AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಾಂಟಂ ಎಐ ಪ್ರಾಜೆಕ್ಟ್; ತಿಂಗಳಿಗೆ 20 ಲಕ್ಷ ಗಳಿಸಿ ಅಂತ ಮೆಸೇಜ್ ಬಂದ್ರೆ ಮೋಸ ಹೋಗ್ಬೇಡಿ; ಅದು ಪಕ್ಕಾ ಫೇಕ್

Fake message on Quantum AI project: ನಿಮ್ಮ ಬ್ಯಾಂಕ್ ಅಕೌಂಟ್​ಗೆ ಹಣ ಬರುತ್ತದೆ. ಈ ಲಿಂಕ್ ಕ್ಲಿಕ್ ಮಾಡಿ ಎಂಬಂತಹ ಮೆಸೇಜ್​ಗಳು ಸರ್ವೇ ಸಾಮಾನ್ಯ. ಇವುಗಳನ್ನು ಕ್ಲಿಕ್ ಮಾಡಿದರೆ ಹಣ ಬರೋದಿಲ್ಲ. ಬದಲಾಗಿ ನಿಮ್ಮ ಅಕೌಂಟ್​ನಿಂದಲೇ ಹಣ ಮಾಯವಾಗುತ್ತದೆ. ಇತ್ತೀಚಿನ ದಿನಗಳಿಂದ ಕ್ವಾಂಟಂ ಎಐ ಪ್ರಾಜೆಕ್ಟ್ ಹೆಸರಲ್ಲಿ ನಕಲಿ ಮೆಸೇಜ್​ಗಳು ಬರುತ್ತಿದೆ. ಪಿಐಬಿ ಫ್ಯಾಕ್ಟ್ ಚೆಕ್ ಇದನ್ನು ಫೇಕ್ ಎಂದು ಸ್ಪಷ್ಟಪಡಿಸಿದೆ.

ಕ್ವಾಂಟಂ ಎಐ ಪ್ರಾಜೆಕ್ಟ್; ತಿಂಗಳಿಗೆ 20 ಲಕ್ಷ ಗಳಿಸಿ ಅಂತ ಮೆಸೇಜ್ ಬಂದ್ರೆ ಮೋಸ ಹೋಗ್ಬೇಡಿ; ಅದು ಪಕ್ಕಾ ಫೇಕ್
ನಕಲಿ ಸುದ್ದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 08, 2025 | 4:50 PM

Share

ನವದೆಹಲಿ, ಸೆಪ್ಟೆಂಬರ್ 9: ಜನರಿಗೆ ಹೆಚ್ಚಿನ ಲಾಭದ ಅಸೆ ತೋರಿಸಿ ಮೋಸ ಮಾಡುವ ಚಿತಾವಣಿ ಇವತ್ತು ನಿನ್ನೆಯದಲ್ಲ. ಬಹಳ ಪೂರ್ವ ಕಾಲದಿಂದಲೂ ಇದು ನಡೆದೇ ಇದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಪೋಂಜಿ ಸ್ಕೀಮ್​ಗಳು ಸಾಕಷ್ಟು ಬೆಳಕಿಗೆ ಬಂದಿವೆ. ಹೊಸ ಹೊಸ ಸ್ಕ್ಯಾಮ್​ಗಳು ಹೊಸ ವೇಷದಲ್ಲಿ ಬರುತ್ತಲೇ ಇವೆ. ಜನರು ಮಾರು ಹೋಗುತ್ತಲೇ ಇದ್ದಾರೆ. ಈಗ ಅನೇಕರ ವಾಟ್ಸಾಪ್​ಗಳಿಗೆ ಕ್ವಾಂಟಂ ಎಐ ಪ್ರಾಜೆಕ್ಟ್ ಕುರಿತ ಮೆಸೇಜ್​ಗಳು ಹರಿದಾಡುತ್ತಿವೆ. ಇದರಲ್ಲಿ ಕೇವಲ 21,000 ರೂ ಹೂಡಿಕೆಯಿಂದ ತಿಂಗಳಿಗೆ 20 ಲಕ್ಷ ರೂ ಹಣ ಗಳಿಸುವ ಅವಕಾಶ ಇದೆ ಎಂದು ಈ ಮೆಸೇಜ್ ಆಸೆ ಹುಟ್ಟಿಸುತ್ತದೆ. ಆದರೆ, ಮೇಲ್ನೋಟಕ್ಕೆ ಯಾರಿಗಾದರೂ ಇದು ಫೇಕ್ ಎಂದನಿಸದೇ ಇರದು. ಪಿಐಬಿ ಫ್ಯಾಕ್ಟ್ ಚೆಕ್ (Fac check) ತಂಡ ಕೂಡ ಈ ಮೆಸೇಜ್ ಬಗ್ಗೆ ಅಲರ್ಟ್ ನೀಡಿದ್ದು, ಜನರು ಇದರ ಬಲೆಗೆ ಬೀಳಬಾರದು ಎಂದು ಮನವಿ ಮಾಡಿದೆ.

