AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್​ನ ಪೋರ್ಟ್​ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ?

Actor turned politician Vijay's Wealth Revealed: Rs 624 Crore Assets & Traditional Investments ನಟ ವಿಜಯ್ ಅವರ ಟಿವಿಕೆ ಪಕ್ಷದ ದಿಗ್ವಿಜಯದ ನಂತರ, ಅವರ ಆಸ್ತಿಪಾಸ್ತಿ ಮತ್ತು ಹೂಡಿಕೆಗಳ ಬಗ್ಗೆ ಕುತೂಹಲ ಹೆಚ್ಚಿದೆ. ಚುನಾವಣಾ ಅಫಿಡವಿಟ್ ಪ್ರಕಾರ, ವಿಜಯ್ 624 ಕೋಟಿ ರೂ. ಆಸ್ತಿ ಹೊಂದಿದ್ದು, ಶೂನ್ಯ ಸಾಲಗಾರರಾಗಿದ್ದಾರೆ. ಹೆಚ್ಚಿನ ಹಣವನ್ನು ಬ್ಯಾಂಕ್ ಠೇವಣಿ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಅವರು ಸಂಪ್ರದಾಯಸ್ಥ ಹೂಡಿಕೆದಾರರಂತೆ ಗೋಚರಿಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಅವರ ಹೂಡಿಕೆ ಅತ್ಯಲ್ಪ.

ವಿಜಯ್​ನ ಪೋರ್ಟ್​ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ?
ವಿಜಯ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2026 | 4:05 PM

Share

ಚೆನ್ನೈ, ಮೇ 5: ನಟ ವಿಜಯ್ (Vijay) ತಮಿಳುನಾಡು ರಾಜಕೀಯವನ್ನೇ ಅಲುಗಾಡಿಸಿಬಿಟ್ಟಿದ್ದಾರೆ. ವಿಧಾನಸಭೆಯಲ್ಲಿ ಇಡೀ ರಾಜ್ಯವೇ ಸಂಚಲನಗೊಳ್ಳುವಂತೆ ಅವರ ಟಿವಿಕೆ ಪಕ್ಷ (TVK- Tamilaga Vetri Kazhagam) ದಿಗ್ವಿಜಯ ಸಾಧಿಸಿದೆ. ಏಕವ್ಯಕ್ತಿ ಈ ಮಹಾನ್ ಕ್ರಾಂತಿ ಮಾಡಿರುವುದು ಸಾಮಾನ್ಯದ ಸಂಗತಿಯಲ್ಲ. ಅಂತೆಯೇ, ಬಹಳ ಜನರು ವಿಜಯ್ ಅವರ ಹಣಕಾಸು ಶಕ್ತಿ ಮತ್ತು ಹಿನ್ನೆಲೆ ಬಗ್ಗೆ ಮಾಹಿತಿ ತಿಳಿಯಲು ಆಸಕ್ತರಾಗಿದ್ದಾರೆ. ಅವರ ಆಸ್ತಿಪಾಸ್ತಿ, ಹೂಡಿಕೆಯ ವಿವರ ನಿಜಕ್ಕೂ ಕುತೂಹಲಕಾರಿ ಎನಿಸಿದೆ.

ಹೊಸ ತಲೆಮಾರಿನ ಜನರನ್ನು ಮತಪೆಟ್ಟಿಗೆಗೆ ಆಕರ್ಷಿಸಿದ ವಿಜಯ್ ಅವರು ಹೂಡಿಕೆ ವಿಚಾರದಲ್ಲಿ ಮಹಾನ್ ಸಂಪ್ರದಾಯಸ್ಥರಂತೆ ಗೋಚರಿಸುತ್ತಾರೆ. ಅವರು ಚುನಾವಣಾ ಅಫಿಡವಿಟ್​ನಲ್ಲಿ ಘೋಷಿಸಿಕೊಂಡ ಒಟ್ಟು ಆಸ್ತಿ 624 ಕೋಟಿ ರೂ. ಅದರಲ್ಲಿ ಚರಾಸ್ತಿ 404 ಕೋಟಿ ರೂ, ಚಿರಾಸ್ತಿ 220 ಕೋಟಿ ರೂ. ಶೂನ್ಯ ಸಾಲ ಹೊಂದಿರುವ ಅಪರೂಪದ ರಾಜಕಾರಣಿ.

