ರಾಹುಲ್ ಗಾಂಧಿಯ ಅಜ್ಜಿ ಮರಳಿ ಬಂದರೂ ಸಿಎಎ ರದ್ದು ಮಾಡಲು ಸಾಧ್ಯವಾಗಲ್ಲ: ಅಮಿತ್ ಶಾ

ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ರಾಮ ಮಂದಿರ ವಿಚಾರವನ್ನು "ಬೇಕಾರ್" (ನಿಷ್ಪ್ರಯೋಜಕ) ಎಂದು ಉಲ್ಲೇಖಿಸಿದ ಅಮಿತ್ ಶಾ, "ರಾಮ್ ಗೋಪಾಲ್ ಅವರು ದೇವಸ್ಥಾನವು ನಿಷ್ಪ್ರಯೋಜಕವಾಗಿದೆ ಎಂದು ಹೇಳುತ್ತಾರೆ, ಆದರೆ ಅದು ಸಂಭವಿಸುವುದಿಲ್ಲ, ಆದರೆ ನೆನಪಿಡಿ. ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕೆ ಬಾಬ್ರಿ ನಾಮ್ ಕಾ ತಾಲಾ (ಬಾಬರಿ ಬೀಗ) ಹಾಕುತ್ತಾರೆ ಎಂದಿದ್ದಾರೆ

ರಾಹುಲ್ ಗಾಂಧಿಯ ಅಜ್ಜಿ ಮರಳಿ ಬಂದರೂ ಸಿಎಎ ರದ್ದು ಮಾಡಲು ಸಾಧ್ಯವಾಗಲ್ಲ: ಅಮಿತ್ ಶಾ
ಅಮಿತ್ ಶಾ
Follow us
ರಶ್ಮಿ ಕಲ್ಲಕಟ್ಟ
|

Updated on:May 08, 2024 | 6:04 PM

ದೆಹಲಿ ಮೇ 08: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (Citizenship Amendment Act) ಹಿಂತೆಗೆದುಕೊಳ್ಳುವ ಬಗ್ಗೆ  ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬುಧವಾರ ಪ್ರತಿಪಕ್ಷಗಳಿಗೆ ಸವಾಲು ಎಸೆದಿದ್ದು, ರಾಹುಲ್ ಗಾಂಧಿ(Rahul Gandhi) ಅವರ ಅಜ್ಜಿ  ಮತ್ತೆ ಭೂಮಿಗೆ ಬಂದರೂ ಸಿಎಎ ಕಾನೂನನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರಂತಹ ವಿರೋಧ ಪಕ್ಷದ ನಾಯಕರು ಸಿಎಎ ವಿರುದ್ಧವಾಗಿದ್ದಾರೆ ಎಂದು ಅವರು ಹೇಳಿದ್ದಾರೆ. “ರಾಹುಲ್ (ನಾನಿ) ಅಜ್ಜಿ ಭೂಮಿಗೆ ಮರಳಿ ಬಂದರೂ ಸಿಎಎ ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ಲಖಿಂಪುರ ಖೇರಿಯಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಅಮಿತ್ ಶಾ ಹೇಳಿದ್ದಾರೆ. “ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಭಾರತವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದವರಿಗೆ (ಅಲ್ಪಸಂಖ್ಯಾತರಿಗೆ) ಪೌರತ್ವವನ್ನು ನೀಡುತ್ತದೆ” ಎಂದು ಅವರು ಹೇಳಿದರು.

ಮಾರ್ಚ್‌ನಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎಯನ್ನು ಜಾರಿಗೆ ತಂದಿತು. ಇದು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಮುಸ್ಲಿಮೇತರ ವಲಸಿಗರಿಗೆ (ಡಿಸೆಂಬರ್ 31 ರ ಮೊದಲು ಭಾರತಕ್ಕೆ ಪ್ರವೇಶಿಸಿದವರಿಗೆ) ಭಾರತೀಯ ಪೌರತ್ವವನ್ನು ಪಡೆಯಲು ಸುಲಭಗೊಳಿಸುತ್ತದೆ. ಡಿಸೆಂಬರ್ 2019 ರಲ್ಲಿ ಸಂಸತ್ತು ಕಾನೂನನ್ನು ಅಂಗೀಕರಿಸಿದ ನಾಲ್ಕು ವರ್ಷಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.

