AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಜ್ಜಾ ಹಟ್ 2.7 ಬಿಲಿಯನ್ ಡಾಲರ್​ಗೆ ಮಾರಾಟ; ಚೀನಾಯೇತರ ಮಾರುಕಟ್ಟೆಗಳಲ್ಲಿನ ಬ್ಯುಸಿನೆಸ್ ಲಾಂಗ್​ರೇಂಜ್ ಕ್ಯಾಪಿಟಲ್ ಪಾಲು

Yum Brands sells Pizza Hut for 2.7 billion USD: ಅಮೆರಿಕ ಮೂಲದ ಯಮ್ ಬ್ರ್ಯಾಂಡ್ಸ್ ಸಂಸ್ಥೆ ತನ್ನ ಪಿಜ್ಜಾ ಹಟ್ ಬ್ಯುಸಿನೆಸ್ ಅನ್ನು ಮಾರಿದೆ. ಚೀನಾದ ಬ್ಯುಸಿನೆಸ್ ಮತ್ತು ಚೀನಾಯೇತರ ಬ್ಯುಸಿನೆಸ್ ಎಂದು ಪ್ರತ್ಯೇಕಿಸಿ ಮಾರಾಟ ಮಾಡಿದೆ. ಚೀನಾಯೇತರ ಬ್ಯುಸಿನೆಸ್ ಅನ್ನು ಅಮೆರಿಕದ ಲಾಂಗ್ ರೇಂಜ್ ಕ್ಯಾಪಿಟಲ್​ಗೆ ಮಾರಿದರೆ, ಚೀನಾ ಬ್ಯುಸಿನೆಸ್ ಅನ್ನು ಯಮ್ ಚೀನಾ ಹೋಲ್ಡಿಂಗ್ಸ್​ಗೆ ಮಾರಿದೆ.

ಪಿಜ್ಜಾ ಹಟ್ 2.7 ಬಿಲಿಯನ್ ಡಾಲರ್​ಗೆ ಮಾರಾಟ; ಚೀನಾಯೇತರ ಮಾರುಕಟ್ಟೆಗಳಲ್ಲಿನ ಬ್ಯುಸಿನೆಸ್ ಲಾಂಗ್​ರೇಂಜ್ ಕ್ಯಾಪಿಟಲ್ ಪಾಲು
ಪಿಜ್ಜಾ ಹಟ್Image Credit source: STR/NurPhoto via Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 17, 2026 | 1:32 PM

Share

ಬೀಜಿಂಗ್, ಜೂನ್ 17: ಯಮ್! ಬ್ರಾಂಡ್ಸ್ (Yum! Brands) ಸಂಸ್ಥೆಯು ತನ್ನ ಅಧೀನದಲ್ಲಿದ್ದ ಪ್ರಸಿದ್ಧ ಪಿಜ್ಜಾ ಹಟ್ (Pizza Hut) ಉದ್ಯಮವನ್ನು ಎರಡು ಪ್ರತ್ಯೇಕ ಒಪ್ಪಂದಗಳ ಮೂಲಕ ಒಟ್ಟು 2.7 ಬಿಲಿಯನ್ ಡಾಲರ್ (ಸುಮಾರು ₹25,400 ಕೋಟಿಗೂ ಅಧಿಕ) ಮೊತ್ತಕ್ಕೆ ಮಾರಾಟ ಮಾಡಲು ನಿರ್ಧರಿಸಿದೆ. ಇದರೊಂದಿಗೆ ಕಂಪನಿಯು 4 ಬಿಲಿಯನ್ ಡಾಲರ್ ಮೌಲ್ಯದ ಷೇರು ಮರುಖರೀದಿ (Share Buyback) ಯೋಜನೆಯನ್ನೂ ಪ್ರಕಟಿಸಿದೆ. ಜಾಗತಿಕ ಮಟ್ಟದಲ್ಲಿ ಫಾಸ್ಟ್‌ಫುಡ್ ಉದ್ಯಮದ ದೈತ್ಯ ಸಂಸ್ಥೆಯಾದ ಯಮ್ ಬ್ರಾಂಡ್ಸ್, ತನ್ನ ಪಿಜ್ಜಾ ಹಟ್ ವ್ಯವಹಾರವನ್ನು ಎರಡು ಭಾಗಗಳಾಗಿ ಮಾರಾಟ ಮಾಡುತ್ತಿದೆ. ಚೀನಾದ ಹೊರಗಿನ ಬ್ಯುಸಿನೆಸ್ ಮತ್ತು ಚೀನಾದೊಳಗಿನ ಬ್ಯುಸಿನೆಸ್ ಆಗಿ ಬೇರ್ಪಡಿಸಿ ಮಾರುತ್ತಿದೆ.