ವಿಜಯ್ ಅವರ ಆಸ್ತಿಪಾಸ್ತಿ ವಿವರ

ದಳಪತಿ ವಿಜಯ್ ಅವರ ಒಟ್ಟು ಆಸ್ತಿ: 624 ಕೋಟಿ ರೂ

  • ಬ್ಯಾಂಕ್​ಗಳಲ್ಲಿ: 404 ಕೋಟಿ ರೂ
  • ರಿಯಲ್ ಎಸ್ಟೇಟ್ ಆಸ್ತಿಗಳು: 220 ಕೋಟಿ ರೂ
  • ವಾರ್ಷಿಕ ಆದಾಯ: 184.53 ಕೋಟಿ ರೂ

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?

ವಿಜಯ್ ಅವರ ಬ್ಯಾಂಕ್ ಡೆಪಾಸಿಟ್​ಗಳು

  • ಚೆನ್ನೈನ ಸಾಲಿಗ್ರಾಮಮ್​ನಲ್ಲಿರುವ ಇಂಡಿಯನ್ ಓವರ್​ಸೀಸ್ ಬ್ಯಾಂಕ್​ನ ಒಂದು ಸೇವಿಂಗ್ಸ್ ಅಕೌಂಟ್​ನಲ್ಲಿ 213 ಕೋಟಿ ರೂ ಬ್ಯಾಲನ್ಸ್ ಹೊಂದಿದ್ದಾರೆ.
  • ಎಕ್ಸಿಸ್ ಬ್ಯಾಂಕ್​ನಲ್ಲಿ 40 ಕೋಟಿ ರೂ, ಐಒಬಿಯಲ್ಲಿ 25 ಕೊಟಿ ರೂ, ಎಚ್​ಡಿಎಫ್​ಸಿ ಬ್ಯಾಂಕಲ್ಲಿ 20 ಕೋಟಿ ರೂ, ಎಸ್​ಬಿಐನಲ್ಲಿ 15 ಕೋಟಿ ರೂ ಹೀಗೆ ವಿವಿಧ ಬ್ಯಾಂಕುಗಳಲ್ಲಿ 100 ಕೋಟಿ ರೂ ಮೊತ್ತದ ಫಿಕ್ಸೆಡ್ ಡೆಪಾಸಿಟ್​ಗಳನ್ನು ಹೊಂದಿದ್ದಾರೆ.
  • ಷೇರುಗಳಲ್ಲಿ ಅವರ ಹೂಡಿಕೆ 20 ಲಕ್ಷ ರೂಗಿಂತಲೂ ಕಡಿಮೆ. ಜಯನಗರ್ ಪ್ರಾಪರ್ಟಿ ಷೇರುಗಳಲ್ಲಿ 19.69 ಲಕ್ಷ ರೂ, ಐಒಬಿಯ ಷೇರುಗಳಲ್ಲಿ 9,600 ರೂ ಮತ್ತು ಸನ್ ಪೇಪರ್ ಮಿಲ್ ಷೇರುಗಳಲ್ಲಿ 25,000 ರೂ ಹೂಡಿಕೆ ಮಾಡಿದ್ದಾರೆ.

