AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರೀಕ್ಷೆಮೀರಿಸಿದ ಆರ್ಥಿಕ ವೃದ್ಧಿ; ಎರಡನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.6ರಷ್ಟು ಹೆಚ್ಚಳ; ಸರ್ಕಾರದ ನಿರೀಕ್ಷೆಗಿಂತಲೂ ಮಿಗಿಲು

India GDP Growth In Q2: ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.6ರಷ್ಟು ಬೆಳೆದಿರುವುದು ಸರ್ಕಾರದ ಅಧಿಕೃತ ಮಾಹಿತಿ ಪ್ರಕಟಣೆಯಿಂದ ತಿಳಿದುಬಂದಿದೆ. 2022ರ ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 6.2ರಷ್ಟು ಬೆಳೆದಿತ್ತು. ಏಪ್ರಿಲ್​ನಿಂದ ಜುಲೈವರೆಗೆ ಶೇ. 7.8ರಷ್ಟು ಬೆಳೆದಿತ್ತು. ಇನ್ನು, ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಅಮೆರಿಕದ ಜಿಡಿಪಿ ಶೇ. 5.2, ಚೀನಾ ಶೇ. 4.9ರಷ್ಟು ಬೆಳವಣಿಗೆ ಹೊಂದಿವೆ. ಪ್ರಮುಖ ಆರ್ಥಿಕತೆಗಳಲ್ಲಿ ಭಾರತದ ಜಿಡಿಪಿ ದರವೇ ಅತಿಹೆಚ್ಚು.

ನಿರೀಕ್ಷೆಮೀರಿಸಿದ ಆರ್ಥಿಕ ವೃದ್ಧಿ; ಎರಡನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.6ರಷ್ಟು ಹೆಚ್ಚಳ; ಸರ್ಕಾರದ ನಿರೀಕ್ಷೆಗಿಂತಲೂ ಮಿಗಿಲು
ಭಾರತದ ಜಿಡಿಪಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 30, 2023 | 6:21 PM

Share

ನವದೆಹಲಿ, ನವೆಂಬರ್ 30: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕತೆ (Indian economy) ಶೇ. 7.6ರಷ್ಟು ಬೆಳೆದಿದೆ. ಸರ್ಕಾರ ಇಂದು ಗುರುವಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಲ್ಲಿ (NSO report) ಇದು ಬಹಿರಂಗವಾಗಿದೆ. ಕಳೆದ ವರ್ಷದ ಎರಡನೇ ಕ್ವಾರ್ಟರ್​ನಲ್ಲಿ (Q2 24FY ಜಿಡಿಪಿ ಶೇ. 6.2ರಷ್ಟು ಬೆಳೆದಿತ್ತು. ಈ ವರ್ಷ ಇಷ್ಟು ಮಟ್ಟಕ್ಕೆ ಜಿಡಿಪಿ ಬೆಳೆಯುತ್ತದೆ ಎಂದು ಯಾವ ಆರ್ಥಿಕ ತಜ್ಞರೂ ನಿರೀಕ್ಷಿಸಿರಲಿಲ್ಲ. ಆರ್​ಬಿಐ ಮತ್ತು ಸರ್ಕಾರ ಕೂಡ ಇದನ್ನು ನಿರೀಕ್ಷಿಸಿರಲಿಲ್ಲ.

ಕೆಲ ದಿನಗಳ ಹಿಂದೆ ರಾಯ್ಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ವಿವಿಧ ಆರ್ಥಿಕ ತಜ್ಞರು ಎರಡನೇ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಬೆಳೆಯಬಹುದು ಎಂದು ಮಾಡಿದ್ದ ಅಂದಾಜು ಶೇ. 6.5ರಿಂದ ಶೇ. 7.1ರವರೆಗೆ ಇತ್ತು. ಆದರೆ ಎಲ್ಲರ ಲೆಕ್ಕಾಚಾರ ಮೀರಿಸುವಂತೆ ಎರಡನೇ ಕ್ವಾರ್ಟರ್​ನಲ್ಲಿ ಆರ್ಥಿಕತೆ ಬೆಳೆದಿದೆ. ಸತತ ಎರಡು ಕ್ವಾರ್ಟರ್ ಅವಧಿಯಲ್ಲಿ ಜಿಡಿಪಿ ಶೇ. 7ಕ್ಕಿಂತಲೂ ಮೇಲಿದ್ದಂತಾಗಿದೆ. ಮೊದಲ ಕ್ವಾರ್ಟರ್ ಆದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳೆದಿತ್ತು.