ಚೀನಾದ ಹೊರಗಿನ ವ್ಯವಹಾರ: ಚೀನಾ ದೇಶವನ್ನು ಹೊರತುಪಡಿಸಿ ಜಗತ್ತಿನಾದ್ಯಂತ ಇರುವ ಪಿಜ್ಜಾ ಹಟ್ ಉದ್ಯಮವನ್ನು ಅಮೆರಿಕ ಮೂಲದ ಖಾಸಗಿ ಇಕ್ವಿಟಿ ಸಂಸ್ಥೆಯಾದ ಲಾಂಗ್‌ರೇಂಜ್ ಕ್ಯಾಪಿಟಲ್ (LongRange Capital) ಸುಮಾರು 1.5 ಬಿಲಿಯನ್ ಡಾಲರ್‌ಗೆ ಖರೀದಿಸುತ್ತಿದೆ.

ಚೀನಾದೊಳಗಿನ ವ್ಯವಹಾರ: ಚೀನಾದಲ್ಲಿನ (Mainland China) ಪಿಜ್ಜಾ ಹಟ್ ಉದ್ಯಮವನ್ನು ಅಲ್ಲಿನ ಪ್ರಮುಖ ರೆಸ್ಟೋರೆಂಟ್ ನಿರ್ವಾಹಕ ಸಂಸ್ಥೆಯಾದ ಯಮ್ ಚೀನಾ ಹೋಲ್ಡಿಂಗ್ಸ್ (Yum China Holdings) ಸುಮಾರು 1.2 ಬಿಲಿಯನ್ ಡಾಲರ್‌ಗೆ ಖರೀದಿಸುತ್ತಿದೆ. ಇಲ್ಲಿ ಯಮ್ ಚೀನಾ ಹೋಲ್ಡಿಂಗ್ಸ್ ಸಂಸ್ಥೆಯು ಯಮ್ ಬ್ರ್ಯಾಂಡ್ಸ್​ನ ಎಲ್ಲಾ ಉತ್ಪನ್ನಗಳ ಮಾಸ್ಟರ್ ಫ್ರಾಂಚೈಸಿಯಾಗಿತ್ತು. ಈಗ ಸಂಪೂರ್ಣ ಚೀನಾ ಬ್ಯುಸಿನೆಸ್​ನ ಮಾಲಕತ್ವವನ್ನೇ ಪಡೆದುಕೊಂಡಂತಾಗಿದೆ.

ಇದನ್ನೂ ಓದಿ: ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವೇ ಅಗ್ರಗಣ್ಯ: 2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ವಹಿವಾಟು

ತೆರಿಗೆಗಳು ಮತ್ತು ಇತರ ಶುಲ್ಕಗಳ ಕಡಿತದ ನಂತರ ಯಮ್ ಬ್ರಾಂಡ್ಸ್ ಸಂಸ್ಥೆಗೆ ಈ ಮಾರಾಟದಿಂದ ಸುಮಾರು 2.3 ಬಿಲಿಯನ್ ಡಾಲರ್ ನಿವ್ವಳ ಹಣ ಸಿಗಲಿದೆ ಎಂದು ಅಂದಾಜಿಸಲಾಗಿದೆ. 2026ರ ಮೂರನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ) ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಪಿಜ್ಜಾ ಹಟ್ ಮಾರಾಟಕ್ಕೆ ಮುಖ್ಯ ಕಾರಣಗಳೇನು?

