AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಬಂಡೆ ಹೊಡೆತಕ್ಕೆ ನೇಪಾಳದ ಶೇ. 10 ಆರ್ಥಿಕತೆ ಧ್ವಂಸ; ಈ ಪುಟ್ಟ ದೇಶದ ಪುನರ್ನಿರ್ಮಾಣಕ್ಕೆ ಬೇಕು 5 ಬಿಲಿಯನ್ ಡಾಲರ್

Nepal Flood, 10pc of country's economy destroyed: ನೇಪಾಳದಲ್ಲಿ ಸಂಭವಿಸಿದ ಪ್ರವಾಹವು 600ಕ್ಕೂ ಹೆಚ್ಚು ಜನರನ್ನು ಬಲಿಪಡೆದುಕೊಂಡಿದೆ. ಇಲ್ಲಿ ನಾಪತ್ತೆಯಾದವರ ಸಂಖ್ಯೆಯೇ ಎರಡು ಸಾವಿರಕ್ಕೂ ಮಿಗಿಲಾದುದು. ಒಂದು ಅಂದಾಜು ಪ್ರಕಾರ, ಅವಗಡದಿಂದ ಆಗಿರುವ ಹಾನಿಯಿಂದ ಚೇತರಿಸಿಕೊಳ್ಳಲು 4-5 ಬಿಲಿಯನ್ ಡಾಲರ್ ಬೇಕಾಗಬಹುದು. ಈ ಒಂದು ಪ್ರಕೃತಿ ವಿಕೋಪವು ನೇಪಾಳದ ಶೇ. 10 ಆರ್ಥಿಕತೆಯನ್ನೇ ನಾಶ ಮಾಡಿದೆ.

ಹಿಮಬಂಡೆ ಹೊಡೆತಕ್ಕೆ ನೇಪಾಳದ ಶೇ. 10 ಆರ್ಥಿಕತೆ ಧ್ವಂಸ; ಈ ಪುಟ್ಟ ದೇಶದ ಪುನರ್ನಿರ್ಮಾಣಕ್ಕೆ ಬೇಕು 5 ಬಿಲಿಯನ್ ಡಾಲರ್
ನೇಪಾಳ ಪ್ರವಾಹImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 30, 2026 | 5:05 PM

Share

ಕಠ್ಮಂಡು, ಆಗಸ್ಟ್ 30: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ (Nepal Flood) ದೇಶದ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದ್ದು, ಹಾನಿಗೊಳಗಾದ ಮೂಲಸೌಕರ್ಯಗಳನ್ನು ಮರುನಿರ್ಮಾಣ ಮಾಡಲು 4 ರಿಂದ 5 ಬಿಲಿಯನ್ ಡಾಲರ್ (ಸುಮಾರು ₹38,000 ದಿಂದ ₹48,000 ಕೋಟಿ) ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈ ಅಂದಾಜು ಪುನರ್ನಿರ್ಮಾಣ ವೆಚ್ಚವು ನೇಪಾಳದ ಒಟ್ಟು ಆರ್ಥಿಕತೆಯ (GDP) ಸುಮಾರು ಹತ್ತನೇ ಒಂದು ಭಾಗಕ್ಕೆ (10%)ಸಮನಾಗಿದೆ.

600ಕ್ಕೂ ಹೆಚ್ಚು ಮಂದಿ ಬಲಿಪಡೆದ ಪ್ರಕೃತಿ ವಿಕೋಪ

ಭೋಟೆ ಕೋಶಿ ನದಿ ಜಲಾನಯನ ಪ್ರದೇಶ ಹಾಗೂ ಉತ್ತರ ಗಡಿ ಭಾಗಗಳಲ್ಲಿ ಸಂಭವಿಸಿದ ಪ್ರವಾಹಕ್ಕೆ ಕನಿಷ್ಠ 600ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 2,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಬೃಹತ್ ಹಿಮಬಂಡೆಗಳು ಕುಸಿದು ಭೀಕರ ಪ್ರವಾಹವನ್ನೇ ಸೃಷ್ಟಿಸಿದೆ. ಹಿಮಬಂಡೆ ಪ್ರವಾಹವು (Glaciers) ಕಟ್ಟಡಗಳನ್ನೇ ಬುಡಸಮೇತ ಕೊಚ್ಚಿಕೊಂಡು ಹೋಗುವಂತೆ ಮಾಡಿತು. ಇದರ ಹಾದಿಗೆ ಸಿಲುಕಿದ ಕಟ್ಟಡಗಳು ಉಳಿದಿದ್ದೇ ಇಲ್ಲ. ಸಾವನ್ನಪ್ಪಿದ 600ಕ್ಕೂ ಹೆಚ್ಚು ಜನರಲ್ಲಿ ಭಾರತೀಯರ ಸಂಖ್ಯೆ 200ಕ್ಕೂ ಹೆಚ್ಚು.

