Jayanagar Assembly Election Results 2023: ಜಯನಗರ ಕ್ಷೇತ್ರದಲ್ಲಿ ಮರು ಮತ ಎಣಿಕೆಯಲ್ಲೂ ಸೌಮ್ಯಾ ರೆಡ್ಡಿಗೆ ಪ್ರಯಾಸದ ಗೆಲುವು
Jayanagar Assembly Election Result 2023 Live Counting Updates: ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಪ್ರಯಾಸದ ಗೆಲುವು ಸಿಕ್ಕಿದೆ. ಅವರ ತಂದೆ ರಾಮಲಿಂಗಾ್ರೆಡ್ಡಿ ಅವರು ಪಕ್ಕದ ಬಿಟಿಎಂ ಲೇಔಟ್ ಕ್ಷೇತ್ರದಿಂದ ನಿರಂತರವಾಗಿ 8ನೆ ಬಾರಿಗೆ ಗೆಲುವು ಕಂಡಿದ್ದಾರೆ.

Jayanagar Assembly Election Results 2023: ಬೆಂಗಳೂರು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಇದೀಗತಾನೆ ಪ್ರಕಟಗೊಂಡಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಲ್ಲಿ ( jayanagar Assembly Elections 2023) ಶೇ. 53.72ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಪ್ರಯಾಸದ ಗೆಲುವು ಸಿಕ್ಕಿದೆ. ಮರು ಮತ ಎಣಿಕೆಯಲ್ಲೂ ಸೌಮ್ಯಾ ರೆಡ್ಡಿಗೆ ಜಯ ಲಭಿಸಿದ್ದು, ಕೇವಲ 150 ಮತಗಳ ಅಂತರದಿಂದ ಸೌಮ್ಯಾ ರೆಡ್ಡಿ ಗೆದ್ದಿದ್ದಾರೆ. ಅವರ ತಂದೆ ರಾಮಲಿಂಗಾರೆಡ್ಡಿ ಅವರು ಪಕ್ಕದ ಬಿಟಿಎಂ ಲೇಔಟ್ ಕ್ಷೇತ್ರದಿಂದ ನಿರಂತರವಾಗಿ 8ನೆ ಬಾರಿಗೆ ಗೆಲುವು ಕಂಡಿದ್ದಾರೆ. ಒಟ್ಟು ಮತದಾರರು 209942, 105582 ಪುರುಷರು, 1,04,345 ಮಹಿಳೆಯರು- ಕಣದಲ್ಲಿದ್ದ ಅಭ್ಯರ್ಥಿಗಳು 15 .
ಸಿ.ಕೆ. ರಾಮಮೂರ್ತಿ ಮತ್ತು ಸೌಮ್ಯಾ ರೆಡ್ಡಿ ಇಬ್ಬರಿಗೂ ಪ್ರತಿಷ್ಠೆಯ ಕಣ:
ಜಯನಗರ ವಿಧಾನಸಭೆ ಕ್ಷೇತ್ರ ಮರುವಿಂಗಡಣೆ ನಂತರ ಎರಡು ಬಾರಿ ಬಿಜೆಪಿ ತೆಕ್ಕೆಯಲ್ಲಿದ್ದು, ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯತ್ತ ವಾಲಿತ್ತು. ಈ ಬಾರಿ ಬಿಜೆಪಿ ತನ್ನ ಹಿಂದಿನ ಗೆಲುವನ್ನು ಮತ್ತೆ ಸಾಧಿಸುವ ಹುಮ್ಮಸ್ಸಿನಲಿದ್ದರೆ, ಕಾಂಗ್ರೆಸ್ ಹಿಂದಿನ ವಿಜಯವನ್ನು ತನ್ನ ಹೆಸರಿನಲ್ಲೇ ಉಳಿಸಿಕೊಳ್ಳುವ ಕಸರತ್ತು ನಡೆಸಿದೆ. ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್‌ನಿಂದ ಸೌಮ್ಯಾ ಮರು ಆಯ್ಕೆ ಬಯಸಿದ್ದರೆ, ಬಿಜೆಪಿಯಿಂದ ಪಾಲಿಕೆ ಮಾಜಿ ಸದಸ್ಯ ಸಿ.ಕೆ. ರಾಮಮೂರ್ತಿ ಕಣಕ್ಕಿಳಿದಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು, ಭ್ರಷ್ಟಾಚಾರರಹಿತ ಕಾಮಗಾರಿ ನಡೆಸಿದ್ದೇನೆ ಎಂದು ಹೇಳಿ ಸೌಮ್ಯಾ ರೆಡ್ಡಿ ಮತಯಾಚಿಸಿದ್ದಾರೆ. ಬಿಟಿಎಂ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರ ತಂದೆ, ವರ್ಚಸ್ವೀ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರ ಬೆಂಬಲ ಇದ್ದರೂ ಈ ಬಾರಿ ಮಗಳು ಸೌಮ್ಯಾಗೆ ಹೋರಾಟ ತ್ರಾಸದಾಯಕವಾಗಿದೆ.
