AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್ ವಂಚನೆ ತಡೆಯಲು ಆರ್​ಬಿಐ ಕ್ರಮ; ಬ್ಯಾಂಕುಗಳಿಗೆ ಬೇರೆ ಡೊಮೇನ್, ಅಂತಾರಾಷ್ಟ್ರೀಯ ಪಾವತಿಗೆ ಹೆಚ್ಚುವರಿ ಸೆಕ್ಯುರಿಟಿ

RBI measures to bring safety in internet banking: ಇಂಟರ್ನೆಟ್ ಬ್ಯಾಂಕಿಂಗ್​ನಲ್ಲಿ ವಂಚನೆ ತಡೆಯಲು ಆರ್​ಬಿಐ ಕೆಲ ಕ್ರಮಗಳನ್ನು ಅವಲೋಕಿಸಿದೆ. ಬ್ಯಾಂಕುಗಳಿಗೆ ಮತ್ತು ಎನ್​ಬಿಎಫ್​ಸಿಗಳಿಗೆ ಪ್ರತ್ಯೇಕ ಇಂಟರ್ನೆಟ್ ಡೊಮೇನ್ ಅಳವಡಿಕೆಯನ್ನು ಜಾರಿಗೊಳಿಸಲಾಗುತ್ತಿದೆ. ಏಪ್ರಿಲ್​ನಿಂದ ಈ ಕ್ರಮ ಬರಬಹುದು. ಹಾಗೆಯೇ, ಭಾರತದೊಳಗಿನ ಡಿಜಿಟಲ್ ಪಾವತಿಗಳಿಗೆ ಇರುವಂತೆ ಅಂತಾರಾಷ್ಟ್ರೀಯ ಆನ್​ಲೈನ್ ಹಣ ಪಾವತಿಗೆ ಹೆಚ್ಚುವರಿ ದೃಢೀಕರಣ ವ್ಯವಸ್ಥೆಯನ್ನು ಜಾರಿಗೆ ತರಲು ಆರ್​ಬಿಐ ನಿರ್ಧರಿಸಿದೆ.

ಸೈಬರ್ ವಂಚನೆ ತಡೆಯಲು ಆರ್​ಬಿಐ ಕ್ರಮ; ಬ್ಯಾಂಕುಗಳಿಗೆ ಬೇರೆ ಡೊಮೇನ್, ಅಂತಾರಾಷ್ಟ್ರೀಯ ಪಾವತಿಗೆ ಹೆಚ್ಚುವರಿ ಸೆಕ್ಯುರಿಟಿ
ಬ್ಯಾಂಕಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 07, 2025 | 12:40 PM

Share

ನವದೆಹಲಿ, ಫೆಬ್ರುವರಿ 7: ರಸ್ತೆಯಲ್ಲಿ ಹೋಗುವಾಗ ಅಪಘಾತವಾಗುವ ರಿಸ್ಕ್ ಇರುವಂತೆ ಅಂತರ್ಜಾಲದಲ್ಲಿರುವಾಗ ವಂಚನೆಗೊಳಗಾಗುವ ರಿಸ್ಕ್ ಇರಬಹುದು. ಆನ್​ಲೈನ್​ನಲ್ಲಿ ಹಣಕಾಸು ವಂಚನೆ ನಿಗ್ರಹಿಸಲು ಸರ್ಕಾರ ನಿರಂತರವಾಗಿ ಒಂದಿಲ್ಲೊಂದು ಕ್ರಮ ತೆಗೆದುಕೊಳ್ಳುತ್ತಿರುತ್ತದೆ. ಆರ್​ಬಿಐ ಇದೀಗ ಇಂಟರ್ನೆಟ್ ಬ್ಯಾಂಕಿಂಗ್​ನ ಸುರಕ್ಷತೆ ಹೆಚ್ಚಿಸಲು ಕೆಲ ಹೊಸ ಕ್ರಮಗಳನ್ನು ಜಾರಿ ಮಾಡುತ್ತಿದೆ. ಆರ್​​ಬಿಐನ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಬ್ಯಾಂಕುಗಳಿಗೆ ಮತ್ತು ಹಣಕಾಸು ವಲಯಕ್ಕೆ ಬೇರೆ ಬೇರೆ ಡೊಮೈನ್​ಗಳನ್ನು ನೀಡುವುದೂ ಕೂಡ ಈ ಕ್ರಮಗಳಲ್ಲಿ ಒಂದು.

