AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Plus Plans: ಜಿಯೋ ಫ್ಯಾಮಿಲಿ ಪ್ಲಾನ್; ನಾಲ್ವರಿಗೆ ಸೇರಿ ಪ್ಯಾಕೇಜ್; ಭರ್ಜರಿ ಉಳಿತಾಯ; ಡೇಟಾ ಮಿತಿ ಇತ್ಯಾದಿ ವಿವರ ಇಲ್ಲಿದೆ

Reliance Jio Rs 399, Rs 699 Plans Highlights: ರಿಲಾಯನ್ಸ್ ಜಿಯೋನಿಂದ ಜಿಯೋ ಪ್ಲಸ್ ಹೆಸರಿನಲ್ಲಿ ಎರಡು ಪ್ಲಾನ್​ಗಳು ಬರುತ್ತಿವೆ. 399 ರು ಪ್ಲಾನ್​ನಲ್ಲಿ 75 ಜಿಬಿ ಡೇಟಾ, ಅನ್​ಲಿಮಿಟೆಡ್ ಕಾಲ್, ಎಸ್ಸೆಮ್ಮೆಸ್​ಗಳು ಇರಲಿವೆ. ಇದರ ಜೊತೆಗೆ ತಿಂಗಳಿಗೆ 99 ರುನಂತೆ ಇತರ ಮೂವರ ನಂಬರ್ ಅನ್ನು ಈ ಪ್ಲಾನ್​ಗೆ ಸೇರಿಸಬಹುದು. ಅದರ ಡೀಟೇಲ್ಸ್ ಇಲ್ಲಿದೆ.

Jio Plus Plans: ಜಿಯೋ ಫ್ಯಾಮಿಲಿ ಪ್ಲಾನ್; ನಾಲ್ವರಿಗೆ ಸೇರಿ ಪ್ಯಾಕೇಜ್; ಭರ್ಜರಿ ಉಳಿತಾಯ; ಡೇಟಾ ಮಿತಿ ಇತ್ಯಾದಿ ವಿವರ ಇಲ್ಲಿದೆ
ರಿಲಾಯನ್ಸ್ ಜಿಯೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 15, 2023 | 6:05 PM

ಟೆಲಿಕಾಂ ಕಂಪನಿಗಳಿಗೆ ಮೊಬೈಲ್ ಡೇಟಾ ದರಗಳನ್ನು (Mobile Data) ಹೆಚ್ಚಿಸುವುದು ಅನಿವಾರ್ಯ. ಈಗಾಗಲೇ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಅನೇಕ ಪ್ಲಾನ್​ಗಳನ್ನು ಅಪ್​ಡೇಟ್ ಮಾಡಿ ದರ ಏರಿಕೆ ಮಾಡಿವೆ. ಬಿಎಸ್ಸೆನ್ನೆಲ್ ಕೂಡ ಪ್ಲಾನ್ ದರಗಳನ್ನು ಹೆಚ್ಚಿಸಿದೆ. ಈಗ ದುಬಾರಿಯಾಗಿರುವ ಪ್ಲಾನ್​ಗಳನ್ನೇ ಹೆಚ್ಚು ಆಕರ್ಷಕವಾಗಿಸುವುದಕ್ಕೆ ಗಮನ ಕೊಡಲಾಗುತ್ತಿದೆ. ಇದೇ ವೇಳೆ ರಿಲಾಯನ್ಸ್ ಜಿಯೋ (Reliance Jio) ಎರಡು ಫ್ಯಾಮಿಲಿ ಪ್ಲಾನ್​ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಪ್ಲಸ್ ಪ್ಲಾನ್​ಗಳು ರು 399 ಮತ್ತು ರು 699ರಿಂದ ಆರಂಭವಾಗುತ್ತವೆ. ಇವು ಫ್ಯಾಮಿಲಿ ಪ್ಲಾನ್​ಗಳಿದ್ದು, ನಾಲ್ವರನ್ನು ಸೇರಿಸಿ ಪ್ಯಾಕೇಜ್ ಪಡೆಯಬಹುದು.

