AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coffee act: ಕಾಫೀ ಉದ್ಯಮ ಉತ್ತೇಜಿಸಲು ಕಾಯ್ದೆ ಸರಳಿಗೊಳಿಸಲಿದೆ ಕೇಂದ್ರ ಸರ್ಕಾರ ಎಂದ ಪಿಯೂಷ್ ಗೋಯೆಲ್

ಕಾಫೀ ಕಾಯ್ದೆಯನ್ನು ಸರಳಗೊಳಿಸುವ ಮೂಲಕ ಉದ್ಯಮವನ್ನು ಸರಳೀಕರಣಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ.

Coffee act: ಕಾಫೀ ಉದ್ಯಮ ಉತ್ತೇಜಿಸಲು ಕಾಯ್ದೆ ಸರಳಿಗೊಳಿಸಲಿದೆ ಕೇಂದ್ರ ಸರ್ಕಾರ ಎಂದ ಪಿಯೂಷ್ ಗೋಯೆಲ್
ಕಾಫೀ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Srinivas Mata

Updated on: Sep 18, 2021 | 11:46 PM

ಕಾಫೀ ವಲಯದ ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ಮತ್ತು ಅದರ ಬೆಳವಣಿಗೆಗೆ ಅನುಕೂಲವಾಗುವಂತೆ ಸರ್ಕಾರವು ಕಾಫೀ ಕಾಯ್ದೆಯನ್ನು ಮರುಪರಿಶೀಲಿಸುತ್ತದೆ ಎಂದು ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ. ಬೆಂಗಳೂರಿನ ಕಾಫೀ ಮಂಡಳಿ ಕೇಂದ್ರ ಕಚೇರಿಯಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರು ಕಾಫಿ ಬೆಳೆಗಾರರು, ರೋಸ್ಟರ್‌ಗಳು, ರಫ್ತುದಾರರು ಮತ್ತು ಇತರ ಪಾಲುದಾರರೊಂದಿಗೆ ಸಂವಾದದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿದರು. ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ (SARFAESI) ಕಾಯ್ದೆಯಡಿ ಬ್ಯಾಂಕ್​ಗಳು ನೀಡಿರುವ ನೋಟಿಸ್‌ಗಳ ದೃಷ್ಟಿಯಿಂದ ಕಾಫೀ ಬೆಳೆಗಾರರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದರು. ಈ ಸಮಸ್ಯೆಯನ್ನು ಸಂಬಂಧಿಸಿದ ಇತರ ಸಚಿವಾಲಯಗಳೊಂದಿಗೆ ಅನುಕೂಲಕರ ರೀತಿಯಲ್ಲಿ ಚರ್ಚಿಸಲಾಗುವುದು ಮತ್ತು ಆರಂಭಿಕ ದಿನಾಂಕದಂದು ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಸಚಿವರು ಕಾಫೀ ಬೆಳೆಗಾರರಿಗೆ ಭರವಸೆ ನೀಡಿದರು.

ಪ್ರಸ್ತುತ ಕಾಫೀ ಕಾಯ್ದೆಯನ್ನು 1942ರಲ್ಲಿ ಜಾರಿಗೆ ತರಲಾಗಿದೆ ಮತ್ತು ಇದು ಅನಗತ್ಯ ಹಾಗೂ ಕಾಫೀ ವ್ಯಾಪಾರಕ್ಕೆ ಅಡ್ಡಿಯಾಗಿರುವ ಅನೇಕ ನಿಬಂಧನೆಗಳನ್ನು ಹೊಂದಿದೆ. “ಆದ್ದರಿಂದ, ಕಾನೂನಿನ ನಿಬಂಧನೆಗಳನ್ನು ಸಂಪೂರ್ಣವಾಗಿ ಮರುಪರಿಶೀಲಿಸಲು ಮತ್ತು ಕಾಫೀ ಕ್ಷೇತ್ರದ ಪ್ರಸ್ತುತ ಅಗತ್ಯಗಳಿಗೆ ಸೂಕ್ತವಾದ ಮತ್ತು ಅದರ ಅನುಕೂಲಕ್ಕಾಗಿ ಸರಳವಾದ ಕಾಯ್ದೆಯನ್ನು ತರಲು ನಿರ್ಬಂಧಿತ ಮತ್ತು ನಿಯಂತ್ರಕ ಸ್ವರೂಪದಲ್ಲಿ ಇರುವ ನಿಬಂಧನೆಗಳನ್ನು ತೆಗೆದುಹಾಕಲು, ಬೆಳವಣಿಗೆ ಪೂರಕವಾಗಿ ಅನುಕೂಲ ಮಾಡಿಕೊಡುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಂತಾರಾಷ್ಟ್ರೀಯ ಸರಕು- ಸಾಗಣೆ ದರ ಏರಿಕೆಯಿಂದಾಗಿ ಹಲವಾರು ಸ್ಥಳಗಳಿಗೆ ಭಾರತೀಯ ಕೃಷಿ ರಫ್ತುಗಳು ಸ್ಪರ್ಧಾತ್ಮಕವಾಗಿಲ್ಲ ಎಂದು ಹಲವಾರು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಸಾರಿಗೆ ಮತ್ತು ಮಾರ್ಕೆಟಿಂಗ್ ಸಹಾಯ ಯೋಜನೆ (ಟಿಎಂಎ) ಅಡಿಯಲ್ಲಿ ಹೆಚ್ಚಿನ ಸಹಾಯವನ್ನು ಕೋರಿದರು. ರಫ್ತುದಾರರಿಗೆ ಕೃಷಿ ರಫ್ತಿಗೆ ಕನಿಷ್ಠ ಒಂದು ವರ್ಷದವರೆಗೆ ಸಹಾಯ ಮಾಡುವ ವಿಶೇಷ ಪ್ಯಾಕೇಜ್ ಅನ್ನು ಪ್ರಸ್ತುತ ಬಿಕ್ಕಟ್ಟನ್ನು ನಿವಾರಿಸಲು ಯೋಜನೆಯಡಿ ಪರಿಗಣಿಸಲಾಗುವುದು ಎಂದು ಗೋಯೆಲ್ ಭರವಸೆ ನೀಡಿದರು. ಕಾಫೀ ವೈಟ್ ಸ್ಟೆಮ್ ಬೋರರ್ ಕಾಯಿಲೆ ಸಮಸ್ಯೆಯ ಕುರಿತು ಕೃಷಿ ಇಲಾಖೆ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ (ಐಸಿಎಆರ್) ಸುಧಾರಿತ ಸಂಶೋಧನೆ ಆರಂಭಿಸಲು ಮನವಿ ಮಾಡಲಾಗುವುದು ಎಂದು ಸಚಿವರು ಹೇಳಿದರು. ಮುಂದೆ, ಕಾಫೀ ಮಂಡಳಿಯು ಸಚಿವರನ್ನು ವಿನಂತಿಸಿದ್ದು, ಈಗಿರುವ ಎಲ್ಲ ಸಾಲಗಳನ್ನು ದೀರ್ಘಾವಧಿಯ ಮರುಪಾವತಿಯೊಂದಿಗೆ ಒಂದೇ ಅವಧಿಯ ಸಾಲವಾಗಿ ಪುನರ್​ರಚಿಸುವುದಾಗಿ ಘೋಷಿಸಿತು ಮತ್ತು ಕಡಿಮೆ ಬಡ್ಡಿಯೊಂದಿಗೆ ಹೊಸದಾದ ವರ್ಕಿಂಗ್​ ಕ್ಯಾಪಿಟಲ್​ ಅನ್ನು ವಿಸ್ತರಿಸುತ್ತದೆ ಎನ್ನಲಾಯಿತು.

