AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಪ್ಪಂದ ಇಷ್ಟವಾಗದಿದ್ದರೆ ಮತ್ತೆ ಬಾಂಬ್ ಹಾಕುತ್ತೇವೆ! ಇರಾನ್​ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತೆ ಯುದ್ಧದ ಮುನ್ಸೂಚನೆ ನೀಡಿದ್ದಾರೆ. ಇರಾನ್‌ನೊಂದಿಗೆ ಸಿದ್ಧವಾಗಿರುವ ತಿಳುವಳಿಕಾ ಪತ್ರ (MoU) ಅಂತಿಮವಲ್ಲ ಎಂದು ಸ್ಪಷ್ಟಪಡಿಸಿರುವ ಡೊನಾಲ್ಡ್ ಟ್ರಂಪ್, "ಒಂದು ವೇಳೆ ಈ ಒಪ್ಪಂದದ ಅಂತಿಮ ನಿಯಮಗಳು ನನಗೆ ಇಷ್ಟವಾಗದಿದ್ದರೆ, ಅಮೆರಿಕವು ಇರಾನ್ ಮೇಲೆ ಮತ್ತೆ ಬಾಂಬ್ ದಾಳಿ ನಡೆಸಲು ಹಿಂಜರಿಯುವುದಿಲ್ಲ" ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.

ಒಪ್ಪಂದ ಇಷ್ಟವಾಗದಿದ್ದರೆ ಮತ್ತೆ ಬಾಂಬ್ ಹಾಕುತ್ತೇವೆ! ಇರಾನ್​ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
Donald Trump Image Credit source: AP
ಸುಷ್ಮಾ ಚಕ್ರೆ
|

Updated on: Jun 17, 2026 | 6:40 PM

Share

ಎವಿಯಾನ್, ಜೂನ್ 17: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿದೆ ಎಂಬ ಜಾಗತಿಕ ವರದಿಗಳ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಇರಾನ್‌ಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಫ್ರಾನ್ಸ್‌ನ ಎವಿಯಾನ್-ಲೆ-ಬೈನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ಟ್ರಂಪ್, ಪ್ರಸ್ತುತ ಇರಾನ್ ಜೊತೆಗೆ ಆಗಿರುವುದು ಅಂತಿಮ ಒಪ್ಪಂದವಲ್ಲ ಎಂದು ಹೇಳಿದ್ದಾರೆ.

ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದದ ನಿಯಮಗಳ ಕುರಿತು ಜಿ7 ನಾಯಕರೊಂದಿಗೆ ಚರ್ಚಿಸುವಾಗ ಡೊನಾಲ್ಡ್ ಟ್ರಂಪ್ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಇರಾನ್ ಜೊತೆಗಿನ ಪ್ರಸ್ತುತ ಮಾತುಕತೆಗಳು ಇನ್ನು ಪ್ರಗತಿಯಲ್ಲಷ್ಟೇ ಇವೆ. ಆ ಒಪ್ಪಂದದ ಅಂತಿಮ ಅಗ್ರಿಮೆಂಟ್ ನನ್ನ ಮೇಜಿನ ಮೇಲೆ ಬಂದಾಗ, ಅದರಲ್ಲಿರುವ ಪ್ರತಿಯೊಂದು ನಿಯಮವೂ ನನಗೆ ಇಷ್ಟವಾಗಬೇಕು. ಒಂದು ವೇಳೆ ಆ ಒಪ್ಪಂದದಲ್ಲಿ ನನಗೆ ಸಣ್ಣ ಲೋಪದೋಷ ಕಂಡುಬಂದರೂ ಅಮೆರಿಕ ತಕ್ಷಣವೇ ಒಪ್ಪಂದದಿಂದ ಹಿಂದೆ ಸರಿಯಲಿದೆ. ಅಷ್ಟೇ ಅಲ್ಲ, ನಾವು ಇರಾನ್ ಮೇಲೆ ಮತ್ತೆ ಬಾಂಬ್‌ಗಳ ಮಳೆ ಸುರಿಸುವುದು ಖಚಿತ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಫ್ರಾನ್ಸ್‌ನ ಜಿ7 ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ

