AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suicide Insurance: ಇನ್ಷೂರೆನ್ಸ್ ಮಾಡಿಸಿದವರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗಬಹುದು; ಈ ಬಗ್ಗೆ ನಿಯಮಗಳು ತಿಳಿದಿರಲಿ

Insurance Coverage For Suicide: ಆತ್ಮಹತ್ಯೆ ಮಾಡಿಕೊಂಡರೆ ಇನ್ಷೂರೆನ್ಸ್ ಹಣ ಸಿಕ್ಕೋದಿಲ್ಲ ಎಂದೇ ಹಲವರು ಭಾವಿಸಿದ್ದಾರೆ. ಆದರೆ ಇದು ಅರ್ಧಸತ್ಯ ಮಾತ್ರ. ಎಲ್ಲಾ ಇನ್ಷೂರೆನ್ಸ್ ಪಾಲಿಸಿಯಲ್ಲದಿದ್ದರೂ ಕೆಲ ಪಾಲಿಸಿಗಳಲ್ಲಿ ಆತ್ಮಹತ್ಯೆಯಿಂದಾದ ಸಾವನ್ನೂ ಕವರ್ ಮಾಡಲಾಗುತ್ತದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Suicide Insurance: ಇನ್ಷೂರೆನ್ಸ್ ಮಾಡಿಸಿದವರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗಬಹುದು; ಈ ಬಗ್ಗೆ ನಿಯಮಗಳು ತಿಳಿದಿರಲಿ
ಆತ್ಮಹತ್ಯೆ ಆಲೋಚನೆ
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Oct 07, 2026 | 7:49 PM

Share

ಮುಖ್ಯಾಂಶಗಳು

  • ಆತ್ಮಹತ್ಯೆ ಮಾಡಿಕೊಂಡರೆ ಇನ್ಷೂರೆನ್ಸ್ ಹಣ ಸಿಕ್ಕೋದಿಲ್ಲ ಎಂಬುದು ಅರ್ಧಸತ್ಯ ಮಾತ್ರ. ಕೆಲ ಪಾಲಿಸಿಗಳಲ್ಲಿ ಆತ್ಮಹತ್ಯೆಯಿಂದಾದ ಸಾವನ್ನೂ ಕವರ್ ಮಾಡಲಾಗುತ್ತದೆ.
  • ಬಹುತೇಕ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಸೂಸೈಡ್ ಎಕ್ಸ್​ಕ್ಲೂಷನ್ clause ಇರುತ್ತದೆ. ನಿರ್ದಿಷ್ಟ ಅವಧಿಯ ಬಳಿಕ ಸಂಭವಿಸುವ ಆತ್ಮಹತ್ಯೆಗೆ ವಿಮಾ ಪರಿಹಾರ ಕೊಡುವ ಅವಕಾಶ ಇರುತ್ತದೆ.
  • ಇನ್ಷೂರೆನ್ಸ್ ಪಾಲಿಸಿ ಪಡೆಯುವ ಮುನ್ನ ಎಲ್ಲಾ ನಿಯಮಾವಳಿಗಳನ್ನು ಕೂಲಂಕಷವಾಗಿ ಓದಿರಿ. ಕೆಲ ಪಾಲಿಸಿಗಳಲ್ಲಿ ಆತ್ಮಹತ್ಯೆ ಕವರೇಜ್ ಇರುವುದಿಲ್ಲ. ಅಥವಾ ಷರುತ್ತುಗಳ ಮೇರೆಗೆ ಕವರೇಜ್ ಇರುತ್ತದೆ.

