AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ7 ಸಭೆಯಲ್ಲಿ ನಾವಿಕರ ರಕ್ಷಣೆ ಬಗ್ಗೆ ಮೋದಿ ಮಾತನಾಡಿದ್ದು ಸುಮ್ಮನೆ ಅಲ್ಲ; ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ ಭಾರತೀಯ ನಾವಿಕರು

Indian Sailors at Risk: ಜಿ7 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಾವಿಕರ ರಕ್ಷಣೆಗೆ ಆದ್ಯತೆ ಕೊಡಬೇಕು ಎಂದಿದ್ದಾರೆ. ಗಲ್ಫ್ ಪ್ರದೇಶದಲ್ಲಿ ಹಡಗುಗಳ ಮೇಲೆ ದಾಳಿಗಳಾಗಿ ಹಲವು ಭಾರತೀಯ ನಾವಿಕರು ಬಲಿಯಾಗಿರುವ ಘಟನೆಗಳ ಹಿನ್ನೆಲೆಯಲ್ಲಿ ಮೋದಿ ಈ ಮಾತು ಹೇಳಿದ್ದಾರೆ. ವಿಶ್ವದಲ್ಲಿರುವ ಪ್ರತೀ ಐದು ನಾವಿಕರಲ್ಲಿ ಒಬ್ಬರು ಭಾರತೀಯರಾಗಿದ್ದಾರೆ. ಜಗತ್ತಿನ ಟ್ರೇಡಿಂಗ್​ನಲ್ಲಿ ಈ ನಾವಿಕರ ಪಾತ್ರವೂ ಮಹತ್ವದ್ದಿದೆ.

ಜಿ7 ಸಭೆಯಲ್ಲಿ ನಾವಿಕರ ರಕ್ಷಣೆ ಬಗ್ಗೆ ಮೋದಿ ಮಾತನಾಡಿದ್ದು ಸುಮ್ಮನೆ ಅಲ್ಲ; ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ ಭಾರತೀಯ ನಾವಿಕರು
ಹಡಗುImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 17, 2026 | 3:46 PM

Share

ನವದೆಹಲಿ, ಜೂನ್ 17: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಜ್ವಾಲೆ ಈಗ ಜಾಗತಿಕ ಹಡಗು ಸಂಚಾರ ಮಾರ್ಗಗಳಿಗೆ ವ್ಯಾಪಿಸಿದೆ. ಈ ಯುದ್ಧದಲ್ಲಿ ಯಾವುದೇ ಸಂಬಂಧವಿಲ್ಲದ ಭಾರತೀಯ ವಾಣಿಜ್ಯ ಹಡುಗಳ (Merchant Navy) ನಾವಿಕರು ಸಿಲುಕಿಕೊಂಡು ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಓಮನ್ ಕರಾವಳಿಯ ಹಾರ್ಮುಜ್ ಜಲಸಂಧಿ (Strait of Hormuz) ಬಳಿ ನಡೆದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಲ್ಲಿ ಹಲವು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನರು ಸಿಲುಕಿಕೊಂಡಿದ್ದಾರೆ. ಜಿ7 ಸಭೆಯಲ್ಲಿ ಖುದ್ದು ಪ್ರಧಾನಿ ಅವರೇ ಭಾರತೀಯ ನಾವಿಕರ ರಕ್ಷಣೆಗೆ ಆದ್ಯತೆ ಕೊಡಲಾಗುತ್ತದೆ ಎಂದಿದ್ದಾರೆ.

ಜಗತ್ತಿನಾದ್ಯಂತ ಸಾಗುವ ವಾಣಿಜ್ಯ ಹಡಗುಗಳಲ್ಲಿ (Merchant Ships) ಕೆಲಸ ಮಾಡುವ ಪ್ರತಿ ಐದು ನಾವಿಕರಲ್ಲಿ ಒಬ್ಬರು ಭಾರತೀಯರಾಗಿದ್ದಾರೆ. ಭಾರತೀಯ ಹಡಗು ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ 3,20,000ಕ್ಕೂ ಹೆಚ್ಚು ಸಕ್ರಿಯ ಭಾರತೀಯ ನಾವಿಕರು ಜಾಗತಿಕ ಸಮುದ್ರ ಮಾರ್ಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ನಾವಿಕರು ಜಾಗತಿಕ ವ್ಯಾಪಾರದ ಪ್ರಮುಖ ಕೊಂಡಿ ಎನಿಸಿದ್ದಾರೆ. ಅಷ್ಟಕ್ಕೂ ಜಾಗತಿಕವಾಗಿ ಇರುವ ನಾವಿಕರಲ್ಲಿ ಭಾರತೀಯರ ಸಂಖ್ಯೆ ಯಾಕೆ ಹೆಚ್ಚು ಇದೆ?

