I4C ಎಚ್ಚರಿಕೆ: ನಕಲಿ ಆಂಡ್ರಾಯ್ಡ್ ಆ್ಯಪ್ಗಳಿಂದ ವಂಚನೆ ಹೇಗೆ? ಮೊಬೈಲ್ನಿಂದ ಹೊರತೆಗೆಯುವುದು ಹೇಗೆ?
I4C shares info on how malicious apps cause the harm: ನಕಲಿ ಆ್ಯಪ್‌ಗಳು ಜನರನ್ನು ವಂಚಿಸುವ ಉದ್ದೇಶ ಹೊಂದಿರುತ್ತವೆ. ಆಕರ್ಷಕ ಜಾಹೀರಾತು, ಪ್ರಲೋಬನೆ, ಆಮಿಷಗಳಿಗೆ ಮಾರು ಹೋಗಿ ಇನ್‌ಸ್ಟಾಲ್ ಮಾಡಿದರಂತೂ ಮುಗಿಯಿತು ಕಥೆ. ಮೊಬೈಲ್‌ಗೆ ಇದು ಇನ್‌ಸ್ಟಾಲ್ ಆದರೆ ಏನಾಗುತ್ತದೆ, ಅದನ್ನು ಹೊರತೆಗೆಯುವುದು ಹೇಗೆ ಇತ್ಯಾದಿ ಮಾಹಿತಿ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ (ಪೋರ್ನೋಗ್ರಾಫಿಕ್) ಜಾಹೀರಾತುಗಳನ್ನು ತೋರಿಸಿ, ಬಳಕೆದಾರರನ್ನು ಅಪಾಯಕಾರಿ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಪ್ರಚೋದಿಸಲಾಗುತ್ತಿದೆ. ‘Night Play’, ‘Reloop’, ‘Kyss’, ‘Vimo’, ‘Rivo’, ‘Nexo’, ಹಾಗೂ ‘Vixa’ ನಂತಹ ಹೆಸರುಗಳಲ್ಲಿ ಈ ನಕಲಿ ಆ್ಯಪ್‌ಗಳನ್ನು ಹರಡಲಾಗುತ್ತಿದೆ. ಸೈಬರ್ ಕ್ರೈಮ್ ಸಮನ್ವಯ ಸಂಸ್ಥೆಯಾದ I4C ಒಂದು ಸಲಹಾ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಆ್ಯಪ್‌ಗಳು ಹೇಗೆ ವಂಚಿಸುತ್ತವೆ, ಅವನ್ನು ಹೇಗೆ ತಡೆಯುವುದು ಇತ್ಯಾದಿ ಕುರಿತು ಮಾರ್ಗದರ್ಶನ ಅಥವಾ ಸಲಹೆ ನೀಡಿದೆ.
ದೂರ್ತ ಆ್ಯಪ್ಗಳ ಮೂಲಕ ವಂಚನೆಗಳು ಹೇಗೆಲ್ಲಾ ನಡೆಯುತ್ತೆ ನೋಡಿ
ಆಮಿಷ ಮತ್ತು ಡೌನ್‌ಲೋಡ್: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಕಾಣುವ ಆಕರ್ಷಕ ಜಾಹೀರಾತುಗಳ ಮೂಲಕ ಬಳಕೆದಾರರು ಫಿಶಿಂಗ್ ವೆಬ್‌ಸೈಟ್‌ಗಳಿಗೆ ತಲುಪುತ್ತಾರೆ. ಅಲ್ಲಿ ಅಧಿಕೃತ ಪ್ಲೇ ಸ್ಟೋರ್ ಹೊರತಾದ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಸೂಚಿಸಲಾಗುತ್ತದೆ.
ಆ್ಯಪ್ ಇನ್‌ಸ್ಟಾಲ್ ಆದ ತಕ್ಷಣ, ‘ಅಪ್‌ಡೇಟ್’ ಹೆಸರಿನಲ್ಲಿ ಮತ್ತೊಂದು ಹಿನ್ನೆಲೆ (Secondary) ಪ್ಯಾಕೇಜ್ ಡೌನ್‌ಲೋಡ್ ಆಗುತ್ತದೆ.