ಇವತ್ತಿನ ಅನಿಶ್ಚಿತ ಕಾಲಘಟ್ಟದಲ್ಲಿ ಯಾರಿಗೆ ಏನು ಬೇಕಾದರೂ ಆಗಬಹುದು. ರಸ್ತೆಯಲ್ಲಿ ನಡೆದು ಹೋಗುವಾಗ ಅಪಘಾತವಾಗಿ ಸಾವು ಎರಗಬಹುದು. ನಿಂತಲ್ಲೇ ಆರೋಗ್ಯ ಕೈಕೊಟ್ಟು ಕುಸಿದು ಸಾವನ್ನಪ್ಪಬಹುದು. ಹೇಗೆ ಬೇಕಾದರೂ ಜವರಾಯನ (Death) ಆಗಮನವಾಗಬಹುದು. ಹೀಗಾಗಿ, ಜೀವ ವಿಮೆ, ಅಪಘಾತ ವಿಮೆಗಳನ್ನು ಮಾಡಿಸುವುದು ಇಂದಿನ ಬಹಳ ಅಗತ್ಯ. ಕೆಲ ಕಠಿಣ ಸಮಯ ಸಂದರ್ಭಗಳು ಆತ್ಮಹತ್ಯೆಗೂ ದಾರಿ ಮಾಡಿಕೊಡಬಹುದು. ಆತ್ಮಹತ್ಯೆಯಾದರೆ ಇನ್ಷೂರೆನ್ಸ್ ಹಣ ಕ್ಲೈಮ್ (Insurance claim) ಮಾಡಬಹುದೇ ಎಂಬ ಪ್ರಶ್ನೆ ಬಹಳ ಕಾಲದಿಂದ ಇದೆ. ಈ ವಿಚಾರದಲ್ಲಿ ಬಹಳ ಮಂದಿಗೆ ಇನ್ನೂ ಗೊಂದಲ ಇದೆ. ವಾಸ್ತವವಾಗಿ ಇದು ಸಂಕೀರ್ಣ ಸಂಗತಿ ಎಂಬುದು ಹೌದು. ಆತ್ಮಹತ್ಯೆ ಮಾಡಿಕೊಂಡರೆ ಇನ್ಷೂರೆನ್ಸ್ ಹಣ ಸಿಕ್ಕೋದಿಲ್ಲ ಎಂದೇ ಹಲವರು ಭಾವಿಸಿದ್ದಾರೆ. ಇದು ಅರ್ಧಸತ್ಯ ಮಾತ್ರ. ಎಲ್ಲಾ ಇನ್ಷೂರೆನ್ಸ್ ಪಾಲಿಸಿಯಲ್ಲದಿದ್ದರೂ ಕೆಲ ಪಾಲಿಸಿಗಳಲ್ಲಿ ಆತ್ಮಹತ್ಯೆಯಿಂದಾದ ಸಾವನ್ನೂ (Suicidal Death) ಕವರ್ ಮಾಡಲಾಗುತ್ತದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಹೆಚ್ಚಿನ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಆತ್ಮಹತ್ಯೆ ಕವರೇಜ್ ಇರುತ್ತದೆ