ವಿಜಯ್ ಅವರ ರಿಯಲ್ ಎಸ್ಟೇಟ್ ಹೂಡಿಕೆಗಳು

  • ವಿಜಯ್ ಅವರ ಸ್ಥಿರಾಸ್ತಿಗಳ ಮೌಲ್ಯ 220 ಕೋಟಿ ರೂನಷ್ಟು ಇದೆ. ನೀಲಂಕರೈ, ಸಾಲಿಗ್ರಾಮಮ್, ಮೈಲಾಪುರ್, ಎಗ್ಮೋರ್ ಮತ್ತಿತರೆಡೆ 115 ಕೋಟಿ ರೂ ಮೌಲ್ಯದ 10 ವಾಸ ಸ್ಥಳಗಳನ್ನು ಹೊಂದಿದ್ದಾರೆ.
  • ಪರಿವಾಕ್ಕಮ್, ತ್ಯಾಗರಾಜನಗರ್, ಶೋಲಿಂಗನಲ್ಲೂರ್, ಕೋಪ್ಪೂರ್​ನಲ್ಲಿ 82.8 ಕೋಟಿ ರೂ ಮೌಲ್ಯದ ಕಮರ್ಷಿಯಲ್ ಆಸ್ತಿಗಳನ್ನು ಹೊಂದಿದ್ದಾರೆ.
  • ವಾಟ್ಟಪಟ್ಟಿ ಗ್ರಾಮ್, ಕೊಡೈಕೆನಲಾಲ್​ನಲ್ಲಿ 20 ಲಕ್ಷ ರೂ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ.
  • ಪೋರೂರ್, ಸಾಲಿಗ್ರಾಮಮ್ ಮತ್ತು ನೀಲಂಕರೈನಲ್ಲಿ 22 ಕೋಟಿ ರೂ ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ.

ವಿಜಯ್ ಅವರ ಒಟ್ಟಾರೆ ಹೂಡಿಕೆ ಪ್ರವೃತ್ತಿ ಹೇಗೆ?

ಅವರ ಆಸ್ತಿಪಾಸ್ತಿ ಮತ್ತು ಹೂಡಿಕೆ ಗಮನಿಸಿದರೆ ವಿಜಯ್ ಅವರು ಸಂಪ್ರದಾಯಸ್ಥರಂತೆ ಗೋಚರವಾಗುತ್ತಾರೆ. ಹಿಂದಿನ ತಲೆಮಾರುಗಳ ಜನರ ರೀತಿಯಲ್ಲಿ ಹೆಚ್ಚಿನ ಹಣವು ಬ್ಯಾಂಕ್ ಡೆಪಾಸಿಟ್ ಮತ್ತು ರಿಯಲ್ ಎಸ್ಟೇಟ್​ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಷೇರುಗಳಲ್ಲಿ ಶೇ. 1ಕ್ಕಿಂತಲೂ ಕಡಿಮೆ ಹೂಡಿಕೆ ಮಾಡಿರುವುದು ಗಮನಾರ್ಹ.

ಇದನ್ನೂ ಓದಿ: ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್

ವಿಜಯ್ ಅವರ ವಾಹನ, ಒಡವೆ ಇತ್ಯಾದಿ ಆಸ್ತಿಗಳು

ವಿಜಯ್ ಅವರು ಐದು ಕಾರು ಮತ್ತು ಒಂದು ಬೈಕ್ ಹೊಂದಿದ್ದಾರೆ. ಇವೆಲ್ಲವೂ ಕಳೆದ ಐದಾರು ವರ್ಷಗಳಲ್ಲಿ ಖರೀದಿಸಿರುವಂಥವು. ಟೊಯೊಟಾ ಲೆಕ್ಸಸ್ 350, ಬಿಎಂಡಬ್ಲ್ಯು ಐ7, ಟೊಯೊಟಾ ವೆಲ್​ಫೈರ್, ಬಿಎಂಡಬ್ಲ್ಯು 530, ಮಾರುತಿ ಸ್ವಿಫ್ಟ್, ಟಿವಿಎಸ್ ಎಕ್ಸ್​ಎಲ್ ಸೂಪರ್ ಬೈಕ್ ವಾಹನಗಳಿವೆ ಎಂದು ವಿಜಯ್ ಘೋಷಿಸಿಕೊಂಡಿದ್ದಾರೆ.

