RBI MPC meet: ಹಣದುಬ್ಬರ ತಡೆಯಲು ವಿಫಲ; ಕರಡು ವರದಿ ಸಿದ್ಧಪಡಿಸಿದ ಆರ್​ಬಿಐ

| Updated By: Ganapathi Sharma

Updated on: Nov 03, 2022 | 5:52 PM

Retail Inflation; ಚಿಲ್ಲರೆ ಹಣದುಬ್ಬರ ನಿಯಂತ್ರಿಸಲು ವಿಫಲವಾಗಿರುವುದಕ್ಕೆ ಸಂಬಂಧಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯ ವಿಶೇಷ ಸಭೆ ಗುರುವಾರ ನಡೆಯಿತು. ಸಭೆಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಿರುವ ವರದಿಯ ಕರಡು ಪ್ರತಿಯನ್ನು ಸಿದ್ಧಪಡಿಸಲಾಗಿದೆ.

RBI MPC meet: ಹಣದುಬ್ಬರ ತಡೆಯಲು ವಿಫಲ; ಕರಡು ವರದಿ ಸಿದ್ಧಪಡಿಸಿದ ಆರ್​ಬಿಐ
ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ (ಸಂಗ್ರಹ ಚಿತ್ರ)
Follow us on

ಮುಂಬೈ: ಚಿಲ್ಲರೆ ಹಣದುಬ್ಬರ (Retail Inflation) ನಿಯಂತ್ರಿಸಲು ವಿಫಲವಾಗಿರುವುದಕ್ಕೆ ಸಂಬಂಧಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹಣಕಾಸು ನೀತಿ ಸಮಿತಿಯ (MPC) ವಿಶೇಷ ಸಭೆ ಗುರುವಾರ ನಡೆಯಿತು. ಸಭೆಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಿರುವ ವರದಿಯ ಕರಡು ಪ್ರತಿಯನ್ನು ಸಿದ್ಧಪಡಿಸಲಾಗಿದೆ. ಆರ್​ಬಿಐ ಕಾಯ್ದೆಯ ಸೆಕ್ಷನ್ ‘45 ಝಡ್​ಎನ್’, 1934ರ ಆರ್​ಬಿಐ ಎಂಪಿಸಿ ನಿಯಂತ್ರಣ ಪ್ರಕ್ರಿಯೆಯ ಹಾಗೂ 2016ರ ಹಣಕಾಸು ನೀತಿ ಪ್ರಕ್ರಿಯೆ ನಿಯಂತ್ರಣದ ಅಡಿಯಲ್ಲಿ, ಹಣದುಬ್ಬರ ನಿಯಂತ್ರಣಕ್ಕೆ ವಿಫಲವಾಗಿರುವ ಬಗ್ಗೆ ಚರ್ಚಿಸಲು ಮತ್ತು ಕರಡು ವರದಿ ಸಿದ್ಧಪಡಿಸಲು ವಿಶೇಷ ಸಭೆ ನಡೆಸಲಾಯಿತು ಎಂದು ಆರ್​ಬಿಐ ಪ್ರಕಟಣೆ ತಿಳಿಸಿದೆ.

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಭೆಯ ಅಧ್ಯಕ್ಷತೆ ವಹಿಸಿದರು. ಹಣಕಾಸು ಸಮಿತಿಯ ಎಲ್ಲ ಆರು ಮಂದಿ ಸದಸ್ಯರು ಸಭೆಯಲ್ಲಿ ಭಾಗಿಯಾದರು. ಸತತ ಮೂರು ತ್ರೈಮಾಸಿಕ ಅವಧಿಯಿಂದ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6ಕ್ಕಿಂತ ಕೆಳಮಟ್ಟದಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಸಂಬಂಧಿಸಿದ ಕರಡು ವರದಿಯನ್ನು ಸಭೆಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಆರ್​ಬಿಐ ತಿಳಿಸಿದೆ. ಆದರೆ, ಕರಡು ವರದಿಯಲ್ಲಿ ಏನೇನು ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬ ವಿಚಾರವನ್ನು ಆರ್​ಬಿಐ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: RBI Monetary Policy: ಮತ್ತೆ ರೆಪೊ ದರ ಹೆಚ್ಚಿಸಲಿದೆಯೇ ಆರ್​ಬಿಐ?

