ಸತತ ಎರಡನೇ ದಿನವೂ ಉಬ್ಬಿದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು; ಭಾರತದ ಷೇರುಪೇಟೆ ಗರಿಗೆದರಲು ಕಾರಣಗಳಿವು…

ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಸೂಚ್ಯಂಕಗಳು ಮಂಗಳವಾರದ ಟ್ರೇಡಿಂಗ್ ಸೆಷನ್​ನಲ್ಲಿ ಶೇ. 1ರಿಂದ 3ರವರೆಗೂ ಏರಿಕೆ ಹೊಂದಿವೆ. ಬ್ಯಾಂಕ್, ಎಫ್​ಎಂಸಿಜಿ ಇತ್ಯಾದಿ ಕೆಲ ಸೆಕ್ಟರ್​ಗಳು ಉತ್ತಮ ಸ್ಪಂದನೆ ಪಡೆದಿವೆ. ಐಟಿ ಸೆಕ್ಟರ್​ನ ಕೆಲ ಷೇರುಗಳು ಹಿನ್ನಡೆ ಕಂಡಿವೆ. ಒಟ್ಟಾರೆ ಮಾರುಕಟ್ಟೆ ಸಕಾರಾತ್ಮಕವಾಗಿದೆ. ಸರ್ಕಾರದಿಂದ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಭರವಸೆಯ ಸುಳಿವು ಸಿಕ್ಕ ಪರಿಣಾಮ ಇದು.

ಸತತ ಎರಡನೇ ದಿನವೂ ಉಬ್ಬಿದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು; ಭಾರತದ ಷೇರುಪೇಟೆ ಗರಿಗೆದರಲು ಕಾರಣಗಳಿವು...
ಷೇರು ಮಾರುಕಟ್ಟೆ
Image Credit source: Getty Images

Updated on: Nov 03, 2026 | 11:22 AM

ಮುಂಬೈ, ನವೆಂಬರ್ 3: ಷೇರು ಮಾರುಕಟ್ಟೆ ಸತತ ಎರಡನೇ ದಿನವೂ ಪಾಸಿಟಿವ್ ಟ್ರೆಂಡ್​ನಲ್ಲಿದೆ. ಎಲ್​ಟಿಸಿಜಿ ತೆರಿಗೆ ಸುಧಾರಣೆ ತರುವ ಸರ್ಕಾರದ ಪ್ರಸ್ತಾವನೆಯು ಮಾರುಕಟ್ಟೆಯಲ್ಲಿ ಸಮಾಧಾನದ ವಾತಾವರಣ ತಂದಂತಿದೆ. ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಹೆಚ್ಚಿನ ಸೂಚ್ಯಂಕಗಳು ಇಂದು ಹಸಿರು ಬಣ್ಣಕ್ಕೆ ತಿರುಗಿವೆ. ಸೆನ್ಸೆಕ್ಸ್ 820ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 76,572 ಅಂಕಗಳವರೆಗೂ ಹೋಗಿತ್ತು.

ಬಿಎಸ್​ಇಯ ಇತರ ಪ್ರಮುಖ ಸೂಚ್ಯಂಕಗಳಾದ ಬಿಎಸ್​ಇ500, ಬಿಎಸ್​ಇ 200, ಬಿಎಸ್​ಇ 100, ಬ್ಯಾಂಕೆಕ್ಸ್ ಶೇ. 1ರಷ್ಟು ಹೆಚ್ಚಳಗೊಂಡಿವೆ. ಎಫ್​ಎಂಸಿಜಿ, ರಿಯಾಲ್ಟಿ ಸೆಕ್ಟರ್​ಗಳ ಸೂಚ್ಯಂಕ ಶೇ. 2ರಷ್ಟು ಹೆಚ್ಚಳಗೊಂಡಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ50 ಸೂಚ್ಯಂಕ ಶೇ. 1ರಷ್ಟು ಹೆಚ್ಚಳಗೊಂಡಿದೆ. 223 ಅಂಕಗಳನ್ನು ಗಳಿಸಿರುವ ಅದು ಇವತ್ತು 23,675 ಅಂಕಗಳವರೆಗೂ ಏರಿತ್ತು.

