AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷದ ಪ್ರಮುಖ ಸೆಕ್ಟರ್ ಇದು; ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್​ಗಳಿವು

Mutual Funds update: ಮ್ಯೂಚುವಲ್ ಫಂಡ್​ಗಳಲ್ಲಿ ನಾನಾ ವಿಧಗಳಿವೆ. ಥೀಮ್ಯಾಟಿಕ್ ಫಂಡ್​ಗಳು ಈಗೀಗ ಜನಪ್ರಿಯವಾಗುತ್ತಿವೆ. ಈ ಥೀಮ್ಯಾಟಿಂಗ್ ಫಂಡ್​ಗಳು ನಿರ್ದಿಷ್ಟ ಸೆಕ್ಟರ್​ನಲ್ಲಿ ಹೂಡಿಕೆ ಮಾಡುತ್ತವೆ. ಈ ಥೀಮ್ಯಾಟಿಕ್ ಸೆಕ್ಟರ್​ನಲ್ಲಿ ಎನರ್ಜಿಯೂ ಒಂದು. 2026ರಲ್ಲಿ ಎನರ್ಜಿ ಸೆಕ್ಟರ್​ಗೆ ಪ್ರಾಮುಖ್ಯತೆ ಹೆಚ್ಚಿದೆ. ಈ ಸೆಕ್ಟರ್​ನಲ್ಲಿರುವ ಕೆಲ ಪ್ರಮುಖ ಮ್ಯೂಚುವಲ್ ಫಂಡ್​ಗಳಿವು.

ಈ ವರ್ಷದ ಪ್ರಮುಖ ಸೆಕ್ಟರ್ ಇದು; ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್​ಗಳಿವು
ಮ್ಯೂಚುವಲ್ ಫಂಡ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 22, 2026 | 3:42 PM

Share

ಪಶ್ಚಿಮ ಏಷ್ಯಾ ಬಿಕ್ಕಟ್ಟು ಪರಿಸ್ಥಿತಿಯು ಇಂಧನ ಕ್ಷೇತ್ರದ ಮೇಲೆ ಎಲ್ಲರ ಚಿತ್ತ ನೆಡುವಂತೆ ಮಾಡಿದೆ. ತೈಲ, ಅನಿಲ, ವಿದ್ಯುತ್ ಇತ್ಯಾದಿ ಎನರ್ಜಿ ಸೆಕ್ಟರ್ ಈಗ ಅತ್ಯಗತ್ಯ ಎನಿಸಿದೆ. ಇಂಧನ ಭದ್ರತೆಯ ಪ್ರಾಮುಖ್ಯತೆ ಈಗ ಎಲ್ಲರಿಗೂ ಗೊತ್ತಾಗಿದೆ. ಭಾರತವು 2030ರ ವೇಳೆಗೆ 500GW ನವೀಕರಿಸಬಹುದಾದ ಇಂಧನ ಗುರಿಯನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಎನರ್ಜಿ ಫಂಡ್‌ಗಳು ಹೂಡಿಕೆದಾರರ ನೆಚ್ಚಿನ ಆಯ್ಕೆಯಾಗಿವೆ. ಇಂಧನ (Energy) ವಲಯದಲ್ಲಿ ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್‌ಗಳ (Mutual Funds) ಬಗ್ಗೆ ಮಾಹಿತಿ ಇಲ್ಲಿದೆ.

1. ನಿಪ್ಪಾನ್ ಇಂಡಿಯಾ ಪವರ್ ಆಂಡ್ ಇನ್ಫ್ರಾ ಫಂಡ್

ಇದು ಶಕ್ತಿ ಮತ್ತು ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡುವ ಅತ್ಯಂತ ಹಳೆಯ ಫಂಡ್‌ಗಳಲ್ಲಿ ಒಂದಾಗಿದೆ. ಈ ಫಂಡ್ ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್, NTPC ಮತ್ತು ಟಾಟಾ ಪವರ್‌ಗಳಂತಹ ದೊಡ್ಡ ಕಂಪನಿಗಳಲ್ಲಿ ಹೆಚ್ಚಿನ ಹೂಡಿಕೆ ಹೊಂದಿದೆ. ಇತ್ತೀಚಿನ ವರದಿಗಳ ಪ್ರಕಾರ, ಇದು ಸ್ಥಿರವಾದ ಆದಾಯವನ್ನು ನೀಡುತ್ತಾ ಬಂದಿದೆ.

2. ಎಸ್‌ಬಿಐ ಎನರ್ಜಿ ಅಪರ್ಚುನಿಟಿಸ್ ಫಂಡ್

ಇದು ಹೊಸ ತಲೆಮಾರಿನ ಎನರ್ಜಿ ಫಂಡ್ ಆಗಿದ್ದು, ಸಾಂಪ್ರದಾಯಿಕ ತೈಲ ಮತ್ತು ಅನಿಲ ಕಂಪನಿಗಳ ಜೊತೆಗೆ ಹಸಿರು ಇಂಧನ (Green Energy) ಕಂಪನಿಗಳ ಮೇಲೆ ಹೆಚ್ಚು ಗಮನ ಹರಿಸುತ್ತದೆ. ಗೇಲ್ (GAIL) ಮತ್ತು ಎನ್‌ಟಿಪಿಸಿ (NTPC) ಈ ಫಂಡ್‌ನ ಪ್ರಮುಖ ಹೂಡಿಕೆಗಳಾಗಿವೆ.