ಇದನ್ನೂ ಓದಿ: ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು; ಸಬ್ಸಿಡಿ ಪಡೆಯುವವರಿಗೂ ಹೊಣೆಗಾರಿಕೆ ಬೇಕು: ನಾರಾಯಣಮೂರ್ತಿ

ಇನ್ನು ಬೇರೆ ದೇಶಗಳಿಗೆ ತುಲನೆ ಮಾಡುವುದಾದರೆ, ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಅಮೆರಿಕದ ಆರ್ಥಿಕತೆ ಶೇ. 5.2ರಷ್ಟು ಬೆಳೆದರೆ, ಚೀನಾದ ಜಿಡಿಪಿ ಬೆಳೆದಿರುವುದು ಶೇ. 4.9ರಷ್ಟು ಮಾತ್ರ. ಪ್ರಮುಖ ಆರ್ಥಿಕತೆಯ ದೇಶಗಳ ಪೈಕಿ ಭಾರತದ ಬೆಳವಣಿಗೆಯೇ ಅಧಿಕವಾಗಿದೆ.

ಭಾರತದ ಜಿಡಿಪಿ ವೃದ್ಧಿಯಲ್ಲಿ ಉತ್ಪಾದನಾ ವಲಯ ಪ್ರಮುಖ ಪಾತ್ರ ವಹಿಸಿದೆ. ಈ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಎರಡನೇ ಕ್ವಾರ್ಟರ್​ನಲ್ಲಿ ಶೇ. 13.9ರಷ್ಟು ವೃದ್ಧಿ ಕಂಡಿದೆ. ಕಳೆದ ವರ್ಷದ ಇದೇ ಕ್ವಾರ್ಟರ್​ನಲ್ಲಿ ಈ ಕ್ಷೇತ್ರದ ಬೆಳವಣಿಗೆ ಶೇ. 3.8ರಷ್ಟು ಕುಂಠಿತಗೊಂಡಿತ್ತು. ಅಂದರೆ, ಮೈನಸ್ ಶೇ. 3.8ರಷ್ಟಿತ್ತು. ಈಗ ಒಂದು ರೀತಿಯಲ್ಲಿ ಹೈಜಂಪ್ ಆಗಿದೆ. ಸರ್ಕಾರ ಪಿಎಲ್​ಐ ಸ್ಕೀಮ್ ಅನ್ನು ಆಕ್ರಮಣಕಾರಿಯಾಗಿ ನಡೆಸುತ್ತಿರುವುದು ಇದಕ್ಕೆ ಕಾರಣ ಇರಬಹುದು.

ಇದನ್ನೂ ಓದಿ: ಬೈಜುಸ್ ಗಾಯಕ್ಕೆ ಬರೆ; 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಮಟ್ಟಕ್ಕಿಂತಲೂ ಕಡಿಮೆ

ಆದರೆ, ಸೆಪ್ಟೆಂಬರ್ ಅಂತ್ಯದ ಈ ಎರಡನೇ ಕ್ವಾರ್ಟರ್​ನಲ್ಲಿ ಹಿನ್ನಡೆ ಕಂಡಿದ್ದು ಕೃಷಿ ವಲಯ. ಕಳೆದ ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಶೇ. 2.5ರಷ್ಟು ಬೆಳೆದಿದ್ದ ಕೃಷಿ ಸೆಕ್ಟರ್ ಈ ಬಾರಿ ಬೆಳೆದಿರುವುದು ಶೇ. 1.2ರಷ್ಟು ಮಾತ್ರವೇ.

ಭಾರತದ ಎಂಟು ಪ್ರಮುಖ ಇನ್​ಫ್ರಾಸ್ಟ್ರಕ್ಚರ್ ಸೆಕ್ಟರ್​ಗಳ ಉತ್ಪಾದನೆ ಅಕ್ಟೋಬರ್ ತಿಂಗಳಲ್ಲಿ ಶೇ. 12.1ರಷ್ಟು ಹೆಚ್ಚಿದೆ. 2022ರ ಅಕ್ಟೋಬರ್​ನಲ್ಲಿ ಈ 8 ಸೆಕ್ಟರ್​ಗಳ ಸರಾಸರಿ ಬೆಳವಣಿಗೆ ಶೇ. 0.7ರಷ್ಟು ಮಾತ್ರ ಇತ್ತು. ಕಲ್ಲಿದ್ದಲು, ಕಚ್ಛಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್, ಇವುಗಳು ಎಂಟು ಕೋರ್ ಸೆಕ್ಟರ್​ಗಳೆಂದು ಪರಿಗಣಿತವಾಗಿವೆ. ಇವುಗಳು ಸೆಪ್ಟೆಂಬರ್ ತಿಂಗಳಲ್ಲಿ ಶೇ. 9.2ರಷ್ಟು ಬೆಳೆದಿದ್ದವು. ಅಕ್ಟೋಬರ್​ನಲ್ಲಿ ಇವು ಇನ್ನೂ ಹೆಚ್ಚು ಬೆಳೆದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