AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಹೆಚ್ಚಿಸಲು ಸಿದ್ಧ: ರಷ್ಯಾ ಅಭಯ

Russian companies ready to increase supply to India, says Denis Manturov" ಗಲ್ಫ್ ಪ್ರದೇಶ ಹೊತ್ತಿ ಉರಿಯುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ತೈಲ ಮತ್ತು ಗ್ಯಾಸ್ ಬಿಕ್ಕಟ್ಟು ತಲೆದೋರಿದೆ. ಈ ಹಂತದಲ್ಲಿ ಭಾರತಕ್ಕೆ ರಷ್ಯಾದಿಂದ ನೆರವು ಸಿಗುತ್ತಿದೆ. ಭಾರತಕ್ಕೆ ಎರಡು ದಿನದ ಭೇಟಿ ನೀಡಿರುವ ಡೆನಿಸ್ ಮಂಟುರೋವ್ ಅವರು ರಷ್ಯನ್ ಕಂಪನಿಗಳು ಭಾರತಕ್ಕೆ ಹೆಚ್ಚಿನ ತೈಲ ಮತ್ತು ಎಲ್​ಎನ್​ಜಿ ಪೂರೈಸಲು ಸಿದ್ಧವಿವೆ ಎಂದಿದ್ದಾರೆ.

ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಹೆಚ್ಚಿಸಲು ಸಿದ್ಧ: ರಷ್ಯಾ ಅಭಯ
ವ್ಲಾದಿಮಿರ್ ಪುಟಿನ್ ಜೊತೆ ಮಂಟುರೋವ್ ಇರುವ ಫೈಲ್ ಚಿತ್ರ ಇದು...Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 03, 2026 | 6:02 PM

Share

ನವದೆಹಲಿ, ಏಪ್ರಿಲ್ 3: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಭಾರತದ ಇಂಧನ ಕ್ಷೇತ್ರ ಒತ್ತಡಕ್ಕೆ ಸಿಲುಕಿದೆ. ರಷ್ಯಾದಿಂದ ಒಂದಷ್ಟು ತೈಲ ಪೂರೈಕೆಯಾಗುತ್ತಿರುವುದು ಸಮಾಧಾನದ ಸಂಗತಿ. ಆದರೆ, ಭಾರತದ ತೈಲ ಮತ್ತು ಅನಿಲದ ಅಗತ್ಯತೆ ಅಗಾಧವಾಗಿದೆ. ಹೀಗಾಗಿ, ಹೆಚ್ಚಿನ ಪ್ರಮಾಣದ ತೈಲ ಮತ್ತು ಅನಿಲವು ಭಾರತಕ್ಕೆ ನಿರಂತರವಾಗಿ ಸರಬರಾಜಾಗುವುದು ಅಗತ್ಯ. ಇದೇ ವೇಳೆ, ಭಾರತದ ನೆರವಿಗೆ ರಷ್ಯಾ ಮುಂದಾಗಿದೆ. ಭಾರತಕ್ಕೆ ತೈಲ ಮತ್ತು ಎಲ್​ಎನ್​ಜಿ (LNG) ಪೂರೈಕೆ ಹೆಚ್ಚಿಸಬಲ್ಲೆವು ಎಂದು ಹೇಳಿದೆ.

ರಷ್ಯಾದ ಮೊದಲ ಉಪಮುಖ್ಯಸ್ಥ ಡೆನಿಸ್ ಮಂಟುರೋವ್ (Denis Manturov) ಅವರು ಈ ಅಭಯ ಕೊಟ್ಟಿದ್ದಾರೆ. ರಷ್ಯನ್ ರಾಯಭಾರ ಕಚೇರಿ ಟೆಲಿಗ್ರಾಮ್​ನಲ್ಲಿ ಈ ಹೇಳಿಕೆ ಬಿಡುಗಡೆ ಮಾಡಿದೆ. 2025ರಲ್ಲಿ ಭಾರತಕ್ಕೆ ಖನಿಜ ರಸಗೊಬ್ಬರಗಳ ಪೂರೈಕೆಯನ್ನು ಶೇ. 40ರಷ್ಟು ಹೆಚ್ಚಿಸಲಾಗಿದೆ. ಭಾರತದ ಅವಶ್ಯಕತೆ ಪೂರೈಸಲು ರಷ್ಯಾ ಸಿದ್ಧವಿದೆ ಎಂದು ಮಂಟುರೋವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಏಪ್ರಿಲ್​ನಲ್ಲಿ ಚಿನ್ನ ಸಖತ್ ದುಬಾರಿ? ಕಳೆದ 45 ವರ್ಷದಲ್ಲೆ ಬಂಗಾರಕ್ಕೆ ಗರಿಷ್ಠ ಡಿಮ್ಯಾಂಡ್; 20,000 ರೂಗೆ ಏರುತ್ತಾ ಬೆಲೆ?

‘ಭಾರತದ ಮಾರುಕಟ್ಟೆಗೆ ತೈಲ ಮತ್ತು ಎನ್​ಎನ್​ಜಿ ಪೂರೈಕೆಯನ್ನು ಹೆಚ್ಚಿಸುವ ಸಾಮರ್ಥ್ಯ ರಷ್ಯನ್ ಕಂಪನಿಗಳಿಗೆ ಇದೆ. ಪರಮಾಣು ಇಂಧನ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ಪಾಲುದಾರಿಕೆ ಮತ್ತಷ್ಟು ಗಟ್ಟಿಯಾಗುತ್ತಿದೆ. ಕೂಡಂಕುಲಂ ಪರಮಾಣು ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಘಟಕಗಳನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ’ ಎಂದು ಡೆನಿಸ್ ಮಂಟುರೋವ್ ಹೇಳಿದ್ದಾರೆ.

ರಷ್ಯಾದ ಮೊದಲ ಡೆಪ್ಯುಟಿ ಛೇರ್ಮನ್ ಆದ ಡೆನಿಸ್ ಮಂಟುರೋವ್ ಅವರು ನಿನ್ನೆ ಮತ್ತು ಇವತ್ತು (ಏ. 3) ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗು ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಶೇ. 80 ಐಟಿ ಕೂಲಿಗಳಿಗೆ ಇನ್ನು 3 ವರ್ಷದಲ್ಲಿ ಕೆಲಸ ಇರೋದಿಲ್ಲ: ಶಾಕ್ ಕೊಟ್ಟಿದೆ ರೆಡ್ಡಿಟ್ ಪೋಸ್ಟ್

ಭಾರತವು ನೈಸರ್ಗಿಕ ಅನಿಲ ಪೂರೈಕೆ ಜಾಲ ಬಲಪಡಿಸಲು ಮಗ್ನವಾಗಿದೆ. ಎಲ್​ಎನ್​ಜಿಯನ್ನು ಭಾರತದಲ್ಲಿ ಅನಿಲವಾಗಿ ಪರಿವರ್ತಿಸಿ ಪೈಪ್ಡ್ ಗ್ಯಾಸ್ ಆಗಿ ಮನೆ ಮನೆಗೆ ಪೂರೈಸಲಾಗುತ್ತದೆ. ಈ ಪಿಎನ್​ಜಿ ಜಾಲ ಹೆಚ್ಚಿಸಲು ಯತ್ನಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us