ಭಾರತವು ವಿಶಾಲವಾದ ಸಮುದ್ರ ತೀರವನ್ನು ಹೊಂದಿದ್ದು, ನಾವಿಕ ವೃತ್ತಿ ಇಲ್ಲಿ ತಲೆಮಾರುಗಳಿಂದ ಹಾಸುಹೊಕ್ಕಾಗಿದೆ. ಭಾರತದಲ್ಲಿ ವಿಶ್ವದರ್ಜೆಯ ಕಡಲ ತರಬೇತಿ ವ್ಯವಸ್ಥೆ (Maritime Training Ecosystem) ಇದ್ದು, ಜಾಗತಿಕ ಗುಣಮಟ್ಟದ ನುರಿತ ಸಿಬ್ಬಂದಿಯನ್ನು ಸಿದ್ಧಪಡಿಸುತ್ತವೆ. ಭಾರತದ ಸ್ಥಳೀಯ ಉದ್ಯೋಗ ಮಾರುಕಟ್ಟೆಗೆ ಹೋಲಿಸಿದರೆ ಮರ್ಚೆಂಟ್ ನೇವಿಯಲ್ಲಿ ಸಿಗುವ ಸಂಬಳ ಅತ್ಯಂತ ಆಕರ್ಷಕವಾಗಿರುತ್ತದೆ. ಹೀಗಾಗಿ, ಜಾಗತಿಕ ನಾವಿಕರಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿರುವುದು.

ಇದನ್ನೂ ಓದಿ: ಪಿಜ್ಜಾ ಹಟ್ 2.7 ಬಿಲಿಯನ್ ಡಾಲರ್​ಗೆ ಮಾರಾಟ; ಚೀನಾಯೇತರ ಮಾರುಕಟ್ಟೆಗಳಲ್ಲಿನ ಬ್ಯುಸಿನೆಸ್ ಲಾಂಗ್​ರೇಂಜ್ ಕ್ಯಾಪಿಟಲ್ ಪಾಲು

ಪ್ರಾಣದ ಹಂಗು ತೊರೆದು ಭಾರತೀಯರು ಮರ್ಚೆಂಟ್ ನೇವಿ ಸೇರುವುದೇಕೆ?

ಯುದ್ಧ ಪೀಡಿತ ಸಮುದ್ರ ಮಾರ್ಗಗಳಲ್ಲಿ ಜೀವಕ್ಕೆ ಅಪಾಯವಿದೆ ಎಂದು ಗೊತ್ತಿದ್ದರೂ ಸಾವಿರಾರು ಭಾರತೀಯ ಯುವಕರು ಈ ವೃತ್ತಿಯನ್ನು ಆಯ್ದುಕೊಳ್ಳಲು ಕೆಲವು ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿವೆ. ಈ ಉದ್ಯಮಕ್ಕೆ ಸೇರುವ ಬಹುತೇಕ ಯುವಕರು ಭಾರತದ ಗ್ರಾಮೀಣ ಭಾಗದ, ಕೃಷಿ ಹಿನ್ನೆಲೆಯ ಅಥವಾ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರಾಗಿರುತ್ತಾರೆ. ಸಾಲದ ಸುಳಿಯಿಂದ ಹೊರಬರಲು ಮತ್ತು ಕುಟುಂಬವನ್ನು ಆರ್ಥಿಕವಾಗಿ ಸಬಲಗೊಳಿಸಲು ಇದನ್ನು ಸುಲಭ ಮಾರ್ಗವಾಗಿ ಕಾಣುತ್ತಾರೆ.

ಕಡಿಮೆ ವಿದ್ಯಾರ್ಹತೆಗೆ ಹೆಚ್ಚಿನ ಸಂಬಳ: ಸಾಮಾನ್ಯ ಪದವಿ ಅಥವಾ ಹೈಸ್ಕೂಲ್ ಮುಗಿಸಿದ ಯುವಕರಿಗೆ ಭಾರತದ ಇತರೆಡೆ ಸಿಗುವ ಸಂಬಳಕ್ಕಿಂತ 3 ರಿಂದ 4 ಪಟ್ಟು ಹೆಚ್ಚು ಸಂಬಳ (ತಿಂಗಳಿಗೆ ಸುಮಾರು 450 ರಿಂದ 1,000 ಡಾಲರ್ ಅಥವಾ ಅದಕ್ಕಿಂತ ಹೆಚ್ಚು) ಇಲ್ಲಿ ಆರಂಭದಲ್ಲೇ ಸಿಗುತ್ತದೆ. ಹೀಗಾಗಿ, ಬಹಳಷ್ಟು ಯುವಕರು ಈ ಉದ್ಯೋಗಕ್ಕೆ ಮುಂದೆ ಬರುತ್ತಾರೆ.

