AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್ 18 ಪ್ರೋ, ಮ್ಯಾಕ್ಸ್ ಫೋನ್​ಗಳು ಇಂದು ಬಿಡುಗಡೆ; ದೇಶಾದ್ಯಂತ ಆ್ಯಪಲ್ ಸ್ಟೋರ್​ಗಳಲ್ಲಿ ಫೋನ್​ಪ್ರಿಯರ ದಂಡು

ಆ್ಯಪಲ್‌ನ ಹೊಸ ಐಫೋನ್ 18 ಪ್ರೋ ಮತ್ತು ಪ್ರೋ ಮ್ಯಾಕ್ಸ್ ಮಾದರಿಗಳು ಸೆಪ್ಟೆಂಬರ್ 18ರಂದು ಭಾರತದಲ್ಲಿ ಬಿಡುಗಡೆಯಾಗಿವೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿರುವ ಆ್ಯಪಲ್ ಸ್ಟೋರ್‌ಗಳಲ್ಲಿ ಐಫೋನ್ ಪ್ರಿಯರು ಮುಗಿಬಿದ್ದು, ಹೊಸ ಫೋನ್‌ಗಳನ್ನು ಖರೀದಿಸಿದರು. ಸೆಪ್ಟೆಂಬರ್ 12ರಂದು ಆರಂಭವಾದ ಪ್ರೀ-ಆರ್ಡರ್‌ಗಳ ನಂತರ, ಗ್ರಾಹಕರು ಹಬ್ಬದ ವಾತಾವರಣದಲ್ಲಿ ತಮ್ಮ ಫೋನ್‌ಗಳನ್ನು ಪಡೆದರು. ಐಫೋನ್ 18 ಪ್ರೋ ಬೆಲೆ 1,64,900 ರೂ.ನಿಂದ ಆರಂಭ.

ಐಫೋನ್ 18 ಪ್ರೋ, ಮ್ಯಾಕ್ಸ್ ಫೋನ್​ಗಳು ಇಂದು ಬಿಡುಗಡೆ; ದೇಶಾದ್ಯಂತ ಆ್ಯಪಲ್ ಸ್ಟೋರ್​ಗಳಲ್ಲಿ ಫೋನ್​ಪ್ರಿಯರ ದಂಡು
ಬೆಂಗಳೂರಿನ ಫೀನಿಕ್ಸ್ ಮಾಲ್​ನಲ್ಲಿರುವ ಆ್ಯಪಲ್ ಸ್ಟೋರ್​ನಲ್ಲಿ ಐಫೋನ್ ಪಡೆಯಲು ಜನರ ದಂಡುImage Credit source: x @ANI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 18, 2026 | 12:16 PM

Share

ಬೆಂಗಳೂರು, ಸೆಪ್ಟೆಂಬರ್ 18: ಆ್ಯಪಲ್ ಕಂಪನಿಯ ಹೊಸ ಐಫೋನ್​ಗಳು ಭಾರತದಲ್ಲಿ ಬಿಡುಗಡೆ ಆಗಿವೆ. ಐಫೋನ್ 18 ಪ್ರೋ ಮತ್ತು ಐಫೋನ್ 18 ಪ್ರೋ ಮ್ಯಾಕ್ಸ್ ಫೋನ್​ಗಳು ಇಂದು ಸೆಪ್ಟೆಂಬರ್ 18ರಿಂದ ಗ್ರಾಹಕರ ಕೈ ಸೇರತೊಡಗಿವೆ. ದೆಹಲಿ, ಬೆಂಗಳೂರು, ಮುಂಬೈ, ಪುಣೆ ಮತ್ತು ನೊಯ್ಡಾದಲ್ಲಿರುವ ಆ್ಯಪಲ್ ಸ್ಟೋರ್​ಗಳ ಬಳಿ ಐಫೋನ್ ಪ್ರಿಯರ ದಂಡೇ ನೆರೆದಿತ್ತು. ರೀಟೇಲ್ ಸ್ಟೋರ್​ಗಳಲ್ಲಿ ಹಬ್ಬದ ರೀತಿಯ ವಾತಾವರಣವೇ ಕಂಡು ಬಂದಿತ್ತು.

ಸೆಪ್ಟೆಂಬರ್ 12ರಂದು ಹೊಸ ಐಫೋನ್​ಗಳಿಗೆ ಪ್ರೀ ಆರ್ಡರ್ ಬುಕಿಂಗ್ ಆರಂಭವಾಗಿತ್ತು. ಬುಕಿಂಗ್ ಮಾಡಿದವರಿಗೆ ಇಂದು ಫೋನ್ ಪಡೆಯುವ ಸುಗ್ಗಿ, ಸಂಭ್ರಮ. ಬೆಂಗಳೂರಿನ ಫೀನಿಕ್ಸ್ ಮಾಲ್​ನಲ್ಲಿರುವ ಆ್ಯಪಲ್ ಸ್ಟೋರ್​ನ ಸಿಬ್ಬಂದಿ ಇವತ್ತು ಗ್ರಾಹಕರನ್ನು ಕರತಾಡನ ಮತ್ತು ಹರ್ಷೋದ್ಗಾರಗಳ ಮೂಲಕ ಬರಮಾಡಿಕೊಂಡಿದ್ದು ರಂಜನೀಯ ಎನಿಸಿತು. ಗ್ರಾಹಕರೂ ಕೂಡ ಬೆಳ್ಳಂಬೆಳಗ್ಗೆಯೇ ಸರದಿಯಲ್ಲಿ ನಿಂತು ಫೋನ್ ಪಡೆಯುವ ಕಾತರತೆಯಲ್ಲಿ ಇದ್ದದ್ದು ಕಂಡು ಬಂದಿತು. ಈ ಫೀನಿಕ್ಸ್ ಮಾಲ್, ಬೆಂಗಳೂರಿನ ಹೆಬ್ಬಾಳದಲ್ಲಿದೆ.