ಭಾರತೀ ಬ್ಯಾಂಕುಗಳಿಗೆ ಪ್ರತ್ಯೇಕವಾದ ‘bank.in’ ಎನ್ನುವ ಇಂಟರ್ನೆಟ್ ಡೊಮೈನ್ ಅನ್ನು ನಿಗದಿ ಮಾಡಲಾಗುತ್ತದೆ. ಈ ವರ್ಷದ ಏಪ್ರಿಲ್​ನಿಂದ ಈ ಡೊಮೈನ್ ಹೆಸರಿನ ನೊಂದಣಿ ಶುರುವಾಗುತ್ತದೆ ಎಂದು ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: ಎಂಪಿಸಿ ಸಭೆ ಬಳಿಕ ಆರ್​ಬಿಐನ ಎಸ್​ಡಿಎಫ್, ರಿಪೋ, ಎಸ್​ಎಲ್​ಆರ್ ಇತ್ಯಾದಿ ಎಷ್ಟಿವೆ? ಇಲ್ಲಿದೆ ಇತ್ತೀಚಿನ ದರಗಳ ವಿವರ

ಈ ಡೊಮೈನ್ ಬದಲಾವಣೆಯಿಂದ ಬ್ಯಾಂಕಿಂಗ್ ವಂಚನೆಗಳು ತಡೆಯಲು ನೆರವಾಗಬಹುದು ಎಂದು ನಿರೀಕ್ಷಿಸಿರುವ ಅವರು, ಬ್ಯಾಂಕ್ ಡೊಮೈನ್ ಬದಲಾವಣೆ ಬಳಿಕ ಹಣಕಾಸು ವಲಯದ ಸಂಸ್ಥೆಗಳ (ಎನ್​ಬಿಎಫ್​ಸಿ) ವೆಬ್​​ಸೈಟುಗಳಿಗೆ ಪ್ರತ್ಯೇಕವಾದ ‘fin.in’ ಎನ್ನುವ ಡೊಮೈನ್ ಅನ್ನು ಅಳವಡಿಸಲಾಗುವುದು ಎಂದಿದ್ದಾರೆ.

ಅಡಿಶನಲ್ ಫ್ಯಾಕ್ಟರ್ ಅಥೆಂಟಿಕೇಶನ್

ಡಿಜಿಟಲ್ ಫ್ರಾಡ್​ಗಳನ್ನು ನಿಗ್ರಹಿಸಲು ಆರ್​ಬಿಐ ಈಗಾಗಲೇ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಅಡಿಶನಲ್ ಫ್ಯಾಕ್ಟರ್ ಆಫ್ ಅಥೆಂಟಿಕೇಶನ್ ಅಥವಾ ಎಎಫ್​ಎ ಒಂದು. ಪಾಸ್ವರ್ಡ್ ಜೊತೆಗೆ ಒಟಿಪಿ ಮೂಲಕ ಪಡೆಯಲಾಗುವ ಹೆಚ್ಚುವರಿ ದೃಢೀಕರಣ. ಭಾರತದೊಳಗೆ ಡಿಜಿಟಲ್ ಪಾವತಿಗೆ ಇದು ಜಾರಿಯಲ್ಲಿದೆ. ಈಗ ಇದನ್ನು ಅಂತಾರಾಷ್ಟ್ರೀಯ ಡಿಜಿಟಲ್ ಪಾವತಿಗಳಿಗೂ ವಿಸ್ತರಿಸಲಾಗುತ್ತದೆ.

ಇದನ್ನೂ ಓದಿ: ಮುಂದಿನ ವರ್ಷ ಜಿಡಿಪಿ ದರ ಶೇ. 6.7; ಹಣದುಬ್ಬರ ಶೇ. 4.2; ಆರ್​ಬಿಐ ಅಂದಾಜು

ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳು ಸೈಬರ್ ಅಪಾಯಗಳನ್ನು ನಿಗ್ರಹಿಸಲು ನಿರಂತರವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಅವಲೋಕಿಸುತ್ತಿರಬೇಕು. ವಂಚನೆ ಘಟನೆ ನಡೆದ ನಂತರದ ಕ್ಷಿಪ್ರ ಸ್ಪಂದನೆ ಇತ್ಯಾದಿ ಕ್ರಮಗಳಿರುವ ಪ್ರಬಲ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಆರ್​ಬಿಐ ಗವರ್ನರ್ ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​