ಭಾರತದಲ್ಲಿರುವ ಹೆಚ್ಚಿನ ಲೈಫ್ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಆತ್ಮಹತ್ಯೆಗೆ ಹಣ ಕ್ಲೈಮ್ ಮಾಡುವ ಸೌಲಭ್ಯ ಇರುತ್ತದೆ. ಆದರೆ, ಮೊದಲೇ ಆತ್ಮಹತ್ಯೆಯ ಯೋಚನೆಯಲ್ಲಿದ್ದು ಪರಿಹಾರ ಸಿಗಲಿ ಎಂದು ಇನ್ಷೂರೆನ್ಸ್ ಮಾಡಿಸಿ ಆ ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಯಂತ್ರಿಸಲು ವಿಮಾ ಕಂಪನಿಗಳು ಕೆಲ ನಿಯಮಗಳನ್ನು ಸೇರಿಸುತ್ತವೆ. ಅದೇ ಸೂಸೈಡ್ ಎಕ್ಸ್​ಕ್ಲೂಷನ್ ಕ್ಲಾಸ್ (Suicide Exclusion Clause). ಅಂದರೆ, ನಿರ್ದಿಷ್ಟ ಅವಧಿಯೊಳಗೆ ಆತ್ಮಹತ್ಯೆಯಾದರೆ ಅದಕ್ಕೆ ಇನ್ಷೂರೆನ್ಸ್ ಕಂಪನಿಯಿಂದ ಪರಿಹಾರ ಸಿಗುವುದಿಲ್ಲ. ಈ ಅವಧಿ ಸಾಮಾನ್ಯವಾಗಿ ಎರಡು ವರ್ಷ ಇರುತ್ತದೆ. ಈ ಅವಧಿ ಬಳಿಕ ಅಚಾನಕ್ಕಾಗಿ ಪಾಲಿಸಿದಾರ ಆತ್ಮಹತ್ಯೆ ಮಾಡಿಕೊಂಡರೆ, ಅವರ ವಾರಸುದಾರರು ಇನ್ಷೂರೆನ್ಸ್ ಹಣ ಕ್ಲೈಮ್ ಮಾಡಲು ಅವಕಾಶ ಇರುತ್ತದೆ.

ಯಾವುದೇ ಇನ್ಷೂರೆನ್ಸ್ ಪಾಲಿಸಿ ತೆಗೆದುಕೊಳ್ಳುವ ಮುನ್ನ ನಿಯಮಗಳನ್ನು ತಪ್ಪದೇ ಓದಿ

ಆತ್ಮಹತ್ಯೆ ಮಹಾಪಾಪ. ಕಾನೂನಿನ ದೃಷ್ಟಿಯಲ್ಲಿ ಅಪರಾಧ. ಪೂರ್ವದಲ್ಲೇ ಆತ್ಮಹತ್ಯೆ ಯೋಚನೆ ಮಾಡಿ ಆ ಬಳಿಕ ಇನ್ಷೂರೆನ್ಸ್ ಪಾಲಿಸಿ ಪಡೆಯುವುದು ತಪ್ಪು. ಅಂಥ ಆಲೋಚನೆ ಇದ್ದರೆ ದಯವಿಟ್ಟು ಮನಸ್ಸು ಶುದ್ಧ ಮಾಡಿಕೊಂಡು ಸಂಕಷ್ಟ ಎದುರಿಸುವ ಗಟ್ಟಿತನ ಬೆಳೆಸಿಕೊಳ್ಳಿ. ಆದಾಗ್ಯೂ ಕೆಲ ಸಂದರ್ಭಗಳು ಗಟ್ಟಿ ಮನಸುಗಳನ್ನೂ ಆತ್ಮಹತ್ಯೆ ಆಲೋಚನೆಗೆ ನೂಕಿಬಿಡುತ್ತವೆ. ಅವರನ್ನು ನಂಬಿಕೊಂಡ ಕುಟುಂಬ ಸದಸ್ಯರಿಗೆ ಸಂಕಷ್ಟ ಆಗುತ್ತದೆ. ಹೀಗಾಗಿ, ಇಂಥ ಅನಿರೀಕ್ಷಿತ ಸಂದರ್ಭ ಎದುರಿಸಲು ವಿಮಾ ಪಾಲಿಸಿ ಅಗತ್ಯ ಹೌದು.

ವಿಮಾ ಪಾಲಿಸಿ ಪಡೆಯುವ ಮುನ್ನ ಅದರಲ್ಲಿರುವ ಎಲ್ಲಾ ನಿಯಮಗಳನ್ನು ತಪ್ಪದೇ ಓದಿ. ಕೆಲ ಪಾಲಿಸಿಗಳಲ್ಲಿ ಆತ್ಮಹತ್ಯೆಯಾದರೆ ಪರಿಹಾರ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಬರೆದಿರುತ್ತದೆ. ಇನ್ನೂ ಕೆಲ ಪಾಲಿಸಿಗಳು ನಿರ್ದಿಷ್ಟ ಅವಧಿಯವರೆಗೆ ಆತ್ಮಹತ್ಯೆಯನ್ನು ಕವರೇಜ್​ನಿಂದ ಹೊರಗಿಡುತ್ತವೆ. ಹೀಗಾಗಿ ನಿಯಮಗಳನ್ನು ಸೂಕ್ಷ್ಮವಾಗಿ ಓದಿ ಅವಲೋಕಿಸಿ.

