AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್​ನಲ್ಲಿ ಚಿನ್ನ ಸಖತ್ ದುಬಾರಿ? ಕಳೆದ 45 ವರ್ಷದಲ್ಲೆ ಬಂಗಾರಕ್ಕೆ ಗರಿಷ್ಠ ಡಿಮ್ಯಾಂಡ್; 20,000 ರೂಗೆ ಏರುತ್ತಾ ಬೆಲೆ?

Gold rates may cross 6,000 USD in April, predicts Peter Schiff: ಚಿನ್ನದ ಬೆಲೆ ಮಾರ್ಚ್ ತಿಂಗಳಲ್ಲಿ ಕುಸಿತ ಕಂಡಿದ್ದು ಈಗ ಮತ್ತೆ ಏರಿಕೆ ಆಗುತ್ತಿದೆ. ಅಂತಾರಾಷ್ಟ್ರೀಯ ಹೂಡಿಕೆದಾರ ಪೀಟರ್ ಶಿಫ್ ಅವರು ಚಿನ್ನದ ಬೆಲೆ ಏಪ್ರಿಲ್​ನಲ್ಲಿ ಒಂದು ಔನ್ಸ್​ಗೆ 6,000 ಡಾಲರ್ ದಾಟಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 15,000 ರೂ ಇದ್ದದ್ದು 20,000 ರೂ ಸಮೀಪಕ್ಕೆ ಹೋಗಬಹುದು.

ಏಪ್ರಿಲ್​ನಲ್ಲಿ ಚಿನ್ನ ಸಖತ್ ದುಬಾರಿ? ಕಳೆದ 45 ವರ್ಷದಲ್ಲೆ ಬಂಗಾರಕ್ಕೆ ಗರಿಷ್ಠ ಡಿಮ್ಯಾಂಡ್; 20,000 ರೂಗೆ ಏರುತ್ತಾ ಬೆಲೆ?
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 03, 2026 | 5:00 PM

Share

ನವದೆಹಲಿ, ಏಪ್ರಿಲ್ 3: ಕಳೆದ 1 ವರ್ಷದಿಂದ ಚಿನ್ನದ ಬೆಲೆ (Gold Rates) ಬಹಳ ಏರಿದೆ. 2025ರ ಏಪ್ರಿಲ್ 3ರಂದು ಅಪರಂಜಿ ಚಿನ್ನದ ಬೆಲೆ 9,164 ರೂ ಇತ್ತು. ಒಂದು ವರ್ಷದ ನಂತರ ಇವತ್ತು ಅದರ ಬೆಲೆ 15,093 ರೂಗೆ ಏರಿದೆ. ಒಂದು ವರ್ಷದಲ್ಲಿ ಬೆಲೆಯಲ್ಲಿ ಶೇ. 65ರಷ್ಟು ಏರಿಕೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 4,700 ಡಾಲರ್ ದಾಟಿ, 4,800 ಡಾಲರ್ ಗಡಿಯತ್ತ ಸಾಗಿದೆ. ಒಂದು ಔನ್ಸ್ ಎಂದರೆ 28.35 ಗ್ರಾಮ್.

ಫೆಬ್ರುವರಿ 28ರಂದು ಯುದ್ಧ ಶುರುವಾದಾಗ ಚಿನ್ನ, ಬೆಳ್ಳಿ ಬೆಲೆ ತೀರಾ ಹೆಚ್ಚಬಹುದು ಎಂದು ಭಾವಿಸಲಾಗಿತ್ತು. ಆದರೆ, ಬೆಲೆ ಇಳಿಕೆಯಾಗಿದೆ. ಮಾರ್ಚ್ 1ರಂದು 17,309 ರೂ ಇದ್ದ ಚಿನ್ನದ ಬೆಲೆ ಇವತ್ತು 15,093 ರೂಗೆ ಇಳಿದಿದೆ. ಮಾರ್ಚ್ 1ರಿಂದೀಚೆ ಶೇ. 12ರಷ್ಟು ಬೆಲೆ ಇಳಿಕೆ ಆಗಿದೆ. ಖ್ಯಾತ ಹೂಡಿಕೆದಾರ ಪೀಟರ್ ಶಿಫ್ ಪ್ರಕಾರ ಚಿನ್ನದ ಇಳಿಕೆಯ ಆಟ ಮುಕ್ತಾಯವಾಗಿದೆ. ಇನ್ನೇನಿದ್ದರೂ ಪವರ್​ಫುಲ್ ಜಂಪ್.

