AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reliance Jio: ಬರೋಬ್ಬರಿ 168GB ಡೇಟಾ: ಜಿಯೋದ ಈ ಪ್ಲಾನ್ ಹಾಕಿಸಿಕೊಂಡರೆ ಟೆನ್ಶನ್ ಬೇಡ

ಇನ್ನೇನು ಕೆಲವೇ ದಿನಗಳಲ್ಲಿ 5G ಸಂಪರ್ಕ ಕೂಡ ಸಿಗಲಿದ್ದು ಜಿಯೋ ಯಾವರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತ್ತವೆ ಎಂಬುದು ಕುತೂಹಲ ಕೆರಳಿಸಿದೆ. ಈಗಾಗಲೇ ಜಿಯೋದ ಅನೇಕ ಪ್ಲಾನ್​ಗಳು ಬಳಕೆದಾರರ ಮನ ಗೆದ್ದಿದೆ. ಇದರಲ್ಲಿ 719 ರೂಪಾಯಿಗೆ 168GB ಡೇಟಾ ಸಿಗುವ ಯೋಜನೆ ಕೂಡ ಒಂದು. ಹಾಗಾದರೆ ಜಿಯೋದ ಈ ಪ್ರಿಪೇಯ್ಡ್ ಪ್ಲಾನ್​ನಲ್ಲಿ (Prepaid Plan) ಏನೆಲ್ಲ ಆಫರ್​ಗಳಿವೆ ಎಂಬುದನ್ನು ನೋಡೋಣ.

Reliance Jio: ಬರೋಬ್ಬರಿ 168GB ಡೇಟಾ: ಜಿಯೋದ ಈ ಪ್ಲಾನ್ ಹಾಕಿಸಿಕೊಂಡರೆ ಟೆನ್ಶನ್ ಬೇಡ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Oct 08, 2026 | 2:44 PM

Share

ರಿಲಯನ್ಸ್ ಒಡೆತನದ ಜಿಯೋ (Reliance JIO) ಸಂಸ್ಥೆ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಭದ್ರವಾಗಿದೆ. ಏರ್ಟೆಲ್ (Airtel), ವೊಡಾಫೋನ್ ಐಡಿಯಾ ಮೇಲಕ್ಕೇರಲು ಹರಸಾಹಸ ಪಡುತ್ತಿದ್ದರೂ ಜಿಯೋ ಆಕರ್ಷಕ ಆಫರ್​ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಲೇ ಇದೆ. ಇನ್ನೇನು ಕೆಲವೇ ದಿನಗಳಲ್ಲಿ 5G ಸಂಪರ್ಕ ಕೂಡ ಸಿಗಲಿದ್ದು ಜಿಯೋ ಯಾವರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತ್ತವೆ ಎಂಬುದು ಕುತೂಹಲ ಕೆರಳಿಸಿದೆ. ಈಗಾಗಲೇ ಜಿಯೋದ ಅನೇಕ ಪ್ಲಾನ್​ಗಳು ಬಳಕೆದಾರರ ಮನ ಗೆದ್ದಿದೆ. ಇದರಲ್ಲಿ 719 ರೂಪಾಯಿಗೆ 168GB ಡೇಟಾ ಸಿಗುವ ಯೋಜನೆ ಕೂಡ ಒಂದು. ಹಾಗಾದರೆ ಜಿಯೋದ ಈ ಪ್ರಿಪೇಯ್ಡ್ ಪ್ಲಾನ್​ನಲ್ಲಿ (Prepaid Plan) ಏನೆಲ್ಲ ಆಫರ್​ಗಳಿವೆ ಎಂಬುದನ್ನು ನೋಡೋಣ.

ಜಿಯೋ 719 ರೂ. ಪ್ಲಾನ್: ಜಿಯೋ ಟೆಲಿಕಾಂನ 719 ರೂ. ಪ್ರಿಪೇಯ್ಡ್‌ ಪ್ಲಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168 GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಜಿಯೋ ಆ್ಯಪ್‌ಗಳ ಸೌಲಭ್ಯ ದೊರೆಯುತ್ತದೆ.

ಜಿಯೋ 2545 ರೂ. ಪ್ಲಾನ್: ಜಿಯೋದ ಈ ಯೋಜನೆ 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 1.5GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 504GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆ್ಯಕ್ಸಸ್ ನೀಡಲಾಗುತ್ತದೆ.

ಜಿಯೋ 2879 ರೂ. ಪ್ಲಾನ್: ಜಿಯೋದ ಈ ಯೋಜನೆ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 730GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆ್ಯಕ್ಸಸ್ ನೀಡಲಾಗುತ್ತದೆ.

ಜಿಯೋ 2999 ರೂ. ಪ್ಲಾನ್: ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2.5GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 912.5GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆ್ಯಕ್ಸಸ್ ನೀಡಲಾಗುತ್ತದೆ. ಇದಿಷ್ಟೆ ಅಲ್ಲದೆ ಒಂದು ವರ್ಷದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆ ಸಿಗುತ್ತದೆ.

ಜಿಯೋ 4199 ರೂ. ಪ್ಲಾನ್: ಜಿಯೋದ ಈ ಯೋಜನೆ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ ಬರೋಬ್ಬರಿ 3GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 1095GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆ್ಯಕ್ಸಸ್ ನೀಡಲಾಗುತ್ತದೆ. ಅಲ್ಲದೆ ಒಂದು ವರ್ಷದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆ ನಿಮ್ಮದಾಗಿಸಬಹುದು.

Published On - 6:12 am, Mon, 3 October 22

Follow Us
TV9 Web
TV9 Web

TV9 Kannada

Read More