AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Srinivasapur Election Results: ಶ್ರೀನಿವಾಸಪುರ ವಿಧಾನಸಭಾ ಚುನಾವಣೆ​ 2023 ರಿಸಲ್ಟ್: ಶ್ರೀನಿವಾಸರೆಡ್ಡಿ, ರಮೇಶ್​ ಕುಮಾರ್ ಹಾಗೂ ವೆಂಕಟಶಿವಾರೆಡ್ಡಿ ಬಿಗ್​ ಫೈಟ್​; ಫಲಿತಾಂಶ ಇಂದು

Srinivaspura Assembly Election Result 2023 Live Counting Updates: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಮಾಜಿ ಸಚಿವ, ಹಾಲಿ ಶಾಸಕ ಕೆ.ಆರ್.ರಮೇಶ್​ ಕುಮಾರ್ ಹಾಗೂ ಜೆಡಿಎಸ್​ ನಿಂದ ಮಾಜಿ ಸಚಿವ ವೆಂಕಟಶಿವಾರೆಡ್ಡಿ ಹಾಗೂ ಬಿಜೆಪಿಯಿಂದ ಗುಂಜೂರು ಶ್ರೀನಿವಾಸರೆಡ್ಡಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Srinivasapur Election Results: ಶ್ರೀನಿವಾಸಪುರ ವಿಧಾನಸಭಾ ಚುನಾವಣೆ​ 2023 ರಿಸಲ್ಟ್: ಶ್ರೀನಿವಾಸರೆಡ್ಡಿ, ರಮೇಶ್​ ಕುಮಾರ್ ಹಾಗೂ ವೆಂಕಟಶಿವಾರೆಡ್ಡಿ ಬಿಗ್​ ಫೈಟ್​; ಫಲಿತಾಂಶ ಇಂದು
ಅಕ್ಷತಾ ವರ್ಕಾಡಿ
| Updated By: Digi Tech Desk|

Updated on:May 13, 2023 | 1:47 AM

Share

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ರಕ್ತಸಿಕ್ತ ಹಾಗೂ ರಾಯಸೀಮ ರಾಜಕಾರಣಕ್ಕೆ ಹೆಸರಾದ ಮಾವಿನ ನಗರಿ ಶ್ರೀನಿವಾಸಪುರದಲ್ಲಿ ರಾಜಕೀಯ ಬದ್ದವೈರಿಗಳು ಈ ಬಾರಿಯೂ ಎದುರು ಸ್ಪರ್ಧಿಸಿದ್ದಾರೆ. ಕಾಂಗ್ರೇಸ್​ನಿಂದ ಮಾಜಿ ಸಚಿವ, ಮಾಜಿ ಸ್ಪೀಕರ್​, ಹಾಲಿ ಶಾಸಕ ಕೆ.ಆರ್.ರಮೇಶ್​ ಕುಮಾರ್ ಹಾಗೂ ಜೆಡಿಎಸ್​ ನಿಂದ ಮಾಜಿ ಸಚಿವ ವೆಂಕಟಶಿವಾರೆಡ್ಡಿ ಹಾಗೂ ಬಿಜೆಪಿಯಿಂದ ಹೊಸ ಮುಖ ಗುಂಜೂರು ಶ್ರೀನಿವಾಸರೆಡ್ಡಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ರಾಜ್ಯದ ಮಾವಿನ ತವರು ಎಂದರೆ ಅದು ಶ್ರೀನಿವಾಸಪುರ ಇಲ್ಲಿ ವಿಶ್ವಪ್ರಸಿದ್ದವಾದ ಮಾವಿನ ಹಣ್ಣುಗಳನ್ನು ಬೆಳೆದ ದೇಶದ ಹಲವು ರಾಜ್ಯ ಅಷ್ಟೇ ಅಲ್ಲದೆ ವಿದೇಶಗಳಿಗೂ ಇಲ್ಲಿನ ಮಾವಿನ ಹಣ್ಣುಗಳನ್ನು ರಪ್ತು ಮಾಡಲಾಗುತ್ತದೆ.