ಕಳೆದ ಕೆಲವು ವರ್ಷಗಳಿಂದ ಡೊಮಿನೋಸ್‌ನಂತಹ ಪ್ರತಿಸ್ಪರ್ಧಿಗಳು ಮತ್ತು ಡೆಲಿವರಿ ಆ್ಯಪ್‌ಗಳ (DoorDash, Uber Eats ಇತ್ಯಾದಿ) ತೀವ್ರ ಪೈಪೋಟಿಯಿಂದಾಗಿ ಪಿಜ್ಜಾ ಹಟ್ ಜಾಗತಿಕವಾಗಿ ಮಾರಾಟದ ಕುಸಿತವನ್ನು ಎದುರಿಸುತ್ತಿತ್ತು. ಅದನ್ನು ಮಾರಲು ಇದು ಒಂದು ಕಾರಣ. ಹಾಗೆಯೇ, ಎರಡನೇ ಕಾರಣ ಹೆಚ್ಚುತ್ತಿರುವ ವೆಚ್ಚ. ಜಾಗತಿಕವಾಗಿ ಹಣದುಬ್ಬರ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಉದ್ಯಮದ ನಿರ್ವಹಣಾ ವೆಚ್ಚ ದುಬಾರಿಯಾಗಿತ್ತು.

ಮಗದೊಂದು ಕಾರಣ ಗ್ರಾಹಕರ ಅಭ್ಯಾಸಗಳ ಬದಲಾವಣೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಆರೋಗ್ಯಕರ ಆಹಾರ ಪದ್ಧತಿ ಹಾಗೂ ತೂಕ ಇಳಿಸುವ ಔಷಧಿಗಳ (GLP-1 drugs) ಕಡೆಗೆ ಆಕರ್ಷಿತರಾಗುತ್ತಿರುವುದು ಕೂಡ ಫಾಸ್ಟ್‌ಫುಡ್ ಉದ್ಯಮದ ಮೇಲೆ ಪ್ರಭಾವ ಬೀರಿದೆ.

ಪಿಜ್ಜಾ ಹಟ್ ಮಾರಾಟದ ನಂತರ ಯಮ್ ಬ್ರಾಂಡ್ಸ್ ಸಂಸ್ಥೆಯು ತನ್ನ ಹೆಚ್ಚು ಲಾಭದಾಯಕ ಹಾಗೂ ವೇಗವಾಗಿ ಬೆಳೆಯುತ್ತಿರುವ ಕೆಎಫ್‌ಸಿ (KFC) ಮತ್ತು ಟ್ಯಾರೋ ಬೆಲ್ (Taco Bell) ಬ್ರಾಂಡ್‌ಗಳ ಮೇಲೆ ಸಂಪೂರ್ಣ ಗಮನ ಹರಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಕೆಲವೇ ಎಐ ಮಾಡಲ್​ಗಳು ಇಡೀ ಉದ್ಯಮವನ್ನೇ ನುಂಗಿ ನೀರು ಕುಡಿಯಲು ಬಿಡಬಾರದು; ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಬಿಲಿಯನ್ ಡಾಲರ್ ಷೇರು ಮರುಖರೀದಿ

ಈ ಮಾರಾಟದ ನಿರ್ಧಾರದ ಬೆನ್ನಲ್ಲೇ, ಯಮ್ ಬ್ರಾಂಡ್ಸ್ ಮಂಡಳಿಯು ಹೆಚ್ಚುವರಿಯಾಗಿ 4 ಬಿಲಿಯನ್ ಡಾಲರ್ (ಸುಮಾರು ₹38,000 ಕೋಟಿ) ಮೌಲ್ಯದ ಷೇರುಗಳನ್ನು ಮಾರುಕಟ್ಟೆಯಿಂದ ಮರುಖರೀದಿ ಮಾಡಲು ಅನುಮೋದನೆ ನೀಡಿದೆ. ಈ ಹಣವನ್ನು ಉದ್ಯಮದ ಬೆಳವಣಿಗೆಗೆ ಹೂಡಿಕೆ ಮಾಡಲು ಮತ್ತು ಹೂಡಿಕೆದಾರರಿಗೆ ಲಾಭವನ್ನು ಮರಳಿ ನೀಡಲು ಬಳಸಲಾಗುತ್ತದೆ. ಈ ಧನಾತ್ಮಕ ಸುದ್ದಿಯಿಂದಾಗಿ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಯಮ್ ಬ್ರಾಂಡ್ಸ್‌ನ ಷೇರುಗಳು ಶೇಕಡಾ 2 ರಷ್ಟು ಏರಿಕೆ ಕಂಡಿವೆ.