ಸಂಬಂಧಿಸಿದ ಸಚಿವಾಲಯಗಳೊಂದಿಗೆ ಚರ್ಚಿಸಿದ ನಂತರ ಕಾರ್ಯಸಾಧುವಾದ ಪ್ಯಾಕೇಜ್ ಅನ್ನು ರೂಪಿಸಲಾಗುವುದು ಎಂದು ಗೋಯೆಲ್ ಭರವಸೆ ನೀಡಿದರು. ರೈತರ ಕ್ಷೇತ್ರಗಳಲ್ಲಿ ವಿಸ್ತರಣಾ ಸಿಬ್ಬಂದಿ ಕೈಗೊಳ್ಳಬೇಕಾದ ಕ್ಷೇತ್ರ ಭೇಟಿಗಳು, ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆಗಳು, ಸೆಮಿನಾರ್‌ಗಳು ಸೇರಿದಂತೆ ವಿಸ್ತರಣಾ ಚಟುವಟಿಕೆಗಳ ರಿಯಲ್​ ಟೈಮ್​ನಲ್ಲಿ ನವೀಕರಣಕ್ಕಾಗಿ ಡ್ಯಾಶ್‌ಬೋರ್ಡ್ ಅಭಿವೃದ್ಧಿಪಡಿಸಲು ಸಚಿವರು ಕಾಫೀ ಮಂಡಳಿಗೆ ನಿರ್ದೇಶನ ನೀಡಿದ್ದಾರೆ. ಕಾಫೀ ಮಂಡಳಿಯನ್ನು ಮುಚ್ಚಲಾಗುವುದು ಎಂಬ ಆತಂಕದ ಬಗ್ಗೆ ಹೇಳಿಕೊಂಡಾಗ, ಸರ್ಕಾರಕ್ಕೆ ಅಂತಹ ಯಾವುದೇ ಉದ್ದೇಶಗಳಿಲ್ಲ ಎಂದು ಗೋಯೆಲ್ ಹೇಳಿದರು.

ಆದರೂ ಕಾಫೀ ಬೆಳೆಗಾರರಿಗೆ, ವಿಶೇಷವಾಗಿ ಸಣ್ಣ ಬೆಳೆಗಾರರಿಗೆ ಉತ್ತಮ ಸೇವೆಗಳನ್ನು ಒದಗಿಸಲು ವಾಣಿಜ್ಯ ಸಚಿವಾಲಯದಿಂದ ಕೃಷಿ ಸಚಿವಾಲಯಕ್ಕೆ ಕಾಫೀ ಮಂಡಳಿಯನ್ನು ಬದಲಾಯಿಸಲು ಪ್ರಸ್ತಾಪಿಸಲಾಗಿದೆ. ಇದು ಕೃಷಿ ವಲಯದ ಎಲ್ಲ ಯೋಜನೆಗಳ ಪ್ರಯೋಜನಗಳನ್ನು ಕಾಫೀ ಬೆಳೆಗಾರರಿಗೂ ವಿಸ್ತರಿಸುವುದನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: TDS: ಬ್ಯಾಂಕ್​ ಠೇವಣಿ ಮೇಲೆ ಬರುವ ಬಡ್ಡಿಗೆ ಪರಿಶಿಷ್ಟ ಪಂಗಡವರಿಗೆ ಟಿಡಿಎಸ್​ ಕಡಿತವಿಲ್ಲ; ಕೇಂದ್ರದ ಅಧಿಸೂಚನೆ

(Union Government To Simplify Coffee Act To Promote Ease of Doing Business )

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?