Challakere Election Results: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಚನಾವಣೆ 2023 ಫಲಿತಾಂಶ; ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿ ಕಾಂಗ್ರೆಸ್ನ ಟಿ ರಘುಮೂರ್ತಿ
Challakere Assembly Election Results 2023 Live Counting Updates: 2013ರಿಂದ ಕಾಂಗ್ರೆಸ್ನ ಟಿ ರಘುಮೂರ್ತಿ ಅವರ ಹಿಡಿತದಲ್ಲಿರುವ ಚಳ್ಳಕೆರೆಯಲ್ಲಿ ಜೆಡಿಎಸ್ 2ನೇ ಸ್ಥಾನದಲ್ಲಿದ್ದು, ಬಿಜೆಪಿ ನಂತರದ ಸ್ಥಾನದಲ್ಲಿದೆ.

Challakere Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಫೈಟ್ ಏರ್ಪಡಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಟಿ ರಘುಮೂರ್ತಿ, ಜೆಡಿಎಸ್ನಿಂದ ರವೀಶ್, ಬಿಜೆಪಿಯಿಂದ ಅನಿಲ್ ಕುಮಾರ್ ಹಾಗೂ ಆಮ್ ಆದ್ಮಿ ಪಕ್ಷದಿಂದ ಪಾಪಣ್ಣ ಕಣದಲ್ಲಿದ್ದಾರೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ರಘುಮೂರ್ತಿ ಅವರು ಗೆದ್ದಿದ್ದರು. 2018ರಲ್ಲೂ ಅವರು 13,539 ಮತಗಳ ಅಂತರದಿಂದ ಜೆಡಿಎಸ್ನ ರವೀಶ್ ಅವರನ್ನು ಸೋಲಿಸಿದ್ದರು. ರಘುಮೂರ್ತಿ ಅವರು 72874 ಮತಗಳನ್ನು ಪಡೆದಿದ್ದರೆ, ರವೀಶ್ ಅವರು 59,335 ಹಾಗೂ ಬಿಜೆಪಿಯ ಕೆಟಿ ಕುಮಾರಸ್ವಾಮಿ ಅವರು 33471 ಮತಗಳನ್ನು ಪಡೆದಿದ್ದರು.
ಪ್ರಸಕ್ತ ಚುನಾವಣೆಯಲ್ಲಿ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಟಿ ರಘುಮೂರ್ತಿ ಅವರು ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇತ್ತ ಜೆಡಿಎಸ್ ಅಭ್ಯರ್ಥಿ ರವೀಶ್ ಅವರು ರಘುಮೂರ್ತಿ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.