AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಟ್ಯಾರಿಫ್ ಪರಿಣಾಮ ನಡುವೆಯೂ ಜನವರಿಯಲ್ಲಿ ಭಾರತದ ರಫ್ತು ಶೇ. 13.16 ಹೆಚ್ಚಳ

India's exports rise on 2026 January: ಭಾರತದ ಸರಕು ಮತ್ತು ಸೇವೆಗಳ ಒಟ್ಟಾರೆ ರಫ್ತು ಜನವರಿಯಲ್ಲಿ 80 ಬಿಲಿಯನ್ ಡಾಲರ್ ಗಡಿ ದಾಟಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ರಫ್ತಿನಲ್ಲಿ ಶೇ. 13.16ರಷ್ಟು ಏರಿಕೆ ಆಗಿದೆ. ಅಮೆರಿಕದ ಶೇ. 50 ಟ್ಯಾರಿಫ್ ನಡುವೆಯೂ ಜನವರಿಯಲ್ಲಿ ಭಾರತ ಉತ್ತಮ ರಫ್ತು ದಾಖಲಿಸಿದೆ.

ಅಮೆರಿಕದ ಟ್ಯಾರಿಫ್ ಪರಿಣಾಮ ನಡುವೆಯೂ ಜನವರಿಯಲ್ಲಿ ಭಾರತದ ರಫ್ತು ಶೇ. 13.16 ಹೆಚ್ಚಳ
ರಫ್ತು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 16, 2026 | 6:54 PM

Share

ನವದೆಹಲಿ, ಫೆಬ್ರುವರಿ 16: ಜನವರಿ ತಿಂಗಳಲ್ಲಿ ಭಾರತದ ಒಟ್ಟಾರೆ ಸರಕು ಮತ್ತು ಸೇವೆಗಳ ರಫ್ತು (India total exports) 80.45 ಬಿಲಿಯನ್ ಡಾಲರ್ ಮೊತ್ತದಷ್ಟಿದೆ. ಕಳೆದ ವರ್ಷದ (2025) ಜನವರಿಯಲ್ಲಿ 71.09 ಬಿಲಿಯನ್ ಡಾಲರ್ ರಫ್ತು ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ. 13.16ರಷ್ಟು ರಫ್ತು ಹೆಚ್ಚಳ ಆಗಿದೆ. ಆದರೆ, ಆಮದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿದೆ. 76.48 ಬಿಲಿಯನ್ ಡಾಲರ್ ಇದ್ದದ್ದು 90.83 ಬಿಲಿಯನ್ ಡಾಲರ್​ಗೆ ಏರಿದೆ. ಇದರಿಂದ ಒಟ್ಟರೆ ವ್ಯಾಪಾರ ಅಂತರ ಅಥವಾ ಟ್ರೇಡ್ ಡೆಫಿಸಿಟ್ 5.39 ಬಿಲಿಯನ್ ಡಾಲರ್​ನಿಂದ 10.38 ಬಿಲಿಯನ್ ಡಾಲರ್​ಗೆ ಏರಿದಂತಾಗಿದೆ.

ಸರಕುಗಳ ವ್ಯಾಪಾರ ಕೊರತೆ ಹೆಚ್ಚಳ

ಜನವರಿಯಲ್ಲಿ ಸರಕುಗಳ ಟ್ರೇಡ್ ಡೆಫಿಸಿಟ್ 34.68 ಬಿಲಿಯನ್ ಡಾಲರ್ ಇದೆ. ಆರ್ಥಿಕ ತಜ್ಞರು 26 ಬಿಲಿಯನ್ ಡಾಲರ್ ಟ್ರೇಡ್ ಡೆಫಿಸಿಟ್ ನಿರೀಕ್ಷಿಸಿದ್ದರು. ಡಿಸೆಂಬರ್ ತಿಂಗಳಲ್ಲಿ ಸರಕುಗಳ ಟ್ರೇಡ್ ಡೆಫಿಸಿಟ್ 25.04 ಬಿಲಿಯನ್ ಡಾಲರ್ ಇತ್ತು.

ಇದನ್ನೂ ಓದಿ: ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?

ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಡಿಸೆಂಬರ್​ನಲ್ಲಿ 38.51 ಬಿಲಿಯನ್ ಡಾಲರ್ ಇದ್ದ ಸರಕುಗಳ ರಫ್ತು ಜನವರಿಯಲ್ಲಿ 36.56 ಬಿಲಿಯನ್ ಡಾಲರ್​ಗೆ ಇಳಿದಿದೆ. ಆದರೆ, ಹಿಂದಿನ ವರ್ಷದ ಜನವರಿಗೆ ಹೋಲಿಸಿದರೆ ಸರಕು ರಫ್ತು ತುಸು ಏರಿಕೆ ಆಗಿದೆ. ಇದೇ ವೇಳೆ, ಸರಕುಗಳ ಆಮದು 63.55 ಬಿಲಿಯನ್ ಡಾಲರ್​ನಿಂದ 71.24 ಬಿಲಿಯನ್ ಡಾಲರ್​ಗೆ ಏರಿದೆ. ಹೀಗಾಗಿ, ಸರಕುಗಳ ಟ್ರೇಡ್ ಡೆಫಿಸಿಟ್ ನಿರೀಕ್ಷೆಮೀರಿ ಹೆಚ್ಚಿದೆ. ಚಿನ್ನ ಮತ್ತು ಬೆಳ್ಳಿ ಆಮದು ಮೌಲ್ಯ ಹೆಚ್ಚಾದ್ದರಿಂದ ಒಟ್ಟಾರೆ ಸರಕು ಆಮದು ಏರಿಕೆ ಆಗಲು ಕಾರಣ ಎನ್ನಲಾಗಿದೆ.

ಭಾರತದ ಮೇಲೆ ಅಮೆರಿಕ ತನ್ನ ಟ್ಯಾರಿಫ್​ಗಳನ್ನು ಈ ತಿಂಗಳು ಕಡಿಮೆ ಮಾಡಿದೆ. ಶೇ. 50ರಷ್ಟು ಇದ್ದ ಟ್ಯಾರಿಫ್ ಶೇ. 18ಕ್ಕೆ ಇಳಿಕೆ ಆಗಿದೆ. ಆದರೆ, ಜನವರಿಯಲ್ಲಿ ಶೇ. 50 ಟ್ಯಾರಿಫ್ ಕ್ರಮವೇ ಜಾರಿಯಲ್ಲಿದ್ದದ್ದು. ಹೀಗಾಗಿ, ಅಧಿಕ ಟ್ಯಾರಿಫ್ ನಡುವೆಯೂ ಭಾರತದ ಸರಕುಗಳ ರಫ್ತು ತೀರಾ ಹೆಚ್ಚು ಕುಸಿತ ಕಂಡಿಲ್ಲ ಎಂಬುದು ಗಮನಾರ್ಹ.

ಫೆಬ್ರುವರಿಯಲ್ಲಿ ಭಾರತಕ್ಕೆ ಅಮೆರಿಕದ ಟ್ಯಾರಿಫ್ ಶೇ. 25ರಷ್ಟು ಮಾತ್ರವೇ ಇರಲಿದೆ. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲಿರುವುದರಿಂದ ಟ್ಯಾರಿಫ್ ಶೇ. 18ಕ್ಕೆ ಇಳಿಕೆ ಆಗಬಹುದು. ಮಾರ್ಚ್ ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಬೀಳಬಹುದು.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

