ಹಣಕಾಸು ನಿಭಾಯಿಸುವುದು (Wealth Management) ಬಹಳ ಬುದ್ಧಿವಂತಿಕೆಯ ಕಾರ್ಯ. ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ ಅನ್ನೋ ಗಾದೆ ಮಾತಿನಂತೆ, ನೀವು ವರ್ಷಗಟ್ಟಲೆ ಕಷ್ಟಪಟ್ಟು ಕೂಡಿಟ್ಟ ಹಣ, ಕ್ಷಣಿಕ ಆಸೆಗಳಿಗೆ, ಅಥವಾ ಅನಿರೀಕ್ಷಿತ ಸಂದರ್ಭಗಳಿಗೆ ಸಂಪೂರ್ಣ ಕರಗಿ ಹೋಗಲು ಹೆಚ್ಚು ಕಾಲ ಬೇಕಾಗುವುದಿಲ್ಲ. ಬಹಳಷ್ಟು ಜನರು ಸಂಬಳ ಇತ್ಯಾದಿ ಸಾಕಷ್ಟು ಆದಾಯ ಪಡೆಯುತ್ತಿದ್ದರೂ ಅವರ ಸ್ಥಿತಿ ಮಟ್ಟಕ್ಕೆ ಸಮೀಪವೇ ಇರುತ್ತದೆ. ಯಾವ್ಯಾವುದೋ ದಿಢೀರ್ ವೆಚ್ಚ ವಕ್ಕರಿಸಿ ಜೀವನೋತ್ಸಾಹವನ್ನೇ ಕಳೆದುಕೊಳ್ಳುವುದುಂಟು. ಇನ್ನು ಕೆಲವರು, ಕಡಿಮೆ ಸಂಬಳ ಇದ್ದರೂ ಸಾಕಷ್ಟು ಹಣ ಉಳಿಸಿ ಮನೆ, ಮದುವೆ ಇತ್ಯಾದಿ ಜವಾಬ್ದಾರಿಗಳನ್ನು ಪೂರೈಸುತ್ತಾರೆ. ಅದು ಹೇಗೆ ಸಾಧ್ಯ? ಹಣದ ನಿರ್ವಹಣೆ ಸಮಯೋಚಿತವಾಗಿದ್ದರೆ, ಸಮರ್ಪಕವಾಗಿದ್ದರೆ ಇದು ಸಾಧ್ಯ.
ಇಲ್ಲಿ ಹಣ ಗಳಿಕೆ ಎಂಬುದು ಸಂಬಳ, ಉದ್ದಿಮೆ ಇತ್ಯಾದಿ ಮೂಲಕ ಹಣ ಸಂಪಾದಿಸುವುದು. ಎರಡನೆ ಅಂಶವಾದ ಹಣ ಉಳಿತಾಯ ಎಂದರೆ, ವೆಚ್ಚವನ್ನು ನಿಯಂತ್ರಿಸಿ ಸಾಧ್ಯವಾದಷ್ಟು ಹಣ ಉಳಿತಾಯ ಮಾಡುವುದು. ಇನ್ನು, ಮೂರನೇ ಅಂಶವಾದ ಹಣಕ್ಕೆ ರಕ್ಷಣೆ ಎಂದರೆ ಅದು ಆರೋಗ್ಯ ಮತ್ತು ಜೀವ ವಿಮೆ ಎಂದು ಭಾವಿಸಬಹುದು. ಆರೋಗ್ಯ ಸಮಸ್ಯೆ ಇತ್ಯಾದಿ ಅನಿರೀಕ್ಷಿತ ಅವಘಡಗಳು ಬಂದುಬಿಟ್ಟರೆ ನಮ್ಮ ಹಣ ಬಹುತೇಕ ಕರಗಿಹೋಗಿಬಿಡಬಹುದು. ಹೀಗಾಗಿ, ಇನ್ಷೂರೆನ್ಸ್ ಬಹಳ ಮುಖ್ಯ.
