AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar: ಆಧಾರ್ ಕಾರ್ಡ್ ಆನ್​ಲೈನ್​ನಲ್ಲಿ ಪಡೆಯುವುದು ಹೇಗೆ? ಪಿವಿಸಿ ಕಾರ್ಡ್ ಆರ್ಡರ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Know How To Download Aadhaar Card Online: ಆಧಾರ್ ಕಾರ್ಡ್ ಕಳೆದುಹೋದರೆ ಚಿಂತೆ ಪಡಬೇಕಿಲ್ಲ. ಆನ್​ಲೈನ್​ನಲ್ಲಿ ಆಧಾರ್ ಕಾರ್ಡ್ ಅನ್ನು ಡೌನ್​ಲೋಡ್ ಮಾಡಿ ಪ್ರಿಂಟೌಟ್ ಪಡೆಯಬಹುದು. ಯುಐಡಿಎಐನ ಮೈ ಆಧಾರ್ ಪೋರ್ಟಲ್​ಗೆ ಹೋಗಿ ಲಾಗಿನ್ ಆದರೆ ಆಧಾರ್ ಡೌನ್​ಲೋಡ್ ಮಾಡಬಹುದು. ಯುಐಡಿಎಐ ವೆಬ್​ಸೈಟ್ ಅಥವಾ ಎಂ ಆಧಾರ್ ಆ್ಯಪ್​ನಲ್ಲಿ ಆಧಾರ್ ಪಿವಿಸಿ ಕಾರ್ಡ್​ಗೆ ಆರ್ಡರ್ ಮಾಡಬಹುದು. ಆರೇಳು ದಿನದೊಳಗೆ ಪಿವಿಸಿ ಕಾರ್ಡ್ ಮನೆಗೆ ಬರುತ್ತದೆ.

Aadhaar: ಆಧಾರ್ ಕಾರ್ಡ್ ಆನ್​ಲೈನ್​ನಲ್ಲಿ ಪಡೆಯುವುದು ಹೇಗೆ? ಪಿವಿಸಿ ಕಾರ್ಡ್ ಆರ್ಡರ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಆಧಾರ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2024 | 11:34 AM

Share

ಆಧಾರ್ ಕಾರ್ಡ್ ಇವತ್ತು ಬಹಳ ಅಗತ್ಯ ಇರುವ ದಾಖಲೆ ಎನಿಸಿದೆ. ವ್ಯಕ್ತಿ ಗುರುತು ಸಾಕ್ಷ್ಯ (ID proof) ಮತ್ತು ವಿಳಾಸ ಸಾಕ್ಷ್ಯಕ್ಕೆ (Address proof) ಆಧಾರ್ ಬಳಕೆ ಆಗುತ್ತದೆ. ಅಂತೆಯೇ, ಯಾವುದೇ ಯೋಜನೆಯಲ್ಲಿ ಕೆವೈಸಿಗೆ ಆಧಾರ್ ಮೂಲ ದಾಖಲೆಯಾಗಿರುತ್ತದೆ. ಯುಐಡಿಎಐನಿಂದ ನೀಡಲಾಗುವ ಆಧಾರ್ ಕಾರ್ಡ್​ನ (Aadhaar card) ಡಾಟಾಬೇಸ್​ನಲ್ಲಿ ವ್ಯಕ್ತಿಯ ಬೆರಳಚ್ಚು, ಕಣ್ಪೊರೆ (Iris of eyes) ಇತ್ಯಾದಿ ಬಯೋಮೆಟ್ರಿಕ್ ಮಾಹಿತಿ ಇರುತ್ತದೆ. ಜೊತೆಗೆ, ವ್ಯಕ್ತಿಯ ಹೆಸರು, ವಯಸ್ಸು, ವಿಳಾಸ ಇತ್ಯಾದಿ ಭೌಗೋಳಿಕ ಮಾಹಿತಿ ಇರುತ್ತದೆ. ಬಹಳಷ್ಟು ಕಾರ್ಯಗಳಿಗೆ ಅಗತ್ಯ ಇರುವ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡರೆ ಆನ್​ಲೈನ್​ನಲ್ಲಿ ಅದರ ಪ್ರತಿಯನ್ನು ಪಡೆಯಬಹುದಾಗಿದೆ. ಈ ಬಗ್ಗೆ ವಿವರ ಇಲ್ಲಿದೆ..

