AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಚ್ 31, ಭಾನುವಾರ ಬ್ಯಾಂಕ್​​ಗಳಿಗೆ ರಜೆ ರದ್ದು; 29ರಿಂದ 31ರವರೆಗೆ ಐಟಿ ಸಿಬ್ಬಂದಿಗೂ ಇಲ್ಲ ರಜೆ; ಕಾರಣ ಇದು

No Bank Holiday On March 31st: ಸರ್ಕಾರದ ಕಾರ್ಯಗಳನ್ನು ನಿರ್ವಹಿಸುವ ಎಲ್ಲಾ ಏಜೆನ್ಸಿ ಬ್ಯಾಂಕುಗಳು ಭಾನುವಾರದ ದಿನವಾದ ಜನವರಿ 31ರಂದು ತೆರೆದಿರಬೇಕು ಎಂದು ಆರ್​ಬಿಐ ನಿರ್ದೇಶನ ನೀಡಿದೆ. ಏಜೆನ್ಸಿ ಬ್ಯಾಂಕ್ ಎನಿಸಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಗೆ ಇದು ಅನ್ವಯ ಆಗುತ್ತದೆ. ಹಣಕಾಸು ವರ್ಷದ ಕೊನೆಯ ದಿನವಾದ್ದರಿಂದ ಸರ್ಕಾರ ಸ್ವೀಕೃತಿ ಮತ್ತು ಪಾವತಿಗಳ ಲೆಕ್ಕವನ್ನು ನೀಡಬೇಕಾಗುತ್ತದೆ. ಈ ಕಾರಣಕ್ಕೆ ಮಾರ್ಚ್ 31ರಂದು ಬ್ಯಾಂಕುಗಳು ತೆರೆದಿರಬೇಕಾಗುತ್ತದೆ.

ಮಾರ್ಚ್ 31, ಭಾನುವಾರ ಬ್ಯಾಂಕ್​​ಗಳಿಗೆ ರಜೆ ರದ್ದು; 29ರಿಂದ 31ರವರೆಗೆ ಐಟಿ ಸಿಬ್ಬಂದಿಗೂ ಇಲ್ಲ ರಜೆ; ಕಾರಣ ಇದು
ಎಚ್​ಡಿಎಫ್​ಸಿ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 21, 2024 | 11:48 AM

Share

ನವದೆಹಲಿ, ಮಾರ್ಚ್ 21: ಸರ್ಕಾರದ ವಹಿವಾಟುಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಏಜೆನ್ಸಿ ಬ್ಯಾಂಕುಗಳೂ ಮಾರ್ಚ್ 31, ಭಾನುವಾರದಂದು ತೆರೆದಿರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ದೇಶನ ನೀಡಿದೆ. ಹಣಕಾಸು ವರ್ಷದ ಕೊನೆಯಲ್ಲಿ ಸರ್ಕಾರ ಎಲ್ಲಾ ಪಾವತಿ ಮತ್ತು ಸ್ವೀಕೃತಿಗಳ ಲೆಕ್ಕ ಕಲೆಹಾಕಬೇಕಾಗುತ್ತದೆ. ಹೀಗಾಗಿ, ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ಬ್ಯಾಂಕುಗಳು ಸರ್ಕಾರಕ್ಕೆ ವರ್ಷದ ಕೊನೆಯಲ್ಲಿ ದತ್ತಾಂಶ ಒದಗಿಸಬೇಕು. ಈ ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ 31 ಭಾನುವಾರ ಇದೆ. ಭಾನುವಾರ ಬ್ಯಾಂಕುಗಳಿಗೆ ಸಾರ್ವತ್ರಿಕ ರಜಾ ದಿನವಾದರೂ ಆವತ್ತು ತೆರೆದಿರಬೇಕಾಗುತ್ತದೆ.

ಏಜೆನ್ಸಿ ಬ್ಯಾಂಕುಗಳೆಂದರೆ ಏನು?

ಸರ್ಕಾರದ ಪರವಾಗಿ ಅಥವಾ ಏಜೆಂಟ್​ಗಳಾಗಿ ಬ್ಯಾಂಕಿಂಗ್ ಚಟುವಟಿಕೆ ನಡೆಸಲು ಕೆಲ ಬ್ಯಾಂಕುಗಳಿಗೆ ಅಧಿಕಾರ ನೀಡಲಾಗಿರುತ್ತದೆ. ಅಂಥ ಬ್ಯಾಂಕುಗಳನ್ನು ಏಜೆನ್ಸಿ ಬ್ಯಾಂಕುಗಳೆನ್ನಲಾಗುವುದು. ಸರ್ಕಾರದ ಪಾವತಿಗಳ ಹಂಚಿಕೆ, ತೆರಿಗೆ ಸಂಗ್ರಹ ಇತ್ಯಾದಿ ಕಾರ್ಯಗಳನ್ನು ಈ ಏಜೆನ್ಸಿ ಬ್ಯಾಂಕುಗಳು ಮಾಡುತ್ತವೆ. ಪಿಪಿಎಫ್ ಇತ್ಯಾದಿ ಸರ್ಕಾರಿ ಉಳಿತಾಯ ಯೋಜನೆಗಳನ್ನು ಈ ಬ್ಯಾಂಕುಗಳ ಮೂಲಕ ಮಾಡಲಾಗುತ್ತದೆ.