ಇದನ್ನೂ ಓದಿ: ವಿದೇಶಿ ಹೂಡಿಕೆದಾರರಿಗೆ ಎಲ್​ಟಿಸಿಜಿ ತೆಗೆದುಹಾಕಲು ಸೆಬಿ ಶಿಫಾರಸು; ದೇಶೀಯ ಮ್ಯೂಚುವಲ್ ಫಂಡ್​ಗಳಿಗೂ ರಿಯಾಯಿತಿಗೆ ಪ್ರಸ್ತಾಪ

ನಿನ್ನೆ ಷೇರುಪೇಟೆಗೆ ಬಲ ತುಂಬಿದ್ದ ರಿಲಯನ್ಸ್ ಷೇರು ಇವತ್ತು ಹಿನ್ನಡೆ ತಂದಿದೆ. ರಿಲಯನ್ಸ್ ಜೊತೆಗೆ ಇನ್ಫೋಸಿಸ್, ಪವರ್ ಗ್ರಿಡ್, ಒಎನ್​ಜಿಸಿ, ಎನ್​ಟಿಪಿಸಿ, ಅಪೋಲೊ ಹಾಸ್ಪಿಟಲ್, ಟಿಸಿಎಸ್, ಅದಾನಿ ಎಂಟರ್​ಪ್ರೈಸಸ್, ಟಾಟಾ ಸ್ಟೀಲ್ ಮೊದಲಾದ ಷೇರುಗಳು ನಷ್ಟ ಕಂಡಿವೆ.

ಬ್ಯಾಂಕ್ ಷೇರುಗಳು ಪಾಸಿಟಿವ್

ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್ ಬ್ಯಾಂಕ್, ಎಸ್​ಬಿಐ ಇತ್ಯಾದಿ ಬ್ಯಾಂಕಿಂಗ್ ಸೆಕ್ಟರ್ ಷೇರುಗಳು ಇವತ್ತು ಮಾರುಕಟ್ಟೆಗೆ ಬಲತುಂಬಿವೆ. ಭಾರ್ತಿ ಏರ್ಟೆಲ್, ಏಷ್ಯನ್ ಪೇಂಟ್ಸ್, ಮಹೀಂದ್ರ ಅಂಡ್ ಮಹೀಂದ್ರ, ಅಲ್ಟ್ರಾಟೆಕ್ ಸಿಮೆಂಟ್, ಗ್ರಾಸಿಂ ಮೊದಲಾದ ಷೇರುಗಳು ಕೂಡ ಮುನ್ನಡೆ ದಾಖಲಿಸಿವೆ.

ಷೇರು ಮಾರುಕಟ್ಟೆಗೆ ಬಲ ತುಂಬಲು ಕಾರಣವಾದ ಸಂಗತಿಗಳಿವು…

ಹೂಡಿಕೆದಾರರಿಗೆ ವಿಧಿಸಲಾಗುತ್ತಿರುವ ತೆರಿಗೆಯ ವ್ಯವಸ್ಥೆಯನ್ನು ಬದಲಿಸಬೇಕೆನ್ನುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರುವುದು ಮಾರುಕಟ್ಟೆಯನ್ನು ಸಮಾಧಾನಗೊಳಿಸಿದಂತಿದೆ. ಇವತ್ತು ಷೇರು ಮಾರುಕಟ್ಟೆ ಗರಿಗೆದರಲು ಇದೂ ಒಂದು ಕಾರಣ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಜಾಗತಿಕ ಮಾರುಕಟ್ಟೆಗಳನ್ನು ಮೀರಿಸಿದ ಭಾರತದ ಷೇರುಬಜಾರು: ಗೋಲ್ಡ್​ಮನ್ ಸ್ಯಾಕ್ಸ್ ವರದಿ

ಹಾಗೆಯೇ, ಎರಡನೇ ಕ್ವಾರ್ಟರ್​ನಲ್ಲಿ ಕಾರ್ಪೊರೇಟ್ ಕಂಪನಿಗಳು ಉತ್ತಮ ಆದಾಯ ತೋರಿಸುತ್ತಿವೆ. ಮಾರುಕಟ್ಟೆ ಸಕಾರಾತ್ಮಕವಾಗಲು ಇದು ಇನ್ನೊಂದು ಕಾರಣವೆನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us