Wholesale Price Index Inflation: ಸಗಟು ದರ ಸೂಚ್ಯಂಕ ಹಣದುಬ್ಬರ ಜೂನ್‌ನಲ್ಲಿ ಶೇ 12.07ಕ್ಕೆ; ಏನು ಕಾರಣ?
ಸಗಟು ಬೆಲೆ ಸೂಚ್ಯಂಕದ (WPI) ವಾರ್ಷಿಕ ದರವು 2021ರ ಜೂನ್ ತಿಂಗಳಲ್ಲಿ ಶೇ 12.07ರಷ್ಟು ತಲುಪಿದೆ. 2020ರ ಜೂನ್‌ನಲ್ಲಿ ಈ ಪ್ರಮಾಣ ಶೇ -1.81ಕ್ಕೆ ಇತ್ತು.
ಸಗಟು ದರ ಹಣದುಬ್ಬರ (WPI) ವಾರ್ಷಿಕ ದರವು 2021ರ ಜೂನ್ ತಿಂಗಳಲ್ಲಿ ಶೇ 12.07ರಷ್ಟು ತಲುಪಿದೆ. 2020ರ ಜೂನ್‌ನಲ್ಲಿ ಈ ಪ್ರಮಾಣ ಶೇ -1.81ಕ್ಕೆ ಇತ್ತು. ಜೂನ್ 2021ರಲ್ಲಿ ಹೆಚ್ಚಿನ ಹಣದುಬ್ಬರ ದರವು ಆಗುವುದಕ್ಕೆ ಮುಖ್ಯ ಕಾರಣ ಕಡಿಮೆ ಮೂಲಾಂಶಗಳು. ಇದರ ಜತೆಗೆ ಖನಿಜ ತೈಲಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ (ಎಚ್‌ಎಸ್‌ಡಿ), ನಾಫ್ತಾ, ಎಟಿಎಫ್, ಫರ್ನೇಸ್ ಆಯಿಲ್ ಹಾಗೂ ಮೂಲ ಲೋಹಗಳು, ಆಹಾರ ಉತ್ಪನ್ನಗಳು, ರಾಸಾಯನಿಕ ಉತ್ಪನ್ನಗಳು ಮುಂತಾದ ತಯಾರಿಕೆ ಉತ್ಪನ್ನಗಳು ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಬೆಲೆ ಏರಿಕೆ ಕಂಡಿವೆ.
ಸಗಟು ಬೆಲೆ ಸೂಚ್ಯಂಕದ (ಡಬ್ಲ್ಯುಪಿಐ) ತಾತ್ಕಾಲಿಕ ಅಂಕಿ-ಅಂಶಗಳನ್ನು ತಿಂಗಳ ಎರಡು ವಾರಗಳ ಸಮಯ ವಿಳಂಬವಾಗಿ ಪ್ರತಿ ತಿಂಗಳು 14 ರಂದು (ಅಥವಾ ಮುಂದಿನ ಕೆಲಸದ ದಿನ) ಬಿಡುಗಡೆ ಮಾಡಲಾಗುತ್ತದೆ. ದೇಶಾದ್ಯಂತದ ಸಾಂಸ್ಥಿಕ ಮೂಲಗಳು ಮತ್ತು ಆಯ್ದ ಉತ್ಪಾದನಾ ಘಟಕಗಳಿಂದ ಸಂಗ್ರಹಿಸಲಾದ ಮಾಹಿತಿಯ ಆಧಾರದ ಮೇಲೆ ದತ್ತಾಂಶಗಳು ಒಗ್ಗೂಡಿಸಲಾಗುತ್ತದೆ. 10 ವಾರಗಳ ನಂತರ, ಸೂಚ್ಯಂಕವನ್ನು ಅಂತಿಮಗೊಳಿಸಲಾಗುತ್ತದೆ ಮತ್ತು ಅಂತಿಮ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಈ ತಿಂಗಳ ಆರಂಭದಲ್ಲಿ, ಜೂನ್ ತಿಂಗಳು ಸಿಪಿಐ (ಗ್ರಾಹಕ ದರ ಸೂಚ್ಯಂಕ) ಹಣದುಬ್ಬರವು ಪ್ರತಿಕೂಲವಾದ ಮೂಲ ಪರಿಣಾಮದಿಂದ, ಹೆಡ್ಲೈನ್ ಮತ್ತು ಕೋರ್ ಎರಡರಲ್ಲೂ ತ್ರೈಮಾಸಿಕದ ನಂತರದ ತ್ರೈಮಾಸಿಕ ಸ್ಥಿರತೆ ಚಲನೆಯು ಸರಾಗಗೊಳಿಸುವ ಮೂಲಕ ಶೇ 6.26 ರಷ್ಟಿದೆ. ಇನ್ನು ಆಹಾರದೊಳಗೆ ಹಾಳಾಗುವ ವಸ್ತುಗಳು ಮಿಶ್ರ ಫಲಿತಾಂಶವನ್ನು ತೋರಿಸಿದೆ. ಇನ್ನು ಹಾಳಾಗದ ವಸ್ತುಗಳು ಬಹುತೇಕ MoM ಕಡಿಮೆ ಆಗಿವೆ. ಇಂಧನ ಹಣದುಬ್ಬರವು ಜಾಗತಿಕ ತೈಲ ಬೆಲೆಗಳ ಸಾಗುವಿಕೆಯನ್ನು ಚಿತ್ರಿಸುತ್ತಿದೆ. ಕೋರ್ ಹಣದುಬ್ಬರವು ಶೇ 6.2ಕ್ಕೆ ಇಳಿದಿದೆ ಮತ್ತು ಆರೋಗ್ಯ ಮತ್ತು ವೈಯಕ್ತಿಕ ಆರೈಕೆಯ ಮುಂಚೂಣಿಯಲ್ಲಿರುವಂತೆ ಬಹುತೇಕ ಉಪ ವಿಭಾಗಗಳಲ್ಲಿ ಕುಸಿತ ಕಂಡಿದೆ.
ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು? ಒಂದು ಉತ್ಪನ್ನ ಅಥವಾ ವಸ್ತು ಅಂತಿಮವಾಗಿ ಗ್ರಾಹಕರನ್ನು ತಲುಪುವುದಕ್ಕೆ ಮುಂಚೆ ವಿವಿಧ ಹಂತಗಳನ್ನು ದಾಟಿ ಬರುತ್ತದೆ. ಮೊದಲಿಗೆ ಉತ್ಪಾದಕರು, ಅಂದರೆ ಆ ವಸ್ತುವಿನ ತಯಾರಕರು. ಆ ನಂತರದಲ್ಲಿ ಹೋಲ್ಸೇಲರ್ (ಸಗಟು ಮಾರಾಟಗಾರರು). ಅದಾದ ಮೇಲೆ ಚಿಲ್ಲರೆ ಮಾರಾಟಗಾರರು (ರೀಟೇಲರ್). ಕೊನೆಗೆ ಗ್ರಾಹಕರನ್ನು ತಲುಪುತ್ತದೆ. ಇದಕ್ಕೆ ಇನ್ನೂ ಒಂದೆರಡು ಪದರ ಸೇರ್ಪಡೆ ಕೂಡ ಆಗಬಹುದು. ಹೀಗೆ ವಿವಿಧ ಹಂತವನ್ನು ದಾಟುವಾಗ ವಿಧಿಸುವ ಶುಲ್ಕ ಅಥವಾ ದರ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನು ಸೂಚಿಸುವುದಕ್ಕೆ ಒಂದು ಮಾನದಂಡ ಬೇಕಲ್ಲಾ, ಅದನ್ನು ಸಗಟು ದರ ಸೂಚ್ಯಂಕ ಎನ್ನಲಾಗುತ್ತದೆ.
ಇನ್ನು ಉತ್ಪನ್ನಗಳು, ವಸ್ತು, ಸೇವೆಗಳ ದರ ಎಷ್ಟು ಏರಿಕೆ ಆಗಿದೆ ಎಂಬುದನ್ನು ಸೂಚಿಸುವುದಕ್ಕೆ ಹಣದುಬ್ಬರ ಎನ್ನಲಾಗುತ್ತದೆ. ಅಲ್ಲಿಗೆ ಈ ಎರಡು ವ್ಯಾಖ್ಯಾನವನ್ನು ಒಗ್ಗೂಡಿಸಿದರೆ ನಿಮಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು ಅಂತ ಗೊತ್ತಾಗುತ್ತದೆ. ಸರಿ, ಇದರಿಂದ ನಮ್ಮ ಮೇಲೆ ಏನು ಪರಿಣಾಮ ಅಂದರೆ, ದಿನ ಬಳಕೆಯ ವಸ್ತು, ಸೇವೆ, ಉತ್ಪನ್ನಗಳು ಸಿಕ್ಕಾಪಟ್ಟೆ ಜಾಸ್ತಿ ಆಗಿವೆ ಅಂತ ಅಂದುಕೊಳ್ಳುತ್ತಿರುತ್ತೇವಲ್ಲಾ ಅಥವಾ ಪರವಾಗಿಲ್ಲ ಮುಂಚೆಗಿಂತ ಈಗ ಸ್ವಲ್ಪ ಬೆಲೆ ಇಳಿದಿದೆ ಅಂತ ನಿರಾಳ ಆಗುತ್ತೇವಲ್ಲಾ ಅದಕ್ಕೆ ಕಾರಣ ತಿಳಿಯುವುದು ಈ ಅಂಕಿ- ಅಂಶದ ಮೂಲಕವಾಗಿ.
ಇದನ್ನೂ ಓದಿ: Retail Inflation: ದೇಶದಲ್ಲಿನ ಚಿಲ್ಲರೆ ಹಣದುಬ್ಬರ ದರ ಜೂನ್‌ನಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು ಶೇ 6.26ಕ್ಕೆ
(Wholesale Price Index Inflation for 2021 June at 12.07%)
Published On - 6:30 pm, Wed, 14 July 21