ನಟಿ ಸಮಂತಾಗಾಗಿ ಗುಡಿ ಕಟ್ಟಿದ ಅಭಿಮಾನಿ, ನಡೆಯುತ್ತೆ ನಿತ್ಯ ಪೂಜೆ
Samantha Ruth Prabhu: ನಟಿ ಸಮಂತಾ 15 ವರ್ಷಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದು ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೀಗ ಸಮಂತಾರ ಅಭಿಮಾನಿಯೊಬ್ಬ ನಟಿಗಾಗಿ ದೇವಾಲಯ ನಿರ್ಮಾಣ ಮಾಡಿದ್ದಾನೆ. ಈ ಮೂಲಕ ದೇವಾಲಯ ಹೊಂದಿರುವ ಕೆಲವೇ ನಟಿಯರ ಸಾಲಿಗೆ ಸಮಂತಾ ಸಹ ಸೇರಿಕೊಂಡಿದ್ದಾರೆ.

ಸಮಂತಾ (Samantha), ದಕ್ಷಿಣ ಭಾರತದ ಜನಪ್ರಿಯ ನಟಿ. ಈಗ ಬಾಲಿವುಡ್ನಲ್ಲೂ (Bollywood) ಹವಾ ಎಬ್ಬಿಸಿದ್ದಾರೆ. ಸುಮಾರು 15 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ಸಮಂತಾ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಖಾಸಗಿ ಜೀವನದಲ್ಲಿ ಕೆಲ ಏರು-ಪೇರುಗಳಾದ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿರುವ ಸಮಂತಾ, ಈಗ ನಟಿಯಾಗಿ ಹಾಗೂ ಉದ್ಯಮಿಯಾಗಿ ಮಿಂಚುತ್ತಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ವಿಶೇಷವಾಗಿ ಆಂಧ್ರ-ತೆಲಂಗಾಣಗಳಲ್ಲಿ (Andhra Pradesh-Telangana) ಸಿನಿಮಾ ನಟ-ನಟಿಯರ ಬಗ್ಗೆ ಅತಿಯಾದ ಆರಾಧನೆ ಅಭಿಮಾನಿಗಳಿಗೆ. ಇದೀಗ ಅಭಿಮಾನಿಯೊಬ್ಬ ಸಮಂತಾಗಾಗಿ ದೇವಾಲಯವೊಂದನ್ನು ಕಟ್ಟಿದ್ದಾನೆ.
ಆಂಧ್ರ ಪ್ರದೇಶದ ಏಲೂರು ಜಿಲ್ಲೆ, ಕೈಕಲೂರು ಮಂಡಲದ ಅಲ್ಲಪಡು ಗ್ರಾಮದಲ್ಲಿ ಅಭಿಮಾನಿಯೊಬ್ಬ ಸಮಂತಾರ ಮೂರ್ತಿ ನಿರ್ಮಿಸಿ ಗುಡಿ ಕಟ್ಟಿದ್ದಾನೆ. ಸಂದೀಪ್ ಹೆಸರಿನ ಅಭಿಮಾನಿ, ತನ್ನ ಮನೆಯ ಆವರಣದಲ್ಲಿಯೇ ಸಮಂತಾಗೆ ಗುಡಿ ನಿರ್ಮಿಸಿದ್ದಾನೆ. ಗುಡಿಯ ಒಳಗೆ ಸಮಂತಾರ ವಿಗ್ರಹ ಇಟ್ಟಿದ್ದಾನೆ. ಗುಡಿಯ ಮೇಲೆ ‘ದಿ ಟೆಂಪಲ್ ಆಫ್ ಸಮಂತಾ’ ಎಂದು ಬರೆಸಿದ್ದಾನೆ. ದೇವಾಲಯ ಉದ್ಘಾಟನೆಗೆ ಊರಿನ ಜನರ ಕರೆದು ಊಟ ಸಹ ಹಾಕಿಸಿದ್ದಾನೆ.
‘ಸಮಂತಾ ಬಹಳ ಒಳ್ಳೆಯ ನಟಿ, ಸಮಂತಾ ಕಷ್ಟದಲ್ಲಿರುವ ಹಲವರಿಗೆ ಸಹಾಯ ಸಹ ಮಾಡಿದ್ದಾರೆ. ಹಾಗಾಗಿ ನಾನು ಅವರ ಅಭಿಮಾನಿ. ಅದಕ್ಕಾಗಿಯೇ ಅವರಿಗಾಗಿ ದೇವಾಲಯ ನಿರ್ಮಿಸಿದ್ದೇನೆ, ತಮಿಳು ನಟಿಯರಿಗೆ ದೇವಾಲಯ ನಿರ್ಮಿಸಲಾಗಿದೆ. ಆದರೆ ತೆಲುಗು ನಟಿಯರಿಗೆ ದೇವಾಲಯ ನಿರ್ಮಿಸಿರಲಿಲ್ಲ ಹಾಗಾಗಿ ಈಗ ಸಮಂತಾಗಾಗಿ ದೇವಾಲಯ ನಿರ್ಮಿಸಿದ್ದೇನೆ’ ಎಂದಿದ್ದಾರೆ ಸಂದೀಪ್. ಸಮಂತಾರ ದೇವಾಲಯದ ವಿಡಿಯೋ ಮತ್ತು ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಹಿಂದೆ ತಮಿಳು ನಟಿಯರಾದ ಖುಷ್ಬು ಅವರ ದೇವಾಲಯಗಳನ್ನು ನಿರ್ಮಿಸಲಾಗಿತ್ತು. ಅದಾದ ಬಳಿಕ ತಮಿಳು ನಟಿ ನಮಿತಾಗಾಗಿ ದೇವಾಲಯ ನಿರ್ಮಿಸಿದ್ದರು ಕೆಲ ಅಭಿಮಾನಿಗಳು. ಕಳೆದ ವರ್ಷವಷ್ಟೆ ನಟಿ ನಯನತಾರಾ ಅವರ ದೇವಾಲಯವನ್ನು ನಿರ್ಮಿಸಲಾಗಿದೆ. ಇದೀಗ ನಟಿ ಸಮಂತಾರ ದೇವಾಲಯ ನಿರ್ಮಿಸಲಾಗಿದೆ.
ಇದನ್ನೂ ಓದಿ:ಸಮಂತಾ ಕೆನ್ನೆ ಹಿಡಿದು ಮುದ್ದು ಮಾಡುತ್ತಿರುವ ಆ ಕೈ ಯಾರದ್ದು?
ಸಮಂತಾ ಪ್ರಸ್ತುತ ‘ಮಾ ಇಂಟಿ ಬಂಗಾರಂ’ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಹಿಂದಿಯ ಒಂದು ಹಾರರ್ ವೆಬ್ ಸರಣಿಯಲ್ಲಿಯೂ ನಟಿಸುತ್ತಿದ್ದಾರೆ. ತಾಪ್ಸಿ ಪನ್ನು ನಿರ್ಮಾಣದ ಒಂದು ಹಿಂದಿ ಸಿನಿಮಾದಲ್ಲಿಯೂ ಸಮಂತಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲದರ ಹೊಸ ಸಿನಿಮಾ ಒಂದರ ನಿರ್ಮಾಣವನ್ನೂ ಮಾಡಿದ್ದಾರೆ ಸಮಂತಾ. ಇವುಗಳ ಜೊತೆಗೆ ಉದ್ಯಮಿಯೂ ಆಗಿರುವ ಸಮಂತಾ ಹಲವು ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