AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka 2nd PUC Results 2026: ಇಂದೇ ದ್ವಿತೀಯ ಪಿಯು ಫಲಿತಾಂಶ: ವಿದ್ಯಾರ್ಥಿಗಳಿಗೆ-ಪೋಷಕರಿಗೆ ಖುಷಿಯ ಸುದ್ದಿ

ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿರುವ 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್​​ನ್ಯೂಸ್ ನೀಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಇಂದು (ಏ.9) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುತ್ತಿದೆ. ಈ ಹಿಂದೆ ಕೆಲ ಕಾರಣಾಂತರಗಳಿಂದ ಫಲಿತಾಂಶ ಈ ವಾರದಲ್ಲಿ ಪ್ರಕಟವಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ ಶಿಕ್ಷಣ ಇಲಾಖೆ ಫಲಿತಾಂಶ ಘೋಷಣೆ ಮಾಡಲು ಮುಂದಾಗಿದೆ.

Karnataka 2nd PUC Results 2026: ಇಂದೇ ದ್ವಿತೀಯ ಪಿಯು ಫಲಿತಾಂಶ: ವಿದ್ಯಾರ್ಥಿಗಳಿಗೆ-ಪೋಷಕರಿಗೆ ಖುಷಿಯ ಸುದ್ದಿ
Karnataka 2nd Puc Results 2026
Vinay Kashappanavar
| Edited By: |

Updated on:Apr 09, 2026 | 6:24 AM

Share

ಬೆಂಗಳೂರು, (ಏಪ್ರಿಲ್ 06): ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕುತೂಹಲದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ (Puc Exam Result) ನೋಡುವ ಭಾಗ್ಯ ಸಿಕ್ಕಿದೆ. ಭಾರೀ ಗೊಂದಲದ ನಡುವೆ ಇದೀಗ ರಾಜ್ಯ ಶಿಕ್ಷಣ ಇಲಾಖೆ ಇಂದು  (ಏ.9) ಫಲಿತಾಂಶವನ್ನು ಘೋಷಣೆ ಮಾಡಲಿದೆ.  ಶಿಕ್ಷಣ ಸಚಿವ ಮಧುಬಂಗಾರಪ್ಪ (Madhu Bangarappa) ಅವರೇ ಸುದ್ದಿಗೋಷ್ಠಿಯಲ್ಲಿ ಏಪ್ರಿಲ್ ಮೊದಲ ವಾರದಲ್ಲೇ ಫಲಿತಾಂಶ ನೀಡುವುದಾಗಿ ಘೋಷಿಸಿದ್ದರು. ಹಾಗಾಗಿ ಏಪ್ರಿಲ್ 7ರಂದು ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಶಿಕ್ಷಣ ಏಪ್ರಿಲ್ 7ಕ್ಕೆ ದ್ವಿತೀಯ ಪಿಯುಸಿ ರಿಸಲ್ಟ್ ಅನೌನ್ಸ್ ಆಗುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು ಹೇಳಿದ್ದರು. ಇದೀಗ  ಬಹಳ ಕಾತರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಗುಡ್​​​​ ನ್ಯೂಸ್​​ ಸಿಕ್ಕಿದೆ.

ಈ ಮೊದಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಏಪ್ರಿಲ್ ಮೊದಲ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದ್ದರು. ಹೀಗಾಗಿ ಪ್ರತಿವರ್ಷಕ್ಕಿಂತ ಈ ಬಾರಿ ಬೇಗ ರಿಸಲ್ಟ್ ಕೊಡುತ್ತಾರೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದರು. ಇದೀಗ ಅದರಂತೆ ಎಕ್ಸಾಂ ಬೋರ್ಡ್ ಅಧಿಕಾರಿಗಳು ಇಂದು ಫಲಿತಾಂಶ ಪ್ರಕಟ ಮಾಡಲಿದೆ.

ಇದನ್ನೂ ಓದಿ: Karnataka 2nd PUC Result 2026 Date: ದ್ವಿತೀಯ ಪಿಯುಸಿ ಫಲಿತಾಂಶ ಆನ್​ಲೈನಲ್ಲಿ ನೋಡೋದು ಹೇಗೆಂಬ ಮಾಹಿತಿ ಇಲ್ಲಿದೆ

ಮಾರ್ಚ್‌ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ರಾಜ್ಯಾದ್ಯಂತ ಸುಮಾರು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಬೆನ್ನಲ್ಲೇ ಮೌಲ್ಯಮಾಪನ ಕಾರ್ಯ ಚುರುಕಿನಿಂದ ಸಾಗಿತ್ತು. ಆದರೆ, ಈಗ ಕೊನೆಯ ಕ್ಷಣದಲ್ಲಿ ಮೌಲ್ಯಮಾಪನ ಪ್ರಕ್ರಿಯೆಯ ಸಣ್ಣ ಪುಟ್ಟ ಕೆಲಸಗಳು ಬಾಕಿ ಇದೆ ಎಂದು ಹೇಳಿ ದಿನಾಂಕವನ್ನು ಮುಂದೂಡಲಾಗಿತ್ತು.   ಇನ್ನೆರಡು ದಿನ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಕೂಡ ಹೇಳಲಾಗಿದೆ.  ಇದೀಗ ಈ ಎಲ್ಲ ಗೊಂದಲಕ್ಕೆ ಶಿಕ್ಷಣ ಇಲಾಖೆ ಬ್ರೇಕ್ ಹಾಕಿ. ಇಂದು ಮಧ್ಯಾಹ್ನ ಫಲಿತಾಂಶ ಪ್ರಕಟ ಮಾಡಲಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:08 pm, Mon, 6 April 26

Follow Us
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ
ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ
ಕೊಪ್ಪಳದಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆ
ಕೊಪ್ಪಳದಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆ
ಬೆಳ್ಳಂಬೆಳಗ್ಗೆ ಸಫಾರಿ ತೆರಳಿದವರಿಗೆ ದರ್ಶನ ಕೊಟ್ಟ ಅಪರೂಪದ ಕರಿಚಿರತೆ!
ಬೆಳ್ಳಂಬೆಳಗ್ಗೆ ಸಫಾರಿ ತೆರಳಿದವರಿಗೆ ದರ್ಶನ ಕೊಟ್ಟ ಅಪರೂಪದ ಕರಿಚಿರತೆ!
ಡೋಲು ಬಾರಿಸುತ್ತಾ ಭರ್ಜರಿ ಡ್ಯಾನ್ಸ್ ಮಾಡಿದ ಶಾಸಕ ಶಿವಲಿಂಗೇಗೌಡ
ಡೋಲು ಬಾರಿಸುತ್ತಾ ಭರ್ಜರಿ ಡ್ಯಾನ್ಸ್ ಮಾಡಿದ ಶಾಸಕ ಶಿವಲಿಂಗೇಗೌಡ
ರೈಲಿನಿಂದ ಮಗು ಬಿದ್ದೇಬಿಡ್ತು, ಚೈನ್ ಎಳೆದರೂ ನಿಲ್ಲದ ರೈಲು
ರೈಲಿನಿಂದ ಮಗು ಬಿದ್ದೇಬಿಡ್ತು, ಚೈನ್ ಎಳೆದರೂ ನಿಲ್ಲದ ರೈಲು