ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ ಟಾಟಾ ಕರ್ವ್ ಕಾರಿನ ವಿಶೇಷತೆಗಳೇನು?
ಬೆಂಗಳೂರು, ಆಗಸ್ಟ್ 23: ತಂತ್ರಜ್ಞಾನ ಉನ್ನತಿಗೊಂಡಂತೆಲ್ಲಾ ಅಪರಾಧಗಳ ಮಟ್ಟವೂ ಮೇಲೇರುತ್ತಿದೆ. ಬಹುತೇಕ ಚಟುವಟಕೆ ಆನ್ಲೈನ್ ಆಗಿರುವುದರಿಂದ ಸೈಬರ್ ಅಪರಾಧಗಳ ಪ್ರಮಾಣ ಮತ್ತು ವ್ಯಾಪ್ತಿ ಹೆಚ್ಚುತ್ತಲೇ ಇದೆ. ಸಿಲಿಕಾನ್ ಸಿಟಿಯಲ್ಲಿ ಹೊಸ ಹೊಸ ರೀತಿಯ ಸೈಬರ್ ಕ್ರೈಮ್ಗಳು ಜರುಗುತ್ತಿರುವುದು ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕ್ಯುಆರ್ ಕೋಡ್ ಸಂಬಂಧಿತ ಸೈಬರ್ ಕ್ರೈಮ್ ಪ್ರಕರಣಗಳು (QR Code Related Crimes) ಹೆಚ್ಚು ನಡೆದಿರುವುದು ಪೊಲೀಸರಿಗೆ (Bangalore Police) ತಲೆನೋವು ತರಿಸಿದೆ. ಪೊಲೀಸರೇ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 2017ರಿಂದ ಈಚೆಗೆ 50,000 ಸೈಬರ್ ಅಪರಾಧ ಘಟನೆಗಳು ದಾಖಲಾಗಿವೆ. ಈ ಪೈಕಿ 20,662 ಪ್ರಕರಣಗಳು ಕ್ಯುಆರ್ ಕೋಡ್ ಸ್ಕ್ಯಾಮ್ಗಳು, ಡೆಬಿಟ್ ಕಾರ್ಡ್ ದುರುಪಯೋಗ, ವಂಚಕ ಲಿಂಕ್ ಇತ್ಯಾದಿ ಮೂಲಕ ಹಣ ಲಪಟಾಯಿಸುವ ಪ್ರಕರಣಗಳೇ ಆಗಿವೆ. ಅಂದರೆ ಸೈಬರ್ ಕೇಸ್ಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಇಂಥ ಪ್ರಕರಣಗಳೇ ಇವೆ.
ಬೆಂಗಳೂರು ಪೊಲೀಸರ ವಾರದ ಸಭೆಗಳಲ್ಲಿ ಕ್ಯೂಆರ್ ಕೋಡ್ ಹಗರಣಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದಂತೆ. ಅಂತೆಯೇ ನಗರದ ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಆಗಾಗ್ಗೆ ಸೋಷಿಯಲ್ ಮೀಡಿಯಾಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಕೂಡ (ಆಗಸ್ಟ್ 22) ಬೆಂಗಳೂರು ನಗರ ಪೊಲೀಸರು ಒಟಿಪಿ ಇತ್ಯಾದಿಯನ್ನು ಮೊಬೈಲ್ಗಳಲ್ಲಿ ಶೇರ್ ಮಾಡದಿರಿ ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಸೈಬರ್ ವಂಚಕರ ಬಗ್ಗೆ ಎಚ್ಚರವಿರಲಿ !!!
ನಿಮ್ಮ OTP ಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.Say no to OTP Sharing, Stay Protected. #BeCyberSafe #CyberSecurityAlert pic.twitter.com/RoCFyJOLDk
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) August 22, 2023
ದುಷ್ಕರ್ಮಿಗಳು ನಿಮ್ಮೊಂದಿಗೆ ಹಣದ ವಹಿವಾಟು ನಡೆಸುವ ನೆವದಲ್ಲಿ ಕ್ಯೂಆರ್ ಕೋಡ್ ಕಳುಹಿಸುತ್ತಾರೆ. ಅದನ್ನು ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆಯಿಂದ ಹಣವನ್ನು ಎಗರಿಸುತ್ತಾರೆ ಈ ಅಪರಾಧಿಗಳು.
ಇದನ್ನೂ ಓದಿ: Aadhaar Updates: ಇಮೇಲ್, ವಾಟ್ಸಾಪ್ನಲ್ಲಿ ಆಧಾರ್ ಅಪ್ಡೇಟ್ ಮಾಡಲು ದಾಖಲೆ ಕಳುಹಿಸದಿರಿ: ಯುಐಡಿಎಐ ಎಚ್ಚರ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ 30 ವರ್ಷದ ವ್ಯಕ್ತಿಯೊಬ್ಬರು ಇಂಥ ಕ್ಯುಆರ್ ಕೋಡ್ ಸ್ಕ್ಯಾಮ್ಗೆ 63,000 ರೂ ಕಳೆದುಕೊಂಡಿದ್ದಾರೆ. ಆಗಸ್ಟ್ 11ರಂದು ಅವರು ಆನ್ಲೈನ್ ಪ್ಲಾಟ್ಫಾರ್ಮ್ವೊಂದರಲ್ಲಿ ತಮ್ಮ ಹಳೆಯ ವಾಷಿಂಗ್ ಮೆಷಿನ್ ಅನ್ನು ಮಾರಲು ಯತ್ನಿಸಿದ್ದರು. ವ್ಯಕ್ತಿಯೊಬ್ಬ ಇದನ್ನು ಖರೀದಿಸಲು ಮುಂದೆ ಬಂದಿದ್ದ. ತತ್ಕ್ಷಣವೇ ಹಣ ಪಾವತಿಸುವುದಾಗಿ ಹೇಳಿ ಕ್ಯುಆರ್ ಕೋಡ್ ಕಳುಹಿಸಿ ಅದನ್ನು ಸ್ಕ್ಯಾನ್ ಮಾಡಲು ತಿಳಿಸಿದ್ದ. ವಂಚನೆಯ ಅರಿವಿಲ್ಲದೇ ಪ್ರೊಫೆಸರ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಾರೆ. ದುಷ್ಕರ್ಮಿಗಳು ಬಹಳ ಬೇಗನೇ ಹಣವನ್ನು ಎಗರಿಸುತ್ತಾರೆ.
ಹಾಗೆಯೇ, 30 ವರ್ಷದ ಗೃಹಿಣಿಯೊಬ್ಬರೂ ಕೂಡ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ತಮ್ಮ ವೀಣೆಯನ್ನು ಮಾರಲು ಇಟ್ಟಿರುತ್ತಾರೆ. ವೀಣೆ ಖರೀದಿಸುವ ಆಸಕ್ತಿ ತೋರಿದ ವ್ಯಕ್ತಿಯೊಬ್ಬ ಆಕೆಯ ಮೊಬೈಲ್ ನಂಬರ್ಗೆ ಒಂದು ಲಿಂಕ್ ಕಳುಹಿಸುತ್ತಾನೆ. ಹಣ ಪಾವತಿಯಾಗುತ್ತದೆ ಎಂದು ನಂಬಿ ಆಕೆ ಆ ಲಿಂಕ್ ಕ್ಲಿಕ್ ಮಾಡುತ್ತಾರೆ. ನೋಡನೋಡುತ್ತಿದ್ದಂತೆಯೇ ಆಕೆಯ ಖಾತೆಯಿಂದ 20,000 ರೂ ಮಾಯವಾಗಿಹೋಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:19 am, Wed, 23 August 23