ಆತ್ಮಹತ್ಯೆ ಕವರೇಜ್ ಇದ್ದರೂ ಪರಿಹಾರ ಕೊಡುವುದು ಇನ್ಷೂರೆನ್ಸ್ ಕಂಪನಿಯ ಪರಾಮರ್ಶೆಗೆ ಬಿಟ್ಟಿದ್ದು

ಒಂದು ವೇಳೆ ಇನ್ಷೂರೆನ್ಸ್ ಪಾಲಿಸಿಯಲ್ಲಿದ್ದಂತೆ ನಿರ್ದಿಷ್ಟ ಅವಧಿ ಬಳಿಕ ಪಾಲಿಸಿದಾರ ಆತ್ಮಹತ್ಯೆ ಮಾಡಿಕೊಂಡಿದ್ದರೆ ವಾರಸುದಾರರಿಗೆ ಪೂರ್ಣ ಪರಿಹಾರ ಹಣ ಸಿಗುತ್ತೆ ಎಂದು ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ. ಆತ್ಮಹತ್ಯೆ ಎಂಥ ಪರಿಸ್ಥಿತಿಯಲ್ಲಿ ಆಯಿತು ಎಂಬುದನ್ನು ಇನ್ಷೂರೆನ್ಸ್ ಕಂಪನಿ ಪರಾಮರ್ಶಿಸಬಹುದು. ಆತ್ಮಹತ್ಯೆ ಮಾಡಿಕೊಂಡ ಪಾಲಿಸಿದಾರ ಮದ್ಯವ್ಯಸನಿಯೋ, ಡ್ರಗ್ ಅಡಿಕ್ಟ್ ಆಗಿದ್ದರೆ, ಆತನ ಮಾನಸಿಕ ಸ್ಥಿತಿ ತಹಬದಿಯಲ್ಲಿರಲಿಲ್ಲ ಎಂದು ಇನ್ಷೂರೆನ್ಸ್ ಕಂಪನಿ ವಾದಿಸಿ, ಪರಿಹಾರ ಕೊಡಲು ನಿರಾಕರಿಸಬಹುದು.

ಅಥವಾ ಕಳ್ಳತನ, ದರೋಡೆ ಇತ್ಯಾದಿ ಪಾತಕ ಕೃತ್ಯಗಳನ್ನು ಎಸಗಿ, ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಆಗಲೂ ಇನ್ಷೂರೆನ್ಸ್ ಕಂಪನಿ ಪರಿಹಾರ ಕೊಡಲು ಹಿಂದೇಟು ಹಾಕಬಹುದು.

ಆದರೆ, ಯಾವುದೇ ಸಂದರ್ಭದಲ್ಲಿ ಆತ್ಮಹತ್ಯೆಯಾದರೆ ಆ ವ್ಯಕ್ತಿ ಆವರೆಗೂ ಕಟ್ಟಿರುವ ಇನ್ಷೂರೆನ್ಸ್ ಹಣ ಪಾಲಿಸಿಯ ನಾಮಿನಿಯ ಕೈಸೇರುವುದು ಖಚಿತ. ಪೂರ್ಣ ವಿಮಾ ಹಣ ಕೊಡುವುದು ಬಿಡುವುದು ಆತ್ಮಹತ್ಯೆಯ ಸಂದರ್ಭ, ಕಾರಣ ಇತ್ಯಾದಿ ಮೇಲೆ ಅವಲಂಬಿತವಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Mon, 10 April 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