G7 ಶೃಂಗಸಭೆಯಲ್ಲಿ ಭಾರತೀಯ ನಾವಿಕರ ರಕ್ಷಣೆಗೆ ಪಿಎಂ ಮೋದಿ ಆದ್ಯತೆ

ಭಾರತೀಯ ನಾವಿಕರು ಜಾಗತಿಕ ಆರ್ಥಿಕತೆಯ ಸಪ್ಲೈ ಚೈನ್ (ಪೂರೈಕೆ ಸರಪಳಿ) ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಇತ್ತೀಚಿನ ಅಮೆರಿಕ-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ನೌಕಾಪಡೆ ವಿಧಿಸಿರುವ ದಿಗ್ಬಂಧನ ಹಾಗೂ ಇರಾನ್‌ನ ಪ್ರತಿದಾಳಿಗಳ ನಡುವೆ ಭಾರತೀಯ ಸಿಬ್ಬಂದಿ ಇರುವ ವಾಣಿಜ್ಯ ಹಡಗುಗಳು ಜಖಂಗೊಳ್ಳುತ್ತಿವೆ.

ಇದನ್ನೂ ಓದಿ: ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವೇ ಅಗ್ರಗಣ್ಯ: 2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ವಹಿವಾಟು

ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿದಾಗ, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ರಕ್ಷಣೆ ಮತ್ತು ಭಾರತೀಯ ನಾವಿಕರ (Seafare Workers) ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಬೇಕು ಎಂದು ಜಾಗತಿಕ ನಾಯಕರ ಮುಂದೆ ಪ್ರತಿಪಾದಿಸಿದ್ದರು. ನಾಗರಿಕ ಹಡಗುಗಳ ಮೇಲೆ ನಡೆಯುವ ಇಂತಹ ಮಾರಕ ದಾಳಿಗಳನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ ಮತ್ತು ಅಮೆರಿಕ ಹಾಗೂ ಇರಾನ್ ರಾಯಭಾರಿಗಳಿಗೆ ತನ್ನ ಕಳವಳವನ್ನು ಅಧಿಕೃತವಾಗಿ ರವಾನಿಸಿದೆ.

“ಅಪಾಯದ ಮುನ್ಸೂಚನೆ ಇದ್ದರೂ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಭಾರತೀಯ ನಾವಿಕರು, ಕೇವಲ ಹಣ ಗಳಿಸುತ್ತಿಲ್ಲ, ಜಾಗತಿಕ ವಾಣಿಜ್ಯವನ್ನು ಜೀವಂತವಾಗಿಟ್ಟಿದ್ದಾರೆ. ಇವರ ರಕ್ಷಣೆ ಜಾಗತಿಕ ಮಟ್ಟದಲ್ಲಿ ಅತ್ಯಗತ್ಯವಾಗಿದೆ” ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
'ಗ್ಯಾರಂಟಿಯಲ್ಲಿ ಅಕ್ರಮವಾಗಿದೆ ಎಂದಾದರೆ ಅನುಷ್ಠಾನ ಸಮಿತಿ ಏನ್ಮಾಡ್ತಿತ್ತು?"
'ಗ್ಯಾರಂಟಿಯಲ್ಲಿ ಅಕ್ರಮವಾಗಿದೆ ಎಂದಾದರೆ ಅನುಷ್ಠಾನ ಸಮಿತಿ ಏನ್ಮಾಡ್ತಿತ್ತು?
ಇಷ್ಟು ಫೇಮ್ ಸಿಕ್ಕರೂ ಸಿನಿಮಾಗಳಲ್ಲಿ ಏಕೆ ನಟಿಸಲ್ಲ? ಕಾರಣ ತಿಳಿಸಿದ ಹನುಮಂತ
ಇಷ್ಟು ಫೇಮ್ ಸಿಕ್ಕರೂ ಸಿನಿಮಾಗಳಲ್ಲಿ ಏಕೆ ನಟಿಸಲ್ಲ? ಕಾರಣ ತಿಳಿಸಿದ ಹನುಮಂತ
ಜೆಡಿಎಸ್​​ನಿಂದ ಕಾಂಗ್ರೆಸ್​​ ಶಾಸಕರ ಸಂಪರ್ಕ ಸುದ್ದಿ ಸುಳ್ಳೆಂದ ಹೆಚ್​​ಡಿಕೆ
ಜೆಡಿಎಸ್​​ನಿಂದ ಕಾಂಗ್ರೆಸ್​​ ಶಾಸಕರ ಸಂಪರ್ಕ ಸುದ್ದಿ ಸುಳ್ಳೆಂದ ಹೆಚ್​​ಡಿಕೆ