ಕಳೆದ ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಮತ್ತು ಇರಾನ್ ಜಂಟಿಯಾಗಿ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಐತಿಹಾಸಿಕ ಶಾಂತಿ ಒಪ್ಪಂದದ ಚೌಕಟ್ಟಿಗೆ ಒಪ್ಪಿಗೆ ಸೂಚಿಸಿದ್ದವು. ಈ ಒಪ್ಪಂದದ ಅಡಿಯಲ್ಲಿ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳಿಗೂ ಬ್ರೇಕ್ ಬೀಳಲಿದೆ ಎಂದು ಇರಾನ್ ಹಾಗೂ ಪಾಕಿಸ್ತಾನ ಪ್ರತಿಪಾದಿಸಿದ್ದವು. ಇದು ಇಸ್ರೇಲ್‌ನ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.

ಆದರೆ, ಈಗ ಟ್ರಂಪ್ ನೀಡಿರುವ ‘ಬಾಂಬ್ ದಾಳಿ’ಯ ಹೇಳಿಕೆಯು ಇರಾನ್ ಜೊತೆಗಿನ ಇಡೀ ಶಾಂತಿ ಪ್ರಕ್ರಿಯೆಯನ್ನೇ ಮತ್ತೆ ಸಂಶಯದ ಸುಳಿಗೆ ಸಿಲುಕಿಸಿದೆ. ಟ್ರಂಪ್ ಅವರ ಈ ನಿಲುವು ಇಸ್ರೇಲ್ ಅನ್ನು ಸಮಾಧಾನಪಡಿಸಲು ಮತ್ತು ಇರಾನ್ ಮೇಲೆ ರಾಜತಾಂತ್ರಿಕ ಒತ್ತಡವನ್ನು ಮುಂದುವರಿಸಲು ಹೂಡಿರುವ ತಂತ್ರ ಎಂದು ವಿಶ್ಲೇಷಕರು ಭಾವಿಸಿದ್ದಾರೆ.

ಇದನ್ನೂ ಓದಿ: ಸಿಗರೇಟ್ ಬಿಟ್ಟ ಮೆಲೋನಿ, ವಾಚ್ ಮರೆತ ಮ್ಯಾಕ್ರನ್, ಮತ್ತೆ ಮೆಲೋಡಿ ಮೋಡಿ; ಜಿ7 ಶೃಂಗಸಭೆಯ ವೈರಲ್ ಕ್ಷಣಗಳಿವು

ಜಿ7 ಶೃಂಗಸಭೆಯ ಗಂಭೀರ ರಾಜತಾಂತ್ರಿಕ ವೇದಿಕೆಯಲ್ಲಿ ಅಮೆರಿಕದ ಅಧ್ಯಕ್ಷರಿಂದ ಇಂತಹ ನೇರ ಯುದ್ಧದ ಬೆದರಿಕೆ ಬಂದಿರುವುದು ಯುರೋಪಿಯನ್ ಯೂನಿಯನ್ ಸೇರಿದಂತೆ ಇತರ ಜಾಗತಿಕ ದೊಡ್ಡಣ್ಣ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ. ಇಂದು ಫ್ರಾನ್ಸ್​​ನಲ್ಲಿ ಜಿ7 ಶೃಂಗಸಭೆ ಮುಕ್ತಾಯಗೊಳ್ಳಲಿದ್ದು, ಇರಾನ್ ಮತ್ತು ಅಮೆರಿಕದ ನಡುವಿನ ಒಪ್ಪಂದದ ಭವಿಷ್ಯ ಏನಾಗಲಿದೆ ಎಂಬುದು ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ
ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