AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಟೋಬರ್​ನಲ್ಲಿ ಜಾಗತಿಕ ಮಾರುಕಟ್ಟೆಗಳನ್ನು ಮೀರಿಸಿದ ಭಾರತದ ಷೇರುಬಜಾರು: ಗೋಲ್ಡ್​ಮನ್ ಸ್ಯಾಕ್ಸ್ ವರದಿ

ಹೂಡಿಕೆದಾರರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಷೇರುಗಳಿಂದ ಗಮನಹರಿಸುವುದನ್ನು ಕಡಿಮೆ ಮಾಡಿ ಇತರ ಕ್ಷೇತ್ರಗಳತ್ತ ಮುಖ ಮಾಡಿರುವುದರಿಂದ, 2026ರ ಅಕ್ಟೋಬರ್ ತಿಂಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಜಾಗತಿಕ ಮಾರುಕಟ್ಟೆಗಳಿಗಿಂತ ಉತ್ತಮ ಸಾಧನೆ ತೋರಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ತಿಳಿಸಿದೆ. ಹಲವು ಜಾಗತಿಕ ಷೇರು ಸೂಚ್ಯಂಕಗಳಿಗಿಂತ ನಿಫ್ಟಿ ಇಂಡೆಕ್ಸ್ ಅಕ್ಟೋಬರ್​ನಲ್ಲಿ ಹೆಚ್ಚು ಬೆಳವಣಿಗೆ ಹೊಂದಿದೆ.

ಅಕ್ಟೋಬರ್​ನಲ್ಲಿ ಜಾಗತಿಕ ಮಾರುಕಟ್ಟೆಗಳನ್ನು ಮೀರಿಸಿದ ಭಾರತದ ಷೇರುಬಜಾರು: ಗೋಲ್ಡ್​ಮನ್ ಸ್ಯಾಕ್ಸ್ ವರದಿ
ಭಾರತೀಯ ಷೇರುಪೇಟೆImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 02, 2026 | 4:04 PM

Share

ನವದೆಹಲಿ, ನವೆಂಬರ್ 2: ಕಳೆದ ತಿಂಗಳು ಬೇರೆ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ಭಾರತದ ಷೇರುಮಾರುಕಟ್ಟೆ ಉತ್ತಮ ಸಾಧನೆ ನೀಡಿದೆ ಎಂದು ಜಾಗತಿಕ ಹೂಡಿಕೆ ಸಂಸ್ಥೆಯಾದ ಗೋಲ್ಡ್​ಮನ್ ಸ್ಯಾಕ್ಸ್ ತನ್ನ ವರದಿಯಲ್ಲಿ ತಿಳಿಸಿದೆ. ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಸಂಬಂಧಿತ ತಂತ್ರಜ್ಞಾನ ಷೇರುಗಳಿಂದ ಬಂಡವಾಳವನ್ನು ಬೇರೆಡೆಗೆ ವರ್ಗಾಯಿಸುತ್ತಿರುವ ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆಯು ಜಾಗತಿಕ ಮಾರುಕಟ್ಟೆಗಳಿಗಿಂತ ಉತ್ತಮ ಪ್ರದರ್ಶನ ನೀಡಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್ ಅಭಿಪ್ರಾಯಪಟ್ಟಿದೆ.

ಕಳೆದ ಕೆಲವು ತಿಂಗಳುಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ವಿಪರೀತ ಏರಿಕೆಯಾಗಿದ್ದ ಎಐ (AI) ಮತ್ತು ತಂತ್ರಜ್ಞಾನ ಕ್ಷೇತ್ರಗಳ ಷೇರುಗಳಿಂದ ಹೂಡಿಕೆದಾರರು ಪ್ರಾಫಿಟ್ ಬುಕ್ ಮಾಡಿ (ಲಾಭ ಪಡೆದು) ಹೊರಬರುತ್ತಿದ್ದಾರೆ. ಬದಲಾಗಿ ಸ್ಥಿರ ಮತ್ತು ಭರವಸೆಯ ಮಾರುಕಟ್ಟೆಗಳ ಮೇಲೆ ಗಮನ ಹರಿಸುತ್ತಿದ್ದಾರೆ ಎಂದು ಈ ಗ್ಲೋಬಲ್ ಇನ್ವೆಸ್ಟ್​ಮೆಂಟ್ ಕಂಪನಿಯ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ ಆದಾಯ, ಲಾಭ; ಷೇರುಬೆಲೆ ಶೇ. 7ರಷ್ಟು ಜಿಗಿತ

ಭಾರತೀಯ ಮಾರುಕಟ್ಟೆಯ ಬಲವಾದ ಸಾಧನೆ

ಜಾಗತಿಕ ಮಾರುಕಟ್ಟೆಗಳಲ್ಲಿ ಇಂತಹ ಬದಲಾವಣೆಗಳು ನಡೆಯುತ್ತಿರುವ ಮಧ್ಯೆಯೂ, ಭಾರತೀಯ ಷೇರುಪೇಟೆಯು ತನ್ನ ಆಂತರಿಕ ಆರ್ಥಿಕ ಬಲ, ಗೃಹಬಳಕೆಯ ಬೇಡಿಕೆ ಮತ್ತು ಬಲವಾದ ಸಾಂಸ್ಥಿಕ ಹೂಡಿಕೆಗಳ ಬೆಂಬಲದಿಂದಾಗಿ ಜಾಗತಿಕ ಸೂಚ್ಯಂಕಗಳಿಗಿಂತ ಉತ್ತಮ ಪ್ರದರ್ಶನ (Outperform) ದಾಖಲಿಸಿರುವುದನ್ನು ಈ ಏಜೆನ್ಸಿ ಗುರುತಿಸಿದೆ.