ಜಿಯೋ ಪ್ಲಸ್ ಪ್ಲಾನ್​ಗಳು ಪೋಸ್ಟ್​ಪೇಯ್ಡ್ ಸಿಮ್​ಗಳಿಗೆಂದು ಮಾಡಿಸಿದ್ದು. ಪ್ರೀಪೇಡ್ ಗ್ರಾಹಕರಿಗಲ್ಲ ಎಂಬುದನ್ನು ಮೊದಲೇ ಸ್ಪಷ್ಟಪಡಿಸುತ್ತಿದ್ದೇವೆ. ಈ ಎರಡು ಪ್ಲಾನ್​ಗಳು ಒಂದು ತಿಂಗಳ ಕಾಲ ಉಚಿತವಾಗಿ ಲಭ್ಯ ಇರುತ್ತವೆ. ನಿಮಗೆ ಸೂಕ್ತ ಎನಿಸದಿದ್ದಲ್ಲಿ ರದ್ದು ಮಾಡಬಹುದು.

ಜಿಯೋ ಪ್ಲಸ್ ಪ್ಲಾನ್​ಗಳ ಬಗ್ಗೆ:

399 ರು ಪ್ಲಾನ್: ಇದರಲ್ಲಿ ಒಬ್ಬ ವ್ಯಕ್ತಿ 399 ರುಪಾಯಿಗೆ ಫ್ಯಾಮಿಲಿ ಪ್ಲಾನ್ ಖರೀದಿಸಬಹುದು. ಈ ಪ್ಲಾನ್​ಗೆ ಇತರ 3 ಹೆಚ್ಚುವರಿ ಸಿಮ್​ಗಳನ್ನು ಸೇರಿಸಬಹುದು. ಅಂದರೆ ನಿಮ್ಮ ಕುಟುಂಬ ಸದಸ್ಯರೋ ಅಥವಾ ಸ್ನೇಹಿತರೋ ಯಾರಾದರೂ ಆಗಬಹುದು. ಒಂದು ಹೆಚ್ಚುವರಿ ಸಿಮ್​ಗೆ 99 ರೂ ಆಗುತ್ತದೆ. ಒಟ್ಟು ನಾಲ್ವರು ಸೇರಿದರೆ 699 ರುಪಾಯಿ ಆಗುತ್ತದೆ. ಒಬ್ಬರಿಗೆ 174 ರುಪಾಯಿ ಮಾತ್ರ ವೆಚ್ಚವಾದಂತಾಗುತ್ತದೆ. ಈ ಪ್ಲಾನ್​ನಲ್ಲಿ ಮೂಲ ಸಬ್​ಸ್ಕ್ರೈಬರ್​ಗೆ ತಿಂಗಳಿಗೆ 75 ಜಿಬಿ ಡೇಟಾ, ದಿನಕ್ಕೆ 100 ಎಸ್ಸೆಮ್ಮೆಸ್ ಮತ್ತು ಅನ್​ಲಿಮಿಟೆಡ್ ಕರೆಗಳ ಸೌಲಭ್ಯ ಇದೆ. ಆದರೆ ಹಿಂದಿನ 399 ರು ಪ್ಲಾನ್​ನಲ್ಲಿ ಲಭ್ಯ ಇದ್ದ ನೆಟ್​ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ವೀಕ್ಷಣೆ ಸೌಲಭ್ಯ ಈ ಹೊಸ ಅಪ್​ಡೇಟ್​ನಲ್ಲಿ ಸಿಗುವುದಿಲ್ಲ.

ಇದನ್ನೂ ಓದಿCrorepati: ವರ್ಷಕ್ಕೆ ಶೇ. 15 ವೃದ್ಧಿ; 15 ವರ್ಷದಲ್ಲಿ 1.38 ಕೋಟಿ ಹಣ ನಿಮ್ಮದಾಗಿಸಿಕೊಳ್ಳಿ; ಇದು ಹೇಗೆ ಸಾಧ್ಯ?