ಫೀನಿಕ್ಸ್ ಮಾಲ್​ನಲ್ಲಿರುವ ಆ್ಯಪಲ್ ಸ್ಟೋರ್​ನಲ್ಲಿ ಕಂಡ ದೃಶ್ಯ

ಇದನ್ನೂ ಓದಿ: iPhone Offer: ಐಫೋನ್ 18 ರಿಲೀಸ್ ಬೆನ್ನಲ್ಲೇ ಐಫೋನ್ 17 ಪ್ರೊ, ಪ್ರೊ ಮ್ಯಾಕ್ಸ್ ಬೆಲೆಯಲ್ಲಿ ಭಾರಿ ಇಳಿಕೆ

ದೆಹಲಿ, ಮುಂಬೈ, ಪುಣೆ ಮತ್ತು ನೋಯಿಡಾದಲ್ಲಿರುವ ಆ್ಯಪಲ್ ರೀಟೇಲ್ ಸ್ಟೋರ್​ಗಳಲ್ಲೂ ಇದೇ ರೀತಿಯ ವಾತಾವರಣ ಕಂಡುಬಂದಿದೆ. ಸ್ಟೋರ್ ಇರುವ ಮಾಲ್​ಗಳಲ್ಲಿ ಗ್ರಾಹಕರು ಬೆಳಕು ಮೂಡುವ ಮುನ್ನವೇ ಜಮಾಯಿಸಿ, ಕಾದು ಕೂತಿದ್ದರು.

ಹೊಸ ಐಫೋನ್ ಖರೀದಿಸಿದ ಗ್ರಾಹಕನ ಸಂತಸದ ಮಾತು

ಐಫೋನ್ 18 ಪ್ರೋ ಮತ್ತು ಪ್ರೋ ಮ್ಯಾಕ್ಸ್ ಫೋನ್​ಗಳು ಆ್ಯಪಲ್ ಸ್ಟೋರ್​ಗಳಲ್ಲಿ ಮಾತ್ರವಲ್ಲ, ರಿಲಯನ್ಸ್ ಡಿಜಿಟಲ್ ಇತ್ಯಾದಿ ಪ್ರಮುಖ ಮಳಿಗೆಗಳಲ್ಲೆಡೆ ಮಾರಾಟಕ್ಕೆ ಲಭ್ಯ ಇದೆ. ಇಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲೂ ಸಿಗುತ್ತವೆ.

ಐಫೋನ್ ಕ್ರೇಜ್

ಐಫೋನ್ 18 ಫೋನ್​ಗಳ ಬೆಲೆ ವಿವರ

ಐಫೋನ್ 18 ಪ್ರೋ ಸ್ಮಾರ್ಟ್​ಫೋನ್​ನ ಬೆಲೆ 1,64,900 ರೂನಿಂದ ಆರಂಭವಾಗುತ್ತದೆ. ಇದರಲ್ಲಿ 256ಜಿಬಿ ಸ್ಟೋರೇಜ್ ಸೌಲಭ್ಯ ಇರುತ್ತದೆ.

512 ಜಿಬಿ, 1 ಟಿಬಿ ಮತ್ತು 2 ಟಿಬಿ ಸ್ಟೋರೇಜ್ ಸಾಮರ್ಥ್ಯ ಇರುವ ಐಫೋನ್ 18 ಪ್ರೋ ಫೋನ್​ಗಳ ಬೆಲೆ ಇನ್ನೂ ಹೆಚ್ಚಿದೆ. 2 ಟಿಬಿ ಸಾಮರ್ಥ್ಯದ್ದರ ಬೆಲೆ 3.15 ಲಕ್ಷ ರೂ ಆಗುತ್ತದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಕ್ರಾಂತಿ; 2GB-3GB RAM ಫೋನ್‌ಗಳು ಮತ್ತೆ ಬರಲಿವೆ

ಐಫೋನ್ 18 ಪ್ರೋ ಮ್ಯಾಕ್ಸ್ ಫೋನ್ ಬೆಲೆ 1,79,900 ರೂನಿಂದ ಆರಂಭವಾಗಿ 3,29,900 ರೂವರೆಗೆ ಅದರ ವೇರಿಯೆಂಟ್​ಗಳ ಬೆಲೆ ಇದೆ.

ಈಗ ಹೊಸ ಐಫೋನ್ ಬಿಡುಗಡೆಯಾದ ಮೇಲೆ ಹಿಂದಿನ ಆವೃತ್ತಿಯ ಐಫೋನ್ 17 ಇತ್ಯಾದಿ ಫೋನ್​ಗಳು ಡಿಸ್ಕೌಂಟ್​ನಲ್ಲಿ ಸೇಲ್ ಆಗುತ್ತಿವೆ. ಹಳೆಯ ಐಫೋನ್ ಇದ್ದರೆ ಎಕ್ಸ್​ಚೇಂಜ್ ಆಫರ್ ಬಳಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:55 am, Fri, 18 September 26

Follow Us
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