AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Job 2026: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​​ನಲ್ಲಿ ನೇಮಕಾತಿ; 82 ಹುದ್ದೆಗೆ ಅರ್ಜಿ ಆಹ್ವಾನ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಹೊಸಪೇಟೆ 82 ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಮ್ಯಾನೇಜರ್, ದ್ವಿತೀಯ ದರ್ಜೆ ಸಹಾಯಕ, ಚಾಲಕ ಹಾಗೂ ಕಿರಿಯ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಏಪ್ರಿಲ್ 6 ರಿಂದ ಮೇ 6 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದ ಸಹಕಾರ ನಿಯಮಗಳ ಅಡಿಯಲ್ಲಿ ಈ ನೇಮಕಾತಿ ನಡೆಯಲಿದೆ.

Bank Job 2026: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​​ನಲ್ಲಿ ನೇಮಕಾತಿ; 82 ಹುದ್ದೆಗೆ ಅರ್ಜಿ ಆಹ್ವಾನ
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್
ಅಕ್ಷತಾ ವರ್ಕಾಡಿ
|

Updated on:Apr 07, 2026 | 3:22 PM

Share

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಹೊಸಪೇಟೆ ಖಾಲಿ ಇರುವ ವಿವಿಧ 82 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಲು ಬಯಸುವ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ನೇಮಕಾತಿಯು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ನಿಯಮಾವಳಿಗಳ ಅನ್ವಯ ನಡೆಯಲಿದೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು ನಾಲ್ಕು ವರ್ಗದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವ್ಯವಸ್ಥಾಪಕರು ಅಥವಾ ಪ್ರಥಮ ದರ್ಜೆ ಸಹಾಯಕರ 22 ಹುದ್ದೆಗಳಿಗೆ 44,425 ರಿಂದ 83,700 ರೂ. ರವರೆಗೆ ವೇತನ ನಿಗದಿಯಾಗಿದೆ. ದ್ವಿತೀಯ ದರ್ಜೆ ಸಹಾಯಕರ 28 ಹುದ್ದೆಗಳಿಗೆ 34,100 ರಿಂದ 67,400 ರೂ. ವೇತನ ಶ್ರೇಣಿ ಇದ್ದರೆ, ಒಬ್ಬ ವಾಹನ ಚಾಲಕನ ಹುದ್ದೆಗೆ ರೂ. 31,775 ರಿಂದ 61,300 ಹಾಗೂ 31 ಕಿರಿಯ ಸೇವಕ ಹುದ್ದೆಗಳಿಗೆ ರೂ. 29,600 ರಿಂದ 52,800 ರವರೆಗೆ ಮಾಸಿಕ ವೇತನ ಲಭ್ಯವಿರುತ್ತದೆ.

ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಅರ್ಜಿಗಳನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ. ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸುವ ಯಾವುದೇ ಭೌತಿಕ ಅರ್ಜಿಗಳನ್ನು ಬ್ಯಾಂಕ್ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆಸಕ್ತರು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಆದ www.bellarydcc.bank.in ಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸಲು ಏಪ್ರಿಲ್ 6, 2026 ರಿಂದ ಚಾಲನೆ ನೀಡಲಾಗಿದ್ದು, ಮೇ 6 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಯೋಮಿತಿ, ಕನಿಷ್ಠ ವಿದ್ಯಾರ್ಹತೆ, ಮೀಸಲಾತಿ ವರ್ಗೀಕರಣ, ಅರ್ಜಿ ಶುಲ್ಕ ಮತ್ತು ಲಿಖಿತ ಪರೀಕ್ಷೆಯ ವಿವರಗಳನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸವಿಸ್ತಾರವಾದ ಅಧಿಸೂಚನೆಯನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Tue, 7 April 26

Follow Us
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ!
ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ!
Video: ಆನೇಕಲ್ ದೊಡ್ಡಕೆರೆಯಲ್ಲಿ ಬೀಡುಬಿಟ್ಟ ಗಜಪಡೆ
Video: ಆನೇಕಲ್ ದೊಡ್ಡಕೆರೆಯಲ್ಲಿ ಬೀಡುಬಿಟ್ಟ ಗಜಪಡೆ
ಇಂಡಕ್ಷನ್​ಗೆ ಡಿಮಾಂಡ್: ಪೀಣ್ಯದಲ್ಲಿ ಉತ್ಪಾದನೆ ಹೆಚ್ಚಳ, ಸಿಬ್ಬಂದಿಗೆ ಓಟಿ!
ಇಂಡಕ್ಷನ್​ಗೆ ಡಿಮಾಂಡ್: ಪೀಣ್ಯದಲ್ಲಿ ಉತ್ಪಾದನೆ ಹೆಚ್ಚಳ, ಸಿಬ್ಬಂದಿಗೆ ಓಟಿ!
ಹೆಲ್ಮೆಟ್ ಧರಿಸಿ ಬಂದು ಗ್ಯಾಸ್ ಸಿಲಿಂಡರ್ ಎಗರಿಸಿದ ಚಾಲಾಕಿ ಕಳ್ಳ!
ಹೆಲ್ಮೆಟ್ ಧರಿಸಿ ಬಂದು ಗ್ಯಾಸ್ ಸಿಲಿಂಡರ್ ಎಗರಿಸಿದ ಚಾಲಾಕಿ ಕಳ್ಳ!
120 ಅಡಿ ಎತ್ತರದ ಹಾಲುಗಂಬ ಏರಿ ಸಾಹಸ ಮೆರೆದ 62ರ ವ್ಯಕ್ತಿ! ವಿಡಿಯೋ ನೋಡಿ
120 ಅಡಿ ಎತ್ತರದ ಹಾಲುಗಂಬ ಏರಿ ಸಾಹಸ ಮೆರೆದ 62ರ ವ್ಯಕ್ತಿ! ವಿಡಿಯೋ ನೋಡಿ
ಅಮೆರಿಕದ ಪನಾಮ ಸೇತುವೆ ಮೇಲೆ ಮೂರು ಇಂಧನ ಟ್ಯಾಂಕರ್​ಗಳ ಸ್ಫೋಟ
ಅಮೆರಿಕದ ಪನಾಮ ಸೇತುವೆ ಮೇಲೆ ಮೂರು ಇಂಧನ ಟ್ಯಾಂಕರ್​ಗಳ ಸ್ಫೋಟ
ಇದು ಪಾಕ್ ಲೀಗ್​​ ವಿಡಿಯೋನಾ? ವೈರಲ್ ಆದ ವಿಡಿಯೋ ಹಿಂದಿನ ಅಸಲಿಯತ್ತೇನು?
ಇದು ಪಾಕ್ ಲೀಗ್​​ ವಿಡಿಯೋನಾ? ವೈರಲ್ ಆದ ವಿಡಿಯೋ ಹಿಂದಿನ ಅಸಲಿಯತ್ತೇನು?
ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಐಟಿ ಬಾಬಾ
ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಐಟಿ ಬಾಬಾ
ನೀವು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲೇ ಕಸ ಗುಡಿಸುತ್ತಿದ್ದೀರಾ?
ನೀವು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲೇ ಕಸ ಗುಡಿಸುತ್ತಿದ್ದೀರಾ?