AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IT Refund: ಹೊಸ ತೆರಿಗೆ ಪೋರ್ಟಲ್​ನಲ್ಲಿ ಇನ್​ಕಮ್ ಟ್ಯಾಕ್ಸ್ ರೀಫಂಡ್ ಸ್ಥಿತಿ ಪರಿಶೀಲಿಸುವುದು ಹೇಗೆ?

ಆದಾಯ ತೆರಿಗೆ ರೀಫಂಡ್ ಸಲ್ಲಿಕೆ ಮಾಡಬೇಕಿದೆಯಾ? ಇಲ್ಲಿದೆ ಹಂತಹಂತವಾದ ವಿವರಣೆ. ಕಟ್ಟಬೇಕಾದದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ತೆರಿಗೆ ಕಟ್ಟಿದ್ದು ಹೌದಾದಲ್ಲಿ ರೀಫಂಡ್ ಕ್ಲೇಮ್ ಮಾಡಬೇಕಾಗುತ್ತದೆ.

IT Refund: ಹೊಸ ತೆರಿಗೆ ಪೋರ್ಟಲ್​ನಲ್ಲಿ ಇನ್​ಕಮ್ ಟ್ಯಾಕ್ಸ್ ರೀಫಂಡ್ ಸ್ಥಿತಿ ಪರಿಶೀಲಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 11, 2022 | 6:02 PM

Share

ಯಾರು ತಮ್ಮ ಆದಾಯದ ಮೇಲೆ ಕಟ್ಟಬೇಕಾದ ವಾಸ್ತವ ತೆರಿಗೆಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿದ್ದಲ್ಲಿ ಆದಾಯ ತೆರಿಗೆ ಮರುಪಾವತಿ (Refund) ಕ್ಲೇಮ್ ಮಾಡುವುದಕ್ಕೆ ಅರ್ಹರಿರುತ್ತಾರೆ. ಟಿಡಿಎಸ್​ ಹೆಚ್ಚಿನ ಮೊತ್ತವನ್ನು ಉದ್ಯೋಗದಾತರು ಕಡಿತಗೊಳಿಸಿದ್ದಲ್ಲಿ ಅಥವಾ ಠೇವಣಿ ಮಾಡಿದ ಮೊತ್ತದ ಮೇಲಿನ ಬಡ್ಡಿ ಆದಾಯಕ್ಕೆ ಹೆಚ್ಚಿನ ಟಿಡಿಎಸ್ ಕಡಿತ ಮಾಡಿದ್ದಲ್ಲಿ, ಹೆಚ್ಚಿನ ಮುಂಗಡ ತೆರಿಗೆ ಪಾವತಿ ಮುಂತಾದವನ್ನು ಮಾಡಿದ್ದಲ್ಲಿ ಈ ಆದಾಯ ತೆರಿಗೆ ರಿಟರ್ನ್ಸ್ ಅಥವಾ ಐಟಿಆರ್ ರೀಫಂಡ್​ ಅನ್ನು ಕ್ಲೇಮ್ ಮಾಡಬಹುದು.

ವ್ಯಕ್ತಿಯು ಆದಾಯ ತೆರಿಗೆ ಮರುಪಾವತಿಗೆ ಹೇಗೆ ಅರ್ಹರಾಗುತ್ತಾರೆ ಎಂಬುದರ ಕುರಿತು ಮಾತನಾಡಿರುವ ಸೆಬಿ ನೋಂದಾಯಿತ ತೆರಿಗೆ ಮತ್ತು ಹೂಡಿಕೆ ತಜ್ಞರು, “ಆದಾಯ ತೆರಿಗೆ ಮರುಪಾವತಿಯನ್ನು ಭರ್ತಿ ಮಾಡುವ ಮತ್ತು ಕ್ಲೇಮ್ ಮಾಡುವ ಯಾವುದೇ ಐಟಿಆರ್ ಫಾರ್ಮ್ ಇಲ್ಲ. ಆದಾಯ ತೆರಿಗೆ ಪಾವತಿದಾರರು ಐಟಿಆರ್ ಅನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು ಮತ್ತು ಒಬ್ಬರ ಐಟಿಆರ್ ಮರುಪಾವತಿಗೆ ಸಂಪೂರ್ಣ ಬಡ್ಡಿಯನ್ನು ಪಡೆಯಬೇಕು. ಆದಾಯ ತೆರಿಗೆ ಇಲಾಖೆಯು ಮೌಲ್ಯಮಾಪನ ವರ್ಷಕ್ಕೆ ತನ್ನ ಆದಾಯವನ್ನು ಪರಿಶೀಲಿಸುತ್ತದೆ ಮತ್ತು ಯಾವುದೇ ಹೆಚ್ಚುವರಿ ಟಿಡಿಎಸ್ ಕಡಿತ ಅಥವಾ ಹೆಚ್ಚಿನ ಮುಂಗಡ ತೆರಿಗೆ ಪಾವತಿಯನ್ನು ಕಂಡರೆ, ಅದು ಐಟಿಆರ್ ಮರುಪಾವತಿಯ ಮೂಲಕ ತೆರಿಗೆದಾರರ ಹೆಚ್ಚುವರಿ ಪಾವತಿಯನ್ನು ತಾನಾಗಿಯೇ ಮರುಪಾವತಿ ಮಾಡುತ್ತದೆ. ವಾರ್ಷಿಕ ಆದಾಯ ರು. 2.5 ಲಕ್ಷಕ್ಕಿಂತ ಕಡಿಮೆ ಇರುವಾಗಲೂ ಆದಾಯ ಗಳಿಸುವ ವ್ಯಕ್ತಿ ನೀಡಿದ ನಿಗದಿತ ದಿನಾಂಕದೊಳಗೆ ಐಟಿಆರ್ ಸಲ್ಲಿಸುವುದು ಮತ್ತು ಮರುಪಾವತಿ ಪಡೆಯುವುದು ಮುಖ್ಯವಾಗಿದೆ.” ಎಂದು ಹೇಳಿದ್ದಾರೆ.

