AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳ ಬೇಟೆಯಾಡುವ ವಿಚಾರ ಪೊಲೀಸರಿಗೆ ತಿಳಿಸುವುದಾಗಿ ಧಮ್ಕಿ: ಕಂಠಪೂರ್ತಿ ಕುಡಿಸಿ ಸ್ನೇಹಿತನ ಹೆಣ ಕೆಡವಿದ ಗೆಳೆಯ

ಗೆಳೆಯನೊಂದಿಗೆ ಹೋದವನು ಹೆಣವಾದ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುರಪುರದಲ್ಲಿ ನಡೆದಿದೆ. ಮದ್ಯ ಕುಡಿಸಿ, ರಾಡಿನಿಂದ ತಲೆಗೆ ಹೊಡೆದು ಹತ್ಯೆಗೈದು ಬಳಿಕ ಆರೋಪಿ ತಾನೇ ಪೊಲೀಸ್​​​ ಠಾಣೆಗೆ ಬಂದು ಶರಣಾಗಿದ್ದಾನೆ. ಮಾಂಬಳ್ಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಕಳ್ಳ ಬೇಟೆಯಾಡುವ ವಿಚಾರ ಪೊಲೀಸರಿಗೆ ತಿಳಿಸುವುದಾಗಿ ಧಮ್ಕಿ: ಕಂಠಪೂರ್ತಿ ಕುಡಿಸಿ ಸ್ನೇಹಿತನ ಹೆಣ ಕೆಡವಿದ ಗೆಳೆಯ
ಮಲ್ಲಿಕಾರ್ಜುನ, ರಾಮಕೃಷ್ಣ
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Apr 20, 2026 | 9:07 PM

Share

ಚಾಮರಾಜನಗರ, ಏಪ್ರಿಲ್​​ 20: ಆತ ಕೂಲಿ ಮಾಡಿಕೊಂಡು ಇದ್ದ. ಆತನ ಸ್ನೇಹಿತರು ಕಳ್ಳಬೇಟೆ ವಿಚಾರವನ್ನು ಪೊಲೀಸರಿಗೆ ತಿಳಿಸುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಇನ್ನೊಬ್ಬ ಸ್ನೇಹಿತ ಕಂಠಪೂರ್ತಿ ಕುಡಿಸಿ ಬಳಿಕ ರಾಡಿನಿಂದ ಹೊಡೆದು ಹತ್ಯೆ (Murder) ಮಾಡಿದ್ದಾನೆ. ಚಾಮರಾಜನಗರ (chamarajanagar) ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುರಪುರದಲ್ಲಿ ಘಟನೆ ನಡೆದಿದೆ. ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಕುಣಗಳ್ಳಿ ಗ್ರಾಮದ ಕಳ್ಳ ಬೇಟೆಗಾರ ಮಲ್ಲಿಕಾರ್ಜುನ ಎಂಬಾತ ತನ್ನ ಸ್ನೇಹಿತ ರಾಮಕೃಷ್ಣ ಎಂಬಾತನನ್ನು ಪಾರ್ಟಿ ಹೆಸರಲ್ಲಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಚೆನ್ನಾಗಿ ಕುಡಿಸಿ, ಊಟ ಮಾಡಿಸಿದ ಬಳಿಕ ಅಸಲಿ ಆಟ ಶುರು ಮಾಡಿದ್ದಾನೆ. “ನನ್ನ ಕಳ್ಳ ಬೇಟೆಯ ಮಾಹಿತಿಯನ್ನ ಪೊಲೀಸರಿಗೆ ಯಾಕೆ ಹೇಳುತ್ತಿದ್ದಿಯಾ?” ಎಂದು ಜಗಳ ತೆಗೆದಿದ್ದಾನೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಗುಂಡಿನ ಸದ್ದು: ಫೈರಿಂಗ್​ ಮಾಡಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ

ಮೊದಲೇ ಸಂಚು ರೂಪಿಸಿದ್ದ ಮಲ್ಲಿಕಾರ್ಜುನ, ಕಬ್ಬಿಣದ ರಾಡಿನಿಂದ ರಾಮಕೃಷ್ಣನ ತಲೆಗೆ ಹೊಡೆದು ಸಾಯಿಸಿದ್ದಾನೆ. ವಿಶೇಷ ಅಂದ್ರೆ, ಕೊಲೆ ಮಾಡಿದ ಬಳಿಕ ಎರಡು ಗಂಟೆ ಕಾಲ ಹೆಣದ ಬಳಿಯೇ ಕುಳಿತಿದ್ದ ಆತ, ಸಾವು ಖಚಿತವಾದ ಮೇಲೆ ತಾನೇ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಹೊಂಚು ಹಾಕಿ ಸ್ನೇಹಿತನ ಕೊಲೆ

ಈ ಹಿಂದೆ ಎರಡು ಬಾರಿ ಕಳ್ಳ ಬೇಟೆಗಾಗಿ ಅಕ್ರಮ ನಾಡ ಬಂದೂಕು ಹೊಂದಿರುವ ಪ್ರಕರಣ ದಾಖಲಾಗಿತ್ತು. ಆ ಮಾಹಿತಿಯನ್ನ ಈತನೇ ಪೊಲೀಸರಿಗೆ ನೀಡಿದ್ದಾನೆ ಎಂದು ಖಚಿತ ಪಡೆಸಿಕೊಂಡಿದ್ದ ಮಲ್ಲಿಕಾರ್ಜುನ್, ಇವನನ್ನು ಮುಗಿಸಲೇಬೇಕು ಎಂದು ದೃಢ ನಿರ್ಧಾರ ಮಾಡಿ, ಹೊಂಚು ಹಾಕಿ ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೂ ಕಾದು, ಕೆಲಸ ಮುಗಿದ ಮೇಲೆ ರಾಮಕೃಷ್ಣನ ಮನೆಗೆ ಬಂದು ಪಾರ್ಟಿಗೆ ಹೋಗೋಣ ಎಂದು ಕರೆದುಕೊಂಡು ಹೋಗಿ ಗ್ರಾಮದ ಹೊರವಲಯದಲ್ಲಿ ಕೊಲೆ ಮಾಡಿದ್ದಾನೆ.

ನಾಲ್ಕೈದು ಜನರಿಂದ ಕೊಲೆ: ಕುಟುಂಬಸ್ಥರು ಆರೋಪ

ಇತ್ತ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಸ್ಥರು ಗೋಳಾಡಿದ್ದಾರೆ. ಈ ಕೊಲೆಯನ್ನು ಒಬ್ಬರು‌ ಮಾಡಲು ಸಾಧ್ಯವಿಲ್ಲ, ನಾಲ್ಕೈದು ಜನ ಸೇರಿ‌ ಮಾಡಿದ್ದಾರೆ. ಸೂಕ್ತ ತನಿಖೆ ಮಾಡಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಇದರ ಹಿಂದೆ ಬೇರೆಯವರ ಕೈವಾಡವಿದೆ, ಸೂಕ್ತ‌ ತನಿಖೆಯಾಗಿ ಎಲ್ಲರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: 2ನೇ ಮದುವೆ ತಯಾರಿಯಲ್ಲಿದ್ದ ವೈದ್ಯನ ಭೀಕರ ಕೊಲೆ: ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ!

ಇನ್ನು ಸುದ್ದಿ ತಿಳಿದ ಎಸ್​​ಪಿ ಮುತ್ತುರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶ್ವಾನದಳ ತರಿಸಿ ತಪಾಸಣೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಮಾಂಬಳ್ಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಚಾಮರಾಜನಗರದ ಸಿಮ್ಸ್ ಆಸ್ವತ್ರೆಗೆ ರವಾನಿಸಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Suraj Prasad SN
Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More