ಇದನ್ನೂ ಓದಿ: ಚಿನ್ನದ ಬೆಲೆ ಗ್ರಾಮ್​ಗೆ 180 ರೂ ಏರಿಕೆ; ಇಲ್ಲಿದೆ ದರಪಟ್ಟಿ

ಮಾರ್ಚ್​ನಲ್ಲಿ ಇಳಿದಿದ್ದ ಚಿನ್ನದ ಬೆಲೆ ಏಪ್ರಿಲ್​ನಲ್ಲಿ ಸತತವಾಗಿ ಏರಿಕೆಯಾಗುವ ಟ್ರೆಂಡ್ ಇದೆ. ಇದು ಯುದ್ಧದ ಪರಿಣಾಮದಿಂದ ಮಾತ್ರವೇ ಆಗುತ್ತಿರುವ ಏರಿಕೆಯಲ್ಲ. ಬದಲಾಗಿ, ಹೂಡಿಕೆದಾರರು ಅಮೆರಿಕನ್ ಡಾಲರ್​ನಿಂದ ದೂರವಾಗಿ, ನೈಜ ಆಸ್ತಿಯತ್ತ ವಾಲತೊಡಗಿರುವುದರ ಕುರುಹು ಇದು ಎಂಬುದು ಪೀಟರ್ ಶಿಫ್ ಅವರ ಅನಿಸಿಕೆ.

ಏಪ್ರಿಲ್​ನಲ್ಲಿ ಚಿನ್ನದ ಬೆಲೆ 20,000 ರೂ ದಾಟುತ್ತಾ?

ಪೀಟರ್ ಶಿಫ್ ಪ್ರಕಾರ, ಮಾರ್ಚ್ ತಿಂಗಳು 2008ರ ನಂತರ ಚಿನ್ನದ ಸಾಧನೆ ಅತ್ಯಂತ ಕಳಪೆ ಸಾಧನೆ ಕಂಡ ತಿಂಗಳೆನಿಸಿದೆ. ಹಾಗೆಯೇ, ಏಪ್ರಿಲ್ ತಿಂಗಳು ಕಳೆದ ನಾಲ್ಕೂವರೆ ದಶಕದಲ್ಲೇ ಚಿನ್ನಕ್ಕೆ ಬೆಸ್ಟ್ ಮಂತ್ ಆಗಿರಲಿದೆಯಂತೆ.

ಇದನ್ನೂ ಓದಿ: ಬೆಂಗಳೂರಿನ ಶೇ. 80 ಐಟಿ ಕೂಲಿಗಳಿಗೆ ಇನ್ನು 3 ವರ್ಷದಲ್ಲಿ ಕೆಲಸ ಇರೋದಿಲ್ಲ: ಶಾಕ್ ಕೊಟ್ಟಿದೆ ರೆಡ್ಡಿಟ್ ಪೋಸ್ಟ್

ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್​ಗೆ 4,700 ಡಾಲರ್ ಬೆಲೆ ದಾಟಿ, 4,800 ಡಾಲರ್​ನತ್ತ ಸಾಗಿದೆ. ಮಾರ್ಚ್ 23ರ ನಂತರ ಚಿನ್ನದ ಬೆಲೆ ಶೇ. 15ರಷ್ಟು ಹೆಚ್ಚಾಗಿದೆ. ಇದೇ ಟ್ರೆಂಡ್ ಏಪ್ರಿಲ್​ನಲ್ಲಿ ಮುಂದುವರಿಯಲಿದ್ದು, ಒಂದು ಔನ್ಸ್ ಚಿನ್ನದ ಬೆಲೆ 6,000 ಡಾಲರ್ ದಾಟಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 19,616 ರೂ ಮುಟ್ಟಬಹುದು. 20,000 ರೂ ದಾಟಿದರೂ ಅಚ್ಚರಿ ಇಲ್ಲ ಎನ್ನುವ ಅಭಿಪ್ರಾಯ ಇವರದ್ದು. ಅಂದರೆ ಮುಂದಿನ ನಾಲ್ಕು ವಾರದಲ್ಲಿ ಬಂಗಾರದ ಬೆಲೆ ಶೇ 20ಕ್ಕಿಂತಲೂ ಹೆಚ್ಚಿನ ಪ್ರಮಾಣದಷ್ಟು ಏರಿಕೆ ಆಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