ಅಮಿತ್ ಶಾ ಭಾಷಣ

ಕಾಯ್ದೆಯ ಅಧಿಸೂಚನೆಯು ವಿರೋಧ ಪಕ್ಷದ ನಾಯಕರಿಂದ ಟೀಕೆಗೆ ಕಾರಣವಾಯಿತು. ಅಧಿಸೂಚಿತ ನಿಯಮಗಳು “ಅಸಂವಿಧಾನಿಕ”, “ತಾರತಮ್ಯ” ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ “ಪೌರತ್ವದ ಜಾತ್ಯತೀತ ತತ್ವ” ದ ಉಲ್ಲಂಘನೆಯಾಗಿದೆ ಎಂದು ವಿರೋಧ ಪಕ್ಷಗಳು ಹೇಳಿವೆ.

ಪ್ರತಿಪಕ್ಷಗಳು ರಾಮಮಂದಿರಕ್ಕೆ ಬಾಬರಿ ಬೀಗ ಹಾಕುತ್ತವೆ: ಅಮಿತ್ ಶಾ

ಪ್ರತಿಪಕ್ಷಗಳು ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮ ಮಂದಿರಕ್ಕೆ “ಬಾಬರಿ ಬೀಗ” ಹಾಕುತ್ತಾರೆ ಎಂದು ಲಖಿಂಪುರದಲ್ಲಿ ನಡೆದ ರ‍್ಯಾಲಿಯಲ್ಲಿ, ಅಮಿತ್ ಶಾ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ರಾಮ ಮಂದಿರ ವಿಚಾರವನ್ನು “ಬೇಕಾರ್” (ನಿಷ್ಪ್ರಯೋಜಕ) ಎಂದು ಉಲ್ಲೇಖಿಸಿದ ಅಮಿತ್ ಶಾ, “ರಾಮ್ ಗೋಪಾಲ್ ಅವರು ದೇವಸ್ಥಾನವು ನಿಷ್ಪ್ರಯೋಜಕವಾಗಿದೆ ಎಂದು ಹೇಳುತ್ತಾರೆ, ಆದರೆ ಅದು ಸಂಭವಿಸುವುದಿಲ್ಲ, ಆದರೆ ನೆನಪಿಡಿ. ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕೆ ಬಾಬ್ರಿ ನಾಮ್ ಕಾ ತಾಲಾ (ಬಾಬರಿ ಬೀಗ) ಹಾಕುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ರಾಹುಲ್ ವಿರುದ್ಧ ಹಣ ಪಡೆದ ಆರೋಪ ಮಾಡಿದ ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು

ಪ್ರತಿಪಕ್ಷಗಳು 70 ವರ್ಷಗಳಿಂದ ರಾಮ ಮಂದಿರ ವಿಚಾರವನ್ನು ತಡೆ ಹಿಡಿದಿವೆ.”ನೀವು ನರೇಂದ್ರ ಮೋದಿ ಅವರನ್ನು ಎರಡನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಿದಾಗ, ಅವರು ರಾಮ ಜನ್ಮಭೂಮಿಗೆ ಸಂಬಂಧಿಸಿದ ಕಾನೂನು ವಿವಾದವನ್ನು ಗೆದ್ದುಕೊಂಡರು ಮಾತ್ರವಲ್ಲದೆ ರಾಮ ಮಂದಿರದ ಭೂಮಿ ಪೂಜೆ (ಶಿಲಾನ್ಯಾಸ) ಮಾಡಿದರು. ಅದರ ಪ್ರಾಣ ಪ್ರತಿಷ್ಠಾ ಜನವರಿಯಲ್ಲಿ ನಡೆಯಿತು ಎಂದಿದ್ದಾರೆ ಶಾ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Wed, 8 May 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