2008 ಹಾಗೂ 2013ರಲ್ಲಿ ಬಿಜೆಪಿಯ ಬಿ.ಎನ್. ವಿಜಯಕುಮಾರ್ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2018ರಲ್ಲಿಯೂ ಅವರು ಬಿಜೆಪಿ ಅಭ್ಯ- ರ್ಥಿಯಾಗಿದ್ದರು. ಆದರೆ, ಮತದಾನಕ್ಕೆ ಮುನ್ನ ಅವರು ಮೃತಪಟ್ಟಿದ್ದರಿಂದ ಚುನಾವಣೆ ಮುಂದೂಡಿಕೆ ಆಗಿತ್ತು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಂದ ಮೇಲೆ ನಂತರ ಈ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ರಾಮಲಿಂಗಾರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದರು. ವಿಜಯಕುಮಾರ್ ಅವರ ಸೋದರನಿಗೆ ಬಿಜೆಪಿ ಟಿಕೆಟ್ ನೀಡಿತು. ಅನುಕಂಪದ ಅಲೆ ಸಿಗಲಿಲ್ಲ. ಕಾಂಗ್ರೆಸ್, ಜೆಡಿಎಸ್ ಎರಡೂ ಒಂದಾಗಿದ್ದರಿಂದ 1,843 ಮತಗಳ ಅಂತರದಲ್ಲಿ ಬಿಜೆಪಿ ಸೋಲು ಅನುಭವಿಸಿತ್ತು. ಈ ಬಾರಿ ಮೂರು ಪಕ್ಷಗಳೂ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿವೆ!
ಗುರಪ್ಪನಪಾಳ್ಯ, ತಿಲಕನಗರ, ಬೈರಸಂದ್ರ, ಜೆ.ಪಿ. ನಗರ, ಸಾರಕ್ಕಿ ಪ್ರದೇಶಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಅದರದ್ದೇ ಆದ ಮತಗಳಿವೆ. ಜೆಡಿಎಸ್ ಕೂಡ ತನ್ನದೇ ಮತದಾರರನ್ನು ಹೊಂದಿದ್ದು, ಮತ ವಿಭಜನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಜೆಡಿಎಸ್‌ನ ಕಾಳೇಗೌಡ, ಈ ಬಾರಿ ತಮಗಿದ್ದ ಬೆಂಬಲವನ್ನು ಸಾಬೀತು ಮಾಡುವ ಉತ್ಸಾಹದಲ್ಲಿದ್ದಾರೆ. ಅಮ್ ಆದಿ ಪಾರ್ಟಿಯ ಮಹಾಲಕ್ಷ್ಮಿ, ಸಿ. ‘ಬುದ್ಧಿವಂತ’ ಮತದಾರರನ್ನು ಸೆಳೆಯಲು ಯೋಜಿಸುತ್ತಿದ್ದಾರೆ. ಬಿಎಸ್‌ಪಿಯ ಕರ್ನಾಟಕ ಕ್ಷೇತ್ರ ರಾಷ್ಟ್ರ ಸಮಿತಿಯ ಬಿ. ಮಣಿಕಂಠ ಪ್ರಜಾಕೀಯ ಟ ಪಾರ್ಟಿಯ ಎಂ.ಡಿ, ಸಂತೋಷ ಬಿ. ನಾಯಕ್ ಸೇರಿದಂತೆ ಒಟ್ಟು 15 ಮಂದಿಗೆ ಕಣದಲ್ಲಿದ್ದಾರೆ. ಎಂಟು ಮಂದಿ ಪಕ್ಷೇತರ ರಿರುವುದರಿಂದ ಮತ ವಿಭಜನೆಯಾಗುವ ಸಾಧ್ಯತೆಯೂ ಇದೆ.
Published On - 4:14 am, Sat, 13 May 23