ಭಾರತದ ಮೇಲಾಗುವ ಪರಿಣಾಮ?

ಭಾರತದಲ್ಲಿ ಪಿಜ್ಜಾ ಹಟ್ ಫ್ರಾಂಚೈಸಿಯನ್ನು ಪ್ರಮುಖವಾಗಿ ದೇವಯಾನಿ ಇಂಟರ್ನ್ಯಾಷನಲ್ (Devyani International) ಮತ್ತು ಸಫೈರ್ ಫುಡ್ಸ್ (Sapphire Foods) ಸಂಸ್ಥೆಗಳು ನಡೆಸುತ್ತವೆ. ಈ ಜಾಗತಿಕ ಮಾಲೀಕತ್ವದ ಬದಲಾವಣೆಯು ಭಾರತದ ದೈನಂದಿನ ರೆಸ್ಟೋರೆಂಟ್ ನಿರ್ವಹಣೆಯ ಮೇಲೆ ತಕ್ಷಣದ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಆದರೆ ಹೊಸ ಮಾಲೀಕರಾದ ‘ಲಾಂಗ್‌ರೇಂಜ್ ಕ್ಯಾಪಿಟಲ್’ ಭವಿಷ್ಯದಲ್ಲಿ ಜಾಗತಿಕವಾಗಿ ತರಲಿರುವ ಹೊಸ ತಂತ್ರಜ್ಞಾನ ಹಾಗೂ ಬೆಳವಣಿಗೆಯ ಯೋಜನೆಗಳು ಭಾರತದ ಮಾರುಕಟ್ಟೆಗೂ ಅನ್ವಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
'ಗ್ಯಾರಂಟಿಯಲ್ಲಿ ಅಕ್ರಮವಾಗಿದೆ ಎಂದಾದರೆ ಅನುಷ್ಠಾನ ಸಮಿತಿ ಏನ್ಮಾಡ್ತಿತ್ತು?"
'ಗ್ಯಾರಂಟಿಯಲ್ಲಿ ಅಕ್ರಮವಾಗಿದೆ ಎಂದಾದರೆ ಅನುಷ್ಠಾನ ಸಮಿತಿ ಏನ್ಮಾಡ್ತಿತ್ತು?
ಇಷ್ಟು ಫೇಮ್ ಸಿಕ್ಕರೂ ಸಿನಿಮಾಗಳಲ್ಲಿ ಏಕೆ ನಟಿಸಲ್ಲ? ಕಾರಣ ತಿಳಿಸಿದ ಹನುಮಂತ
ಇಷ್ಟು ಫೇಮ್ ಸಿಕ್ಕರೂ ಸಿನಿಮಾಗಳಲ್ಲಿ ಏಕೆ ನಟಿಸಲ್ಲ? ಕಾರಣ ತಿಳಿಸಿದ ಹನುಮಂತ
ಜೆಡಿಎಸ್​​ನಿಂದ ಕಾಂಗ್ರೆಸ್​​ ಶಾಸಕರ ಸಂಪರ್ಕ ಸುದ್ದಿ ಸುಳ್ಳೆಂದ ಹೆಚ್​​ಡಿಕೆ
ಜೆಡಿಎಸ್​​ನಿಂದ ಕಾಂಗ್ರೆಸ್​​ ಶಾಸಕರ ಸಂಪರ್ಕ ಸುದ್ದಿ ಸುಳ್ಳೆಂದ ಹೆಚ್​​ಡಿಕೆ
ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ?
ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಪ್ರಯಾಣ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಪ್ರಯಾಣ ಯೋಗ!
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ವಿಶೇಷ ಗೌರವ
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ವಿಶೇಷ ಗೌರವ
ಫ್ರಾನ್ಸ್‌ನ ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ
ಫ್ರಾನ್ಸ್‌ನ ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ
ಬಿಗಿ ಅಪ್ಪುಗೆಯಿಲ್ಲದೆ, ಕೈ ಕುಲುಕಿ ಟ್ರಂಪ್​- ಮೋದಿ ಉಭಯಕುಶಲೋಪರಿ
ಬಿಗಿ ಅಪ್ಪುಗೆಯಿಲ್ಲದೆ, ಕೈ ಕುಲುಕಿ ಟ್ರಂಪ್​- ಮೋದಿ ಉಭಯಕುಶಲೋಪರಿ