ಆನ್​ಲೈನ್​ನಲ್ಲಿ ಆಧಾರ್ ಕಾರ್ಡ್ ಅನ್ನು ಡೌನ್​ಲೋಡ್ ಮಾಡುವುದು ಹೇಗೆ?

  • ಆಧಾರ್ ಜೊತೆ ನಿಮ್ಮ ಮೊಬೈಲ್ ನಂಬರ್ ಜೋಡಣೆ ಆಗಿದ್ದರೆ ಆನ್​ಲೈನ್​ನಲ್ಲಿ ಡೂಪ್ಲಿಕೇಟ್ ಆಧಾರ್ ಪಡೆಯಬಹುದು. ಅದಕ್ಕೆ ಹೀಗೆ ಮಾಡಿ…
  • ಯುಐಡಿಎಐನ ಮೈ ಆಧಾರ್ ಪೋರ್ಟಲ್​ಗೆ ಭೇಟಿ ನೀಡಿ. ಅದರ ವಿಳಾಸ ಇಂತಿದೆ: myaadhaar.uidai.gov.in/portal
  • ಇಲ್ಲಿ ಲಾಗಿನ್ ಕ್ಲಿಕ್ ಮಾಡಿ. ಬಳಿಕ ನಿಮ್ಮ ಆಧಾರ್ ನಂಬರ್ ಅಥವಾ ಎನ್​ರೋಲ್ಮೆಂಟ್ ಐಡಿ ನಂಬರ್ ಅನ್ನು ನಮೂದಿಸಿ. ಕ್ಯಾಪ್ಚಾ ಹಾಕಿ, ಲಾಗಿನ್ ವಿತ್ ಒಟಿಪಿ ಕ್ಲಿಕ್ ಮಾಡಿ.
  • ಒಟಿಪಿ ನಮೂದಿಸಿದರೆ ಲಾಗಿನ್ ಆಗುತ್ತೀರಿ.
  • ಈಗ ಆಧಾರ್​ನ ಪಿಡಿಎಫ್ ಪ್ರತಿಯನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.
  • ಡೌನ್​ಲೋಡ್ ಆದ ಆಧಾರ್ ಕಾರ್ಡ್​ನ ಪ್ರಿಂಟೌಟ್ ಪಡೆದು ಅದನ್ನು ಲ್ಯಾಮಿನೇಟ್ ಮಾಡಿಸಿಟ್ಟುಕೊಳ್ಳಿ.

ಇದನ್ನೂ ಓದಿ: 2 ಲಕ್ಷ ರೂ ಸಾಲದಿಂದ ಹಿಡಿದು ಆಧನಿಕ ಕೌಶಲ ತರಬೇತಿ; ಪಿಎಂ ವಿಶ್ವಕರ್ಮ ಯೋಜನೆಯ ಲಾಭಗಳೇನು, ತಿಳಿದಿರಿ

ಆಧಾರ್ ಪಿವಿಸಿ ಕಾರ್ಡ್ ಆರ್ಡರ್ ಮಾಡುವುದು ಹೇಗೆ?

ಪಿವಿಸಿ ಕಾರ್ಡ್ ಎಂಬುದು ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಬರುವ ಒಂದು ಕಾರ್ಡ್. ಇದನ್ನು ಯುಐಡಿಎಐ ವೆಬ್​ಸೈಟ್ ಅಥವಾ ಎಂಆಧಾರ್ ಆ್ಯಪ್​ನಿಂದ ಆರ್ಡರ್ ಮಾಡಬಹುದು.

ಆಧಾರ್ ನಂಬರ್, ಅಥವಾ ಎನ್ರೋಲ್ಮೆಂಟ್ ಐಡಿ ಅಥವಾ ವರ್ಚುವಲ್ ಐಡಿ ಹಾಕಬೇಕು. ನೊಂದಾಯಿತ ಮೊಬೈಲ್ ನಂಬರ್ ಮೂಲಕ ವೆರಿಫಿಕೇಶನ್ ಮಾಡಬೇಕು.

ಪಿವಿಸಿ ಕಾರ್ಡ್​ಗೆ 50 ರೂ ಶುಲ್ಕ ಕಟ್ಟಬೇಕು. ನೀವು ಆರ್ಡರ್ ಮಾಡಿದ ಬಳಿಕ ಏಳು ದಿನದೊಳಗೆ ನಿಮ್ಮ ವಿಳಾಸಕ್ಕೆ ಇದನ್ನು ಕಳುಹಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