ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾರ್ಚ್ 8ರ ಮಂಗಳವಾರದಂದು ಫೀಚರ್ ಫೋನ್‌ಗಳಿಗಾಗಿ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಹೊರತಂದರು. ಈ ಕ್ರಮವು ಡಿಜಿಟಲ್ ಅಳವಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಇದೇ ವೇಳೆ DigiSaathi ಎಂಬ ಡಿಜಿಟಲ್ ಪಾವತಿಗಾಗಿ 24×7 ಸಹಾಯವಾಣಿಯನ್ನು ಪ್ರಾರಂಭಿಸಲಾಯಿತು. “UPI 123Pay” ಗ್ರಾಹಕರಿಗೆ ಸ್ಕ್ಯಾನ್ ಮತ್ತು ಪಾವತಿ ಹೊರತುಪಡಿಸಿ ಬಹುತೇಕ ಎಲ್ಲ ವಹಿವಾಟುಗಳಿಗೆ ಫೀಚರ್ ಫೋನ್‌ಗಳನ್ನು ಬಳಸಲು ಅನುಮತಿಸುತ್ತದೆ. ವಹಿವಾಟುಗಳಿಗೆ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ. ಈ ಸೌಲಭ್ಯವನ್ನು ಬಳಸಲು ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯನ್ನು ಫೀಚರ್ ಫೋನ್‌ಗಳೊಂದಿಗೆ ಲಿಂಕ್ ಮಾಡಬೇಕು.
ಸ್ಮಾರ್ಟ್‌ಫೋನ್ ಪಡೆಯಲು ಸಾಧ್ಯವಾಗದ ಗ್ರಾಮೀಣ ಪ್ರದೇಶದ ಜನರು ಯುಪಿಐ ವಹಿವಾಟುಗಳಲ್ಲಿ ಭಾಗವಹಿಸಲು ಫೀಚರ್ ಫೋನ್‌ಗಳಲ್ಲಿನ ಯುಪಿಐ ಸಹಾಯ ಮಾಡುತ್ತದೆ ಎಂದು ದಾಸ್ ಹೇಳಿದರು. “ಪ್ರಸ್ತುತ ದಶಕವು ದೇಶದಲ್ಲಿ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯಲ್ಲಿ ಪರಿವರ್ತಕ ಬದಲಾವಣೆಗೆ ಸಾಕ್ಷಿಯಾಗಲಿದೆ,” ಎಂದು ಅವರು ಹೇಳಿದರು. ಡಿಜಿಟಲ್ ವಹಿವಾಟುಗಳನ್ನು ಹೆಚ್ಚು ಮಾಡಲು ಆರ್‌ಬಿಐ ಕಳೆದ ಮೂರು ವರ್ಷಗಳಲ್ಲಿ ಹಲವಾರು ಕ್ರಮಗಳನ್ನು ಪ್ರಕಟಿಸಿದೆ. ಅಲ್ಲದೆ, ಸೈಬರ್ ಸುರಕ್ಷತೆಯ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯವನ್ನು ದಾಸ್ ಒತ್ತಿ ಹೇಳಿದರು. ಸೈಬರ್ ಅಪಾಯಗಳನ್ನು ಎದುರಿಸಲು ವ್ಯವಸ್ಥೆಗಳು ಸಿದ್ಧವಾಗಬೇಕಿದೆ ಎಂದು ಹೇಳಿದರು.
ಫೀಚರ್ ಫೋನ್‌ಗಳಲ್ಲಿ UPI ಅನ್ನು ಪರಿಚಯಿಸುವ ಯೋಜನೆಯನ್ನು ಡಿಸೆಂಬರ್‌ನಲ್ಲಿ ರಿಸರ್ವ್ ಬ್ಯಾಂಕ್ ಘೋಷಿಸಿದ ನಂತರ ಈ ಕ್ರಮವು ಬಂದಿದೆ. ಇದು 2016ರಲ್ಲಿ ಪ್ರಾರಂಭವಾದಾಗಿನಿಂದ ಸ್ಮಾರ್ಟ್‌ಫೋನ್‌ಗಳಿಗೆ ಪಾವತಿ ವೇದಿಕೆಯಾಗಿ ಸೀಮಿತವಾಗಿದೆ. ಫೀಚರ್ ಫೋನ್‌ಗಳನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಜನರಲ್ಲಿ ಅದರ ಬಳಕೆಯನ್ನು ಸೀಮಿತಗೊಳಿಸುತ್ತದೆ. 2016ರಲ್ಲಿ UPI ಪಾವತಿ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಿದಾಗಿನಿಂದ ವಹಿವಾಟುಗಳು ಬಹುಪಟ್ಟು ಬೆಳೆದಿದೆ.
ಇದನ್ನೂ ಓದಿ: ಆರ್‌ಬಿಐ ವಿತ್ತೀಯ ನೀತಿ ಪ್ರಕಟ; ನಿಮ್ಮ ಹೋಂ ಲೋನ್, ಕಾರ್ ಲೋನ್, ಬ್ಯಾಂಕ್ ಎಫ್ಡಿಗಳ ಇಎಂಐ ಮೇಲಾಗುವ ಪರಿಣಾಮಗಳೇನು?