ಆ್ಯಪ್ ಬಳಕೆದಾರರಿಂದ ‘Accessibility Services’ ಸೇರಿದಂತೆ ಸೂಕ್ಷ್ಮ ಅನುಮತಿಗಳನ್ನು (Permissions) ಕೇಳುತ್ತದೆ. ಈ ಅನುಮತಿ ಸಿಕ್ಕ ತಕ್ಷಣ ಸೈಬರ್ ಅಪರಾಧಿಗಳು ಮೊಬೈಲ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ.
ಆ್ಯಪ್‌ಗಳು ರಹಸ್ಯವಾಗಿ VPN ಇನ್‌ಸ್ಟಾಲ್ ಮಾಡಿ ಇಂಟರ್ನೆಟ್ ಟ್ರಾಫಿಕ್ ಅನ್ನು ತಮ್ಮ ಸರ್ವರ್‌ಗಳಿಗೆ ಡೈವರ್ಟ್ ಮಾಡುತ್ತವೆ. ಜೊತೆಗೆ ಬ್ಯಾಂಕಿಂಗ್ OTP, ಮೆಸೇಜ್ ಮತ್ತು ಆನ್‌ಲೈನ್ ಟ್ರಾನ್ಸಾಕ್ಷನ್‌ಗಳನ್ನು ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತವೆ.
ಇದನ್ನೂ ಓದಿ: ವೈ-ಫೈ 6 ಮತ್ತು ವೈ-ಫೈ 7 ನಡುವಿನ ವ್ಯತ್ಯಾಸವೇನು? ಮನೆ ಬಳಕೆಗೆ ಯಾವುದು ಉತ್ತಮ?
ಅನ್‌ಇನ್‌ಸ್ಟಾಲ್ ತಡೆಯುವುದು: ಈ ಆ್ಯಪ್‌ಗಳನ್ನು ಸಾಮಾನ್ಯ ಸೆಟ್ಟಿಂಗ್ಸ್‌ಗಳ ಮೂಲಕ ಡಿಲೀಟ್/ಅನ್‌ಇನ್‌ಸ್ಟಾಲ್ ಮಾಡದಂತೆ ಹ್ಯಾಕರ್ಸ್ ಬ್ಲಾಕ್ ಮಾಡಿರುತ್ತಾರೆ.
ಸುರಕ್ಷಿತವಾಗಿರಲು I4C ನೀಡಿದ ಪ್ರಮುಖ ಸಲಹೆಗಳು
- ಗೂಗಲ್ ಪ್ಲೇ ಸ್ಟೋರ್ ಮಾತ್ರ ಬಳಸಿ: ಯಾವುದೇ ಕಾರಣಕ್ಕೂ ವೆಬ್‌ಸೈಟ್ ಅಥವಾ ಜಾಹೀರಾತುಗಳಲ್ಲಿ ಬರುವ APK ಲಿಂಕ್‌ಗಳ ಮೂಲಕ ಆ್ಯಪ್ ಇನ್‌ಸ್ಟಾಲ್ ಮಾಡಬೇಡಿ. ಗೂಗಲ್ನ ಪ್ಲೇ ಸ್ಟೋರ್ನಲ್ಲಿ ಅದು ಇದ್ದರೆ ಅಲ್ಲಿಂದ ಡೌನ್‌ಲೋಡ್ ಮಾಡಬಹುದೇ ಹೊರತು, APK ಫೈಲ್ ಸಹವಾಸಕ್ಕೆ ಹೋಗಬೇಡಿ.
- ಆಕ್ಸೆಸಿಬಿಲಿಟಿ ಅನುಮತಿ ನೀಡಬೇಡಿ: ಅಪರಿಚಿತ ಆ್ಯಪ್‌ಗಳಿಗೆ ‘Accessibility’ ಅಥವಾ Sensitive permissions ನೀಡಬೇಡಿ.
- ಗೂಗಲ್ ಪ್ಲೇ ಪ್ರೊಟೆಕ್ಟ್ ಆನ್‌ನಲ್ಲಿಡಿ: ಮೊಬೈಲ್ ಸಾಫ್ಟ್‌ವೇರ್ ಮತ್ತು ಪ್ಲೇ ಪ್ರೊಟೆಕ್ಟ್ ಅನ್ನು (Google Play Protect) ಕಾಲಕಾಲಕ್ಕೆ ಅಪ್‌ಡೇಟ್ ಮಾಡಿ.
