AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger 2021: ಹನ್ನೊಂದೂವರೆ ತಿಂಗಳಲ್ಲಿ ಈ ಷೇರಿನ ಮೇಲಿನ 1 ಲಕ್ಷ ರೂಪಾಯಿ ಹೂಡಿಕೆ 21.38 ಲಕ್ಷಕ್ಕೆ ಏರಿಕೆ

2021ರಲ್ಲಿ ಈ ಸ್ಟಾಕ್ ಮೇಲಿನ ರೂ. 1 ಲಕ್ಷ ರೂಪಾಯಿಯ ಹೂಡಿಕೆ ರೂ. 21.38 ಲಕ್ಷ ಆಗಿದೆ. ಅಂದರೆ ಹನ್ನೊಂದೂವರೆ ತಿಂಗಳಲ್ಲಿ 21 ಪಟ್ಟು ಏರಿಕೆ ಆಗಿದೆ.

Multibagger 2021: ಹನ್ನೊಂದೂವರೆ ತಿಂಗಳಲ್ಲಿ ಈ ಷೇರಿನ ಮೇಲಿನ 1 ಲಕ್ಷ ರೂಪಾಯಿ ಹೂಡಿಕೆ 21.38 ಲಕ್ಷಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 17, 2021 | 8:42 AM

Share

ಭಾರತೀಯ ಷೇರುಪೇಟೆ ಸೂಚ್ಯಂಕಗಳು ದಾಖಲೆಯ ಎತ್ತರಕ್ಕೆ ಏರುತ್ತಿರುವ ಮಧ್ಯೆ 2021ರಲ್ಲಿ ಉತ್ತಮ ಸಂಖ್ಯೆಯ ಷೇರುಗಳು ಮಲ್ಟಿಬ್ಯಾಗರ್ ಸ್ಟಾಕ್‌ಗಳ ಪಟ್ಟಿಯನ್ನು ಪ್ರವೇಶಿಸಿವೆ. ಮಲ್ಟಿಬ್ಯಾಗರ್ ಸ್ಟಾಕ್​ಗಳು ಅಂದರೆ ಶೇ 100ಕ್ಕಿಂತ ಹೆಚ್ಚು ರಿಟರ್ನ್ಸ್​ ನೀಡಿರುವಂಥದ್ದು. ಎಕ್ಸ್​ಪ್ರೋ (Xpro) ಇಂಡಿಯಾ ಷೇರುಗಳು ಅವುಗಳಲ್ಲಿ ಒಂದು. ಪಾಲಿಮರ್ ಸಂಸ್ಕರಣಾ ಕಂಪೆನಿಯ ಸ್ಟಾಕ್ ಪ್ರತಿ ಷೇರಿನ ಮಟ್ಟಕ್ಕೆ 33.75 ರೂಪಾಯಿಯಿಂದ 721.65 ರೂಪಾಯಿಗೆ ಈ ವರ್ಷದಿಂದ ಇಲ್ಲಿಯ ದಿನಾಂಕದವರೆಗೆ, ಅಂದರೆ 2021ರಲ್ಲಿ ಏರಿಕೆಯಾಗಿದೆ. ಈ ಅವಧಿಯಲ್ಲಿ ತನ್ನ ಷೇರುದಾರರಿಗೆ ಶೇ 2,000ಕ್ಕಿಂತ ಹೆಚ್ಚಿನ ಲಾಭವನ್ನು ನೀಡುತ್ತದೆ. ಆದರೂ ಷೇರು ಮಾರುಕಟ್ಟೆ ತಜ್ಞರು ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಇನ್ನೂ ಬುಲಿಶ್ ಆಗಿದ್ದಾರೆ. ಎಕ್ಸ್​ಪ್ರೋ ಇಂಡಿಯಾ ಷೇರಿನ ಬೆಲೆಯಲ್ಲಿ ಯಾವುದೇ ಕುಸಿತವನ್ನು ಖರೀದಿಸಲು ಅವಕಾಶವಾಗಿ ನೋಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಷೇರು ಮಾರುಕಟ್ಟೆ ತಜ್ಞರ ಪ್ರಕಾರ, ಎಕ್ಸ್​ಪ್ರೋ ಇಂಡಿಯಾ ಷೇರುಗಳಲ್ಲಿ ಪ್ರಾಫಿಟ್-ಬುಕಿಂಗ್ ನಿರೀಕ್ಷಿಸಲಾಗುತ್ತಿದೆ. ಆದರೆ ಪ್ರಾಫಿಟ್​-ಬುಕಿಂಗ್ ಮುಗಿದ ನಂತರ ಅದು ತೀಕ್ಷ್ಣವಾದ ‘ಮೇಲ್ಮುಖ ಪ್ರಯಾಣ’ ನೀಡಬಹುದು. ಮಲ್ಟಿಬ್ಯಾಗರ್ ಸ್ಟಾಕ್ ಪ್ರತಿ ಷೇರಿನ ಮಟ್ಟಕ್ಕೆ 650 ರೂಪಾಯಿಯಂತೆ ಬಲವಾದ ಬೆಂಬಲವನ್ನು ಹೊಂದಿರುವುದರಿಂದ ಹೂಡಿಕೆದಾರರಿಗೆ ‘ಇಳಿಕೆಯಲ್ಲಿ ಖರೀದಿ’ ತಂತ್ರವನ್ನು ಕಾಪಾಡಿಕೊಳ್ಳಲು ಅವರು ಸಲಹೆ ನೀಡಿದ್ದಾರೆ.