ಶ್ರೀನಿವಾಸಪುರದಲ್ಲಿ ಸರಿಸುಮಾರು 50 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರೆ. ಆಂದ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶವಾಗಿರುವ ಶ್ರೀನಿವಾಸಪುರದಲ್ಲಿ ಇಂದಿಗೂ ರಾಯಲಸೀಮೆಯ ರೀತಿಯಲ್ಲಿ ರಕ್ತಸಿಕ್ತ ರಾಜಕಾರಣಕ್ಕೆ ಈ ಕ್ಷೇತ್ರ ಹೆಸರುವಾಸಿ, ಕಳೆದ ನಲವತ್ತು ವರ್ಷಗಳಿಂದಲೂ ಕೇವಲ ಇಲ್ಲಿ ವ್ಯಕ್ತಿಯಾಧಾರಿತ ರಾಜಕಾರಣ ನಡೆದುಕೊಂಡು ಬಂದಿದೆ. ಚುನಾವಣಾ ಸಂದರ್ಭದಲ್ಲಿ ಗಲಾಟೆ, ಹೊಡೆದಾಟ, ಬಡಿದಾಟ ಇಲ್ಲಿ ಸರ್ವೇ ಸಾಮಾನ್ಯ. ಮಾಜಿ ಸ್ಪೀಕರ್ ರಮೇಶ್​ ಕುಮಾರ್ ಸ್ಪರ್ಧಿಸುವ ಕ್ಷೇತ್ರವಾಗಿದ್ದು ಇವರಿಗೆ ಪ್ರತಿಸ್ಪರ್ಧಿಯಾಗಿ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಪ್ರತಿಸ್ಪರ್ಧಿಯಾಗಿ ಪ್ರತಿಭಾರಿ ಕಣಕ್ಕಿಳಿಯುತ್ತಿದ್ದಾರೆ. ಒಂದು ಬಾರಿ ರಮೇಶ್​ ಕುಮಾರ್​ ಮತ್ತೊಂದು ಬಾರಿ ವೆಂಕಟಶಿವಾರೆಡ್ಡಿ ಹೀಗೆ ಮತದಾರರು ಒಂದು ಬಾರಿ ಇವರು ಇನ್ನೊಂದು ಬಾರಿ ಅವರು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಆದರೆ ಕಳೆದ 2018ರ ಚುನಾವಣೆಯಲ್ಲಿ ಮಾತ್ರ ಆ ಸಂಪ್ರದಾಯಕ್ಕೆ ಬ್ರೇಕ್​ ಹಾಕಿರುವ ಇಲ್ಲಿನ ಮತದಾರರು ಸತತ ಎರಡನೇ ಬಾರಿಗೆ ರಮೇಶ್​ ಕುಮಾರ್​ ಅವರನ್ನು ಗೆಲ್ಲಿಸಿದ್ದಾರೆ.