ಇದನ್ನೂ ಓದಿ: ಪೆಟ್ರೋಲ್ ಪಂಪ್‌ಗಳಲ್ಲಿ ಈ ಸೇವೆಗಳು ಉಚಿತ! ಆದರೆ ಹೆಚ್ಚಿನ ಜನರಿಗೆ ತಿಳಿದಿಲ್ಲ
ಮೊಬೈಲ್‌ಗೆ ಈ ಆ್ಯಪ್ ಲಗ್ಗೆ ಇಟ್ಟಿದ್ದರೆ ಏನು ಮಾಡಬೇಕು?
ಕ್ರಮ 1 (Home Screen ಮರುಸ್ಥಾಪನೆ): Settings ➔ Apps ➔ ಇಲ್ಲಿಗೆ ಹೋದರೆ ಆ್ಯಪ್ಗಳ ಪಟ್ಟಿಗಿಂತ ಮೇಲೆಯೇ Choose Default Apps ಇರುತ್ತದೆ. ಅದನ್ನು ಒತ್ತಿ, ಬಳಿಕ Home App ಆಯ್ಕೆ ಮಾಡಿ. ಇದು ಫೋನ್‌ನ ಮೂಲ ಲಾಂಚರ್ ಆಗಿರುತ್ತದೆ. ವಂಚಕರು ಫೋನ್‌ನ ಹೋಮ್ ಸ್ಕ್ರೀನ್ ಬದಲಿಸಿದ್ದರೆ ಅದನ್ನು ಮೂಲ ಸ್ಥಿತಿಗೆ ತರಲು ಇದು ಸಹಾಯವಾಗುತ್ತದೆ.
ಕ್ರಮ 2 (Accessibility ನಿಷ್ಕ್ರಿಯಗೊಳಿಸಿ): Settings ➔ Accessibility ➔ Installed Services ತೆರೆಯಿರಿ. ನಂತರ Downloaded Apps ➔ ಅನುಮಾನಾಸ್ಪದ ಆ್ಯಪ್ ಆಯ್ಕೆಮಾಡಿ ‘Turn Accessibility Off’ ಮಾಡಿ.
ಕ್ರಮ 3 (Device Administrator ತೆಗೆದುಹಾಕಿ): Settings ➔ Security & Privacy ➔ Open Device Admin Apps ➔ ನಕಲಿ ಆ್ಯಪ್‌ಗೆ ನೀಡಿದ ಅನುಮತಿಯನ್ನು ‘Deactivate/Turn Off’ ಮಾಡಿ, ನಂತರ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿ.
Safe Mode ಅಥವಾ Factory Reset: ಆ್ಯಪ್ ಅನ್‌ಇನ್‌ಸ್ಟಾಲ್ ಆಗದಿದ್ದರೆ ಮೊಬೈಲ್ ಅನ್ನು Safe Mode ನಲ್ಲಿ ರೀಸ್ಟಾರ್ಟ್ ಮಾಡಿ ಆ್ಯಪ್ ಡಿಲೀಟ್ ಮಾಡಿ. ಆದಾಗ್ಯೂ ಆ್ಯಪ್ ಹೋಗದಿದ್ದರೆ, ಪ್ರಮುಖ ಡೇಟಾ ಬ್ಯಾಕಪ್ ತೆಗೆದುಕೊಂಡು ಫೋನ್ Factory Reset ಮಾಡಿ.
ಬ್ಯಾಂಕ್ ಖಾತೆಯಲ್ಲಿ ಸಂಶಯಾಸ್ಪದ ವಹಿವಾಟು ಕಂಡುಬಂದರೆ ತಕ್ಷಣ ಸೈಬರ್ ಹೆಲ್ಪ್‌ಲೈನ್ 1930 ಗೆ ಕರೆ ಮಾಡಿ ಅಥವಾ ಸೈಬರ್ ಕ್ರೈಮ್ ಪೋರ್ಟಲ್ ಆದ cybercrime.gov.in ನಲ್ಲಿ ದೂರು ನೀಡಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