ಎಕ್ಸ್​ಪ್ರೋ ಇಂಡಿಯಾ ಷೇರು ಖರೀದಿ ಇತಿಹಾಸ ಈ ಮಲ್ಟಿಬ್ಯಾಗರ್ ಸ್ಟಾಕ್‌ನ ಷೇರು ಬೆಲೆ ಇತಿಹಾಸದ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ಸುಮಾರು ರೂ. 669 ರಿಂದ ರೂ. 721.65ಕ್ಕೆ ಏರಿತು. ಅದರ ಷೇರುದಾರರಿಗೆ ಸುಮಾರು ಶೇ 8ರಷ್ಟು ಲಾಭವನ್ನು ನೀಡುತ್ತಿದೆ. ಅದೇ ರೀತಿ ಕಳೆದ 6 ತಿಂಗಳಲ್ಲಿ ಎಕ್ಸ್​ಪ್ರೋ ಇಂಡಿಯಾ ಷೇರಿನ ಬೆಲೆಯು 118.70 ರೂಪಾಯಿಯಿಂದ 721.65 ರೂಪಾಯಿ ಮಟ್ಟಗಳಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಶೇ 500ಕ್ಕಿಂತ ಹೆಚ್ಚಿನ ಜಿಗಿತವನ್ನು ದಾಖಲಿಸಿದೆ. ಅದೇ ರೀತಿ, ವರ್ಷದಿಂದ ಇಲ್ಲಿಯವರೆಗೆ ಷೇರಿನ ಬೆಲೆಯು ರೂ. 33.75 ರಿಂದ ರೂ. 721.65 ಮಟ್ಟಕ್ಕೆ ಏರಿದ್ದು, ಈ ಸಮಯದಲ್ಲಿ 21.38 ಪಟ್ಟು ಏರಿಕೆಯಾಗಿದೆ.