ಏನಿದೆ ಈ ಮೆಸೇಜ್​ನಲ್ಲಿ…?

ಸುಧಾ ಮೂರ್ತಿ ಮತ್ತು ನಿರ್ಮಲಾ ಸೀತಾರಾಮನ್ ಅವರು ವೈಯಕ್ತಿಕವಾಗಿ ಕ್ವಾಂಟಂ ಎಐ ಪ್ರಾಜೆಕ್ಟ್ ಅಭಿವೃದ್ಧಿಪಡಿಸಿದ್ದಅರೆ. 21,000 ರೂ ಆರಂಭಿ ಹೂಡಿಕೆ ಮಾಡಿದರೆ ತಿಂಗಳಿಗೆ 20 ಲಕ್ಷ ರೂ ಗಳಿಸುವ ಅವಕಾಶ ಇದೆ. ಇನ್ನೆರಡು ದಿನಗಳವರೆಗೆ ನೊಂದಣಿ ಲಭ್ಯ ಇರುತ್ತದೆ ಎನ್ನುವ ಹೆಡ್ಲೈನ್ ಇರುವ ಮೆಸೇಜ್ ಇದು. ಟೈಮ್ಸ್ ಆಫ್ ಇಂಡಿಯಾದಲ್ಲಿ ಈ ಸುದ್ದಿ ಪ್ರಕಟವಾಗಿದೆ ಎಂಬಂತೆ ಗ್ರಾಫಿಕ್ಸ್ ಮಾಡಿ ಅಂಟಿಸಲಾಗಿದೆ. ನಿರ್ಮಲಾ ಸೀತಾರಾಮನ್ ಮತ್ತು ಸುಧಾಮೂರ್ತಿ ಕೈ ಕುಲುಕುವುದರ ಫೇಕ್ ಚಿತ್ರ ಸೃಷ್ಟಿಸಿ ಸೇರಿಸಲಾಗಿದೆ.

ಇದನ್ನೂ ಓದಿ: ಭಾರತದ 15 ವರ್ಷದ ಭರ್ಜರಿ ಡಿಫೆನ್ಸ್ ಪ್ಲಾನ್; ಯುದ್ಧವೆಂದರೆ ಬಾಹ್ಯಾಕಾಶಕ್ಕೂ ಸೈ, ಎಐಗೂ ಸೈ

ಈ ನಕಲಿ ಸುದ್ದಿಯ ಕೆಳಗೆ ವಿವಿಧ ಸಾಮಾನ್ಯ ವ್ಯಕ್ತಿಗಳ ಫೋಟೋ ಹಾಗೂ ಅವರು ಗಳಿಸಿದರೆನ್ನಲಾದ ಲಾಭದ ಮಾಹಿತಿಯನ್ನೂ ಸೇರಿಸಲಾಗಿದೆ. ಅಮಾಯಕರು ಮೇಲ್ನೋಟಕ್ಕೆ ಈ ಸುದ್ದಿ ಕಂಡು ಮಾರು ಹೋಗುವ ಸಾಧ್ಯತೆ ಇದೆ.

ಪಿಐಬಿ ಫ್ಯಾಕ್ಸ್ ಚೆಕ್ ಹಾಕಿದ ಎಕ್ಸ್ ಪೋಸ್ಟ್

ಪಿಐಬಿ ಫ್ಯಾಕ್ಟ್ ಚೆಕ್​ನ ಎಕ್ಸ್ ಅಕೌಂಟ್ ಈ ಸುದ್ದಿಯನ್ನು ನಕಲಿ ಎಂದು ಸ್ಪಷ್ಟಪಡಿಸಿದೆ. ಇದರಲ್ಲಿ ಬಳಸಲಾಗಿರುವ ಚಿತ್ರವು ನಕಲಿಯಾಗಿದೆ. ಎಐನಿಂದ ಜನರೇಟ್ ಮಾಡಲಾಗಿರುವ ಫೋಟೋ ಅದು. ಟೈಮ್ಸ್ ಆಫ್ ಇಂಡಿಯಾ ಇಂಥ ಯಾವ ಸುದ್​ದಿಯನ್ನೂ ಪ್ರಕಟಿಸಿಲ್ಲ ಎಂದು ಫ್ಯಾಕ್ಟ್ ಚೆಕ್ ತಿಳೀಸಿದೆ. ಅಷ್ಟೇ ಅಲ್ಲ, ಇಂಥ ಇಮೇಜ್​ಗಳಲ್ಲಿರುವ ಯಾವುದೇ ಲಿಂಕ್​ಗಳನ್ನು ಕ್ಲಿಕ್ ಮಾಡಬೇಡಿ. ಅವು ಫಿಶಿಂಗ್ ಪ್ರಯತ್ನವಾಗಿರಬಹುದು ಎಂದು ಎಚ್ಚರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