ಇದರಲ್ಲಿ ಟೊಯೊಟಾ ಲೆಕ್ಸಸ್ ಕಾರಿನ ಮೌಲ್ಯ ಮೂರು ಕೋಟಿ ರೂ ಇದೆ. ಬಿಎಂಡಬ್ಲ್ಯು ಐ7 ಕಾರಿನ ಮೌಲ್ಯ 2 ಕೋಟಿ ರೂಗೂ ಅಧಿಕ ಇದೆ.

ವಿಜಯ್ ಅವರು 1.2 ಕೋಟಿ ರೂ ಮೌಲ್ಯದ 883 ಗ್ರಾಮ್ ತೂಕದ ಚಿನ್ನ ಮತ್ತು ಒಡವೆ ಆಸ್ತಿಗಳನ್ನು ಹೊಂದಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ?
ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ?
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: BJP ಶಾಸಕಿ ಮನೆ ಬಳಿಯೇ ಬಾಂಬ್​​ ಸ್ಫೋಟ
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: BJP ಶಾಸಕಿ ಮನೆ ಬಳಿಯೇ ಬಾಂಬ್​​ ಸ್ಫೋಟ
ನೀರಿಗಾಗಿ ಮಂಗಗಳ ಪರದಾಟ, ಮನಕಲಕುವ ದೃಶ್ಯ ಇಲ್ಲಿದೆ ನೋಡಿ!
ನೀರಿಗಾಗಿ ಮಂಗಗಳ ಪರದಾಟ, ಮನಕಲಕುವ ದೃಶ್ಯ ಇಲ್ಲಿದೆ ನೋಡಿ!
ಡಿಕೆಶಿ​ಗೆ ಶುಭಸುದ್ದಿ ಸಿಗುತ್ತೆ ಎಂಬ ಮಾತಿಗೆ ಮಾಜಿ ಸಚಿವ ರಾಜಣ್ಣ ಏನಂದ್ರು?
ಡಿಕೆಶಿ​ಗೆ ಶುಭಸುದ್ದಿ ಸಿಗುತ್ತೆ ಎಂಬ ಮಾತಿಗೆ ಮಾಜಿ ಸಚಿವ ರಾಜಣ್ಣ ಏನಂದ್ರು?
‘ಸೆಟ್​​ನಲ್ಲಿ ಮೋನಿಷಾನ ಮಗಳು ಅಂತ ನಾನು ಯಾವಾಗಲೂ ನೋಡಿಲ್ಲ’; ದುನಿಯಾ ವಿಜಯ್
‘ಸೆಟ್​​ನಲ್ಲಿ ಮೋನಿಷಾನ ಮಗಳು ಅಂತ ನಾನು ಯಾವಾಗಲೂ ನೋಡಿಲ್ಲ’; ದುನಿಯಾ ವಿಜಯ್
ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ
ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ
ಸುವೇಂದು ಅಧಿಕಾರಿಯೇ ದುಷ್ಕರ್ಮಿಗಳ ಗುರಿ? ಹೆಚ್ಚಾಯ್ತು ಅನುಮಾನ
ಸುವೇಂದು ಅಧಿಕಾರಿಯೇ ದುಷ್ಕರ್ಮಿಗಳ ಗುರಿ? ಹೆಚ್ಚಾಯ್ತು ಅನುಮಾನ
ಕಾರು ಪಾರ್ಕ್ ಮಾಡಿ ಹೋಗುವಾಗ ಬೆಲೆಬಾಳುವ ವಸ್ತು ಬಿಟ್ಟು ಹೋಗ್ತೀರಾ? ಎಚ್ಚರ
ಕಾರು ಪಾರ್ಕ್ ಮಾಡಿ ಹೋಗುವಾಗ ಬೆಲೆಬಾಳುವ ವಸ್ತು ಬಿಟ್ಟು ಹೋಗ್ತೀರಾ? ಎಚ್ಚರ
ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ಹಾವು
ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ಹಾವು