ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಬಡವರಿಗೆ ಕಡಿಮೆ ದರದಲ್ಲಿ ಮನೆ ಸಿಗುವಂತೆ ಮಾಡುವ ಕೇಂದ್ರದ ಸ್ಕೀಮ್ ಆಗಿದೆ. 2015ರಲ್ಲಿ ಆರಂಭಗೊಂಡ ಪಿಎಂ ಆವಾಸ್ ಯೋಜನೆ 2024ರ ಡಿಸೆಂಬರ್ವರೆಗೂ ವಿಸ್ತರಣೆ ಆಗಿದೆ. ಅರ್ಹರಿಗೆ ವಸತಿಗಳನ್ನು ಅನುಮೋದಿಸುವ ಅಧಿಕಾರ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದೆ. ಈ ಯೋಜನೆ ಅಡಿ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಸಿಗುತ್ತದೆ. ಬಡ್ಡಿಯೂ ಬಹಳ ಕಡಿಮೆ. ಸರ್ಕಾರದಿಂದಲೂ ಧನಸಹಾಯ ಇರುತ್ತದೆ. ಈ ಯೋಜನೆಗೆ ಅರ್ಹರು ಯಾರು, ಅನರ್ಹರು ಯಾರು ಎಂಬ ವಿವರ ಇಲ್ಲಿದೆ…
ಪಿಎಂ ಆವಾಸ್ ಯೋಜನೆಗೆ (ನಗರ) ಅರ್ಹ ಫಲಾನುಭವಿಗಳು ಯಾರು?
ವ್ಯಕ್ತಿಯು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯುಎಸ್) ಸೇರಿದವರಾಗಿರಬೇಕು. ವಾರ್ಷಿಕ ಆದಾಯ 3 ಲಕ್ಷ ರೂಗಿಂತ ಹೆ್ಚ್ಚಿರಬಾರದು.
ಕೆಳ ಆದಾಯ ಗುಂಪಿನವರು (ಎಲ್ಐಜಿ): ಇವರ ವಾರ್ಷಿಕ ಆದಾಯ 3ರಿಂದ 6 ಲಕ್ಷ ರು.
ಮಧ್ಯಮ ಆದಾಯ ಗುಂಪಿನವರು (ಎಂಐಜಿ-1): ವಾರ್ಷಿಕ ಆದಾಯ 6ರಿಂದ 12 ಲಕ್ಷ ರೂ
ಮಧ್ಯಮ ಆದಾಯ ಗುಂಪಿನವರು (ಎಂಐಜಿ-2): ವಾರ್ಷಿಕ ಆದಾಯ 12ಲಕ್ಷರಿಂದ 18 ಲಕ್ಷ ರೂ