ಎಐ ಎನೇಬ್ಲರ್ ಎನಿಸಿಕೊಂಡ ಕಂಪನಿಗಳ ಷೇರುಗಳಿಂದ ಹೂಡಿಕೆದಾರರು ಹೊರಬಂದಿದ್ದಾರೆ. ಭಾರತೀಯ ಕಂಪನಿಗಳು ಪ್ರಬಲವಾಗಿರುವ ಐಟಿ ಸರ್ವಿಸಸ್ ಸ್ಟಾಕ್​ಗಳಲ್ಲಿ ಹೂಡಿಕೆ ಹರಿವು ಬರುತ್ತಿದೆ. ಜಾಗತಿಕವಾಗಿ ಎಐ ಸ್ಟಾಕ್​ಗಳು ಅಕ್ಟೋಬರ್​ನಲ್ಲಿ ನಿಫ್ಟಿ ಸೂಚ್ಯಂಕಕ್ಕಿಂತ ಶೇ. 6 ಕಡಿಮೆ ಸಾಧನೆ ತೋರಿದೆ. ಎಸಿಎಸ್​ಐ ಏಷ್ಯಾ ಪೆಸಿಫಿಕ್ ಸೂಚ್ಯಂಕ ಕೂಡ ನಿಫ್ಟಿಗಿಂತ ಶೇ. 7 ಕಡಿಮೆ ಸಾಧನೆ ತೋರಿದೆ ಎಂಬುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; 2 ಲಕ್ಷ ಕೋಟಿ ರೂ ದಾಟಿದ ನಿವ್ವಳ ತೆರಿಗೆ ಸಂಗ್ರಹ

ಹೂಡಿಕೆದಾರರ ವಿಶ್ವಾಸ: ಭಾರತದ ಮಾರುಕಟ್ಟೆಯ ಮೂಲಭೂತ ಅಂಶಗಳು ಭದ್ರವಾಗಿರುವುದರಿಂದ, ವಿದೇಶಿ ಮತ್ತು ದೇಶೀಯ ಹೂಡಿಕೆದಾರರು ಇಲ್ಲಿನ ವಿವಿಧ ವಲಯಗಳ ಮೇಲೆ ನಿರಂತರವಾಗಿ ವಿಶ್ವಾಸವಿಟ್ಟು ಹೂಡಿಕೆ ಮಾಡುತ್ತಿರುವುದು ಮಾರುಕಟ್ಟೆಗೆ ಆಸರೆಯಾಗಿದೆ ಎನ್ನುವುದು ಗೋಲ್ಡ್​ಮನ್ ಸ್ಯಾಕ್ಸ್​ನ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ: ಹಿಂಡಲಗಾ ಜೈಲ್ ಭರೋ ಚಳವಳಿ ಆರಂಭ
ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ: ಹಿಂಡಲಗಾ ಜೈಲ್ ಭರೋ ಚಳವಳಿ ಆರಂಭ
ಮುರಸು ಚಂಡಮಾರುತದ ಎಫೆಕ್ಟ್​​: ಕರ್ನಾಟಕದಲ್ಲಿ 5 ದಿನಗಳ ಕಾಲ ಮಳೆ
ಮುರಸು ಚಂಡಮಾರುತದ ಎಫೆಕ್ಟ್​​: ಕರ್ನಾಟಕದಲ್ಲಿ 5 ದಿನಗಳ ಕಾಲ ಮಳೆ
ದರ ಏರಿಕೆ ಎಫೆಕ್ಟ್​: ನವ ದಂಪತಿಗೆ ಹಾಲು ಮೊಸರು ಗಿಫ್ಟ್
ದರ ಏರಿಕೆ ಎಫೆಕ್ಟ್​: ನವ ದಂಪತಿಗೆ ಹಾಲು ಮೊಸರು ಗಿಫ್ಟ್
ಹೆಲಿಕಾಪ್ಟರ್​ಗಳಲ್ಲಿ ಎರಡು ಪೈಲಟ್ಗಳು ಕಡ್ಡಾಯ
ಹೆಲಿಕಾಪ್ಟರ್​ಗಳಲ್ಲಿ ಎರಡು ಪೈಲಟ್ಗಳು ಕಡ್ಡಾಯ
ಬಿಗ್ ಬಾಸ್ ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾದ ಕ್ಯಾಪ್ಟನ್ ಜಗದೀಶ್ ನಿರ್ಧಾರ
ಬಿಗ್ ಬಾಸ್ ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾದ ಕ್ಯಾಪ್ಟನ್ ಜಗದೀಶ್ ನಿರ್ಧಾರ
ವಿಎ ಪರೀಕ್ಷೆಯಲ್ಲಿ ಅಕ್ರಮ: ಶಂಕರ್ ಬನ್ನೂರು ವಿರುದ್ಧ ಎಫ್​ಐಆರ್​​
ವಿಎ ಪರೀಕ್ಷೆಯಲ್ಲಿ ಅಕ್ರಮ: ಶಂಕರ್ ಬನ್ನೂರು ವಿರುದ್ಧ ಎಫ್​ಐಆರ್​​
ಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ಸಂಸದ ಬಸವರಾಜ ಬೊಮ್ಮಾಯಿ!
ಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ಸಂಸದ ಬಸವರಾಜ ಬೊಮ್ಮಾಯಿ!
ಅರುಣ್ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳು
ಅರುಣ್ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳು
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