699 ರು ಪ್ಲಾನ್: ಈ ಪ್ಲಾನ್​ನಲ್ಲಿ ಒಟ್ಟು 100 ಜಿಬಿ ಡೇಟಾ ಸಿಗುತ್ತದೆ. ಅನ್​ಲಿಮಿಟೆಡ್ ಕಾಲ್, ದಿನಕ್ಕೆ 100 ಎಸ್ಸೆಮ್ಮೆಸ್ ಸೌಲಭ್ಯ ಇರುತ್ತದೆ. ಹೆಚ್ಚುವರಿ ಮೂರು ನಂಬರ್​ಗಳನ್ನೂ ಸೇರಿಸಬಹುದು. ಈ ಆಡ್ ಆನ್ ಸಿಮ್​ಗಳಿಗೆ ತಿಂಗಳಿಗೆ 99 ರೂ ಕೊಡಬೇಕು.

ಈ ಎರಡು ಪ್ಲಾನ್​ಗಳಲ್ಲಿ ಹೆಚ್ಚುವರಿ ಸಿಮ್​ಗಳಿಗೆ ತಿಂಗಳಿಗೆ 99 ರೂ ಕೊಡಬೇಕು. ಅದಕ್ಕೆ ತಿಂಗಳಿಗೆ 5 ಜಿಬಿ ಡೇಟಾ ಸಿಗುತ್ತದೆ. ಆರಂಭದ ಒಂದು ತಿಂಗಳು ನೀವು ಉಚಿತವಾಗಿ ಈ ಸೌಲಭ್ಯವನ್ನು ಪಡೆಯಬಹುದು. ಸೂಕ್ತವಿದ್ದರೆ ಹಣ ಕೊಟ್ಟು ಪ್ಲಾನ್ ಮುಂದುವರಿಸಬಹುದು. ಇಲ್ಲದಿದ್ದರೆ ಯಾವಾಗ ಬೇಕಾದರೂ ಪ್ಲಾನ್ ರದ್ದು ಮಾಡಬಹುದು. ಈ ಪ್ಲಾನ್​ಗಳು ಮಾರ್ಚ್ 22ರಿಂದ ಲಭ್ಯ ಇರಲಿದೆ.

ಇದನ್ನೂ ಓದಿPMVVY: ಪಿಎಂ ವಿವಿವೈ ಸ್ಕೀಮ್, ಮಾರ್ಚ್ 31ರವರೆಗೂ ಆಫರ್; ರಿಟರ್ನ್ಸ್, ಪಿಂಚಣಿ ಎಷ್ಟು? ವಿವರ ಇಲ್ಲಿದೆ

ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ಪ್ರವೇಶ ಮಾಡಿದ ಮೇಲೆ ಬಹಳಷ್ಟು ಡೇಟಾ ಕ್ರಾಂತಿಯೇ ಆಗಿಹೋಗಿದೆ. ಡೇಟಾ ಇರಲಿ, ದೂರವಾಣಿ ಕರೆಗಳೇ ದುಬಾರಿಯಾಗಿದ್ದ ದಿನದಲ್ಲಿ ಜಿಯೋ ಅನ್​ಲಿಮಿಟೆಡ್ ಕಾಲ್ ಮತ್ತು ಭರಪೂರ ಡೇಟಾಗಳನ್ನು ಕಡಿಮೆ ಬೆಲೆಗೆ ನೀಡಿ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ 5ಜಿ ಬಂದ ಬಳಿಕ ಜಿಯೋ ಕೂಡ ಟೆಲಿಕಾಂ ದರಗಳನ್ನು ಏರಿಸುವುದು ಅನಿವಾರ್ಯವಾಗಿದೆ.

ಭಾರತದಲ್ಲಿ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿ ಬೆಳೆದಿರುವ ಜಿಯೋ 2022-23ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 4,638 ಕೋಟಿ ರು ನಿವ್ವಳ ಲಾಭ ತೋರಿಸಿದೆ. ಈ ಅವಧಿಯಲ್ಲಿ ಅದರ ಆದಾಯ 22,998 ಕೋಟಿ ರು ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?