ಹೂಡಿಕೆಯ ಮೇಲೆ ಪರಿಣಾಮ ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದರ 1 ಲಕ್ಷ ಇಂದು 1.08 ಲಕ್ಷಕ್ಕೆ ಬದಲಾಗುತ್ತಿತ್ತು. ಅದೇ ರೀತಿ, ಹೂಡಿಕೆದಾರರು 6 ತಿಂಗಳ ಹಿಂದೆ ಎಕ್ಸ್‌ಪ್ರೊ ಇಂಡಿಯಾ ಷೇರುಗಳಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ಮತ್ತು ಈ ಅವಧಿಯಲ್ಲಿ ಈ ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ ಅದರ 1 ಲಕ್ಷ ಇಂದು 6 ಲಕ್ಷ ಆಗುತ್ತಿತ್ತು. ಅಂತೆಯೇ ಹೂಡಿಕೆದಾರರು 2021ರ ಆರಂಭದಲ್ಲಿ ಈ ಸ್ಟಾಕ್‌ನಲ್ಲಿ 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ ಎಕ್ಸ್​ಪ್ರೋ ಇಂಡಿಯಾ ಷೇರುಗಳನ್ನು 33.75 ಪ್ರತಿ ಹಂತಗಳಲ್ಲಿ ಖರೀದಿಸಿದರೆ ಅದರ 1 ಲಕ್ಷ ಇಂದು 21.38 ಲಕ್ಷ ರೂಪಾಯಿ ಆಗಿ ಬದಲಾಗುತ್ತಿತ್ತು.

ಎಕ್ಸ್​ಪ್ರೋ ಇಂಡಿಯಾ ಷೇರು ಬೆಲೆ ಗುರಿ ಷೇರು ಮಾರ್ಕೆಟ್ ಹೂಡಿಕೆದಾರರಿಗೆ ‘ಇಳಿಕೆಯಲ್ಲಿದ್ದಾಗ ಖರೀದಿ’ ತಂತ್ರವನ್ನು ನಿರ್ವಹಿಸಲು ಸಲಹೆ ನೀಡುವ ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ, “ಷೇರು ರೂ. 780ಕ್ಕಿಂತ ಹೆಚ್ಚು ತಾಜಾ ಬ್ರೇಕ್​ಔಟ್ ನೀಡಬಹುದು. 650 ರೂಪಾಯಿಯಲ್ಲಿ ಬಲವಾದ ಬೆಂಬಲವನ್ನು ಹೊಂದಿದೆ. ಕೌಂಟರ್‌ನಲ್ಲಿ ಕೆಲವು ಪ್ರಾಫಿಟ್​-ಬುಕ್ಕಿಂಗ್ ಮಾಡಬಹುದಾದ ಕಾರಣ ಎಕ್ಸ್​ಪ್ರೋ ಇಂಡಿಯಾ ಷೇರುಗಳಲ್ಲಿ ಇಳಿಕೆ ತಂತ್ರದ ಮೇಲೆ ಖರೀದಿಯನ್ನು ನಿರ್ವಹಿಸಬೇಕು,” ಎನ್ನುತ್ತಾರೆ. ಇದನ್ನು ನಿರಾಕರಿಸಲು ಆಗುವುದಿಲ್ಲ. ಸ್ಥಾನಿಕ ಹೂಡಿಕೆದಾರರು ಸುಮಾರು 650 ಅಥವಾ 780 ರೂಪಾಯಿಗಿಂತ ಹೆಚ್ಚಿನ ಮೊತ್ತದಲ್ಲಿ ಖರೀದಿಸಬಹುದು.

ಎಚ್ಚರಿಕೆ: ಈ ಲೇಖನದಲ್ಲಿನ ಶಿಫಾರಸು, ಅಭಿಪ್ರಾಯಗಳು ಆಯಾ ಲೇಖಕರದೇ ಹೊರತು ಟಿವಿ9ಗೆ ಸಂಬಂಧವಿಲ್ಲ.

ಇದನ್ನೂ ಓದಿ: Multibagger 2021: 1.20 ಲಕ್ಷ ರೂಪಾಯಿ ಮೊತ್ತವು 5 ವರ್ಷದಲ್ಲಿ 62 ಲಕ್ಷ ರೂಪಾಯಿ ಆದ ಮಲ್ಟಿಬ್ಯಾಗರ್ ಇದು

Follow Us
TV9 Web
TV9 Web

TV9 Kannada

Read More
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