ಅಂಚೆ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ, ವಿವರಗಳು ಇಲ್ಲಿವೆ
ಅಂಚೆ ಇಲಾಖೆಯು ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 12 ಕೊನೆಯ ದಿನಾಂಕವಾಗಿದೆ.
ನವದೆಹಲಿ: ಕ್ರೀಡಾ ಕೋಟಾದಡಿ ಖಾಲಿಯಿರುವ ಪೋಸ್ಟಲ್ ಅಸಿಸ್ಟಂಟ್, ಪೋಸ್ಟ್ಮ್ಯಾನ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು, ಅಂಚೆ ಇಲಾಖೆ ಅಡಿಯಲ್ಲಿ ಬರುವ ದೆಹಲಿ ವೃತ್ತದ ಮುಖ್ಯ ಮಹಾ ಪೋಸ್ಟ್ಮಾಸ್ಟರ್ ಕಚೇರಿಯು ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಕೆಳಕಂಡ ಹುದ್ದೆಗಳಿಗೆ https://www.indiapost.gov.in, ವೆಬ್ಸೈಟ್ನಲ್ಲಿ ಬಿಡುಗಡೆಯಾಗಿರುವ ನೋಟಿಫಿಕೇಶನ್ ಪ್ರಕಾರ ಅರ್ಹ ಕ್ರೀಡಾಪಟುಗಳ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು.
1) ಅಂಚೆ ಕಚೇರಿ ಅಥವಾ ರೇಲ್ವೇ ಅಂಚೆ ಕಚೇರಿಗಳಲ್ಲಿ ಪೋಸ್ಟಲ್/ ಸಾರ್ಟಿಂಗ್ ಅಸಿಸ್ಟಂಟ್
2) ಅಂಚೆ ಕಚೇರಿಗಳಲ್ಲಿ ಪೋಸ್ಟಮ್ಯಾನ್ ಗಳು
3) ಅಂಚೆ ಕಚೇರಿ ಮತ್ತು ರೇಲ್ವೇ ಅಂಚೆ ಕಚೇರಿಗಳಲ್ಲಿ ಎಮ್ ಟಿ ಎಸ್ ಹುದ್ದೆಗಳು ಕೆಳಗೆ ನೀಡಲಾಗಿರುವ ವಿವರಗಳನ್ನು ಗಮನಿಸಿ.
ಭಾರತೀಯ ಅಂಚೆ ನೇಮಕಾತಿ: ಖಾಲಿಯಿರುವ ಹುದ್ದೆಗಳ ಸಂಖ್ಯೆ
ಪೋಸ್ಟಲ್ ಅಸಿಸ್ಟಂಟ್-72
ಪೋಸ್ಟ್ಮ್ಯಾನ್-90
ಮಲ್ಟಿ ಟಾಸ್ಕಿಂಗ್ ಸ್ಟಾಫ್-59
ಭಾರತೀಯ ಅಂಚೆ ನೇಮಕಾತಿ: ನವೆಂಬರ್ 12, 2021 ರವರೆಗೆ ವಯೋಮಿತಿ
ಪೋಸ್ಟಲ್ ಅಸಿಸ್ಟಂಟ್/ ಸಾರ್ಟಿಂಗ್ ಅಸಿಸ್ಟಂಟ್ ಪೋಸ್ಟ್ ಹುದ್ದೆ: ಅಭ್ಯರ್ಥಿಯು 18 ರಿಂದ 27 ವರ್ಷ ವಯಸ್ಸಿನವನೊಳಗಾಗಿರಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್: ಅಭ್ಯರ್ಥಿಯು 18 ರಿಂದ 25 ವಯೋಮಿತಿಯವನಾಗಿರಬೇಕು.
ಭಾರತೀಯ ಅಂಚೆ ನೇಮಕಾತಿ: ವೇತನ ಶ್ರೇಣಿ
ಪೋಸ್ಟಲ್ ಅಸಿಸ್ಟಂಟ್/ ಸಾರ್ಟಿಂಗ್ ಅಸಿಸ್ಟಂಟ್- ವೇತನ ಶ್ರೇಣಿಯಲ್ಲಿ 4ನೇ ಹಂತ (ರೂ. 25,500-81,100)
ಪೋಸ್ಟ್ಮ್ಯಾನ್-ವೇತನ ಶ್ರೇಣಿಯಲ್ಲಿ 3ನೇ ಹಂತ (ರೂ. 21,700-69,100) ಎಮ್ ಟಿ ಎಸ್- ವೇತನ ಶ್ರೇಣಿಯಲ್ಲಿ 1ನೇ ಹಂತ (ರೂ.18,000-56,900)
ಭಾರತೀಯ ಅಂಚೆ ನೇಮಕಾತಿ: ಅರ್ಜಿ ಸಲ್ಲಿಸುವ ಬಗೆ ಹೇಗೆ
ಅರ್ಹ ಅಭ್ಯರ್ಥಿಗಳು www.indiapost.gov.in. ಗೆ ಲಾಗಿನ್ ಆಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲದಿದ್ದರೆ, ಸಂಬಂಧಿಸಿದ ಪ್ರಮಾಣ ಪತ್ರಗಳೊಂದಿಗೆ ಕೆಳಗಿನ ವಿಳಾಸಕ್ಕೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಎಡಿ (ರಿಕ್ರೂಟ್ ಮೆಂಟ್). ಸಿ ಪಿ ಎಮ್ ಜಿ ಕಚೇರಿ, ದೆಹಲಿ ಸರ್ಕಲ್, ಮೇಘದೂತ್ ಭವನ್, ನವದೆಹಲಿ-110001
ಭಾರತೀಯ ಅಂಚೆ ನೇಮಕಾತಿ: ಅರ್ಜಿ ಸಲ್ಲಿಸಲು ಕೊನೆಯ ದಿನ ಆಸಕ್ತಿಯುಳ್ಳ ಅಭ್ಯರ್ಥಿಗಳು ನವೆಂಬರ್, 2021 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: Unemployment Allowance: ಕೆಲಸ ಕಳೆದುಕೊಂಡವರಿಗೆ ಸರ್ಕಾರದಿಂದ ಶೇ 50ರಷ್ಟು ಭತ್ಯೆ ನೀಡುವ ಯೋಜನೆ ಬಗ್ಗೆ ಗೊತ್ತೆ?