ಆದ್ದರಿಂದ, ಐಟಿಆರ್ ಸಲ್ಲಿಸಿದ ನಂತರ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಲಾಗ್ ಇನ್ ಮಾಡುವ ಮೂಲಕ ಐಟಿಆರ್ ಮರುಪಾವತಿಯನ್ನು ಪರಿಶೀಲಿಸುತ್ತಿರಬೇಕು. ಈಗ ಹೊಸ ಆದಾಯ ತೆರಿಗೆ ಪೋರ್ಟಲ್ ಪ್ರಾರಂಭವಾದ ನಂತರ, ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ – incometax.gov.in/iec/foportalನಲ್ಲಿ ಲಾಗಿನ್ ಮಾಡಬಹುದು ಮತ್ತು ಆದಾಯ ತೆರಿಗೆ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸಬಹುದು.

ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಐಟಿಆರ್ ಮರುಪಾವತಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?

ಈ ಮೇಲೆ ತಿಳಿಸಿದಂತೆ ಆದಾಯ ತೆರಿಗೆ ಪಾವತಿದಾರರು ಹೊಸ ಆದಾಯದ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗಿನ್ ಮಾಡಬೇಕಾಗುತ್ತದೆ ಮತ್ತು ಹಂತ ಹಂತವಾಗಿ ಕೆಳಗೆ ತಿಳಿಸಲಾದ ವಿಧಾನವವನ್ನು ಅನುಸರಿಸಿ:

1] ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗಿನ್ ಮಾಡಿ – incometax.gov.in/iec/foportal;

2] ನಿಮ್ಮ ಐಡಿ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಬಳಸಿ ಲಾಗಿನ್ ಮಾಡಿ;

3] “view ರಿಟರ್ನ್ಸ್ / ಫಾರ್ಮ್‌ಗಳನ್ನು” ಆಯ್ಕೆ ಮಾಡಿ.

4] ಆ ನಂತರ ಡ್ರಾಪ್ ಡೌನ್ ಮೆನುವಿನಿಂದ ‘ಆದಾಯ ತೆರಿಗೆ ರಿಟರ್ನ್ಸ್’ ಆಯ್ಕೆ ಮಾಡಿ;

5] ಸಂಬಂಧಿತ ಆದಾಯ ತೆರಿಗೆ ಅಸೆಸ್​ಮೆಂಟ್​ ವರ್ಷವನ್ನು ನಮೂದಿಸಿ;

6] ‘ಸಲ್ಲಿಸು’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ; ಮತ್ತು

7] ಡ್ರಾಪ್ ಡೌನ್ ಮೆನುವಿನಿಂದ ಸ್ವೀಕೃತಿ ಸಂಖ್ಯೆಯನ್ನು ಆಯ್ಕೆ ಮಾಡಿ.

ಇದನ್ನೂ ಓದಿ: Real Estate New TDS Rules: ಆಸ್ತಿ ವಹಿವಾಟುಗಳಿಗೆ ಹೊಸ ಟಿಡಿಎಸ್ ನಿಯಮ: ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು

Follow Us
TV9 Web
TV9 Web

TV9 Kannada

Read More
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!