ICSI CS Exam 2021: ಆಗಸ್ಟ್ 10ರಿಂದ 20ರ ತನಕ ನಡೆಯಲಿವೆ ಐಸಿಎಸ್ಐ ಸಿಎಸ್ ಪರೀಕ್ಷೆಗಳು
ಈ ಹಿಂದೆ ಪರೀಕ್ಷೆಗಳನ್ನು ಜೂನ್ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು, ಇದೀಗ ಕೊವಿಡ್ ಕಾರಣ ಮುಂದೂಡಲ್ಪಟ್ಟಿದ್ದರಿಂದ ಯಾವುದೇ ಪರೀಕ್ಷೆಗೆ ಮರು ನೋಂದಣಿ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಹೀಗಾಗಿ ಜೂನ್ 2021 ರ ಪರೀಕ್ಷೆ ಎಂದು ಉಲ್ಲೇಖಿಸಿ ಹೆಸರು ನೋಂದಾಯಿಸಿಕೊಂಡವರು ಹೆದರಬೇಕಾದ ಅವಶ್ಯಕತೆ ಇಲ್ಲ.

ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ (ಐಸಿಎಸ್ಐ) ಆಯೋಜಿಸುವ ಸಿಎಸ್ ಪರೀಕ್ಷೆಗಳು ಆಗಸ್ಟ್ 10ರಿಂದ 20ರ ತನಕ ನಡೆಯಲಿವೆ ಎಂದು ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. icis.edu ವೆಬ್ಸೈಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕೊವಿಡ್ 19 ಕಾರಣದಿಂದ ಮುಂದೂಡಲ್ಪಟ್ಟಿದ್ದ ಪರೀಕ್ಷಾ ದಿನಾಂಕಗಳನ್ನು ಈಗ ಮರುನಿಗದಿ ಮಾಡಿರುವ ಬಗ್ಗೆ ತಿಳಿಸಲಾಗಿದೆ.
ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿ ಪ್ರಕಾರ ಹಿಂದಿನ ಸಿಲಾಬಸ್ಗೆ ಸಂಬಂಧಿಸಿದ ಎಕ್ಸಿಕ್ಯೂಟಿವ್ ಪರೀಕ್ಷೆಗಳು ಆಗಸ್ಟ್ 10ರಿಂದ 17ರ ತನಕ ನಡೆಯಲಿದ್ದು, ಆಗಸ್ಟ್ 18ರಂದು ನೂತನ ಸಿಲಾಬಸ್ಗೆ ಸಂಬಂಧಿಸಿದ ಎಕ್ಸಿಕ್ಯೂಟಿವ್ ಪ್ರೋಗ್ರಾಂ ನಡೆಯಲಿದೆ. ಅಲ್ಲದೇ ಹಿಂದಿನ ಮತ್ತು ಈಗಿನ ಸಿಲಾಬಸ್ಗೆ ಸಂಬಂಧಿಸಿದ ಐಸಿಎಸ್ಐ ಸಿಎಸ್ ಪ್ರೊಫೆಷನಲ್ ಪರೀಕ್ಷೆಗಳು ಆಗಸ್ಟ್ 20ಕ್ಕೆ ಮುಗಿಯಲಿವೆ ಎಂದು ಹೇಳಲಾಗಿದೆ.
ಈ ಹಿಂದೆ ಪರೀಕ್ಷೆಗಳನ್ನು ಜೂನ್ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು, ಇದೀಗ ಕೊವಿಡ್ ಕಾರಣ ಮುಂದೂಡಲ್ಪಟ್ಟಿದ್ದರಿಂದ ಯಾವುದೇ ಪರೀಕ್ಷೆಗೆ ಮರು ನೋಂದಣಿ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಹೀಗಾಗಿ ಜೂನ್ 2021 ರ ಪರೀಕ್ಷೆ ಎಂದು ಉಲ್ಲೇಖಿಸಿ ಹೆಸರು ನೋಂದಾಯಿಸಿಕೊಂಡವರು ಹೆದರಬೇಕಾದ ಅವಶ್ಯಕತೆ ಇಲ್ಲ. ಎಲ್ಲರನ್ನೂ ಪರಿಗಣಿಸಿಯೇ ಪರೀಕ್ಷೆ ನಡೆಸಲಾಗುವುದು ಎಂದು ಸಂಸ್ಥೆ ಭರವಸೆ ನೀಡಿದೆ.
ಸಾಮಾನ್ಯ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ತನಕ ಇರಲಿವೆ. ಫೌಂಡೇಶನ್ ಪ್ರೋಗ್ರಾಮ್ಗೆ ಸಂಬಂಧಿಸಿದ ಪರೀಕ್ಷೆಗಳು ಆಗಸ್ಟ್ 13 ಮತ್ತು 14ರಂದು ನಡೆಯಲಿವೆ. ಇದರಲ್ಲಿ ದಿನಕ್ಕೆ ಎರಡು ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಬೆಳಗ್ಗೆ 9.30ರಿಂದ 11 ಗಂಟೆ, ಮಧ್ಯಾಹ್ನ 12ರಿಂದ 1.30 ಹಾಗೂ ಮಧ್ಯಾಹ್ನ 2.30ರಿಂದ 4 ಗಂಟೆ, 5ರಿಂದ 6.30 ಎಂದು ಪಾಳಿಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ವಿವರಕ್ಕಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
ಇದನ್ನೂ ಓದಿ: CET 2021 Exam Time Table: ಆಗಸ್ಟ್ 28, 29ರಂದು ಸಿಇಟಿ ಪರೀಕ್ಷೆ ನಡೆಸಲಾಗುವುದು; ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ
ದ್ವಿತೀಯ ಪಿಯುಸಿ ಪರೀಕ್ಷೆ ಶುಲ್ಕವನ್ನು ವಾಪಸ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪೋಷಕರ ಸಮನ್ವಯ ಸಮಿತಿ ಆಗ್ರಹ
(ICSI CS Exams will be held from August 10th to 20th says ICSI check detailed schedule on icsi edu website)
Published On - 2:41 pm, Tue, 8 June 21