2026ರ ಜನವರಿಯಲ್ಲಿ ಭಾರತದ ರಫ್ತು ದತ್ತಾಂಶ

  • ಸರಕುಗಳ ರಫ್ತು: 36.56 ಬಿಲಿಯನ್ ಡಾಲರ್
  • ಸೇವೆಗಳ ರಫ್ತು: 43.90 ಬಿಲಿಯನ್ ಡಾಲರ್
  • ಒಟ್ಟಾರೆ ರಫ್ತು: 80.45 ಬಿಲಿಯನ್ ಡಾಲರ್
  • ಒಟ್ಟಾರೆ ಆಮದು: 90.83 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಬೆಂಗಳೂರಿನಲ್ಲಿ ಹೋಟೆಲ್ ಬಂದ್​!
ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಬೆಂಗಳೂರಿನಲ್ಲಿ ಹೋಟೆಲ್ ಬಂದ್​!
LPG ಸಿಲಿಂಡರ್‌ ಕೊರತೆ: ಹೋಟೆಲ್ ಮುಚ್ಚುವುದೇ ಕೊನೆಯ ದಾರಿ
LPG ಸಿಲಿಂಡರ್‌ ಕೊರತೆ: ಹೋಟೆಲ್ ಮುಚ್ಚುವುದೇ ಕೊನೆಯ ದಾರಿ
ಕಾವ್ಯಾನ ಮದುವೆ ಆಗಲ್ಲ: ಎಲ್ಲರ ಎದುರು ನೇರವಾಗಿ ಹೇಳಿದ ಗಿಲ್ಲಿ ನಟ
ಕಾವ್ಯಾನ ಮದುವೆ ಆಗಲ್ಲ: ಎಲ್ಲರ ಎದುರು ನೇರವಾಗಿ ಹೇಳಿದ ಗಿಲ್ಲಿ ನಟ
ಪ್ರೇಯಸಿಯೊಂದಿಗೆ ಸ್ಟೇಜ್ ಮೇಲೆ ಮಲಗಿದ ಹಾರ್ದಿಕ್ ಪಾಂಡ್ಯ
ಪ್ರೇಯಸಿಯೊಂದಿಗೆ ಸ್ಟೇಜ್ ಮೇಲೆ ಮಲಗಿದ ಹಾರ್ದಿಕ್ ಪಾಂಡ್ಯ
ಬ್ಯಾಡಗಿ ಮೆಣಸಿನ ರಫ್ತಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ
ಬ್ಯಾಡಗಿ ಮೆಣಸಿನ ರಫ್ತಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ
ಮದುವೆ ಮಾಡಿಕೊಂಡು ನೇರವಾಗಿ ದರ್ಶನ್ ಮನೆ ಮುಂದೆ ಬಂದ ನವ ಜೋಡಿ
ಮದುವೆ ಮಾಡಿಕೊಂಡು ನೇರವಾಗಿ ದರ್ಶನ್ ಮನೆ ಮುಂದೆ ಬಂದ ನವ ಜೋಡಿ
ಡಿಕೆ ಶಿವಕುಮಾರ್ ಶಾಕಿಂಗ್ ಮಾತು: ಮತ್ತೆ ಜೋರಾದ ಅಧಿಕಾರ ಹಂಚಿಕೆ ಬಿಕ್ಕಟ್ಟು
ಡಿಕೆ ಶಿವಕುಮಾರ್ ಶಾಕಿಂಗ್ ಮಾತು: ಮತ್ತೆ ಜೋರಾದ ಅಧಿಕಾರ ಹಂಚಿಕೆ ಬಿಕ್ಕಟ್ಟು
‘ಬಾಸ್’ ಚಿತ್ರದಲ್ಲಿ ರೇಣುಕಾಸ್ವಾಮಿ ಸಾವಿನ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ
‘ಬಾಸ್’ ಚಿತ್ರದಲ್ಲಿ ರೇಣುಕಾಸ್ವಾಮಿ ಸಾವಿನ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ
ಮೈದಾನದಲ್ಲಿ ಪತ್ನಿಗೆ ಲಿಪ್‌ಲಾಕ್ ಮಾಡಿದ ಕ್ರಿಕೆಟಿಗ
ಮೈದಾನದಲ್ಲಿ ಪತ್ನಿಗೆ ಲಿಪ್‌ಲಾಕ್ ಮಾಡಿದ ಕ್ರಿಕೆಟಿಗ
ದಳಪತಿ ವಿಜಯ್​​ಗೆ ಮತ್ತೆ ಹೆಚ್ಚಿತು ಸಂಕಷ್ಟ; ಎದುರಿಸಬೇಕಿದೆ ವಿಚಾರಣೆ
ದಳಪತಿ ವಿಜಯ್​​ಗೆ ಮತ್ತೆ ಹೆಚ್ಚಿತು ಸಂಕಷ್ಟ; ಎದುರಿಸಬೇಕಿದೆ ವಿಚಾರಣೆ