ಆ. 26, ಶ್ರೀಕೃಷ್ಣಜನ್ಮಾಷ್ಟಮಿ ದಿನದಂದು ಬ್ಯಾಂಕುಗಳು ಮತ್ತು ಷೇರು ಮಾರುಕಟ್ಟೆಗೆ ರಜೆ ಇದೆಯಾ? ಇಲ್ಲಿದೆ ಡೀಟೇಲ್ಸ್
Krisha Janmashtami holidays: ಆಗಸ್ಟ್ 26, ಸೋಮವಾರ ಕೃಷ್ಣಜನ್ಮಾಷ್ಟಮಿ ಹಬ್ಬ ಇದ್ದು ಹಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇದೆ. ಕರ್ನಾಟಕ, ಮಹಾರಾಷ್ಟ್ರ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ ಇರುವುದಿಲ್ಲ. ಬೆಂಗಳೂರಿನಲ್ಲಿ ಬ್ಯಾಂಕುಗಳು ತೆರೆದಿರುತ್ತವೆ. ಷೇರು ಮಾರುಕಟ್ಟೆಗೆ ಆಗಸ್ಟ್ 26ರಂದು ರಜೆ ಇರೋದಿಲ್ಲ. ಮುಂದಿನ ರಜೆ ಅಕ್ಟೋಬರ್ 2, ಗಾಂಧಿ ಜಯಂತಿಯಂದು ಇದೆ.
ಬೆಂಗಳೂರು, ಆಗಸ್ಟ್ 25: ಕೃಷ್ಣ ಜನ್ಮಾಷ್ಟಮಿ ಹಬ್ಬ ಇರುವ ನಾಳೆ ಸೋಮವಾರದಂದು ಹೆಚ್ಚಿನ ಭಾಗದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಆರ್ಬಿಐ ಕ್ಯಾಲಂಡರ್ ಪ್ರಕಾರ ಬೆಂಗಳೂರು, ಮುಂಬೈ, ದೆಹಲಿ ಇತ್ಯಾದಿ ಕೆಲ ಪ್ರಮುಖ ನಗರಗಳನ್ನು ಹೊರತುಪಡಿಸಿ ಉಳಿದ ಕಡೆ ಬ್ಯಾಂಕ್ ಬಂದ್ ಆಗಿರುತ್ತವೆ. ಬೆಂಗಳೂರು ಮಾತ್ರವಲ್ಲ, ಕರ್ನಾಟಕದ ಯಾವ ಭಾಗದಲ್ಲೂ ಕೃಷ್ಣ ಜನ್ಮಾಷ್ಟಮಿಗೆ ರಜೆ ಇರೋದಿಲ್ಲ. ಉತ್ತರ ಭಾರತದ ಹೆಚ್ಚಿನ ಭಾಗದಲ್ಲಿ ರಜೆ ಕೊಡಲಾಗಿದೆ.
ಆಗಸ್ಟ್ 26, ಸೋಮವಾರ ಕೃಷ್ಣಜನ್ಮಾಷ್ಟಮಿಗೆ ರಜೆ ಇರುವ ನಗರಗಳು
ಲಕ್ನೋ, ಕಾನಪುರ್, ಅಹ್ಮದಾಬಾದ್, ಭೋಪಾಲ್, ಭುವನೇಶ್ವರ್, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಾಕ್, ಹೈದರಾಬಾದ್, ಜೈಪುರ್, ಕೋಲ್ಕತಾ, ಪಟ್ನಾ, ರಾಯಪುರ್, ರಾಂಚಿ, ಶಿಲಾಂಗ್, ಶಿಮ್ಲಾ, ಶ್ರೀನಗ್, ಜಮ್ಮು, ಚಂಡೀಗಡ್ ನಗರಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಆಯಾ ರಾಜ್ಯಗಳಲ್ಲೂ ರಜೆ ಇರುತ್ತದೆ.
ಬ್ಯಾಂಕ್ ತೆರೆದಿರುವ ರಾಜ್ಯಗಳು
ಮಹಾರಾಷ್ಟ್ರ, ಕರ್ನಾಟಕ, ಅಸ್ಸಾಮ್, ಕೇರಳ ಮತ್ತು ಗೋವಾ ಮೊದಲಾದ ಕೆಲ ರಾಜ್ಯಗಳಲ್ಲಿ ಬ್ಯಾಂಕುಗಳು ಯಥಾಪ್ರಕಾರ ಕಾರ್ಯನಿರ್ವಹಿಸುತ್ತವೆ.
ಬ್ಯಾಂಕುಗಳು ಬಂದ್ ಆಗಿದ್ದರೂ ಎಟಿಎಂ, ನೆಟ್ಬ್ಯಾಂಕ್, ಫೋನ್ ಬ್ಯಾಂಕಿಂಗ್, ಯುಪಿಐ ಮೂಲಕ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್ಲೈನ್ನಲ್ಲಿ ಸದಾ ಲಭ್ಯ ಇರುತ್ತವೆ.
ಷೇರು ಮಾರುಕಟ್ಟೆಗೆ ಇರೋದಿಲ್ಲ ರಜೆ
ಆಗಸ್ಟ್ 26, ಸೋಮವಾರದಂದು ಷೇರು ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಬಿಎಸ್ಇ ಮತ್ತು ಎನ್ಎಸ್ಇ ಸಂಸ್ಥೆಗಳು ಪ್ರಕಟಪಡಿಸಿರುವ ರಜಾ ದಿನಗಳ ಕ್ಯಾಲಂಡರ್ ಪ್ರಕಾರ ಆಗಸ್ಟ್ 26ರಂದು ರಜೆ ಇಲ್ಲ. ಆಗಸ್ಟ್ 15, ಸ್ವಾತಂತ್ರ್ಯೋತ್ಸವಕ್ಕೆ ಸ್ಟಾಕ್ ಮಾರ್ಕೆಟ್ ರಜೆ ಹೊಂದಿತ್ತು. ಮುಂದಿನ ರಜೆ ಇರುವುದು ಅಕ್ಟೋಬರ್ 2, ಗಾಂಧಿ ಜಯಂತಿಯಂದು.
ಇದನ್ನೂ ಓದಿ: ಎನ್ಎಸ್ಇ, ಬಿಎಸ್ಇ ರಜಾ ದಿನಗಳ ಪಟ್ಟಿ
ನವೆಂಬರ್ನಲ್ಲಿ ಒಂದು ಮತ್ತು ಹದಿನೈದು, ಹೀಗೆ ಎರಡು ದಿನ ರಜೆ ಇರುತ್ತದೆ. ಡಿಸೆಂಬರ್ನಲ್ಲಿ 25, ಕ್ರಿಸ್ಮಸ್ ಹಬ್ಬ ಪ್ರಯುಕ್ತ ರಜೆ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Sun, 25 August 24