ಇನ್ನು ಶ್ರೀನಿವಾಸಪುರ ಕ್ಷೇತ್ರದಲ್ಲಿ 105036 ಮಂದಿ ಪುರುಷರು, 106116 ಮಂದಿ ಮಹಿಳೆಯರು ಸೇರಿ ಒಟ್ಟು 211160 ಮಂದಿ ಮತದಾರರಿದ್ದಾರೆ. ಒಟ್ಟು 289 ಮತಗಟ್ಟೆಗಳನ್ನು ಸ್ಥಾಪಿಸುವ ನಿರೀಕ್ಷೆಇದೆ. ಇನ್ನು ಕ್ಷೇತ್ರ ವ್ಯಾಪ್ತಿಗೆ ನೆಲವಂಕಿ, ಯಲ್ದೂರು, ಶ್ರೀನಿವಾಸಪುರ ಪಟ್ಟಣ-ಕಸಬಾ, ರಾಯಲ್ಪಾಡು, ರೋಣೂರು, ಹೋಳೂರು, ಸುಗಟೂರು ಹೋಬಳಿಗಳು ಈ ಕ್ಷೇತ್ರವ್ಯಾಪ್ತಿಗೆ ಒಳಪಡುತ್ತವೆ. ಈ ಕ್ಷೇತ್ರದ ಮತದಾರರಿಗೆ ಪಕ್ಷಕ್ಕಿಂತ, ವ್ಯಕ್ತಿಗೆ ನಿಷ್ಠೆ ಹೆಚ್ಚು. ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ಭೌಗೋಳಿಕವಾಗಿ ಅತಿ ದೊಡ್ಡ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ರೆಡ್ಡಿ ಸಮುದಾಯ ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ನಂತರ ಸ್ಥಾನದಲ್ಲಿರುವ ಎಸ್‌ಸಿ, ಎಸ್‌ಟಿ, ಬಲಜಿಗ, ಕುರುಬ, ಮುಸ್ಲಿಂ ಮತ್ತಿತರ ಸಮುದಾಯವೂ ಹೆಚ್ಚಿನ ಪ್ರಮಾಣದಲ್ಲಿವೆ. ಇಲ್ಲಿ ವ್ಯಕ್ತಿರಾಜಕಾರಣ ನಡೆಯುವ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳು ಯಾವುದೇ ಪಕ್ಷದಿಂದ ಕಣಕ್ಕಿಳಿದರೂ ಕ್ಷೇತ್ರ ಜನರಿಗೆ ವ್ಯಕ್ತಿಗನುಗುಣ ವಾಗಿಯೇ ಚುನಾವಣೆ ನಡೆಯುತ್ತದೆ. ಕೆ.ಆರ್. ರಮೇಶ್‌ಕುಮಾರ್ ಹಾಗೂ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಇನ್ನು ಇಲ್ಲಿನ ಏರಿಳಿತಗಳನ್ನು ಗಮನಿಸಿದರೆ 1962ರಲ್ಲಿ ಕಾಂಗ್ರೆಸ್‌ನ ಜಿ.ನಾರಾಯಣಗೌಡ, 1967ರಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಎಲ್. ನಾರಾಯಣಸ್ವಾಮಿ, 1972ರಲ್ಲಿ ಎಸ್.ಬಾಚಿರೆಡ್ಡಿ, 1978ರಲ್ಲಿ ಐಎನ್‌ಸಿಐ ನಿಂದ ರಮೇಶ್‌ಕುಮಾರ್, 1983ರಲ್ಲಿ ಕಾಂಗ್ರೆಸ್‌ನಂದ ಜಿ.ಕೆ. ವೆಂಕಟಶಿವಾರೆಡ್ಡಿ, 1985ರಲ್ಲಿ ಜೆಎನ್‌ಪಿಯಿಂದ ರಮೇಶ್‌ಕುಮಾರ್, 1989ರಲ್ಲಿ ಕಾಂಗ್ರೆಸ್‌ನಿಂದ ಜಿ.ಕೆ. ವೆಂಕಟಶಿವಾರೆಡ್ಡಿ, 1994ರಲ್ಲಿ ಜೆಡಿಯು ನಿಂದ ರಮೇಶ್‌ ಕುಮಾರ್, 1999ರಲ್ಲಿ ಕಾಂಗ್ರೆಸ್‌ನ ಜಿ.ಕೆ. ವೆಂಕಟಶಿವಾರೆಡ್ಡಿ, 2004ರಲ್ಲಿ ಕಾಂಗ್ರೆಸ್‌ ನಿಂದ ಕೆ.ಆರ್.ರಮೇಶ್‌ಕುಮಾರ್, 2008ರಲ್ಲಿ ಜೆಡಿಎಸ್‌ನ ಜಿ.ಕೆ. ವೆಂಕಟಶಿವಾರೆಡ್ಡಿ, 2013ನೇ ಸಾಲಿನಲ್ಲಿ ಕಾಂಗ್ರೆಸ್‌ನಿಂದ ರಮೇಶ್‌ಕುಮಾರ್, ಹಾಗೂ 2018 ರಲ್ಲಿ ರಮೇಶ್​ ಕುಮಾರ್​ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಳೆದ ನಲ್ವತ್ತು ವರ್ಷಗಳಲ್ಲಿ ಇಬ್ಬರೂ ವ್ಯಕ್ತಿಗಳು ಪಕ್ಷ ಬದಲಿಸಿದ್ದಾರೆ ಆದರೆ ವ್ಯಕ್ತಿಗಳ ಪರವಾಗಿ ಚುನಾವಣೆ ನಡೆದಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ತ್ರಿಕೋನ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 12:49 am, Sat, 13 May 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