾದಾಗ ಇಪಿಎಸ್ ಅಕೌಂಟ್​ನಲ್ಲಿರುವ ಹಣವನ್ನು ವಿತ್​ಡ್ರಾ ಮಾಡಲು ಆಗುವುದಿಲ್ಲ. ನಿಮಗೆ ಕಡ್ಡಾಯವಾಗಿ ಇದು ಮಾಸಿಕ ಪಿಂಚಣಿ ರೂಪದಲ್ಲಿ ಸಿಗುತ್ತಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us