ಇದನ್ನೂ ಓದಿ: ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ, ಯಾವ್ಯಾವುದಕ್ಕೆ ಲಿಂಕ್ ಆಗಿದೆ? ತಿಳಿಯುವ ಸುಲಭ ವಿಧಾನ ಇಲ್ಲಿದೆ
ಇನ್ನು, ನಾಲ್ಕನೇ ಅಂಶವು ನಮ್ಮ ಸಂಪತ್ತನ್ನು ಬಳಸಿ ಅದರಿಂದ ಆದಾಯ ವೃದ್ಧಿಸುವುದು. ಮ್ಯೂಚುವಲ್ ಫಂಡ್, ಪಿಪಿಎಫ್, ಎಫ್ಡಿ ಇತ್ಯಾದಿ ಸಾಧನಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಅದರಿಂದ ಗರಿಷ್ಠ ಲಾಭ ಪಡೆಯಲು ಯತ್ನಿಸುವುದು.
ಈ ಮೂರೂ ಅಂಶಗಳು ಸಮರ್ಪಕವಾಗಿ ಚಾಲನೆಯಲ್ಲಿದ್ದರೆ ಜೀವನದಲ್ಲಿ ಹೆಚ್ಚು ಚಿಂತೆ ಪಡುವ ಅವಶ್ಯಕತೆ ಇರುವುದಿಲ್ಲ.
ನಿಮಗೆ ಸಾಕಷ್ಟು ಮೊತ್ತದ ಸಂಬಳ ಬರುತ್ತಿದ್ದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲವಲ್ಲ ಎಂದನಿಸಬಹುದು. ಅದಕ್ಕೆ ಕಾರಣ ನಿಮ್ಮ ವೆಚ್ಚದ ಮೇಲೆ ನಿಮಗೆ ಹಿಡಿತ ಇಲ್ಲದೇ ಇರುವುದು. ಅದಕ್ಕೆ ನಿಮ್ಮ ದೈನಂದಿನ ವೆಚ್ಚದ ಪೈಸೆ ಪೈಸೆ ಲೆಕ್ಕವನ್ನೂ ಬರೆದಿಟ್ಟುಕೊಳ್ಳಿ. ತಿಂಗಳ ಕೊನೆಯಲ್ಲಿ ಎಲ್ಲಾ ವೆಚ್ಚಗಳನ್ನು ಕ್ರೋಢೀಕರಿಸಿ, ವರ್ಗೀಕರಿಸಿ ನೋಡಿ. ಯಾವ್ಯಾವ ವೆಚ್ಚಕ್ಕೆ ಎಷ್ಟು ಖರ್ಚಾಗಿದೆ ಎಂಬ ನಿಖರ ಲೆಕ್ಕ ನಿಮಗೆ ಸಿಗುತ್ತದೆ. ಅದರಲ್ಲಿ ಆದ್ಯತೆ ಅಲ್ಲದವುಗಳಿಗೆ ವೆಚ್ಚ ನಿಲ್ಲಿಸಿ.
ಇದನ್ನೂ ಓದಿ: Maternity Insurance: ಮಾತೃತ್ವದ ವಿಮೆ ಎಷ್ಟು ಲಾಭದಾಯಕ? ಯಾವುದು ಅತ್ಯುತ್ತಮ ಆಯ್ಕೆ?
ತಿಂಗಳಿಗೆ 5,000 ರೂ ಉಳಿಸಿದರೂ ಅದು ನಿಜಕ್ಕೂ ಉಪಯುಕ್ತ ಎನಿಸುತ್ತದೆ. ಹಾಗೆಯೇ, ನಿಮ್ಮ ಮೇಲೆ ಅವಲಂಬಿತರಾಗಿರುವವರೆಲ್ಲರಿಗೂ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಲು ಮರೆಯದಿರಿ.
ಇನ್ನು ನಿಮ್ಮ ಹೆಚ್ಚಿನ ಉಳಿತಾಯ ಹಣವನ್ನು ಮ್ಯೂಚುವಲ್ ಫಂಡ್ ಎಸ್ಐಪಿ ಇತ್ಯಾದಿಗೆ ಹೂಡಿಕೆ ಮಾಡಿ. ಹಾಗೆಯೇ, ಪಿಪಿಎಫ್ ಇತ್ಯಾದಿ ಯೋಜನೆಗಳಲ್ಲೂ ಒಂದಷ್ಟು ಪ್ರಮಾಣದ ಉಳಿತಾಯ ಹಣ ಹಾಕಬಹುದು. ಎಂಎಫ್ಗಳಿಂದ ವರ್ಷಕ್ಕೆ 10ಕ್ಕಿಂತಲೂ ಹೆಚ್ಚು ರಿಟರ್ನ್ಸ್ ನಿರೀಕ್ಷಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