ಇದನ್ನೂ ಓದಿ
Air Asia: ಏರ್​ ಏಷಿಯಾ ಸಂಪೂರ್ಣ ಒಡೆತನ ಟಾಟಾ ಕಂಪನಿಯ ತೆಕ್ಕೆಗೆ
Invest Karnataka 2022: ಹೂಡಿಕೆ ಸಮಾವೇಶದ ಮೊದಲ ದಿನವೇ ಹರಿದು ಬಂತು 3.61 ಲಕ್ಷ ಕೋಟಿ ರೂ.
Airtel 5G: ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ ಏರ್ಟೆಲ್ 5ಜಿ
ಪಿಂಚಣಿದಾರು ಆನ್​ಲೈನ್​ನಲ್ಲಿ ಜೀವನ ಪ್ರಮಾಣಪತ್ರ ಪುರಾವೆ ಸಲ್ಲಿಸಲು ಇಲ್ಲಿದೆ 5 ಸುಲಭ ವಿಧಾನ

2016ರ ಬಳಿಕ ಹಣದುಬ್ಬರ ನಿಯಂತ್ರಿಸಲು ವಿಫಲವಾಗಿರುವುದಕ್ಕೆ ಆರ್​ಬಿಐ ಸರ್ಕಾರಕ್ಕೆ ಉತ್ತರ ನೀಡಬೇಕಾಗಿ ಬಂದಿರುವುದು ಇದೇ ಮೊದಲಾಗಿದೆ. ಸೆಪ್ಟೆಂಬರ್​ನಲ್ಲಿ ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡಾ 7.41ರಷ್ಟಿತ್ತು.

ಆರು ಮಂದಿ ಸದ್ಯರನ್ನೊಳಗೊಂಡ ಹಣಕಾಸು ಸಮಿತಿ

ಆರ್​ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಆರು ಮಂದಿ ಸದಸ್ಯರನ್ನೊಳಗೊಂಡಿದ್ದು, ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮುಖ್ಯಸ್ಥರಾಗಿದ್ದಾರೆ. ಆರ್​ಬಿಐನ ಡೆಪ್ಯುಟಿ ಗವರ್ನರ್ ಮೈಕೆಲ್ ದೇವವ್ರತ ಪಾತ್ರ ಮತ್ತು ಆರ್​ಬಿಐ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ರಂಜನ್ ಕೂಡ ಸಮಿತಿಯ ಸದಸ್ಯರಾಗಿದ್ದಾರೆ. ಉಳಿದಂತೆ ಶಶಾಂಕ ಭಿಡೆ, ಆಶಿಮಾ ಗೋಯಲ್, ಜಯಂತ್ ಆರ್. ವರ್ಮಾ ಸಮಿತಿಯ ಸದಸ್ಯರಾಗಿದ್ದಾರೆ.

ಹಣದುಬ್ಬರ ನಿರ್ವಹಣೆ ಸಮರ್ಥಿಸಿದ್ದ ಶಕ್ತಿಕಾಂತ ದಾಸ್

ಬೆಲೆ ಏರಿಕೆ ಮತ್ತು ಹಣದುಬ್ಬರ ಪರಿಸ್ಥಿತಿಯನ್ನು ಆರ್​ಬಿಐ ನಿಭಾಯಿಸಿದ ಬಗೆಯನ್ನು ಶಕ್ತಿಕಾಂತ ದಾಸ್ ಬುಧವಾರ ಸಮರ್ಥಿಸಿದ್ದರು. ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಆರ್​ಬಿಐ ತೀರಾ ಮೊದಲೇ ಕ್ರಮ ಕೈಗೊಂಡಿದ್ದರೆ ಅಥವಾ ಬಡ್ಡಿ ದರ ಹೆಚ್ಚಿಸಿದ್ದರೆ ದೇಶದ ಆರ್ಥಿಕತೆ ಮೇಲೆ ಅದು ಪ್ರಭಾವ ಬೀರುತ್ತಿತ್ತು. ನಾಗರಿಕರಿಗೂ ಹೆಚ್ಚಿನ ತೊಂದೆರೆಯಾಗುತ್ತಿತ್ತು. ಆದರೆ ಹಾಗೆ ಮಾಡದೆಯೇ ಪರ್ಯಾಯ ವಿಧಾನಗಳ ಮೂಲಕ ಹಣದುಬ್ಬರ ಏರಿಕೆ ತಡೆಯಲು ಪ್ರಯತ್ನಿಸಲಾಗಿತ್ತು. ಅನಿವಾರ್ಯವಾದಾಗ ರೆಪೊ ದರ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದ್ದರು. ಅಮೆರಿಕನ್ ಡಾಲರ್ ವಿರುದ್ಧ ಇತರ ದೇಶಗಳ ಕರೆನ್ಸಿ ಮೌಲ್ಯದಲ್ಲಿ ಆಗಿರುವ ಕುಸಿತಕ್ಕೆ ಹೋಲಿಸಿದರೆ ರೂಪಾಯಿ ಮೌಲ್ಯ ಕುಸಿತ ಕಡಿಮೆ ಇದೆ. ಬೇರೆ ದೇಶಗಳ ಕರೆನ್ಸಿ ಎದುರು ರೂಪಾಯಿ ಮೌಲ್ಯ ವೃದ್ಧಿಯಾಗಿದೆ ಎಂದು ಅವರು ಹೇಳಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Thu, 3 November 22