ಇದನ್ನೂ ಓದಿ: ಆರ್​ಬಿಐನಿಂದ ಹೊಸ ಇ-ಮ್ಯಾಂಡೇಟ್ ಫ್ರೇಮ್​ವರ್ಕ್; 15,000 ರೂವರೆಗಿನ ರಿಕರಿಂಗ್ ಪೇಮೆಂಟ್ಸ್​ಗೆ ಒಟಿಪಿ ಬೇಕಿಲ್ಲ

3. ಟಾಟಾ ರಿಸೋರ್ಸಸ್ ಆಂಡ್ ಎನರ್ಜಿ ಫಂಡ್

ಈ ಫಂಡ್ ಇಂಧನ ಮಾತ್ರವಲ್ಲದೆ ಲೋಹ (Metals) ಮತ್ತು ಗಣಿಗಾರಿಕೆ ವಲಯದಲ್ಲೂ ಹೂಡಿಕೆ ಮಾಡುತ್ತದೆ. ವೇದಾಂತ ಮತ್ತು ಅಲ್ಟ್ರಾಟೆಕ್ ಸಿಮೆಂಟ್‌ನಂತಹ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಇದು ವೈವಿಧ್ಯತೆಯನ್ನು ಕಾಯ್ದುಕೊಂಡಿದೆ.

4. ಡಿಎಸ್‌ಪಿ ನ್ಯಾಚುರಲ್ ರಿಸೋರ್ಸಸ್ ಆಂಡ್ ಎನರ್ಜಿ ಫಂಡ್

ಈ ಫಂಡ್‌ನ ವಿಶೇಷತೆಯೆಂದರೆ ಇದು ಜಾಗತಿಕ ಇಂಧನ ಮಾರುಕಟ್ಟೆಯಲ್ಲೂ ಹೂಡಿಕೆ ಮಾಡುತ್ತದೆ (BlackRock ಮೂಲಕ). ಭಾರತೀಯ ಕಂಪನಿಗಳಾದ ONGC ಮತ್ತು ಆಯಿಲ್ ಇಂಡಿಯಾದಲ್ಲಿ ಇದು ಬಲವಾದ ಹೂಡಿಕೆ ಹೊಂದಿದೆ.

5. ಐಸಿಐಸಿಐ ಪ್ರುಡೆನ್ಶಿಯಲ್ ಎನರ್ಜಿ ಆಪರ್ಚುನಿಟಿಸ್ ಫಂಡ್

ಇಂಧನ ಸಂವಹನ (Power Transmission) ಮತ್ತು ವಿತರಣಾ ಕಂಪನಿಗಳ ಮೇಲೆ ಇದು ಹೆಚ್ಚು ಒತ್ತು ನೀಡುತ್ತದೆ. ಮಾರುಕಟ್ಟೆಯಲ್ಲಿ ಇಂಧನ ಬೇಡಿಕೆ ಹೆಚ್ಚಾದಂತೆಲ್ಲಾ ಈ ಫಂಡ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

6. ಕೊಟಾಕ್ ಎನರ್ಜಿ ಆಪರ್ಚುನಿಟಿಸ್ ಫಂಡ್ (Kotak Energy Opportunities Fund)

ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಈ ಫಂಡ್, ಇಂಧನ ಪರಿವರ್ತನೆಯ (Energy Transition) ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಅಂದರೆ ಸಾಂಪ್ರದಾಯಿಕ ಇಂಧನದಿಂದ ಸೌರ ಮತ್ತು ಪವನ ಶಕ್ತಿಯತ್ತ ಬದಲಾಗುತ್ತಿರುವ ಕಂಪನಿಗಳನ್ನು ಇದು ಗುರಿಯಾಗಿಸಿಕೊಂಡಿದೆ.

2026ರಲ್ಲಿ ಇಂಧನ ವಲಯದಲ್ಲಿ ಏಕೆ ಹೂಡಿಕೆ ಮಾಡಬೇಕು?

ಭಾರತ ಸರ್ಕಾರವು ನವೀಕರಿಸಬಹುದಾದ ಇಂಧನಕ್ಕೆ ಒತ್ತು ನೀಡುತ್ತಿದೆ. ಸೌರಶಕ್ತಿ (PM Suryaghar) ಮತ್ತು ಹಸಿರು ಹೈಡ್ರೋಜನ್ ಯೋಜನೆಗಳಿಗೆ ಭಾರಿ ಪ್ರೋತ್ಸಾಹ ನೀಡುತ್ತಿದೆ. ಇಂಧನ ವಲಯದಲ್ಲಿ ಹೂಡಿಕೆ ಮಾಡಬೇಕೆನ್ನಲು ಇದು ಒಂದು ಕಾರಣ.

ಕೈಗಾರಿಕೆಗಳು ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ಹೆಚ್ಚಾದಂತೆ ವಿದ್ಯುತ್ ಬೇಡಿಕೆ ಗಣನೀಯವಾಗಿ ಏರುತ್ತಿರುವುದು ಮತ್ತೊಂದು ಸಂಗತಿ.

ಸರ್ಕಾರ ಮೂಲಸೌಕರ್ಯ ಅಭಿವೃದ್ಧಿ ಹೆಚ್ಚಿಸುತ್ತಿದೆ. ವಿದ್ಯುತ್ ಸರಬರಾಜು ಜಾಲ (Grid Modernization) ಸುಧಾರಿಸಲು ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.

ಇದನ್ನೂ ಓದಿ: ಭಾರತದ ಷೇರು ಮಾರುಕಟ್ಟೆ ಇವತ್ತು ಕುಸಿತ; ಏನಿರಬಹುದು ಕಾರಣಗಳು? ಇಲ್ಲಿದೆ ಡೀಟೇಲ್ಸ್

ಗಮನಿಸಿ: ಇವು ‘ಸೆಕ್ಟೋರಲ್ ಫಂಡ್‌’ಗಳಾದ ಕಾರಣ ರಿಸ್ಕ್ ಹೆಚ್ಚಿರುತ್ತದೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ನಿಮ್ಮ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸುವುದು ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