ಇದನ್ನೂ ಓದಿ: ಯುರೇಕಾ ಸೀಪ್ಲೇನ್: ವಿಮಾನಕ್ಕಿಂತ ಕಡಿಮೆ ದರ, ಹಡಗಿಗಿಂತ ವೇಗ… 1 ಟನ್ ಸರಕನ್ನು 1 ಕಿಮೀ ಸಾಗಿಸುವ ವೆಚ್ಚ 1 ಡಾಲರ್​ಗಿಂತ ಕಮ್ಮಿ

ವಿದ್ಯುತ್ ಉತ್ಪಾದನೆಗೆ ಧಕ್ಕೆ: ಪ್ರವಾಹದಿಂದಾಗಿ ಹಾನಿಗೊಳಗಾದ ಜಲವಿದ್ಯುತ್ ಯೋಜನೆಗಳು ನೇಪಾಳದ ಒಟ್ಟು ರಾಷ್ಟ್ರೀಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶೇ 12ಕ್ಕಿಂತ ಹೆಚ್ಚು ಪಾಲನ್ನು ಹೊಂದಿವೆ. ಇದು ಆರ್ಥಿಕತೆಯ ಮೇಲೆ ಮತ್ತಷ್ಟು ಒತ್ತಡ ಹೇರಿದೆ.

ಪ್ರವಾಹವು ಸೇತುವೆಗಳು, ರಸ್ತೆಗಳನ್ನು ಕೊಚ್ಚಿಕೊಂಡು ಹೋಗಿದ್ದು, ಚೀನಾ ಮತ್ತು ನೇಪಾಳ ನಡುವಿನ ಪ್ರಮುಖ ಗಡಿ ಮತ್ತು ವ್ಯಾಪಾರ ಮಾರ್ಗಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

2015ರ ಭೂಕಂಪಕ್ಕೆ ಹೋಲಿಕೆ: ನೇಪಾಳದ ಹಣಕಾಸು ಸಚಿವ ಸ್ವರ್ಣಿಮ್ ವಾಗ್ಲೆ ಅವರ ಪ್ರಕಾರ, ಈ ಪ್ರವಾಹದ ಹಾನಿಯು 2015 ರಲ್ಲಿ ಸಂಭವಿಸಿದ 7.8 ತೀವ್ರತೆಯ ಭೀಕರ ಭೂಕಂಪದ ಹಾನಿಗಿಂತ ಸ್ವಲ್ಪ ಕಡಿಮೆಯಿದ್ದರೂ, ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸಲು ಅಂತರರಾಷ್ಟ್ರೀಯ ನೆರವು ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಎಚ್​ಡಿಎಫ್​ಸಿ ಬ್ಯಾಂಕ್ ಸಿಇಒ ಮತ್ತು ಎಂಡಿ ಶಶಿದರ್ ಜಗದೀಶನ್ ನಿವೃತ್ತಿ; ಅಕ್ಟೋಬರ್ 26ಕ್ಕೆ ಅವರ ಅವಧಿ ಅಂತ್ಯ

ಹನ್ನೊಂದು ವರ್ಷದ ಹಿಂದೆ ಸಂಭವಿಸಿದ ಆ ಭೀಕರ ಭೂಕಂಪ ಘಟನೆಯು ನೇಪಾಳವನ್ನು ಗಡಗಡ ನಡುಗಿಸಿತ್ತು. ಐದು ಲಕ್ಷಕ್ಕೂ ಹೆಚ್ಚು ಮನೆಗಳು ಧರೆಗುರುಳಿದ್ದವು. 9 ಸಾವಿರ ಜನರು ಸಾವನ್ನಪ್ಪಿದ್ದರು. ಆಗ ಪುನರ್ನಿರ್ಮಾಣಕ್ಕೆ ತಗುಲಿದ ವೆಚ್ಚ 9 ಬಿಲಿಯನ್ ಡಾಲರ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Sun, 30 August 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More