ಇದನ್ನೂ ಓದಿ: ಅಮೆರಿಕದ ಫೆಡ್ ರಿಸರ್ವ್ ಸಭೆ ಬಳಿಕ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ

ಏಜೆನ್ಸಿ ಸರ್ಕಾರಿ ಬ್ಯಾಂಕುಗಳು

  1. ಬ್ಯಾಂಕ್ ಆಫ್ ಬರೋಡಾ
  2. ಬ್ಯಾಂಕ್ ಆಫ್ ಇಂಡಿಯಾ
  3. ಬ್ಯಾಂಕ್ ಆಫ್ ಮಹಾರಾಷ್ಟ್ರ
  4. ಕೆನರಾ ಬ್ಯಾಂಕ್
  5. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  6. ಇಂಡಿಯನ್ ಬ್ಯಾಂಕ್
  7. ಇಂಡಿಯನ್ ಓವರ್​ಸೀಸ್ ಬ್ಯಾಂಕ್
  8. ಪಂಜಾಬ್ ಅಂಡ್ ಸಿಂದ್ ಬ್ಯಾಂಕ್
  9. ಪಂಜಾಬ್ ನ್ಯಾಷನಲ್ ಬ್ಯಾಂಕ್
  10. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  11. ಯುಕೋ ಬ್ಯಾಂಕ್
  12. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಏಜೆನ್ಸಿ ಖಾಸಗಿ ಬ್ಯಾಂಕುಗಳು

  1. ಎಕ್ಸಿಸ್ ಬ್ಯಾಂಕ್
  2. ಸಿಟಿ ಯೂನಿಯನ್ ಬ್ಯಾಂಕ್
  3. ಡಿಸಿಬಿ ಬ್ಯಾಂಕ್
  4. ಫೆಡರಲ್ ಬ್ಯಾಂಕ್
  5. ಎಚ್​ಡಿಎಫ್​ಸಿ ಬ್ಯಾಂಕ್
  6. ಐಸಿಐಸಿಐ ಬ್ಯಾಂಕ್
  7. ಐಡಿಬಿಐ ಬ್ಯಾಂಕ್
  8. ಐಡಿಎಫ್​ಸಿ ಬ್ಯಾಂಕ್
  9. ಇಂಡಸ್​ಇಂಡ್ ಬ್ಯಾಂಕ್
  10. ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್
  11. ಕರ್ಣಾಟಕ ಬ್ಯಾಂಕ್
  12. ಕರೂರ್ ವೈಸ್ಯ ಬ್ಯಾಂಕ್
  13. ಕೋಟಕ್ ಮಹೀಂದ್ರ ಬ್ಯಾಂಕ್
  14. ಆರ್​ಬಿಎಲ್ ಬ್ಯಾಂಕ್
  15. ಸೌತ್ ಇಂಡಿಯನ್ ಬ್ಯಾಂಕ್
  16. ಯೆಸ್ ಬ್ಯಾಂಕ್
  17. ಧನಲಕ್ಷ್ಮೀ ಬ್ಯಾಂಕ್
  18. ಬಂಧನ್ ಬ್ಯಾಂಕ್
  19. ಸಿಎಸ್​ಬಿ ಬ್ಯಾಂಕ್
  20. ತಮಿಳುನಾಡ್ ಮರ್ಸಾಂಟೈಲ್ ಬ್ಯಾಂಕ್
  21. ಡಿಬಿಎಸ್ ಬ್ಯಾಂಕ್

ಇದನ್ನೂ ಓದಿ: ಮೈಕ್ರೋಸಾಫ್ಟ್​ನ ಎಐ ವಿಭಾಗಕ್ಕೆ ಟ್ಯಾಕ್ಸಿ ಚಾಲಕನ ಮಗ ಮುಸ್ತಫಾ ಸಿಇಒ; ಎಐ ತಂತ್ರಜ್ಞಾನದ ನಿಪುಣ ಈತ

ಆದಾಯ ತೆರಿಗೆ ಕಚೇರಿಗಳಿಗೆ 29ರಿಂದ 31ರವರೆಗೆ ಇಲ್ಲ ರಜೆ

ಆದಾಯ ತೆರಿಗೆ ಇಲಾಖೆ ಕೂಡ ವರ್ಷದ ಕೊನೆಯ ಮೂರು ದಿನಗಳಂದು ರಜೆಗಳನ್ನು ರದ್ದು ಮಾಡಿದೆ. ಮಾರ್ಚ್ 29ರಿಂದ 31ರವರೆಗೆ ದೇಶಾದ್ಯಂತ ಎಲ್ಲಾ ಆದಾಯ ತೆರಿಗೆ ಕಚೇರಿಗಳು ತೆರೆದಿರುತ್ತವೆ. ಮಾರ್ಚ್ 29 ಶುಕ್ರವಾರ ಮತ್ತು ಮಾರ್ಚ್ 31, ಭಾನುವಾರ ಸಾರ್ವತ್ರಿಕ ರಜೆಗಳಿವೆ. ಆದರೆ, ಈ ಎರಡೂ ದಿನಗಳ ರಜೆಯನ್ನು ರದ್ದು ಮಾಡಲಾಗಿದೆ. ಮಾರ್ಚ್ 26ರಿಂದ 31ರವರೆಗೆ ಐಟಿ ಕಚೇರಿಗಳಿಗೆ ರಜೆ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್